Fri. Oct 10th, 2025

  • ಹಂಗರಿಯ ಲೇಖಕ ಲಾಸ್ಲೊಗೆ ನೊಬೆಲ್ ಸಾಹಿತ್ಯ ಪುರಸ್ಕಾರ

ಸಂದರ್ಭ: ಸ್ಟಾಕ್ಹೋಮ್‌: ಹಂಗರಿಯ ಲೇಖಕ ಲಾಸ್ಲೊ ಕ್ರಾಸ್ನಾಹೊರ್ಕೈ ಅವರಿಗೆ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ಪ್ರಶಸ್ತಿ ದೊರೆತಿದೆ.

  • ಅವರು ಸರಳ ವಾಕ್ಯಗಳ ಮೂಲಕ, ತಮಾಷೆಯ ವಿವರಣೆಯೊಂದಿಗೆ ತತ್ತ್ವ ಜ್ಞಾನವನ್ನು ಹೇಳುವ ವಿಶಿಷ್ಟ ಕಾದಂಬರಿ ರಚನೆಯ ಮೂಲಕ ಗಮನಸೆಳೆದಿದ್ದಾರೆ.
  • ಅರ್ನೆಸ್ಟ್ಹೆಮ್ಮಿಂಗ್ವೆ, ಆಲ್ಬರ್ಟ್ಕಮು ಹಾಗೂ ಟೋನಿ ಮಾರಿಸನ್ಅವರ ಸಾಹಿತ್ಯಿಕ ಶ್ರೇಷ್ಠ ಕೃತಿಗಳ ಹೆಜ್ಜೆ ಗುರುತುಗಳನ್ನು ಅನುಕರಿಸುವ ಮೂಲಕ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
  • ಸ್ವೀಡಿಶ್ಅಕಾಡೆಮಿ ನೊಬೆಲ್ ಸಮಿತಿಯು ಸಾಹಿತ್ಯ ಪ್ರಶಸ್ತಿಯನ್ನು 117 ಬಾರಿ ಒಟ್ಟು 121 ಮಂದಿಗೆ ನೀಡಿದೆ.
  • ಕಳೆದ ವರ್ಷ ದಕ್ಷಿಣ ಕೊರಿಯಾದ ಲೇಖಕ ಹಾನ್ಕಂಗ್ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ಪ್ರಶಸ್ತಿ ಸಂದಿತ್ತು.
  • ಅಲ್ಫ್ರೆಡ್ನೊಬೆಲ್ಅವರ ನಿಧನ ಹೊಂದಿದ ದಿನವಾದ ಡಿಸೆಂಬರ್‌ 10ರಂದು ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ.
  • ಪ್ರಶಸ್ತಿಯು 11 ಸ್ವೀಡಿಶ್ಕ್ರೊನೊರ್‌ (₹10.66 ಕೋಟಿ ನಗದು) ಹಾಗೂ 18 ಕ್ಯಾರೆಟ್ ಚಿನ್ನದ ಪದಕ, ಪ್ರಮಾಣಪತ್ರ ಹೊಂದಿರಲಿದೆ.
  • 2025ರ ನೊಬೆಲ್‌ ಪ್ರಶಸ್ತಿ ವಿಭಾಗದಲ್ಲಿ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಭಾಗದಲ್ಲಿ ಈಗಾಗಲೇ ಘೋಷಿಸಲಾಗಿದೆ. ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.
  • ಗಿನ್ನಿಸ್ ದಾಖಲೆಯತ್ತಥಟ್ ಅಂತ ಹೇಳಿದಾಪುಗಾಲು

ಸಂದರ್ಭ: ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಸಪ್ರಶ್ನೆ ಕಾರ್ಯಕ್ರಮ ಐದು ಸಾವಿರ ಸಂಚಿಕೆಯ ಹೊಸ್ತಿಲಲ್ಲಿದ್ದು, ಕಾರ್ಯಕ್ರಮ ಗಿನ್ನಿಸ್ ದಾಖಲೆಯತ್ತ ದಾಪುಗಾಲಿಟ್ಟಿದೆ.

  • 2002ರ ಜ. 4ರಂದು ಪ್ರಾರಂಭ ವಾದ ಈ ಕಾರ್ಯಕ್ರಮ ಅ. 13ರಂದು ಐದು ಸಾವಿರದನೇ ಸಂಚಿಕೆಯ ಪ್ರಸಾರಕ್ಕೆ ಸಜ್ಜಾಗಿದೆ.
  • 23 ವರ್ಷಗಳ ಹಿಂದೆ ಉಷಾಕಿಣಿ ಅವರು ಈ ಕಾರ್ಯಕ್ರಮ ಆರಂಭಿಸಿದ್ದರು. 100ನೇ ಸಂಚಿಕೆಯಲ್ಲಿ ಸಾಹಿತಿ ಸುಧಾಮೂರ್ತಿ ಪಾಲ್ಗೊಂಡಿದ್ದರು. ಕನ್ನಡ ನಾಡು-ನುಡಿ, ನೆಲ-ಜಲ, ಸಾಂಸ್ಕೃತಿಕ ಸೊಗಡನ್ನು ನಾಡಿನ ಜನರಿಗೆ ಉಣ ಬಡಿಸುತ್ತಿರುವ ಥಟ್ ಅಂತ ಹೇಳಿ?! ಕಾರ್ಯಕ್ರಮ 2012ರಲ್ಲಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಪಾತ್ರವಾಗಿತ್ತು.
  • ಕೋವಿಡ್ ಸಮಯದಲ್ಲಿ ಕೆಲಕಾಲ ಹೊರತುಪಡಿಸಿದಂತೆ, ನಿರಂತರವಾಗಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. 75 ಸಾವಿರ ಪ್ರಶ್ನೆಗಳನ್ನು ಕೇಳಲಾಗಿದ್ದು, 15 ಸಾವಿರ ಸ್ಪರ್ಧಿಗಳು ಭಾಗವಹಿಸಿ, ಕನ್ನಡದ 70 ಸಾವಿರ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ.
  • ಕಾರಾಗೃಹ ವಾಸಿಗಳಿಗೆ ವಿಶೇಷ ಸ್ಪರ್ಧೆ, ಅಂಧರು, ಎಚ್.ಐ.ವಿ. ಸೋಂಕಿತರು ಹೀಗೆ ಹಲವು ವಿಭಾಗಗಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗಿದೆ. ಮೆಟ್ರೊ ರೈಲಿನ ಪ್ರಯಾಣಿಕರೊಂದಿಗೆ, ವಿಧಾನ ಪರಿಷತ್ತಿನ ಸದಸ್ಯರೊಂದಿಗೆ ವಿಶೇಷ ಸಂಚಿಕೆಗಳನ್ನು ಬಿತ್ತರಿಸಲಾಗಿದೆ ಎಂದು ಭಾಗ್ಯವಾನ್ ಮಾಹಿತಿ ನೀಡಿದ್ದಾರೆ.
  • ಶೂದ್ರ, ಪ್ರತಿಭಾ ಸೇರಿ ಆರು ಮಂದಿಗೆ ಪ್ರಶಸ್ತಿ

ಸಂದರ್ಭ: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಗೌರವ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿಗೆ 15 ಜನರನ್ನು ಆಯ್ಕೆ ಮಾಡಲಾಗಿದೆ.

  • ಗೌರವ ಪ್ರಶಸ್ತಿಗೆ ಎಂ. ಬಸವಣ್ಣ (ಚಾಮರಾಜನಗರ), ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್ (ಬೆಂಗಳೂರು), ಡಿ.ಬಿ.ನಾಯಕ್ (ಕಲಬುರಗಿ), ವಿಶ್ವನಾಥ್ ಕಾರ್ನಾಡ್ (ಮುಂಬಯಿ) ಅವರನ್ನು ಆಯ್ಕೆ ಮಾಡಲಾಗಿದೆ.
  • ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಪದ್ಮಾಲಯ ನಾಗರಾಜ್(ಕೋಲಾರ), ಕೆ.ವೈ. ನಾರಾಯಣಸ್ವಾಮಿ (ಬೆಂಗಳೂರು), ಬಿ.ಎಂ ಪುಟ್ಟಯ್ಯ( ಚಿಕ್ಕಮಗಳೂರು), ‌ ಬಿ.ಯು.ಸುಮಾ (ತುಮಕೂರು), ಮಮತಾ ಸಾಗರ(ಶಿವಮೊಗ್ಗ), ಸಬಿತಾ ಬನ್ನಾಡಿ( ಉಡುಪಿ), ಅಬ್ದುಲ್ ಹೈ ತೋರಣಗಲ್ (ಬಳ್ಳಾರಿ), ಗುರುಲಿಂಗಪ್ಪ ಧಬಾಲೆ(ಅಕ್ಕಲಕೋಟೆ), ಡಾ.ಎಚ್.ಎಸ್. ಅನುಪಮಾ (ಉತ್ತರ ಕನ್ನಡ), ಅಮರೇಶ ಯತಗಲ್ (ರಾಯಚೂರು) ಅವರನ್ನು ಆಯ್ಕೆ ಮಾಡಲಾಗಿದೆ.
  • ಗೌರವ ಪ್ರಶಸ್ತಿಯು ₹50 ಸಾವಿರ ನಗದು, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವು ₹25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
  • ‘ನಗರದಲ್ಲಿ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಗಳಿಗೆ ಸಾಹಿತಿಗಳು ಹಾಗೂ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರು, ತುಮಕೂರು ಇಲ್ಲವೇ ಬೆಳಗಾವಿಯಲ್ಲಿ ಸದ್ಯವೇ ಪ್ರಶಸ್ತಿ ಪ್ರದಾನ ಮಾಡಲಾಗುವುದು.
  • ‘ಸಾಹಿತ್ಯ ಅಕಾಡೆಮಿಗೆ ಸರ್ಕಾರ ವಾರ್ಷಿಕ ₹80 ಲಕ್ಷ ಅನುದಾನ ಒದಗಿಸುತ್ತಿದ್ದು, ಇದಲ್ಲದೇ ಬಜೆಟ್‌ನಲ್ಲಿ ಘೋಷಿಸಿದ ಕನ್ನಡ ಭಾರತಿ 150 ಪುಸ್ತಕ ಪ್ರಕಟಣೆಗೆ ₹50 ಲಕ್ಷ, ಸೌಹಾರ್ದ ಕರ್ನಾಟಕ ಕಾರ್ಯಕ್ರಮಕ್ಕೆ ₹50 ಲಕ್ಷ ಒದಗಿಸಿದ್ದು, ಈ ಕಾರ್ಯ ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ.
  • ಭಾರತಬ್ರಿಟನ್‌: ರಕ್ಷಣಾ ಬಂಧ ಇನ್ನಷ್ಟು ಎತ್ತರಕ್ಕೆ 

ಸಂದರ್ಭ: ಕಿಯರ್ ಸ್ಟಾರ್ಮರ್‌ –ನರೇಂದ್ರ ಮೋದಿ ಮಾತುಕತೆ: ದ್ವಿಪಕ್ಷೀಯ ಸಂಬಂಧ, ವಾಯು ರಕ್ಷಣಾ ಸಹಕಾರದ ಬಗ್ಗೆ ಚರ್ಚೆ.

  • ಸೇನಾ ತರಬೇತಿಯಲ್ಲಿ ಸಹಕಾರ, ಸಶಸ್ತ್ರ ಪಡೆಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ, ಕಡಲ ವಿದ್ಯುತ್‌ ವ್ಯವಸ್ಥೆಗಳ ಅಭಿವೃದ್ಧಿ, ವಾಯು ರಕ್ಷಣಾ ವ್ಯವಸ್ಥೆ ಬಲಪಡಿಸುವಿಕೆ, ಗಡಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದೂ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಮಾತುಕತೆ ನಡೆಯಿತು.
  • ಎರಡು ದಿನಗಳ ಭಾರತ ಪ್ರವಾಸ ದಲ್ಲಿರುವ ಬ್ರಿಟನ್‌ ಪ್ರಧಾನಿ ಕಿಯರ್ ಸ್ಟಾರ್ಮರ್‌ ನೇತೃತ್ವದ ನಿಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನಿಯೋಗದ ಸದಸ್ಯರ ನಡುವೆ ಇಲ್ಲಿನ ರಾಜಭವನದಲ್ಲಿ ಗುರುವಾರ ವಿವಿಧ ಕ್ಷೇತ್ರಗಳ ಸಂಬಂಧ ವೃದ್ಧಿ ಕುರಿತು ಚರ್ಚೆ ನಡೆಯಿತು.
  • ಅಲ್ಲದೆ, ಜುಲೈನಲ್ಲಿ ಉಭಯ ದೇಶಗಳ ನಡುವೆ ನಡೆದ ಮುಕ್ತ ವ್ಯಾಪಾರ ಒಪ್ಪಂದ ಅಥವಾ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನು (ಸಿಇಟಿಎ) ಇನ್ನಷ್ಟು ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಸಂವಾದ ನಡೆಯಿತು. ಅಲ್ಲದೆ ಜಂಟಿ ಆರ್ಥಿಕ ಮತ್ತು ವ್ಯಾಪಾರ ಸಮಿತಿಯನ್ನು (ಜೆಇಟಿಸಿಒ) ಮರುಸ್ಥಾಪಿಸುವ ನಿಯಮಗಳಿಗೆ ಸಹಿ ಹಾಕಲಾಯಿತು.
  • ರಾಜಭವನದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಗಳ ಜತೆಗೆ ಮೋದಿ ಮತ್ತು ಸ್ಟಾರ್ಮರ್‌ ಅವರು ಭಾರತ–ಬ್ರಿಟನ್‌ ಸಿಇಒ ವೇದಿಕೆ ಮತ್ತು ಗ್ಲೋಬಲ್‌ ಫಿನ್‌ಟೆಕ್‌ ಉತ್ಸವದಲ್ಲೂ ಜಂಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮೋದಿ ಅವರ ಜತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಭಾಗವಹಿಸಿದ್ದರು. ಸ್ಟಾರ್ಮರ್‌ ಅವರ ಜತೆಗೆ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಪೀಟರ್‌ ಕೈಲ್‌, ಹೂಡಿಕೆ ಸಚಿವ ಜೇಸನ್ ಸ್ಟಾಕ್‌ವುಡ್‌ ಹಾಜರಿದ್ದರು.
  • ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವಿನ ಜಂಟಿ ಸಮರಾಭ್ಯಾಸ, ತರಬೇತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ಕುರಿತು ಎರಡೂ ನಾಯಕರು ಸಮ್ಮತಿ ಸೂಚಿಸಿದರು. ‘ನಮ್ಮ ನಡುವಿನ ರಕ್ಷಣಾ ಸಹಕಾರ ಆಳವಾಗಿದೆ. ರಕ್ಷಣಾ ಸಲಕರಣೆಗಳ ಸಹ ಉತ್ಪಾದನೆಯ ಜತೆಗೆ ರಕ್ಷಣಾ ಕೈಗಾರಿಕೆಗಳನ್ನು ಸಂಪರ್ಕಿಸುವತ್ತ ಸಾಗುತ್ತಿದ್ದೇವೆ’ ಎಂದು ಮೋದಿ ವಿವರಿಸಿದರು. 
  • ಇಂಡೊ–ಪೆಸಿಫಿಕ್‌ನಲ್ಲಿ ಕಡಲ ಭದ್ರತಾ ಸಹಯೋಗ ವೃದ್ಧಿಸಲು ಎರಡೂ ದೇಶಗಳ ನಾಯಕರು ಬದ್ಧತೆ ವ್ಯಕ್ತಪಡಿಸಿದರು. ಜತೆಗೆ ಪ್ರಾದೇಶಿಕ ಕಡಲ ಭದ್ರತಾ ಕೇಂದ್ರ ಸ್ಥಾಪನೆಗೂ ಸಮ್ಮತಿಸಿದರು.
  • ಭಾರತೀಯ ನೌಕಾ ವೇದಿಕೆಗಳಿಗೆ ಕಡಲ ವಿದ್ಯುತ್‌ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡುವ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಈ ವೇಳೆ ಚರ್ಚೆ ನಡೆಯಿತು.
  • ಖಾಲಿಸ್ತಾನಿ ಚಟುವಟಿಕೆ– ಮೋದಿ ಕಳವಳ: ಬ್ರಿಟನ್‌ನಲ್ಲಿ ಖಾಲಿಸ್ತಾನಿ ಪರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರ ಬಳಿ ಕಳವಳ ವ್ಯಕ್ತಪಡಿಸಿದರು. ತೀವ್ರಗಾಮಿತ್ವ ಮತ್ತು ಹಿಂಸಾತ್ಮಕ ಉಗ್ರವಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
  • ಅಕ್ಕಿ ಜತೆ ಬೇಳೆ, ಅಡುಗೆ ಎಣ್ಣೆಇಂದಿರಾ ಆಹಾರ ಕಿಟ್‌’: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಸಂದರ್ಭ: ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ಕುಟುಂಬ ಗಳ ಪಡಿತರ ಫಲಾನು ಭವಿಗಳಿಗೆ ಇನ್ನು ಮುಂದೆಅನ್ನ ಭಾಗ್ಯ ಐದು ಕೆ.ಜಿ ಅಕ್ಕಿ ಜತೆಗೆಇಂದಿರಾ ಆಹಾರ ಕಿಟ್ ನೀಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.

  • ಇಂದಿರಾ ಆಹಾರ ಕಿಟ್‌’ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಇರಲಿವೆ.
  • ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್‌ (ಪಿಎಚ್ಎಚ್‌) ಕುಟುಂಬಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಫಲಾನುಭವಿಗೆ 5 ಕೆ.ಜಿ. ಅಕ್ಕಿ ಜತೆಗೆ, ರಾಜ್ಯ ಸರ್ಕಾರದಅನ್ನಭಾಗ್ಯಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ ಅಥವಾ ಗೋಧಿ, ರಾಗಿ, ಜೋಳ ಸೇರಿಸಿ ಒಟ್ಟು 10 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತಿತ್ತು. ರಾಜ್ಯದ ಪಾಲಿನ ಅಕ್ಕಿ ಬದಲು ದ್ವಿದಳ ಧಾನ್ಯ, ಅಡುಗೆ ಎಣ್ಣೆ ಮತ್ತಿತರ ವಸ್ತುಗಳನ್ನು ವಿತರಿಸಲಾಗುವುದು.
  • ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿ ವಿತರಿಸುತ್ತಿದೆ. ಇದರಿಂದ ಕೆಲವು ಕುಟುಂಬಗಳು ತಿಂಗಳಿಗೆ 40 ರಿಂದ 50 ಕೆ.ಜಿ ಅಕ್ಕಿ ಪಡೆಯುತ್ತಿವೆ. ಇದು ಕುಟುಂಬದ ಅಗತ್ಯಕ್ಕಿಂತಲೂ ಹೆಚ್ಚಾಗಿದೆ. ಈ ರೀತಿ ಹೆಚ್ಚುವರಿಯಾದ ಅಕ್ಕಿಯು ಬೇರೆ ಉದ್ದೇಶಗಳಿಗೆ ದುರುಪಯೋಗ ವಾಗುತ್ತಿದೆ. ಆದ್ದರಿಂದ ಇಂದಿರಾ ಆಹಾರ ಕಿಟ್‌ ಒದಗಿಸಲು ತೀರ್ಮಾನಿಸಲಾಗಿದೆ.
  • ಇತ್ತೀಚಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟ ವಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಹೆಚ್ಚುವರಿ ಅಕ್ಕಿ ನೀಡುವುದರ ಬದಲಿಗೆ ಸಮತೋಲಿತ ಆರೋಗ್ಯ ನೀಡುವ ಆಹಾರದ ಕಿಟ್‌ ನೀಡುವುದು ಸೂಕ್ತ. ಇದರಿಂದ ಅಕ್ಕಿಯ ದುರುಪಯೋಗ ತಡೆಯಲು ಸಾಧ್ಯ ಎಂಬ ಅಭಿಪ್ರಾಯ ಸಚಿವ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು.
  • ಅನ್ನಭಾಗ್ಯಯೋಜನೆಯಲ್ಲಿ ವಿತರಿಸಲಾಗುವ ಅಕ್ಕಿಯಿಂದ ಕೇವಲ ಕಾರ್ಬೊಹೈಡ್ರೇಟ್ಮಾತ್ರ ದೊರೆಯುತ್ತಿದೆ. ಆದರೆ ವ್ಯಕ್ತಿಯ ಆರೋಗ್ಯಕ್ಕೆ ಅಗತ್ಯವಿರುವ ಕೊಬ್ಬಿನಾಂಶ, ಪ್ರೋಟೀನ್ಸಿಗುತ್ತಿಲ್ಲ. ಉತ್ತಮ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಪೌಷ್ಟಿ ಕಾಂಶಗಳನ್ನು ಒಳಗೊಂಡ ಸಮತೋಲಿತ ಆಹಾರ ಒದಗಿಸುವ ಧಾನ್ಯಗಳನ್ನು ಕಿಟ್‌ ಮೂಲಕ ಒದಗಿಸುವುದು ಸರ್ಕಾರದ ಉದ್ದೇಶ.
  • ಪಡಿತರದಾರರು ಅಕ್ಕಿ, ಗೋಧಿ ಬಿಟ್ಟು ಇತರೆ ಆಹಾರ ಧಾನ್ಯಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ಖರೀದಿಸುತ್ತಿದ್ದಾರೆ. ಒಂದು ಕುಟುಂಬಕ್ಕೆ ಸರಿ ಸುಮಾರು ₹500 ರಿಂದ ₹1,000ದ ವರೆಗೆ ವೆಚ್ಚವಾಗುತ್ತಿದೆ. ಸರ್ಕಾರ ಆಹಾರ ಕಿಟ್‌ ವಿತರಿಸುವುದ ರಿಂದ ಸುಮಾರು 1.26 ಕೋಟಿ ಕಾರ್ಡುದಾರರಿಂದ ತಿಂಗಳಿಗೆ ₹630 ಕೋಟಿ ಉಳಿತಾಯವಾಗಲಿದೆ.
  • ಎಷ್ಟು ಸದಸ್ಯರಿರುವ ಕುಟುಂಬಕ್ಕೆ ಎಷ್ಟರ ಪ್ರಮಾಣದಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ ಸಿಗಲಿದೆ ಎಂಬ ಮಾಹಿತಿ ಸರ್ಕಾರದ ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ಖಚಿತವಾಗಲಿದೆ.
  • ಒಂದು ದಿನ ವೇತನ ಸಹಿತ ಮುಟ್ಟಿನ ರಜೆ

ಸಂದರ್ಭ: ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಇತರ ಎಲ್ಲ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.

  • ಉದ್ದೇಶಕ್ಕಾಗಿ ಋತುಚಕ್ರ ರಜೆ ನೀತಿ–2025’ ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
  • ಮುಟ್ಟಿನ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳದ ಕಲ್ಯಾಣದ ಮೂಲಭೂತ ಅಂಶವೆಂದು ಪರಿಗಣಿಸಿ ಅದರ ಮಹತ್ವವನ್ನು ಗುರುತಿಸಿದೆ. ಋತುಚಕ್ರ ರಜೆ ನೀತಿಯು ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಬಹುದಾದ ಸಹಾಯಕ ವಾತಾವರಣವನ್ನು ಸೃಷ್ಟಿಸಲು ಸಕ್ರಿಯ ಹೆಜ್ಜೆಯಾಗಿದೆ.
  • ಮುಟ್ಟಿನ ರಜೆಗೆ ನಿರ್ದಿಷ್ಟವಾಗಿ ಯಾವುದೇ ಕಾನೂನು ಇಲ್ಲದಿದ್ದರೂ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ.
  • ಗುಣಮಟ್ಟ ತಪಾಸಣೆ: ರಾಷ್ಟ್ರವ್ಯಾಪಿ ಅಭಿಯಾನ

ಸಂದರ್ಭ: ಕೆಮ್ಮಿನ ಸಿರಪ್ಗಳ ಪರೀಕ್ಷೆ ಹಾಗೂ ಅವುಗಳ ತಯಾರಕರ ಕುರಿತು ರಾಷ್ಟ್ರವ್ಯಾಪಿ ತಪಾಸಣೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಮುಂದಾಗಿದೆ ಎಂದು ಮೂಲಗಳು ಹೇಳಿವೆ.

  • ಕೆಮ್ಮಿನ ಸಿರಪ್‌ ತಯಾರಕ ಕಂಪನಿಗಳ ಪಟ್ಟಿಯನ್ನು ಒದಗಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಸಿಡಿಎಸ್‌ಸಿಒ ಸೂಚನೆಯನ್ನೂ ನೀಡಿದೆ.
  • ‘ಕಲುಷಿತ’ ಕೆಮ್ಮಿನ ಸಿರಪ್‌ ಸೇವನೆಯಿಂದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವು ಸಂಭವಿಸಿರುವ ಬಗ್ಗೆ ಆರೋಪಗಳು ಕೇಳಿಬಂದ ಕಾರಣ, ಸಿಡಿಎಸ್‌ಸಿಒ ಈ ಅಭಿಯಾನ ಕೈಗೊಂಡಿದೆ.
  • ಸೂಚನೆ ನೀಡಿದ್ದ ಡಿಸಿಜಿಐ: ‘ಕಲುಷಿತ’ ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಮೃತಪಟ್ಟಿರುವ ಆರೋಪಗಳು ಕೇಳಿ ಬಂದ ಬೆನ್ನಲ್ಲೇ, ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಸಂಸ್ಥೆಯು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಕೆಲವು ಸೂಚನೆಗಳನ್ನು ನೀಡಿತ್ತು.
  • ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ

ಸಂದರ್ಭ: ಗಾಜಾದಲ್ಲಿ ಮೊದಲ ಹಂತದ ಶಾಂತಿ ಸ್ಥಾಪನೆ ಯೋಜನೆ ಜಾರಿಗೆ ಇಸ್ರೇಲ್ಮತ್ತು ಹಮಾಸ್ಬಂಡುಕೋರ ಸಂಘಟನೆ ಒಪ್ಪಿಗೆ ಸೂಚಿಸಿವೆ.

  • ಶಾಂತಿ ಒಪ್ಪಂದದ ಪ್ರಕಾರ ಹಮಾಸ್‌ ತನ್ನ ಬಳಿಯಿರುವ ಉಳಿದ ಎಲ್ಲ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಿದ್ದು, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ. ಒಪ್ಪಂದದ ಭಾಗವಾಗಿ ಗಾಜಾದ ಕೆಲವು ಪ್ರದೇಶಗಳಿಂದ ಇಸ್ರೇಲ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿದೆ.
  • ಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 20 ಅಂಶಗಳ ಯೋಜನೆಯನ್ನು ಮುಂದಿಟ್ಟಿದ್ದರು. ಶಾಂತಿ ಸ್ಥಾಪನೆ ಯೋಜನೆಯ ಮೊದಲ ಹಂತದ ಜಾರಿಗೆ ಈಜಿಪ್ಟ್‌ ರಾಜಧಾನಿ ಕೈರೊದ ಶರ್ಮ್‌ ಎಲ್‌ ಶೇಖ್‌ನಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ನಿಯೋಗದ ನಡುವೆ ಮೂರು ದಿನಗಳಿಂದ ನಡೆದ ಮಾತುಕತೆ ಕೊನೆಗೂ ಫಲಪ್ರದವಾಗಿದೆ.

ಟ್ರಂಪ್ಶಾಂತಿ ಸೂತ್ರ; ಮೊದಲ ಹಂತ ಜಾರಿಗೆ ಹಮಾಸ್ ಇಸ್ರೇಲ್ಸಹಮತ

  • ಎಲ್ಲ ಒತ್ತೆಯಾಳುಗಳು ಸೋಮವಾರ ಬಿಡುಗಡೆ ಆಗಲಿದ್ದಾರೆ. ಗಾಜಾದ ಕೆಲವು ಪ್ರದೇಶಗಳಿಂದ ಇಸ್ರೇಲ್‌ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಿದೆ ಡೊನಾಲ್ಡ್‌ ಟ್ರಂಪ್, ಅಮೆರಿಕದ ಅಧ್ಯಕ್ಷ ಶಾಂತಿ ಯೋಜನೆ ಜಾರಿಗೆ ಎರಡೂ ಕಡೆಯವರು ಒಪ್ಪಿಕೊಂಡಿರುವುದಾಗಿ ಟ್ರಂಪ್‌ ಘೋಷಿಸಿದ್ದಾರೆ. ‘ನಮ್ಮ ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಇಸ್ರೇಲ್ ಮತ್ತು ಹಮಾಸ್ ಸಹಮತ ವ್ಯಕ್ತಪಡಿಸಿವೆ ಎಂದು ಘೋಷಿಸಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ’ ಎಂದು ಅವರು ‘ಟ್ರುತ್ ಸೋಷಿಯಲ್‌’ನಲ್ಲಿ ಬರೆದುಕೊಂಡಿದ್ದಾರೆ.
  • ಟ್ರಂಪ್‌ ಅವರ ಶಾಂತಿ ಯೋಜನೆಯ ಇತರ ಕೆಲವು ಅಂಶಗಳ ಜಾರಿ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಹಮಾಸ್‌ ಸದಸ್ಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಬೇಕು ಮತ್ತು ಗಾಜಾದ ಆಡಳಿತವನ್ನು ನೋಡಿಕೊಳ್ಳುವವರು ಯಾರು – ಮುಂತಾದ ಪ್ರಮುಖ ಆಂಶಗಳ ಬಗ್ಗೆ ಯಾವುದೇ ತೀರ್ಮಾನ ಹೊರಬಿದ್ದಿಲ್ಲ.
  • ಆದರೆ, ಶಾಂತಿ ಯೋಜನೆಯ ಮೊದಲ ಹಂತದ ಜಾರಿಗೆ ಸಹಮತ ಮೂಡಿರುವುದು ಎರಡು ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.
  • ಸುಮಾರು 2,000 ಪ್ಯಾಲೆಸ್ಟೀನಿ ಯನ್ ಕೈದಿಗಳಿಗೆ ಬದಲಾಗಿ ಏಕಕಾಲದಲ್ಲಿ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹಮಾಸ್‌ನ ಮೂಲವೊಂದು ತಿಳಿಸಿದೆ.  ಜೀವಾವಧಿ ಶಿಕ್ಷೆಗೆ ಒಳಗಾಗಿರುವ 250 ಮಂದಿ ಹಾಗೂ ಯುದ್ಧ ಆರಂಭವಾದ ಬಳಿಕ ಇಸ್ರೇಲ್‌ ಬಂಧಿಸಿರುವ 1,700 ಪ್ಯಾಲೆಸ್ಟೀನಿಯರು ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದೆ.
  • ಒಪ್ಪಂದಕ್ಕೆ ಸಹಿ ಬಿದ್ದ 72 ಗಂಟೆಗಳ ಒಳಗೆ ವಿನಿಮಯ ಪ್ರಕ್ರಿಯೆ ನಡೆಯಲಿದೆ. ‘ಒಪ್ಪಂದದ ಅನುಷ್ಠಾನಕ್ಕೆ ಸಂಪುಟ ಸಭೆ ಅನುಮೋದನೆ ದೊರೆತ ನಂತರವೇ 72 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗುತ್ತದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
  • 2023 ಅಕ್ಟೋಬರ್‌ 7ರಂದು ಇಸ್ರೇಲ್ಮೇಲೆ ಹಮಾಸ್ ನಡೆಸಿದ ದಾಳಿಯೊಂದಿಗೆ ಯುದ್ಧ ಆರಂಭಗೊಂಡಿತ್ತು.

ಪ್ರಮುಖ ಅಂಶಗಳು

  • lಒತ್ತೆಯಾಳುಗಳು ಬಿಡುಗಡೆಯಾಗಲಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಟೆಲ್‌ ಅವೀವ್‌ನ ‘ಹಾಸ್ಟೇಜ್ ಸ್ಕ್ವೇರ್‌’ ಬಳಿ ಸಂಭ್ರಮಿಸಿದ ಸಾವಿರಾರು ಮಂದಿ, ಖಾನ್‌ ಯೂನಿಸ್‌ನ ನಾಸೆರ್‌ ಆಸ್ಪತ್ರೆ ಬಳಿ ಪ್ಯಾಲೆಸ್ಟೀನಿಯರಿಂದ ಸಂಭ್ರಮಾಚರಣೆ
  • l  ಶಾಂತಿ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದ ಬಳಿಕವೂ ಗಾಜಾ ಮೇಲೆ ಮುಂದುವರಿದ ಇಸ್ರೇಲ್‌ ದಾಳಿ
  • l ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ ಕತಾರ್‌, ಈಜಿಪ್ಟ್‌ ಮತ್ತು ಟರ್ಕಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಡೊನಾಲ್ಡ್‌ ಟ್ರಂಪ್
  • l ಇಸ್ರೇಲ್‌ ಬಿಡುಗಡೆಗೊಳಿಸಬೇಕಾದ ಕೈದಿಗಳ ಪಟ್ಟಿ ನೀಡಿದ ಹಮಾಸ್
  • l ಪಶ್ಚಿಮ ಏಷ್ಯಾದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ಆಶಯ ವ್ಯಕ್ತಪಡಿಸಿದ ವಿಶ್ವದ ವಿವಿಧ ದೇಶಗಳ ನಾಯಕರು.
  • ನಮ್ಮ ದಾಳಿಗಳಿಂದ ರಷ್ಯಾದಲ್ಲಿ ಅನಿಲ ಕೊರತೆ: ಝೆಲೆನ್ಸ್ಕಿ

ಸಂದರ್ಭ: ‘ಹೊಸದಾಗಿ ಅಭಿವೃದ್ಧಿಪಡಿಸಿರುವ ದೂರಗಾಮಿ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯಿಂದಾಗಿ ರಷ್ಯಾದಲ್ಲಿ ತೀವ್ರ ಅನಿಲ ಕೊರತೆ ಉಂಟಾಗುತ್ತಿದೆ. ಜೊತೆಗೆ, ನಮ್ಮ ದೇಶದ ಡೊನೆಟ್‌ಸ್ಕ್‌ನ ಪೂರ್ವದಲ್ಲಿರುವ ಪ್ರದೇಶವೊಂದನ್ನು ವಶಪಡಿಸಿಕೊಳ್ಳಲು ಬಂದಿದ್ದ ರಷ್ಯಾದ ವಿಮಾನವನ್ನೂ ನಾವು ಹೊಡೆದುರುಳಿಸಿ ದ್ದೇವೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದರು.

  • ‘ನಮ್ಮ ಹೊಸ ಕ್ಷಿಪಣಿ ಹಾಗೂ ಡ್ರೋನ್‌ಗಳು ರಷ್ಯಾಕ್ಕೆ ನಷ್ಟವನ್ನುಂಟು ಮಾಡಿವೆ. ರಷ್ಯಾದ ಸಮುದ್ರದ ತಟದಲ್ಲಿರುವ ತೈಲ ಘಟಕದ ಮೇಲೆಯೂ ನಾವು ದಾಳಿ ನಡೆಸಿದ್ದೇವೆ. ಇದು ನಮಗೆ ದೊರೆತ ಅತಿ ದೊಡ್ಡ ಯಶಸ್ಸು’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
  • ‘ನಮಗಿರುವ ಮಾಹಿತಿ ಪ್ರಕಾರ, ನಮ್ಮ ದಾಳಿ ನಂತರ ರಷ್ಯಾದ ಶೇ 20ರಷ್ಟು ತೈಲ ಪೂರೈಕೆಯು ನಷ್ಟವಾಗಿದೆ. ರಷ್ಯಾವು ಚೀನಾ ಮತ್ತು ಬೆಲರೂಸ್‌ನ ಸಿಕ್ಸ್‌ಫೋಲ್ಡ್‌ ಕಂಪನಿಯಿಂದ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಆಮದು ಸುಂಕವನ್ನು ತೆಗೆದು ಹಾಕಿದೆ’ ಎಂದರು.
  • ₹20 ಕೋಟಿ ಸಮಗ್ರ ಯೋಜನೆ ಸಿದ್ಧ

ಸಂದರ್ಭ: ರಾಜ್ಯದ ಎರಡನೇ ದೊಡ್ಡ ಪಕ್ಷಿಧಾಮವಾಗಿರುವ ಸುರಪುರ ಸಮೀಪದ ಬೋನಾಳ ಪಕ್ಷಿಧಾಮದಲ್ಲಿನ ಜೀವವೈವಿಧ್ಯದ ಸಂರಕ್ಷಣೆ, ಸಮಗ್ರ ಅಭಿವೃದ್ಧಿ ಹಾಗೂ ಪರಿಸರ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಯಾದಗಿರಿ ಪ್ರಾದೇಶಿಕ ಅರಣ್ಯ ವಿಭಾಗವು ₹ 20 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದೆ.

  • ಬೋನಾಳ ಪಕ್ಷಿಧಾಮ 676 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಜಲಮೂಲದ ಸುತ್ತಲೂ ವಿಶಾಲವಾದ ಕೃಷಿ ಭೂಮಿ ಮತ್ತು ಕಲ್ಲಿನ ಬಂಡೆಗಳ ಬೆಟ್ಟಗಳಿಂದ ಕೂಡಿದೆ. ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯ ನಾನಾ ಬಗೆಯ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುತ್ತಿದ್ದವು.
  • ಮಾನವನ ಅತಿಯಾದ ಹಸ್ತಕ್ಷೇಪ, ಆಹಾರ ಲಭ್ಯತೆಯ ಕೊರತೆಯಂತಹ ಹಲವು ಕಾರಣಗಳಿಂದ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
  • ಇದನ್ನು ಮನಗಂಡಿರುವ ಪ್ರಾದೇಶಿಕ ಅರಣ್ಯ ವಿಭಾಗವು 2030ರ ವರೆಗೆ ಹಂತ– ಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದೆ. ಪಕ್ಷಿಗಳ ಆವಾಸಸ್ಥಾನ ಮತ್ತು ಸುತ್ತಲಿನ ಪರಿಸರ ವ್ಯವಸ್ಥೆಯ ನಿರ್ವಹಣೆಗೆ ₹6.35 ಕೋಟಿ, ಪ್ರವಾಸಿಗರ ಸ್ನೇಹಿ ಮೂಲಸೌಕರ್ಯಗಳಿಗೆ ₹ 10.75 ಕೋಟಿ ಹಾಗೂ ಸಿಬ್ಬಂದಿ ನೇಮಕಕ್ಕೆ ₹ 2.90 ಕೋಟಿ ಸೇರಿ ₹ 20 ಕೋಟಿ ಮೊತ್ತದ ಡಿಪಿಆರ್ ತಯಾರಿಸಿದೆ. ಶೀಘ್ರವೇ ಅರಣ್ಯ ಇಲಾಖೆಗೆ ಸಲ್ಲಿಕೆಯೂ ಮಾಡಲಿದೆ.
  • ಅರಣ್ಯ ಇಲಾಖೆಯು ಸಮ್ಮತಿಸಿ ಅನುದಾನ ಮಂಜೂರು ಮಾಡಿಸಿದರೆ 2026ರಲ್ಲಿ ₹ 4.36 ಕೋಟಿ, 2027ರಲ್ಲಿ ₹ 7.39 ಕೋಟಿ, 2028ರಲ್ಲಿ ₹ 4.17 ಕೋಟಿ, 2029ರಲ್ಲಿ ₹ 1.35 ಕೋಟಿ ಹಾಗೂ 2030ರಲ್ಲಿ ₹ 2.73 ಕೋಟಿ ಅನುದಾನವನ್ನು ವಿನಿಯೋಗಿಸುವ ಯೋಜನೆಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.
  • ಕೆರೆಯ ಸುತ್ತಲೂ ಹಣ್ಣಿನ ಮತ್ತು ನೆರಳು ಕೊಡುವ ವಿವಿಧ ಜಾತಿಯ ಮರಗಳು ಮತ್ತು ಪೊದೆ ಗಿಡಗಳನ್ನು ನೆಡುವುದು; ಗೂಡು ಕಟ್ಟಿಕೊಳ್ಳಲು ಹಾಗೂ ಮೊಟ್ಟೆಗಳು ಇರಿಸಲು ಅನುಕೂಲ ಆಗುವಂತೆ ಐದು ಮಣ್ಣಿನ ದ್ವೀಪಗಳ ನಿರ್ಮಾಣ; ಪಕ್ಷಿಗಳ ವಿಶ್ರಾಂತಿ ಹಾಗೂ ವೀಕ್ಷಣೆಗಾಗಿ ಎತ್ತರದ 75 ಕೃತಕ ಪಕ್ಷಿಗಳ ಸ್ಟ್ಯಾಂಡ್ ನಿರ್ಮಾಣ; ಪಕ್ಷಿಗಳಿಗೆ ಜೀವಕ್ಕೆ ಎರವಾಗುವ ಪ್ರಭೇದಗಳ ನಿರ್ಮೂಲನೆ; ನೀರಿನ ಗುಣಮಟ್ಟ ಕಾಪಾಡಿ ಹಾಗೂ ಆವಾಸಸ್ಥಾನದ ಸ್ವಾಸ್ಥ್ಯ ಸುಧಾರಣೆಗೆ ಒಟ್ಟು ₹ 6.35 ಕೋಟಿ ಬೇಕಾಗುತ್ತದೆ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ.
  • ಪ್ರವಾಸಿಗರ ಸ್ನೇಹಿಯಾದ ಮೂರು ಪಕ್ಷಿ ವೀಕ್ಷಣೆ ಗೋಪುರ ನಿರ್ಮಾಣ, ಬೋಟಿಂಗ್ ಬೇ, ಕ್ಯಾಂಟೀನ್ ಮತ್ತು ಶೌಚಾಲಯ, ಕೃತಕ ಕಾರಂಜಿಗಳು, ಟಿಕೆಟ್ ಕೌಂಟರ್, ಪ್ರವೇಶದ್ವಾರ ಸೇರಿ ಇತರೆ ಮೂಲಸೌಕರ್ಯಗಳಿಗೆ ₹ 10.75 ಕೋಟಿ ಅಗತ್ಯವಿದೆ. ದೋಣಿ ನಡೆಸುವವರು, ಸ್ವಚ್ಛತಾ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್‌ಗಳನ್ನು ನಿಯೋಜನೆಗೆ ಸುಮಾರು ₹ 2.90 ಕೋಟಿಯ ಅವಶ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಆರ್ಟಿಐ ಕಾಯ್ದೆ ಹಾವಿಗೀಗ ಹಲ್ಲಿಲ್ಲ
  • ಫ್ರೀಡಂ ಸನ್ಫ್ಲವರ್ಆಯಿಲ್ಗೆ ರಾಹುಲ್ ದ್ರಾವಿಡ್ ರಾಯಭಾರಿ

ಸಂದರ್ಭ: ಜೆಮಿನಿ ಎಡಿಬಲ್ಸ್ಆ್ಯಂಡ್ಫ್ಯಾಟ್ಸ್ಇಂಡಿಯಾ ಲಿಮಿಟೆಡ್ ಕಂಪನಿಯ ಫ್ರೀಡಂ ರಿಫೈನ್ಡ್ಸನ್ಫ್ಲವರ್ಆಯಿಲ್‌, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ತನ್ನ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಿದೆ.

  • ಈ ಸಹಯೋಗದ ಕಾರಣದಿಂದಾಗಿ ದ್ರಾವಿಡ್ ಅವರು ‘ಫ್ರೀಡಂ ರಿಫೈನ್ಡ್ ಸನ್‌ಫ್ಲವರ್‌ ಅಡುಗೆ ಎಣ್ಣೆ ಬಳಸಿ ಅಡುಗೆ ಮಾಡುವಂತೆ  ಕುಟುಂಬಗಳನ್ನು  ಪ್ರೇರೇಪಿಸಲಿದ್ದಾರೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
  • ತಯಾರಿಕಾ ವಲಯ: ಸದೃಢ ಬೆಳವಣಿಗೆ ನಿರೀಕ್ಷೆಫಿಕ್ಕಿ

ಸಂದರ್ಭ:  ‘ದೇಶದ ತಯಾರಿಕಾ ವಲಯವು ಸದೃಢ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಸಮೀಕ್ಷೆ ತಿಳಿಸಿದೆ.

  • ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಉತ್ಪಾದನೆ ಹೆಚ್ಚಳವಾಗಿದೆ ಅಥವಾ ಅಷ್ಟೇ ಪ್ರಮಾಣದಲ್ಲಿ ಇದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ 87ರಷ್ಟು ಮಂದಿ ಹೇಳಿದ್ದಾರೆ.
  • ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯದ ಪ್ರಮುಖ ಎಂಟು ವಿಭಾಗಗಳ ಕಾರ್ಯಾಚರಣೆಯನ್ನು ಫಿಕ್ಕಿ ಮೌಲ್ಯಮಾಪನ ಮಾಡಿದೆ. ‌
  • ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಕುಗಳಿಗೆ ಕಾರ್ಯಾದೇಶ ಹೆಚ್ಚಾಗಿರುವ ನಿರೀಕ್ಷೆ ಇದೆ. ಜಿಎಸ್‌ಟಿ ದರ ಕಡಿತ ಘೋಷಿಸಿದ ನಂತರ ಕಾರ್ಯಾದೇಶ ಇನ್ನೂ ಹೆಚ್ಚಾಗಿರುವ ನಿರೀಕ್ಷೆ ಇದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 83ರಷ್ಟು ಮಂದಿ ಹೇಳಿದ್ದಾರೆ.
  • ಕಬ್ಬಿಣದ ಅದಿರು, ರಾಸಾಯನಿಕಗಳು, ಪ್ರಮುಖ ಬಿಡಿ ಭಾಗಗಳು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಯಾರಿಕಾ ವೆಚ್ಚ ಹೆಚ್ಚಳವಾಗಿದೆ. ಜೊತೆಗೆ ಕಾರ್ಮಿಕ ವೆಚ್ಚ, ಸರಕು ಸಾಗಣೆ, ವಿದ್ಯುತ್‌ ವೆಚ್ಚ ಹೆಚ್ಚಳವಾಗಿದೆ. ಇದರಿಂದ ಪ್ರಸಕ್ತ ಆರ್ಥಿಕ ವರ್ಷದ ಜೂನ್ ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ಪಾದನೆ ವೆಚ್ಚ ಹೆಚ್ಚಿದೆ.
  • ಮುಂದಿನ ದಿನಗಳಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಲ್ಲಿ ಸಕಾರಾತ್ಮಕ ಧೋರಣೆ ಇದೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 50ಕ್ಕೂ ಹೆಚ್ಚು ಮಂದಿ ಮುಂದಿನ ಆರು ತಿಂಗಳಿನಲ್ಲಿ ಹೂಡಿಕೆ ಮತ್ತು ವಹಿವಾಟನ್ನು ವಿಸ್ತರಣೆ ಮಾಡಿಕೊಳ್ಳುವ ಆಲೋಚನೆ ಹೊಂದಿದ್ದಾರೆ ಎಂದು ತಿಳಿಸಿದೆ.
  • ದ್ವಿದಳ ಧಾನ್ಯ ಮಿಷನ್ಗೆ ಪ್ರಧಾನಿ ನಾಳೆ ಚಾಲನೆ

ಸಂದರ್ಭ: ದ್ವಿದಳ ಧಾನ್ಯ ಮಿಷನ್ ಮತ್ತುಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.

  • ಧಾನ್ಯಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸುವಂತೆ ಮಾಡುವ ಗುರಿಯನ್ನು ಈ ಯೋಜನೆಗಳು ಹೊಂದಿವೆ.
  • ಈ ಎರಡು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟವು ಈಗಾಗಲೇ ಅನುಮೋದನೆ ನೀಡಿದೆ. ಮುಂದಿನ ಹಿಂಗಾರು ಹಂಗಾಮಿನಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 2030-31ರವರೆಗೆ ಜಾರಿಯಲ್ಲಿ ಇರಲಿವೆ.
  • ಇದೇ ವೇಳೆ ಮೀನುಗಾರಿಕೆ, ಜಾನುವಾರು, ಆಹಾರ ಸಂಸ್ಕರಣೆ ಸೇರಿದಂತೆ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ₹3,681 ಕೋಟಿ ಮೌಲ್ಯದ ಯೋಜನೆಗಳನ್ನೂ ಮೋದಿ ಅವರು ಆರಂಭಿಸಲಿದ್ದಾರೆ. ಬಳಿಕ ರೈತರೊಂದಿಗೆ ಮೋದಿ ಅವರು ಮಾತುಕತೆ ನಡೆಸಲಿದ್ದಾರೆ.
  • ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌, ‘ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ. ಧಾನ್ಯಗಳು, ಎಣ್ಣೆಕಾಳುಗಳು ವಿಷಯದಲ್ಲಿಯೂ ಸ್ವಾವಲಂಬನೆ ಸಾಧಿಸಬೇಕಿದೆ’ ಎಂದು ಹೇಳಿದ್ದಾರೆ.
  • ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಪ್ರಸ್ತುತ ದ್ವಿದಳ ಧಾನ್ಯಗಳ ಉತ್ಪಾದನೆ 252.38 ಲಕ್ಷ ಟನ್ಇದೆ. 2030–31 ಬೆಳೆ ವರ್ಷದ ವೇಳೆಗೆ ಇದನ್ನು 350 ಲಕ್ಷ ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. 
  • ಈ ಯೋಜನೆಯ ಗಾತ್ರ ₹11,440 ಕೋಟಿ. ಹೆಚ್ಚು ಇಳುವರಿ ನೀಡುವ ಮತ್ತು ರೋಗಗಳನ್ನು ತಾಳಿಕೊಂಡು ಹೆಚ್ಚಿನ ಉತ್ಪಾದನೆ ನೀಡುವ ವಿವಿಧ ಮಾದರಿಯ ಬೀಜಗಳನ್ನು ರೈತರಿಗೆ ನೀಡಲಾಗುವುದು ಎಂದರು.
  • ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ ಗಾತ್ರ ₹24 ಸಾವಿರ ಕೋಟಿಯಾಗಿದೆ. ಕಡಿಮೆ ಕೃಷಿ ಚಟುವಟಿಕೆ ಇರುವ 100 ಜಿಲ್ಲೆಗಳಲ್ಲಿ ಯೋಜನೆಯಡಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
  • ಕಂಬಳಕ್ಕೆ ಕ್ರೀಡಾ ಪ್ರಾಧಿಕಾರ ಮಾನ್ಯತೆ

ಸಂದರ್ಭ:ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಇನ್ನು ರಾಜ್ಯ ಕ್ರೀಡಾ ಸಂಸ್ಥೆ: ಕರಾವಳಿಯ ವಿಶೇಷ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರ್ಕಾರದಿಂದ ಈಗ ಅಧಿಕೃತ ಮನ್ನಣೆ ಸಿಕ್ಕಿದಂತಾಗಿದೆ.

  • ಕಂಬಳ ಕ್ರೀಡೆಗೆ,‌ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಅಧಿಕೃತ ಮನ್ನಣೆ ಸಿಕ್ಕಿದೆ. ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ಮಾನ್ಯತೆ ನೀಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ.
  • ಮಾನ್ಯತೆಯು ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯ ವಾಗಲಿದೆ ಎಂದು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಆದೇಶದಲ್ಲಿ ತಿಳಿಸಿದ್ದಾರೆ.
  • ಕರ್ನಾಟಕ ಕ್ರೀಡಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಕಂಬಳ ಅಸೋಸಿ ಯೇಷನ್‌ಗೆ ಅನುದಾನ ನೀಡಲಿದೆ.
  • ಕಂಬಳ ಕ್ರೀಡೆಯನ್ನು ಸಂಘಟಿಸುವ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮಾನ್ಯತೆ ನೀಡುವಂತೆ ಕೋರಿ ಸಂಸ್ಥೆಯ ಅಧ್ಯಕ್ಷರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಅಸೋಸಿಯೇಷನ್‌ಗೆ ಮಾನ್ಯತೆ ನೀಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 2025ರ ಮೇ 5ರಂದು ನಡೆದ ಸಭೆಯಲ್ಲಿ ರಾಜ್ಯದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ಕಂಬಳ ಕ್ರೀಡೆಯ ವಿಶೇಷತೆಯನ್ನು ಪರಿಗಣಿಸಿ ಅದಕ್ಕೆ ಮಾನ್ಯತೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. 
  • ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಈ  ಅಸೋಸಿಯೇಷನ್‌ ಕ್ರಮ ವಹಿಸುತ್ತದೆ. ಕಂಬಳ ಕ್ರೀಡೆಯ ವೇಳಾ ಪಟ್ಟಿಯನ್ನು ತಯಾರಿಸುತ್ತದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments