- ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಳಕಾಗುವ ‘ದೀಪಿಕಾ’
ಸಂದರ್ಭ: ಪ್ರತಿಯೊಂದು ಮಗುವೂ ಉತ್ತಮ ಶಿಕ್ಷಣ ಪಡೆಯಬೇಕು. ಉನ್ನತ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕಾಗಿ ನಮ್ಮ ಫೌಂಡೇಷನ್ ಶ್ರಮಿಸುತ್ತಿದೆಅಜೀಂ ಪ್ರೇಮ್‌ಜಿ, ಉದ್ಯಮಿ.
- ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರಾಜ್ಯದ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಆರ್ಥಿಕ ನೆರವು ನೀಡಲಿದ್ದು, ಅದಕ್ಕಾಗಿ ₹2,000 ಕೋಟಿ ಹಾಗೂ ರಾಜ್ಯ ಸರ್ಕಾರ ₹200 ಕೋಟಿ ಒದಗಿಸಿವೆ.
- ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಹಾಗೂ ಉನ್ನತ ಶಿಕ್ಷಣ ಇಲಾಖೆ ‘ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮ ರೂಪಿಸಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
- ಯೋಜನೆಯಲ್ಲಿ ಪ್ರತಿ ವಿದ್ಯಾರ್ಥಿನಿಗೆ ಪದವಿ ಶಿಕ್ಷಣ ಮುಗಿಯುವವರೆಗೆ ವಾರ್ಷಿಕ ₹30,000 ಸಿಗಲಿದ್ದು,ಶೈಕ್ಷಣಿಕ ಉದ್ದೇಶ ಹಾಗೂ ಪೂರಕ ಕಾರಣಗಳಿಗೆ ಬಳಸಿಕೊಳ್ಳಬಹುದು.
- ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯು ಉತ್ತೀರ್ಣರಾಗಿ 2025–26ನೇ ಸಾಲಿನಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿ ಶಿಕ್ಷಣ ಪದವಿಗೆ ಸೇರುವ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನದ ನೆರವು ಸಿಗಲಿದೆ. ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದರೆ ಆ ಮೊತ್ತವನ್ನು ರಾಜ್ಯ ಭರಿಸಲಿದೆ.
- ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ‘ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಅವರು ಸುಶಿಕ್ಷಿತರಾದರೆ ಅವರ ಕುಟುಂಬ, ಸಮಾಜ, ರಾಜ್ಯವೇ ಸುಶಿಕ್ಷಿತವಾಗುತ್ತದೆ.
- ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯ ರಿಗೆ ಬೋಧನೆ ಹಾಗೂ ಪ್ರಯೋಗಾಲಯ ಶುಲ್ಕಗಳನ್ನು ಮರುಪಾವತಿ ಮಾಡಲಾಗುತ್ತಿದೆ. ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ ನಿರ್ಮೂಲನೆಯ ಹೋರಾಟಕ್ಕೆ ಶಕ್ತಿ ತುಂಬಲಿದೆ’ ಎಂದರು.
- ಸಾಮಾಜಿಕ –ಶೈಕ್ಷಣಿಕ ಸಮೀಕ್ಷೆ ಆಧಾರ್ ಆಧಾರ

- ಜಿಎಸ್ಟಿ ಪರಿಷ್ಕರಣೆ: ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳಲ್ಲ–ಕ್ರಿಸಿಲ್
ಸಂದರ್ಭ: ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆಯಿಲ್ಲ ಎಂದು ರೇಟಿಂಗ್ ಸಂಸ್ಥೆ ಕ್ರಿಸಿಲ್ ತಿಳಿಸಿದೆ.
- ಜಿಎಸ್‌ಟಿ ಪರಿಷ್ಕರಣೆಯಿಂದ ಅಲ್ಪಾವಧಿವರೆಗೆ ವಾರ್ಷಿಕ ₹48 ಸಾವಿರ ಕೋಟಿ ನಷ್ಟ ಉಂಟಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು ಎಂದು ಕ್ರಿಸಿಲ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ₹10.6 ಲಕ್ಷ ಕೋಟಿಯಾಗಿತ್ತು. ಆದ್ದರಿಂದ, ನಷ್ಟದ ಪ್ರಮಾಣ ಗಮನಾರ್ಹವಾಗಿ ಇಲ್ಲ ಎಂದು ಹೇಳಿದೆ.
- ಜಿಎಸ್‌ಟಿ ಮಂಡಳಿಯು ದರ ಪರಿಷ್ಕರಣೆ ಮಾಡಿರುವುದರಿಂದ ನಾಲ್ಕು ಹಂತದ ತೆರಿಗೆ, ಎರಡು ಹಂತಕ್ಕೆ ಇಳಿಯಲಿದೆ. ಇದರಿಂದ ಸರಕು ಮತ್ತು ಸೇವೆಗಳ ದರ ಕಡಿಮೆಯಾಗಲಿದೆ ಎಂದು ಹೇಳಿದೆ.
- ಜಿಎಸ್‌ಟಿ ಪರಿಷ್ಕರಣೆ ಮೊದಲು ಶೇ 18ರ ಹಂತದ ತೆರಿಗೆಯಿಂದ ಶೇ 75ರಷ್ಟು ವರಮಾನ ಬರುತ್ತಿತ್ತು. ಶೇ 6ರಷ್ಟು ವರಮಾನ ಶೇ 12ರ ಹಂತದ ತೆರಿಗೆಯಿಂದ ಮತ್ತು ಶೇ 15ರಷ್ಟು ವರಮಾನ ಶೇ 28 ಹಂತದಿಂದ ಬರುತ್ತಿತ್ತು.
ನೇರ ತೆರಿಗೆ ಸಂಗ್ರಹ ಹೆಚ್ಚಳ
- ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 17ರ ವರೆಗೆ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹವು ₹10.82 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- 2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹9.91 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಸಂಗ್ರಹವು ಶೇ 9ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹೆಚ್ಚಿದ ಮುಂಗಡ ತೆರಿಗೆ ಮತ್ತು ಮರುಪಾವತಿ ಯಲ್ಲಿನ (ರೀಫಂಡ್) ಇಳಿಕೆಯು ಸಂಗ್ರಹ ಹೆಚ್ಚಲು ಕಾರಣವಾಗಿದೆ ಎಂದು ತಿಳಿಸಿದೆ.
- ಏಪ್ರಿಲ್ 1ರಿಂದ ಸೆಪ್ಟೆಂಬರ್ 17ರ ವರೆಗೆ ಮರುಪಾವತಿ ಪ್ರಮಾಣ ಶೇ 24ರಷ್ಟು ಇಳಿಕೆಯಾಗಿದ್ದು, ₹1.61 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 6ರಷ್ಟು ಹೆಚ್ಚಳವಾಗಿದ್ದು, ₹3.52 ಲಕ್ಷ ಕೋಟಿ ದಾಟಿದೆ. ಆದರೆ, ಕಾರ್ಪೊರೇಟ್‌ಯೇತರ ತೆರಿಗೆ ಸಂಗ್ರಹವು ಶೇ 7ರಷ್ಟು ಇಳಿಕೆಯಾಗಿದ್ದು, ₹96,784 ಕೋಟಿಯಾಗಿದೆ.
- ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು ₹4.72 ಲಕ್ಷ ಕೋಟಿ ಮತ್ತು ವೈಯಕ್ತಿಕ ಆದಾಯ ತೆರಿಗೆಯನ್ನು ಒಳಗೊಂಡಿರುವ ಕಾರ್ಪೊರೇಟ್‌ಯೇತರ ತೆರಿಗೆ, ₹5.84 ಲಕ್ಷ ಕೋಟಿಯಷ್ಟಾಗಿದೆ.
- ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹವು ₹26,306 ಕೋಟಿಗೆ ಹೆಚ್ಚಳವಾಗಿದೆ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 12ರಷ್ಟು ಹೆಚ್ಚಳವಿದು. ಎಸ್‌ಟಿಟಿ ಮೂಲಕ ₹78 ಸಾವಿರ ಕೋಟಿ ಸಂಗ್ರಹಿಸಲು ಯೋಜಿಸಿದೆ.
- ಗಾಜಾದಲ್ಲಿ ಕದನವಿರಾಮ: ನಿರ್ಣಯದ ವಿರುದ್ಧ ಅಮೆರಿಕ ಮತ
ಸಂದರ್ಭ: ಭಯೋತ್ಪಾದನೆಯ ಕುರಿತು ಭದ್ರತಾ ಮಂಡಳಿಯು ಕಣ್ಣುಮುಚ್ಚಿ ಕುಳಿತರೂ ಇಸ್ರೇಲ್ ಮಾತ್ರ ಹಮಾಸ್ ವಿರುದ್ಧದ ತನ್ನ ಯುದ್ಧವನ್ನು ಮುಂದುವರಿಸುತ್ತದೆ ಡ್ಯಾನಿ ಡ್ಯಾನನ್, ವಿಶ್ವ ಸಂಸ್ಥೆಗೆ ಇಸ್ರೇಲ್ ರಾಯಭಾರಿ.
- ‘ಗಾಜಾದಲ್ಲಿ ತಕ್ಷಣದಲ್ಲಿ ಕದನವಿರಾಮ ಘೋಷಿಸ ಬೇಕು ಮತ್ತು ಈ ಕದನವಿರಾಮವು ಶಾಶ್ವತವಾಗಿ ಇರಬೇಕು’ ಎಂಬ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ಅಮೆರಿಕವು ಮತ್ತೊಮ್ಮೆ ತನ್ನ ಪರಮಾಧಿಕಾರವನ್ನು ಚಲಾಯಿಸಿತು.
- ನಿರ್ಣಯದಲ್ಲಿ ಹಮಾಸ್ ಬಂಡುಕೋರರನ್ನು ಸೂಕ್ತ ರೀತಿಯಲ್ಲಿ ಖಂಡಿಸಲಾಗಿಲ್ಲ ಎಂಬುದು ಅಮೆರಿಕದ ಆಕ್ಷೇಪ. ಆದರೆ, ಮಂಡಳಿಯ ಉಳಿದೆಲ್ಲ ಪ್ರಮುಖ 14 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ‘ಗಾಜಾದಲ್ಲಿ ಮಾನವೀಯ ಪರಿಸ್ಥಿತಿಯು ದುರಂತಮಯವಾಗಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಧಿಸಿರುವ ಎಲ್ಲ ನಿರ್ಬಂಧವನ್ನು ಇಸ್ರೇಲ್ ತೆಗೆದು ಹಾಕಬೇಕು’ ಎಂದು ಇವುಗಳು ಹೇಳಿವೆ.
- ‘ಹಮಾಸ್‌ನ ಕ್ರಿಯೆಗಳನ್ನು ಖಂಡಿಸಲಾಗಿಲ್ಲ ಅಥವಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ಹಕ್ಕಿದೆ ಎಂಬುದನ್ನೂ ಉಲ್ಲೇಖಿಸಲಾಗಿಲ್ಲ. ಹಮಾಸ್‌ಗೆ ಅನುಕೂಲವಾಗುವ ತಪ್ಪು ಸಂಕಥನಕ್ಕೆ ಈ ನಿರ್ಣಯವು ಅಂಕಿತ ಹಾಕಿದೆ. ಇದಕ್ಕೆ ಈ ಮಂಡಳಿಯ ಇತರ ಸದಸ್ಯರು ದನಿಗೂಡಿಸಿದ್ದಾರೆ’ ಎಂದು ಮತಚಲಾಯಿಸುವುದಕ್ಕೂ ಮುನ್ನ ಅಮೆರಿಕದ ನೀತಿ ಸಲಹೆಗಾರ ಮಾರ್ಗನ್ ಒರ್ಟಗಸ್ ಹೇಳಿದರು.
- 474 ಪಕ್ಷಗಳನ್ನು ಪಟ್ಟಿಯಿಂದ ಕೈಬಿಟ್ಟ ಆಯೋಗ
ಸಂದರ್ಭ: ನೋಂದಾಯಿತ ಮತ್ತು ಮಾನ್ಯತೆ ಪಡೆಯದ 474 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
- ಈ ಪಕ್ಷಗಳು ಕಳೆದ ಆರು ವರ್ಷಗಳಲ್ಲಿ ಯಾವುದೇ ಚುನಾವಣೆ ಯಲ್ಲಿ ಭಾಗವಹಿಸಿಲ್ಲ ಹಾಗೂ ಮಾನದಂಡಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ಇದರೊಂದಿಗೆ ಕಳೆದ 2 ತಿಂಗಳಲ್ಲಿ ಒಟ್ಟು 808 ಪಕ್ಷಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆ.9 ರಂದು ಮೊದಲ ಹಂತದಲ್ಲಿ 334 ಪಕ್ಷಗಳನ್ನು ಕೈಬಿಡಲಾಯಿತು.
- ಲೈಲ್ಸ್ ಮಿಂಚು: ಅಮೆರಿಕದ ನೋವಾ ಲೈಲ್ಸ್ ಸತತ ನಾಲ್ಕನೇ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದರು.
- ಅಮೆರಿಕದ ಓಟಗಾರ ನೋವಾ ಲೈಲ್ಸ್ ಅವರು ಸತತ ನಾಲ್ಕನೇ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಸರಿಗಟ್ಟಿದರು. ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಲೈಲ್ಸ್ 19.52 ಸೆ.ಗಳಲ್ಲಿ ಗುರಿಮುಟ್ಟಿದರು.
- ಜಮೈಕದ ದಂತಕಥೆ ಉಸೇನ್ ಬೋಲ್ಟ್ 200 ಮೀ. ಓಟದಲ್ಲಿ ಸತತ ನಾಲ್ಕು ಬಾರಿ ಚಿನ್ನ ಗೆದ್ದಿದ್ದರು. 2009 ರಿಂದ 2015ರ ಅವಧಿಯಲ್ಲಿ ಅವರು ವಿಶ್ವ ಕೂಟದಲ್ಲಿ 100 ಮೀ ಮತ್ತು 200 ಮೀ. ಓಟದಲ್ಲಿ ಪಾರಮ್ಯ ಮೆರೆದಿದ್ದರು. ವಿಶ್ವ ಕೂಟದಲ್ಲಿ 11 ಚಿನ್ನ ಮತ್ತು ಒಲಿಂಪಿಕ್ಸ್ ನಲ್ಲಿ ಎಂಟು ಚಿನ್ನ ಬಾಚಿದ್ದರು.
- ಈ ಕೂಟದ 100 ಮೀ. ಓಟದಲ್ಲಿ ಲೈಲ್ಸ್ ಕಂಚಿನ ಪದಕ ಗೆದ್ದುಕೊಂಡಿದ್ದು, 200 ಮೀ. ಓಟವನ್ನು ನಿರೀಕ್ಷೆಯಂತೆ ಗೆದ್ದರು. ಸ್ವದೇಶದ ಕೆನ್ನಿ ಬೆಡ್ನಾರೆಕ್ 19.58 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಜಮೈಕಾದ ಬ್ರಯಾನ್ ಲೆವೆಲ್ (19.64 ಸೆ.) ಕಂಚಿನ ಪದಕ ಗೆದ್ದುಕೊಂಡರು.
- ಒಲಿಂಪಿಕ್ ಚಾಂಪಿಯನ್, ಬೋಟ್ಸ್‌ವಾನಾದ ಲೆಟ್ಸಿಲಿ ಟೆಬಾಗೊ ಸೆಕೆಂಡಿನ ನೂರನೇ ಒಂದು ಭಾಗದಿಂದ ಪದಕ ಕಳೆದುಕೊಂಡರು. ಕಣದಲ್ಲಿದ್ದ 20 ವರ್ಷದೊಳಗಿನ ಏಕೈಕ ಅಥ್ಲೀಟ್ ಅಂಗಿಲ್ಲಾ (ಪೂರ್ವ ಕೆರಿಬಿಯನ್ ಭಾಗ) ಸಂಜಾತ ಬ್ರಿಟನ್‌ನ ಝರ್ನೆಲ್ ಹ್ಯೂಸ್ (19.78 ಸೆ.) ಐದನೇ ಸ್ಥಾನ ಪಡೆದರು.
- 28 ವರ್ಷ ವಯಸ್ಸಿನ ‘ಷೋ ಮ್ಯಾನ್’ ಲೈಲ್ಸ್, ಸೆಮಿಫೈನಲ್‌ನಲ್ಲಿ ದಾಖಲೆಯ 19.51 ಸೆ.ಗಳಲ್ಲಿ ಓಡಿದ್ದರು. ಫೈನಲ್‌ನಲ್ಲಿ ಆರನೇ ಲೇನ್‌ನಲ್ಲಿ ಓಡಿ, ಗುರಿಮುಟ್ಟಿದ ತಕ್ಷಣ, ಕೈಗಳನ್ನು ಮೇಲೆತ್ತಿ ಅರೆಕ್ಷಣ ಮುಗಿಲಿನತ್ತ ದಿಟ್ಟಿಸಿದರು.
- ಮೆಲಿಸಾಗೆ ಸ್ಪ್ರಿಂಟ್ ಡಬಲ್: ಅಮೆರಿಕದ ಮೆಲಿಸ್ಸಾ ಜೆಫರ್ಸನ್–ವೂಡೆನ್ ಅವರು ಮಹಿಳೆಯರ 200 ಮೀ. ಓಟವನ್ನು 21.68 ಸೆ.ಗಳಲ್ಲಿ ಪೂರೈಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪ್ರಿಂಟ್ ಡಬಲ್ (100 ಮತ್ತು 200 ಮೀ. ಓಟ) ಸಾಧಿಸಿದರು. ಅವರು ಕೂಟದ ಮೂರನೇ ದಿನ 100 ಮೀ. ಓಟದಲ್ಲಿ ವಿಜೇತರಾಗಿದ್ದರು.
- ಶೆಲ್ಲಿ–ಆ್ಯನ್ ಫ್ರೇಸರ್–ಪ್ರೈಸ್ 2013ರಲ್ಲಿ ಸ್ಪ್ರಿಂಟ್ ಡಬಲ್ ಸಾಧಿಸಿದ್ದರು. ನಂತರ ಮೆಲಿಸ್ಸಾ ಈ ಸಾಧನೆಗೆ ಪಾತ್ರರಾಗಿದ್ದಾರೆ.
- ಬೋಲ್‌ಗೆ ಚಿನ್ನ: ಡಚ್ ಓಟಗಾರ್ತಿ ಫೆಮ್ಕೆ ಬೋಲ್ ಅವರು ಮಹಿಳೆಯರ 400 ಮೀ. ಹರ್ಡಲ್ಸ್ ಓಟದ ಸ್ಪರ್ಧೆಯನ್ನು 51.54 ಸೆ.ಗಳಲ್ಲಿ ಓಡಿ ಗೆಲ್ಲುವ ಮೂಲಕ ಚಿನ್ನದ ಪದಕವನ್ನು ತಮ್ಮಲ್ಲೇ ಉಳಿಸಿಕೊಂಡರು.
- ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಸಿಡ್ನಿ ಮೆಕ್‌ಲಾಫ್ಲಿನ್ ಲೆವ್ರೊನ್ ಸ್ಪರ್ಧೆಯಿಂದ ಹಿಂದೆಸರಿದರು. ಅವರು 400 ಮೀ.ಫೈನಲ್ ಓಟದ ಕಡೆ ಗಮನ ಕೇಂದ್ರೀಕರಿಸುವ ಸಲುವಾಗಿ ಹರ್ಡಲ್ಸ್‌ನಿಂದ ಹಿಂದೆಸರಿದಿದ್ದರು.
- ಬೋಲ್‌ಗೆ ತೀವ್ರ ಪೈಪೋಟಿ ನೀಡಿದ ಅಮೆರಿಕದ ಜಾಸ್ಮಿನ್ ಜೋನ್ಸ್ (52.03 ಸೆ.) ಬೆಳ್ಳಿ ಪದಕ ಗೆದ್ದರು. ಸ್ಲೊವಾಕಿಯಾದ ಎಮ್ಮಾ ಝಪ್ಲೆಟಲೊವಾ (53.00 ಸೆ.) ಮೂರನೇ ಸ್ಥಾನ ಗಳಿಸಿದರು.
- ಪುರುಷರ ವಿಭಾಗದಲ್ಲಿ ಒಲಿಂಪಿಕ್ ಚಾಂಪಿಯನ್ ರಾಯ್ ಬೆಂಜಮಿನ್ 46.52 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆದ್ದುಕೊಂಡರು. ಜೊತೆಗೆ ಅನರ್ಹತೆ ಆತಂಕದಿಂದ ಬಚಾವಾದರು.
- ಅಮೆರಿಕದ 28 ವರ್ಷ ವಯಸ್ಸಿನ ಓಟಗಾರ, ಅಂತಿಮ ತಡೆ ದಾಟುವಾಗ ಹರ್ಡಲ್ಸ್ ಬಿದ್ದು, ಇತರ ಅಥ್ಲೀಟುಗಳ ಓಟದ ಮೇಲೆ ಪರಿಣಾಮವಾಯಿತು. ಆದರೆ ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ಅವರು ಹೆಸರು ಅಗ್ರಸ್ಥಾನದಲ್ಲೇ ಉಳಿಯಿತು.
- ಬ್ರೆಜಿಲ್‌ನ ಅಲಿಸನ್ ಡಾಸ್ ಸಂಟೋಸ್ (46.84 ಸೆ.) ಎರಡನೇ ಸ್ಥಾನ ಪಡೆದರೆ, ಕತಾರಿನ ಅಬ್ದರೆಹಮಾನ್ ಸಂಬಾ (47.06 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.