Fri. Oct 10th, 2025

  • ಅಂಚೆ ಮತಪತ್ರ ಎಣಿಕೆ ಸುಗಮಕ್ಕೆ ಕ್ರಮ: ಆಯೋಗ

ಸಂದರ್ಭ: ಅಂಚೆ ಮತಪತ್ರಗಳ ಎಣಿಕೆ ಪೂರ್ಣಗೊಂಡ ಬಳಿಕವಷ್ಟೇ ಇವಿಎಂ/ವಿವಿಪ್ಯಾಟ್‌ನ ಅಂತಿಮ ಸುತ್ತಿಗೂ ಮುಂಚಿನ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

  • ಆಯೋಗದ ಈ ಹೊಸ ನಿರ್ಧಾರವು ಬಿಹಾರ ವಿಧಾನಸಭಾ ಚುನಾವಣೆಯಿಂದ ಜಾರಿಗೆ ಬರಲಿದೆ.
  • ಅಂಚೆ ಮತಪತ್ರಗಳ ಎಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ಹೇಳಿದೆ.
  • ಅಂಚೆ ಮತಪತ್ರಗಳ ಎಣಿಕೆಯ ಹಂತವನ್ನು ಲೆಕ್ಕಿಸದೆ ಇವಿಎಂ ಎಣಿಕೆ ಮುಂದುವರಿಯಬಹುದುಎಂದು 2019 ಆದೇಶದಲ್ಲಿ ಹೇಳಲಾಗಿತ್ತು.
  • ಆದೇಶವನ್ನು ಹಿಂಪಡೆದಿರುವ ಆಯೋಗ, ‘ಅಂಚೆ ಮತಪತ್ರಗಳ ಎಣಿಕ ಪೂರ್ಣಗೊಂಡ ಬಳವಷ್ಟೇ ಇವಿಎಂ/ವಿವಿಪ್ಯಾಟ್ ಕೊನೆಯ ಸುತ್ತಿಗೂ ಹಿಂದಿನ ಸುತ್ತಿನ ಮತ ಎಣಿಕೆ ನಡೆಸಲಾಗುವುದುಎಂದು ಸ್ಪಷ್ಟಪಡಿಸಿದೆ.
  • ಇವಿಎಂ ಎಣಿಕೆ ಪೂರ್ಣಗೊಳ್ಳುವ ಮೊದಲು ಅಂಚೆ ಮತಪತ್ರಗಳ ಎಣಿಕೆಯನ್ನು ಪೂರ್ಣಗೊಳಿಸಬೇಕು ಎಂಬುದು ವಿರೋಧ ಪಕ್ಷಗಳ ದೀರ್ಘಕಾಲದ ಬೇಡಿಕೆಯಾಗಿತ್ತು. ಅಂಗವಿಕಲರು ಮತ್ತು 85 ವರ್ಷ ದಾಟಿದ ಹಿರಿಯ ನಾಗರಿಕರ ಮತದಾನಕ್ಕಾಗಿ ಆಯೋಗ ಇತ್ತೀಚೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಅಂಚೆ ಮತಪತ್ರಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಹೀಗಾಗಿ ಆಯೋಗ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ.
  • ಅಗ್ನಿ ಪ್ರೈಮ್‌’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಸಂದರ್ಭ: 2,000 ಕಿ.ಮೀ ವ್ಯಾಪ್ತಿಯಲ್ಲಿನ ಗುರಿಯನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ರೈಲು ಬೋಗಿಯ ಮೇಲೆ ಅಳವಡಿಸಿದ್ದ ಲಾಂಚರ್‌ನಿಂದ ಉಡಾಯಿಸುವ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿದೆ.

  • ದೇಶದಲ್ಲಿ ಇದೇ ಮೊದಲ ಬಾರಿಗೆ ರೈಲು ಬೋಗಿಯ ಮೇಲಿ ನಿಂದ ಕ್ಷಿಪಣಿ ಉಡಾಯಿಸಲಾಗಿದೆ. ಯಾವುದೇ ಭಾಗಕ್ಕೆ ತ್ವರಿತವಾಗಿ ಕ್ಷಿಪಣಿ ಕೊಂಡೊಯ್ದು, ಉಡ್ಡಯನಕ್ಕೆ ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.
  • ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ‘ಈ ಪರೀಕ್ಷೆಯಿಂದ, ರೈಲಿನ ಮೇಲಿಂದ ಕ್ಷಿಪಣಿಯನ್ನು ಉಡಾಯಿಸಬಲ್ಲ ಸಾಮರ್ಥ್ಯವಿರುವ ದೇಶಗಳ ಗುಂಪಿಗೆ ಭಾರತ ಸೇರಿತು’ ಎಂದಿದ್ದಾರೆ.
  • ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವ್ಯೂಹಾತ್ಮಕ ಪಡೆಗಳ ಕಮಾಂಡ್‌ (ಎಸ್‌ಎಫ್‌ಸಿ) ಸಹಯೋಗದಲ್ಲಿ ಮಧ್ಯಂತರ ಶ್ರೇಣಿಯ ‘ಅಗ್ನಿ ಪ್ರೈಮ್‌’ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
  • ಅತ್ಯಾಧುನಿಕ ಸಂವಹನ ವ್ಯವಸ್ಥೆ ಹಾಗೂ ರಕ್ಷಣಾ ಕಾರ್ಯವಿಧಾನಗಳು ಸೇರಿದಂತೆ ಕ್ಷಿಪಣಿಯು ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.
  • ₹65 ಸಾವಿರ ಕೋಟಿ ಹೂಡಿಕೆ ಪ್ರಸ್ತಾವ

ಸಂದರ್ಭ: ‘ದೇಶದ ಆಹಾರ ಸಂಸ್ಕರಣಾ ವಲಯವು ₹1 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾವಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ’ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

  • ವಿಶ್ವ ಆಹಾರ ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಅವರು,  ಈಗಾಗಲೇ  ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್‌ ಲಿಮಿಟೆಡ್‌ (ಆರ್‌ಸಿಪಿಎಲ್‌) ಮತ್ತು ಕೋಕಾ–ಕೋಲಾ ಕಂಪನಿಗಳ ಘಟಕಗಳನ್ನು ಸ್ಥಾಪಿಸಲು ಅಂದಾಜು ₹65 ಸಾವಿರ ಕೋಟಿ ಹೂಡಿಕೆ ಮಾಡಲು ಸಹಿ ಹಾಕಿವೆ ಎಂದು ಹೇಳಿದ್ದಾರೆ. ವಿಶ್ವ ಆಹಾರ ಭಾರತ ಶೃಂಗಸಭೆ ಸೆಪ್ಟೆಂಬರ್‌ 28ರ ವರೆಗೆ ನಡೆಯಲಿದೆ.
  • ದೇಶದಾದ್ಯಂತ ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಆಹಾರ ಸಂಸ್ಕರಣಾ ಸಚಿವಾಲಯದ ಜೊತೆಗೆ ಆರ್‌ಸಿಪಿಎಲ್‌ ಒಪ್ಪಂದ ಮಾಡಿ ಕೊಂಡಿದೆ.  ಈ ಒಪ್ಪಂದದ ಮೌಲ್ಯ ₹40 ಸಾವಿರ ಕೋಟಿಯಾಗಿದೆ.
  • ಒಪ್ಪಂದದ ಪ್ರಕಾರ, ಆಹಾರ ಉತ್ಪನ್ನಗಳು ಮತ್ತು ಪಾನೀಯಗಳನ್ನು ತಯಾರಿಸಲು ಮಹಾರಾಷ್ಟ್ರದ ನಾಗ್ಪುರ ಮತ್ತು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲಿದೆ. ಇದಕ್ಕೆ  ಆರ್‌ಸಿಪಿಎಲ್‌ ₹1,500 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಿದೆ.
  • ಕೋಕಾ–ಕೋಲಾ ₹25,760 ಕೋಟಿ ಹೂಡಿಕೆ ಮಾಡಲಿದೆ. ಇದರಿಂದ 30 ಸಾವಿರ ನೇರ ಉದ್ಯೋಗ ಮತ್ತು 3 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಈ ಯೋಜನೆಯ ಅನುಷ್ಠಾನವು ಈ ವರ್ಷ ಪ್ರಾರಂಭವಾಗಲಿದ್ದು, 2030ರ ವೇಳೆಗೆ ಪೂರ್ಣಗೊಳ್ಳುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
  • 97 ತೇಜಸ್ಜೆಟ್ಗಳ ನಿರ್ಮಾಣಕ್ಕೆ ಎಚ್ಎಎಲ್ ಜೊತೆಗೆ ಒಪ್ಪಂದ

ಸಂದರ್ಭ: ಭಾರತೀಯ ವಾಯುಪಡೆಗಾಗಿ ₹62,370 ಕೋಟಿ ವೆಚ್ಚದಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

  • 2027–28ರ ವೇಳೆಗೆ ಈ ಯುದ್ಧ ವಿಮಾನಗಳನ್ನು ಎಚ್‌ಎಎಲ್ ವಿತರಿಸಲಿದೆ.
  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್‌) ಈ ಬೃಹತ್ ಖರೀದಿಗೆ ಒಪ್ಪಿಗೆ ನೀಡಿದ ಸುಮಾರು ಒಂದು ತಿಂಗಳ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ.
  • ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ಗೆ ನೀಡಲಾದ ಎರಡನೇ ಗುತ್ತಿಗೆ ಇದಾಗಿದೆ. 2021ರ ಫೆಬ್ರವರಿಯಲ್ಲಿ ವಾಯುಪಡೆಗಾಗಿ 83 ತೇಜಸ್ ಎಮ್‌ಕೆ–1ಎ ಜೆಟ್‌ಗಳನ್ನು ಖರೀದಿಸಲು ₹48,000 ಕೋಟಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು.
  • ಲಡಾಖ್‌: ರಾಜ್ಯ ಸ್ಥಾನ, ಸ್ವಾಯತ್ತೆಗಾಗಿ ಹೋರಾಟ

2019ರ ಆಗಸ್ಟ್‌ 5. ಸಂವಿಧಾನದ 370ರ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್‌ ಅನ್ನು ಪ್ರತ್ಯೇಕಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರೂಪಿಸಿತ್ತು. ಕೇಂದ್ರದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು, ಮುಖಂಡರು ವಿರೋಧಿಸಿದ್ದರು. ಜನರು ಪ್ರತಿಭಟನೆ ನಡೆಸಿದ್ದರು. ಅದು ಹಿಂಸೆಗೂ ತಿರುಗಿತ್ತು. ಆದರೆ, ಪಕ್ಕದ ಲಡಾಖ್‌ ಶಾಂತವಾಗಿತ್ತು. ಅಲ್ಲಿನ ಮುಖಂಡರು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದರು. ತಮ್ಮ ಬೇಡಿಕೆಗಳು ಈಡೇರುವ ಸಮಯ ಕೊನೆಗೂ ಬಂತು ಎಂಬುದು ಲಡಾಖ್‌ ಜನರ ನಿರೀಕ್ಷೆಯಾಗಿತ್ತು. ಆದರೆ, ಆರಂಭದಲ್ಲಿ ಕೇಂದ್ರದ ನಿರ್ಧಾರ ಸ್ವಾಗತಿಸಿದವರೇ ವರ್ಷವಾಗುವಷ್ಟರಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಲು ಆರಂಭಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ದಾರಿ ಕಂಡುಕೊಂಡರು. ಪ್ರತಿಭಟನೆ, ರ‍್ಯಾಲಿ, ಉಪವಾಸ ಸತ್ಯಾಗ್ರಹಗಳಿಗೆ ಸೀಮಿತವಾಗಿದ್ದ ಹೋರಾಟ ಎರಡು ವರ್ಷಗಳಿಂದೀಚೆಗೆ ತೀವ್ರಗೊಂಡು, ಅದೀಗ ಹಿಂಸಾರೂಪ ತಾಳುವ ಮಟ್ಟಕ್ಕೆ ಏರಿದೆ. 

ಲಡಾಖ್‌ನ ಲೇಹ್‌ನಲ್ಲಿ ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರವಾಗಿ ಪರಿವರ್ತನೆಗೊಂಡು ನಾಲ್ವರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಲಡಾಖ್‌ ಅನ್ನು ಸಂವಿಧಾನದ ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಿ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಲಡಾಖ್‌ ಜನರ ಪ್ರಮುಖ ಬೇಡಿಕೆ. 

‘ಝೆನ್‌ ಜಿ’ ಹೋರಾಟ: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಇಬ್ಬರು ತೀವ್ರ ಅಸ್ವಸ್ಥಗೊಂಡಿದ್ದು ಬುಧವಾರ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ನೆಪ. ಹಿಂಸೆಗೆ ತಿರುಗಿದ ಈ ಹೋರಾಟವನ್ನು ನೇಪಾಳದಲ್ಲಿ ಇತ್ತೀಚೆಗೆ ನಡೆದ ‘ಝೆನ್‌ ಜಿ’ ಪೀಳಿಗೆಯವರ ಪ್ರತಿಭಟನೆಗೆ ಹೋಲಿಸಲಾಗುತ್ತಿದೆ. ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಮುಂಚೂಣಿಯಲ್ಲಿರುವ ಪರಿಸರವಾದಿ, ಶಿಕ್ಷಣ ತಜ್ಞ ಸೋನಮ್‌ ವಾಂಗ್‌ಚುಕ್‌ ಅವರೇ ಇದು ‘ಝೆನ್‌ ಜಿ’ ಹೋರಾಟ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ರೀತಿ ಬಿಂಬಿಸಲಾಗುತ್ತಿದೆ. ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ. ಆದರೆ, ಲೇಹ್‌ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. 

2019ರಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸುವಾಗ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದರೂ ಅಲ್ಲಿ ವಿಧಾನಸಭೆಯನ್ನು ಉಳಿಸಿಕೊಳ್ಳಲಾಗಿತ್ತು (ವಿಧಾನ ಪರಿಷತ್‌ ಅನ್ನು ರದ್ದುಪಡಿಸಲಾಗಿತ್ತು). ಆದರೆ, ಲಡಾಖ್‌ ಅನ್ನು ಶಾಸಕಾಂಗ ವ್ಯವಸ್ಥೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಲಾಗಿತ್ತು. ಇದರಿಂದಾಗಿ ಲಡಾಖ್‌ನಲ್ಲಿ ರಾಜಕೀಯ ಶೂನ್ಯ ಆವರಿಸಿದೆ. ಕೇಂದ್ರ ಸರ್ಕಾರ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ನೇರವಾಗಿ ಆಡಳಿತ ನಡೆಸುವುದರಿಂದ ಸ್ಥಳೀಯರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗಿದೆ, ಪ್ರಜಾಪ್ರಭುತ್ವದ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂಬುದು ವಾಂಗ್‌ಚುಕ್‌ ಹಾಗೂ ಹೋರಾಟಗಾರರ ಆರೋಪ.

ಸೂಕ್ಷ್ಮ ಪರಿಸರ ವ್ಯವಸ್ಥೆ, ನೈಸರ್ಗಿಕ ಸಂಪತ್ತು ಹೊಂದಿರುವ ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆ, ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ತೊಂದರೆಯಾಗುತ್ತಿದೆ. ಲಡಾಖ್‌ನ ಸಾಂಸ್ಕೃತಿಕ ಅಸ್ಮಿತೆಗೂ ಧಕ್ಕೆಯಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ ಎಂಬ ಆತಂಕ ಅವರದ್ದು. ಸ್ವಾಯತ್ತ ಪ್ರದೇಶವಾಗಿ ಘೋಷಿಸಿದರೆ, ಸ್ಥಳೀಯವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿ, ಸ್ಥಳೀಯರೇ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂಬುದು ಅವರ ವಾದ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2019ರಲ್ಲಿ ಲಡಾಖ್‌ ಅನ್ನು ಆರನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿತ್ತು. ಆದರೆ, ಅದನ್ನು ಇನ್ನೂ ಈಡೇರಿಸಿಲ್ಲ ಎಂಬುದು ಹೋರಾಟಗಾರರ ಕೋಪಕ್ಕೆ ಪ್ರಮುಖ ಕಾರಣ.

ಸಮಿತಿ ರಚನೆ: 2020ರಿಂದೀಚೆಗೆ ಲಡಾಖ್‌ನಲ್ಲಿ ಕಾರ್ಗಿಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (ಕೆಡಿಎ) ಮತ್ತು ಲೇಹ್‌ ಅಪೆಕ್ಸ್‌ ಬಾಡಿ (ಎಲ್‌ಎಬಿ) ಅಡಿಯಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದರಿಂದ ಅಲ್ಲಿನ ಜನರ ಬೇಡಿಕೆಗಳನ್ನು ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರ 2023ರ ಜನವರಿ 2ರಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಕೇಂದ್ರ ಸರ್ಕಾರವು ಈ ವಿಚಾರವಾಗಿ ಲಡಾಖ್‌ ನಾಯಕತ್ವದೊಂದಿಗೆ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದೆ. ಅಕ್ಟೋಬರ್‌ 6ರಂದು ಮತ್ತೊಂದು ಸುತ್ತಿನ ಮಾತುಕತೆ ನಿಗದಿಯಾಗಿದೆ.

ಈ ಹಿಂದೆ, ಲಡಾಖ್‌ನ ಮುಖಂಡರು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟ ವೇಳೆ ರಾಜ್ಯ ಸ್ಥಾನಮಾನ ನೀಡಲು ಮತ್ತು ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಲು ಅವರು ನಿರಾಕರಿಸಿದ್ದರು ಎನ್ನಲಾಗಿದ್ದು, ಇದು ಚಳವಳಿ ನಡೆಸುತ್ತಿರುವವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಆಧಾರ: ಪಿಟಿಐ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ಕಾಯ್ದೆ, ಪಿಐಬಿ, ಮಾಧ್ಯಮ ವರದಿಗಳು

ಏನಿದು 6ನೇ ಪರಿಚ್ಛೇದ?

ಸಂವಿಧಾನದ ವಿಧಿ 244(2) ಮತ್ತು ವಿಧಿ 275(1) ಅಡಿಯಲ್ಲಿ ಈ ಪರಿಚ್ಛೇದ‌ವನ್ನು ಸೇರ್ಪಡೆಗೊಳಿಸಲಾಗಿದೆ.

ಭಾರತದ ಈಶಾನ್ಯ ಭಾಗದಲ್ಲಿರುವ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಆಡಳಿತ ನಿರ್ವಹಣೆಯ ಅವಕಾಶವನ್ನು ಈ ಪರಿಚ್ಛೇದ‌ ನೀಡುತ್ತದೆ. 

ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶದಲ್ಲಿ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ಗಳನ್ನು ಮತ್ತು ಪ್ರಾದೇಶಿಕ ಕೌನ್ಸಿಲ್‌ಗಳನ್ನು ಸ್ಥಾಪಿಸಬಹುದು ಎಂದು ಇದು ಹೇಳುತ್ತದೆ.

ಸ್ವಯಂ ಆಡಳಿತ ನಡೆಸಲು, ಈಶಾನ್ಯ ರಾಜ್ಯದ ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಕೌನ್ಸಿಲ್‌ಗಳಿಗೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರವನ್ನು ಈ ಪರಿಚ್ಛೇದ‌ ನೀಡುತ್ತದೆ. 

ಯಾವುದೇ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದ್ದರೆ, ಆ ಪ್ರದೇಶವನ್ನು 6ನೇ ಪರಿಚ್ಛೇದ‌ಕ್ಕೆ ಸೇರಿಸಲು ಸಂವಿಧಾನದಲ್ಲಿ ಅವಕಾಶವಿದೆ.

ಕೇಂದ್ರದ ಅಂಕಿ ಅಂಶಗಳ ಪ್ರಕಾರ ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಶೇ 97ರಷ್ಟಿದೆ. 

ಆಯೋಗ ಶಿಫಾರಸು: ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಪರಿಚ್ಛೇದ‌ಕ್ಕೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್‌ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಪ್ರಮುಖ ಬೇಡಿಕೆಗಳು

lರಾಜ್ಯದ ಸ್ಥಾನಮಾನ ನೀಡಬೇಕು

lಲಡಾಖ್‌ನ ಸೂಕ್ಷ್ಮ ಪರಿಸರ, ಸಂಪನ್ಮೂಲಗಳು, ಜನರ ಭೂ ಒಡೆತನದ ಹಕ್ಕು ಮತ್ತು ಸಾಂಸ್ಕೃತಿಕ ಅನನ್ಯತೆಗೆ ಸಾಂವಿಧಾನಿಕ ರಕ್ಷಣೆ ಒದಗಿಸಬೇಕು (ಆರನೇ ಪರಿಚ್ಛೇದ‌ಕ್ಕೆ ಸೇರಿಸಬೇಕು)

lಲೇಹ್‌ ಮತ್ತು ಕಾರ್ಗಿಲ್‌ಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು (ಸದ್ಯ ಲಡಾಖ್‌ ಒಂದೇ ಕ್ಷೇತ್ರ ಇದೆ)

lಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು

ಕೇಂದ್ರ ಸರ್ಕಾರದ ವಾದವೇನು?

ಸಂಸತ್ತಿನಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲು ಬದ್ಧ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಹೇಳಿದೆ. ಆದರೆ, ಲಡಾಖ್‌ ಬಗ್ಗೆ ಅದು ಈ ರೀತಿ ಹೇಳಿಲ್ಲ. 

ಲಡಾಖ್‌ ಆಡಳಿತಕ್ಕಾಗಿ ಲಡಾಖ್‌ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿಗಳನ್ನು (ಲೇಹ್‌ ಮತ್ತು ಕಾರ್ಗಿಲ್‌ಗೆ) ರಚಿಸಲಾಗಿದೆ. ಇವು ಸ್ವಾಯತ್ತ ಸಂಸ್ಥೆಯಾಗಿದ್ದು, ಆಡಳಿತ, ಆರ್ಥಿಕ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ನಿರ್ವಹಿಸಲು ಇವುಗಳಿಗೆ ಅಧಿಕಾರ ಇದೆ ಎಂಬುದು ಕೇಂದ್ರ ಸರ್ಕಾರದ ವಾದ. 

ಆದರೆ, ಈ ಮಂಡಳಿಯ ಅಧಿಕಾರ ಸೀಮಿತವಾಗಿದೆ ಎಂಬುದು ಹೋರಾಟಗಾರರ ಹೇಳಿಕೆ  

ಆಯೋಗ ಶಿಫಾರಸು

ಲಡಾಖ್‌ನಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಆ ಪ್ರದೇಶವನ್ನು ಸಂವಿಧಾನದ ಐದನೇ/ಆರನೇ ಶೆಡ್ಯೂಲಿಗೆ ಸೇರ್ಪಡೆಗೊಳಿಸಬಹುದು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ 2019ರ ಸೆಪ್ಟೆಂಬರ್‌ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಆಯೋಗದ 119ನೇ ಸಭೆಯಲ್ಲಿ ಈ ವಿಚಾರವನ್ನು ವಿಸ್ತೃತವಾಗಿ ಚರ್ಚೆ ನಡೆಸಿ, ನಂತರ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. 

ನಿರಾಸಕ್ತಿ ಏಕೆ?

ಲಡಾಖ್‌ನಲ್ಲಿ ಭಾರತ–ಚೀನಾ ಗಡಿ ಪ್ರದೇಶವಿದ್ದು, ಎರಡೂ ದೇಶಗಳ ನಡುವಿನ ಗಡಿ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಆಗಾಗ ಘರ್ಷಣೆಯೂ ನಡೆಯುತ್ತಿರುತ್ತದೆ. ಅತ್ಯಂತ ಸೂಕ್ಷ್ಮವಾಗಿರುವ ಈ ಪ್ರದೇಶದ ಆಡಳಿತ ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬಂದರೆ ಗಡಿ ಭದ್ರತೆಯ ದೃಷ್ಟಿಯಿಂದ ಸಾಕಷ್ಟು ಅನುಕೂಲವಿದೆ ಎಂಬ ಕಾರಣಕ್ಕೆ ರಾಜ್ಯದ ಸ್ಥಾನಮಾನ ಅಥವಾ ಸಾಂವಿಧಾನಿಕವಾಗಿ ಇನ್ನಷ್ಟು ಸ್ವಾಯತ್ತೆ ನೀಡಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ. 

  • ಪ್ಯಾಲೆಸ್ಟೀನ್‌: ಭಾರತ ನಾಯಕತ್ವ ಪ್ರದರ್ಶಿಸಬೇಕು

ಸಂದರ್ಭ: ಪ್ಯಾಲೆಸ್ಟೀನ್‌ ವಿಚಾರದಲ್ಲಿ ಭಾರತವು ನಾಯಕತ್ವವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

  • ಪ್ಯಾಲೆಸ್ಟೀನ್ಅನ್ನು ದೇಶವೆಂದು ಗುರುತಿಸುವಲ್ಲಿ ಬ್ರಿಟನ್‌, ಕೆನಡಾ, ಪೋರ್ಚುಗಲ್‌, ಆಸ್ಟ್ರೇಲಿಯಾ ಜತೆಗೆ ಇದೀಗ ಫ್ರಾನ್ಸ್ಸಹ ಸೇರಿಕೊಂಡಿದೆ. ದೀರ್ಘ ಕಾಲದಿಂದ ಬಳಲಿರುವ ಪ್ಯಾಲೆಸ್ಟೀನ್‌ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಈಡೇರಿಸಲು ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ವಿವರಿಸಿರುವ ಅವರು, ವಿಶ್ವಸಂಸ್ಥೆಯ 193 ದೇಶಗಳ ಪೈಕಿ 150ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ಟೀನ್‌ ಅನ್ನು ಬೆಂಬಲಿಸಿವೆ ಎಂದೂ ಉಲ್ಲೇಖಿಸಿದ್ದಾರೆ.
  • ಭಾರತವು 1988 ನವೆಂಬರ್‌ 18ರಂದು ಪ್ಯಾಲೆಸ್ಟೀನ್ಅನ್ನು ದೇಶವಾಗಿ ಗುರುತಿಸುವ ಮೂಲಕ ನಾಯಕತ್ವ ಪ್ರದರ್ಶಿಸಿತ್ತು.
  • ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ಪ್ರಶ್ನಿಸಿತ್ತು. ಅಲ್ಲದೆ 1954–62ರ ಅಲ್ಜೀರಿಯಾ ಸ್ವಾತಂತ್ರ್ಯ ಹೋರಾಟದ ವೇಳೆ ಭಾರತ ಅಲ್ಜೀರಿಯಾ ಪರ ಬಲವಾಗಿ ಧ್ವನಿಯೆತ್ತಿತ್ತು.
  • ಪೂರ್ವ ಪಾಕಿಸ್ತಾನದಲ್ಲಿನ ನರಮೇಧವನ್ನು ತಡೆಯಲು ಭಾರತ ಮಧ್ಯ ಪ್ರವೇಶಿಸಿತ್ತು. ಆ ಬಳಿಕ 1971ರಲ್ಲಿ ಬಾಂಗ್ಲಾದೇಶ ಜನನವಾಯಿತು ಎಂಬ ಮಾಹಿತಿಯನ್ನು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 
  • ನ್ಯಾಯ, ಗುರುತು, ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ನಡೆಯುತ್ತಿರುವ ಪ್ಯಾಲೆಸ್ಟೀನ್‌ ಹೋರಾಟದ ಬಗ್ಗೆ ಭಾರತ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
  • ತಿರುಮಲ: . ಕಮಾಂಡ್‌– ಕಂಟ್ರೋಲ್ಕೇಂದ್ರ ಸ್ಥಾಪನೆ

ಸಂದರ್ಭ: ವಿಶ್ವದ ಅತೀ ಶ್ರೀಮಂತ ಹಿಂದೂ ದೇವಾಲಯವಾದ ತಿರುಮಲದ ತಿಮ್ಮಪ್ಪನ ಸನ್ನಿಧಾನದಲ್ಲಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ (ಐಸಿಸಿಸಿ)ಗೆ ಚಾಲನೆ ನೀಡಲಾಗಿದೆ.

  • ಪ್ರತಿ ಗಂಟೆಗೆ 4,500 ಮಂದಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದು, ಹೊಸ ಸೌಲಭ್ಯವು ಭಕ್ತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಳಿತವಾಗಿದೆ.
  • ಅನಿವಾಸಿ ಭಾರತೀಯರು ನೀಡಿದ ದಾನದಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 6 ಸಾವಿರ ಎ.ಐ ನಿಗಾ ಕ್ಯಾಮೆರಾಗಳು ಕಮಾಂಡ್‌ ಕೇಂದ್ರಗಳಿಗೆ ನಿರಂತರ ಲೈವ್‌ ವಿಡಿಯೊ ರವಾನಿಸಲಿವೆ. ಇದರಿಂದ, ದಟ್ಟಣೆ ವೇಳೆ ಸರತಿಯ ಸಾಲು ನಿರ್ವಹಣೆಯ ಜೊತೆಗೆ ಕ್ಷಿಪ್ರವಾಗಿ ಸ್ಪಂದಿಸಲು ನೆರವಾಗಲಿದೆ.
  • ಗ್ರಾಮ ಸಹಾಯಕರಿಗೆ ಇಡುಗಂಟು

ಸಂದರ್ಭ: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಅಥವಾ ಕೆಲಸದಲ್ಲಿ ಇರುವಾಗಲೇ ಮೃತರಾದರೆ ₹10 ಲಕ್ಷಗಳ ಇಡುಗಂಟು ನೀಡಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಅಲ್ಲದೇ, ಈ ಕೆಲಸವನ್ನು ಗ್ರೂಪ್‌ ‘ಡಿ’ ಹುದ್ದೆಯಲ್ಲಿ ಸಕ್ರಮಗೊಳಿಸುವುದು ಅಥವಾ ಗೌರವ ಧನವನ್ನು ₹15,000 ದಿಂದ ₹27,000ಕ್ಕೆ ಹೆಚ್ಚಿಸುವುದು ಇವೆರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
  • ಬಾಡಿಗೆ ಮಸೂದೆಗೆ ಒಪ್ಪಿಗೆ: ಕೇಂದ್ರ ಸರ್ಕಾರವು ‘ಜನ ವಿಶ್ವಾಸ’ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ಕರ್ನಾಟಕ ಬಾಡಿಗೆ ಕಾಯ್ದೆ 1999ರ ವಿವಿಧ ಕಲಂಗಳ ಅಡಿಯಲ್ಲಿ ದಂಡ, ಅಪರಾಧ ನಿಬಂಧನೆ ಗಳಿಗೆ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
  • ಇದು ಕೈಗಾರಿಕಾ ಕಟ್ಟಡಗಳು, ಶೆಡ್‌ಗಳ ಬಾಡಿಗೆ ಸಂಬಂಧಿಸಿ ದ್ದಾಗಿದೆ. ಈ ತಿದ್ದುಪಡಿ ಮಸೂದೆಯನ್ನು ವಿಧಾನ ಮಂಡಲದ ಅಧಿವೇಶನ ದಲ್ಲಿ ಮಂಡಿಸ ಲಾಗುವುದು. ಈ ತಿದ್ದುಪಡಿ ಮೂಲಕ ದಂಡ ಪ್ರಮಾಣವನ್ನು ತರ್ಕಬದ್ಧ ಗೊಳಿಸಲಾಗುವುದು ಎಂದು ಪಾಟೀಲ ಹೇಳಿದರು.
  • ಮುಖ್ಯವಾಗಿ ವಿವಿಧ ಅಪರಾಧದ ಪ್ರಕರಣಗಳನ್ನು ಅಪರಾಧವಲ್ಲ ಎಂದು ನಿರ್ಣಯಿಸುವುದು, ವಿವಿಧ ರೀತಿಯ ದಂಡಗಳನ್ನು ಪರಿಷ್ಕರಿಸುವುದು, ನ್ಯಾಯಾಂಗ ಅಧಿಕಾರಿ ಯನ್ನು ನೇಮಿಸುವುದು, ಮೇಲ್ಮನವಿ ಘಟಕದ ಸ್ಥಾಪನೆ ಮತ್ತು ದಂಡ ಪ್ರಮಾಣವನ್ನು ಕಾಲ ಕಾಲಕ್ಕೆ ಹೆಚ್ಚಿಸುವ ಅಂಶವನ್ನು ತಿದ್ದುಪಡಿ ಒಳಗೊಂಡಿದೆ ಎಂದರು.
  • ವಿಪತ್ತು ಉಪಶಮನಕ್ಕೆ ₹1,005 ಕೋಟಿ

ಸಂದರ್ಭ: ರಾಜ್ಯದ ವಿಪತ್ತು ಉಪಶಮನ ನಿಧಿಯಡಿ ₹1,005 ಕೋಟಿ ವೆಚ್ಚದಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಪಶಮನ ಕಾಮಗಾರಿಗಳನ್ನು ಕೈಗೊಳ್ಳಲು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಲ್ಲಿನ ಪುನರಾವರ್ತಿತ ಭೂಕುಸಿತವನ್ನು ತಡೆಗಟ್ಟಲು ₹466.93 ಕೋಟಿ ವೆಚ್ಚದಲ್ಲಿ 720 ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು.
  • ರೈತರು ತಮ್ಮ ಜಮೀನಿನಲ್ಲಿ ಬಿದ್ದ ಮಳೆಯ ನೀರನ್ನು ಹೊಂಡಗಳಲ್ಲಿ ಸಂಗ್ರಹಿಸಿ ಆಪತ್ಕಾಲದಲ್ಲಿ ಬೆಳೆಗಳಿಗೆ ಬಳಸಲುಕೃಷಿ ಭಾಗ್ಯಯೋಜನೆಯಡಿ ಹಣಕಾಸು ನೆರವು ಒದಗಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹200 ಕೋಟಿ ಅನುದಾನವನ್ನು ಕೃಷಿ ಇಲಾಖೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
  • ಸಣ್ಣ ನೀರಾವರಿ ಇಲಾಖೆ ವಿಶ್ವ ಬ್ಯಾಂಕ್ನಿಂದ ₹550 ಕೋಟಿ ಆರ್ಥಿಕ ನೆರವು ಪಡೆದುಕೊಂಡಿದೆ. ಇದರಲ್ಲಿ ₹300 ಕೋಟಿಯನ್ನು ಬೆಂಗಳೂರು ನಗರದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪೂರೈಕೆ ಮಾಡಲು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಲಿಫ್ಟ್‌–4 ವೃಷಭಾವತಿ ವ್ಯಾಲಿ ಯೋಜನೆಹಂತ 2 ಮೂಲಕ ನೀರನ್ನು ತುಂಬಿಸುವ ಯೋಜನೆಗೆ ಬಳಸಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಮುಖ ತೀರ್ಮಾನಗಳು:

  • 15 ನೇ ಹಣಕಾಸು ಆಯೋಗದ ಯೋಜನೆಯಡಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ವಿಸ್ತರಣೆ ಮತ್ತು ಆಧುನೀಕರಣಕ್ಕೆ ₹329 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
  • ನವದೆಹಲಿ ಚಾಣಕ್ಯಪುರಿ ಸರ್ದಾರ್‌ ಪಟೇಲ್‌ ಮಾರ್ಗದಲ್ಲಿರುವ ಕರ್ನಾಟಕ ಭವನ–2(ಶರಾವತಿ) ಕಟ್ಟಡದ ನವೀಕರಣಕ್ಕೆ ₹16.30 ಕೋಟಿ
  • ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 2019 ರ ಮಾರ್ಚ್‌ 31 ಕ್ಕೆ ಮೊದಲು ನೋಂದಣಿಯಾದ ವಾಹನಗಳ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸುವ ಯೋಜನೆಗೆ ₹40 ಕೋಟಿ
  • ಕೆಎಸ್‌ಆರ್‌ಪಿ ಅಧೀನದಲ್ಲಿ ಹೊಸದಾಗಿ ಸ್ಥಾಪಿಸಿರುವ ಎರಡು ಐಆರ್‌ಬಿ ಪಡೆಗಳಿಗೆ ಅವಶ್ಯವಿರುವ ವಸತಿ ಮತ್ತು ವಸತಿಯೇತರ ಸೌಕರ್ಯಗಳನ್ನು ಕಲ್ಪಿಸಲು ₹60 ಕೋಟಿ
  • ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ 2 ನೇ ಆವೃತ್ತಿಯನ್ನು ₹40.29 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಮ್ಮತಿ
  • ಕರ್ನಾಟಕ ಕೌಶಲ ಅಭಿವೃದ್ಧಿ ನೀತಿಗೆ ಅಸ್ತು

ಸಂದರ್ಭ: ಕರ್ನಾಟಕದ ಯುವ ಜನತೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ನಿಟ್ಟಿನಲ್ಲಿ ಕೌಶಲ ಸಾಮರ್ಥ್ಯವನ್ನು ಹೆಚ್ಚಿಸಲು ‘ಕರ್ನಾಟಕ ಕೌಶಲ ಅಭಿವೃದ್ಧಿ ನೀತಿ 2025–2032’ ಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೌಶಲ ನೀತಿ ಪ್ರಮುಖ ಅಂಶಗಳು:

  • ಕಲಿಕೆ ಜೊತೆಗೆ ಕೌಶಲ, ನನ್ನ ವೃತ್ತಿ ನನ್ನ ಆಯ್ಕೆ ಯೋಜನೆಗೆ ಆದ್ಯತೆ.  ಅಪ್ರೆಂಟಿಸ್‌ಶಿಪ್‌, ಐಟಿಐ ತರಬೇತಿ ಮೂಲಕ ವಿಶೇಷ ಸಹಯೋಗ. ತಾಂತ್ರಿಕ ಮತ್ತು ಕೈಗಾರಿಕಾ ಬದಲಾವಣೆಗಳಿಗೆ ತಕ್ಕಂತೆ ನಿರಂತರ ಕಲಿಕೆಗೆ ಒತ್ತು.  ಮಹಿಳೆಯರು, ಅಂಗವಿಕಲರು, ನಗರ ಪ್ರದೇಶದ ಬಡವರು, ದಮನಿತ ಸಮುದಾಯಗಳಿಗೆ ತರಬೇತಿ. ಐಟಿಐಗಳ ಆಧುನೀಕರಣ, ಜಿಟಿಟಿಸಿ ವಿಸ್ತರಣೆ ಮತ್ತು ಗ್ರಾಮೀಣ ಮತ್ತು ನಗರ ಕೌಶಲ ಕೇಂದ್ರಗಳ ಸ್ಥಾಪನೆ ಮತ್ತು ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.
  • ಬೆಂಗಳೂರು ಸಿಟಿ ದಿಶಾಂಕ್ಬಿಡುಗಡೆ

ಸಂದರ್ಭ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ತಿಳಿಯಲು ಮೊಬೈಲ್‌ ತಂತ್ರಾಂಶ ‘ಬೆಂಗಳೂರು ಸಿಟಿ ದಿಶಾಂಕ್’ ಬಿಡುಗಡೆ ಮಾಡಲಾಗಿದೆ.

  • ಇದು ಜಿಐಎಸ್ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಜಿಬಿಎ, 5 ನಗರ ಪಾಲಿಕೆಗಳು, ವಲಯ, ವಿಧಾನಸಭಾ ಕ್ಷೇತ್ರ ಹಾಗೂ ವಾರ್ಡ್‌ಗಳ (ಹಳೆಯ 198 ವಾರ್ಡ್‌) ಅಧಿಕೃತ ಗಡಿಗಳನ್ನು ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರಗಳಿರುವ ಜಿಐಎಸ್ ಮಾಹಿತಿ ಸೇರಿಸಲಾಗುವುದು.
  • ಜೂನಿಯರ್ ಶೂಟಿಂಗ್‌: ಅನುಷ್ಕಾಗೆ ಚಿನ್ನದ ಪದಕ

ಸಂದರ್ಭ: ಭಾರತ ತಂಡವು, ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಮಾಡಿತು.

  • ಮೊದಲ ದಿನವಾದ ಗುರುವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಮಹಿಳಾ ತಂಡ ಮೂರೂ ಪದಕ ಗೆದ್ದು ಕ್ಲೀನ್ ಸ್ವೀಪ್ ಮಾಡಿದರೆ, ಪುರುಷರ ತಂಡ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು.
  • ಕರ್ನಾಟಕದ ಅನುಷ್ಕಾ ತೋಕೂರು ಅವರು ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 621.6 ಸ್ಕೋರ್‌ನೊಡನೆ ಚಿನ್ನ ಗೆದ್ದರು.
  • 18 ವರ್ಷ ವಯಸ್ಸಿನ ಅನ್ಶಿಕಾ (619.2) ಬೆಳ್ಳಿ ಗೆದ್ದರೆ, 20 ವರ್ಷ ವಯಸ್ಸಿನ ಆಧ್ಯಾ ಅಗರವಾಲ್ (615.9) ಕಂಚಿನ ಪದಕ ಗೆದ್ದರು.
  • ಕಜಕಸ್ತಾನದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅನುಷ್ಕಾ ಅವರು 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಡುವಲ್ಲಿ ಯಶಸ್ವಿ ಆಗಿದ್ದರು.
  • ದೀಪೇಂದ್ರ ಸಿಂಗ್ ಶೆಖಾವತ್ ಮತ್ತು ರೋಹಿತ್ ಕನ್ಯಾನ ಅವರು ಪುರುಷರ ವಿಭಾಗದ 50 ಮೀ. ರೈಪಲ್ ಪ್ರೋನ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ತಟಸ್ಥ ಅಥ್ಲೀಟ್ಸ್ ತಂಡದ ಕಮಿಲ್‌ ನುರಿಯಾಕ್‌ಮೆಟೋವ್‌ (618.9) ಚಿನ್ನ ಗೆದ್ದರು. ದೀಪೇಂದ್ರ 617.9 ಮತ್ತು ರೋಹಿತ್‌ 616.3 ಸ್ಕೋರ್

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments