ಯುನೆಸ್ಕೊ ಪಟ್ಟಿಗೆ ‘ಛತ್ ಪೂಜೆ’ ಸೇರ್ಪಡೆಗೆ ಯತ್ನ
ಸಂದರ್ಭ: ‘ಯುನೆಸ್ಕೊ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ‘ಛತ್ ಪೂಜೆ’ಯನ್ನು ಸೇರಿಸಲು ಸರ್ಕಾರವು ಪ್ರಯತ್ನ ನಡೆಸುತ್ತಿದೆ. ಇದು ಸಾಧ್ಯವಾದರೆ, ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರು ಹಬ್ಬದ ವೈಭವ ಹಾಗೂ ದೈವಿಕತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ’.
- ಕೋಲ್ಕತ್ತದ ದುರ್ಗಾ ಪೂಜೆಯನ್ನು ಕೂಡ ಇದೇ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಯುತ್ತಿದೆ’.
- ಛತ್ ಪವಿತ್ರ ಹಬ್ಬವನ್ನು ದೀಪಾವಳಿ ನಂತರ ಆಚರಿಸಲಾಗುತ್ತದೆ. ಈ ದೊಡ್ಡ ಹಬ್ಬವನ್ನು ಸೂರ್ಯದೇವನಿಗೆ ಸಮರ್ಪಿಸಲಾಗುತ್ತದೆ. ಸೂರ್ಯನಿಗೆ ಅರ್ಘ್ಯ ನೀಡಿ, ನಂತರ ಪೂಜಿಸಲಾಗುತ್ತದೆ. ದೇಶದ ವಿವಿಧೆಡೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಅದರ ವೈಭವವನ್ನು ಕಾಣಬಹುದಾಗಿದೆ’.
- ಮದ್ಯ ಮಾರಾಟ: ಕರ್ನಾಟಕ ಮೊದಲಿಗ
ಸಂದರ್ಭ: ದೇಶದಲ್ಲಿ ತಯಾರಾದ ವಿದೇಶಿ ಮದ್ಯದ (ಐಎಂಎಫ್‌ಎಲ್) ಮಾರಾಟದಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚಿನ ಪಾಲು ಹೊಂದಿವೆ. ಅದರಲ್ಲೂ ಮುಖ್ಯವಾಗಿ ಐಎಂಎಫ್‌ಎಲ್ ಮಾರಾಟದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಶೇಕಡ 17ರಷ್ಟು ಪಾಲು ಹೊಂದಿದೆ.
- ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಕ್ಷಿಣದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊಂದಿದ್ದ ಒಟ್ಟು ಪಾಲು ಶೇ 58ರಷ್ಟು ಆಗಿತ್ತು.
- ದೇಶದ ಇತರ ಕಡೆಗಳಲ್ಲಿ ಆಗಿರುವ ಮಾರಾಟದ ಪ್ರಮಾಣವು ಒಟ್ಟು ಮಾರಾಟದಲ್ಲಿ ಶೇ 42ರಷ್ಟು ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.
- 2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿನ ಅಬಕಾರಿ ನೀತಿಗಳ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿರಲಿಲ್ಲ. ಇದರಿಂದಾಗಿ ಇಡೀ ವರ್ಷದ ಒಟ್ಟು ಮಾರಾಟ ಕೂಡ ಕಡಿಮೆ ಆಗಿದೆ ಎಂದು ಸಿಐಎಬಿಸಿ ಮಹಾನಿರ್ದೇಶಕ ಅನಂತ ಎಸ್. ಅಯ್ಯರ್ ಹೇಳಿದ್ದಾರೆ.
- ‘ರಾಜ್ಯಗಳು ವಿಧಿಸುವ ಸುಂಕ ಪ್ರತಿ ವರ್ಷವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಬಕಾರಿ ನೀತಿಗಳೂ ಬದಲಾಗುತ್ತವೆ. ಇವು ಅಲ್ಪಾವಧಿ ಹಾಗೂ ಮಧ್ಯಮಾವಧಿಯಲ್ಲಿ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ’ ಎಂದು ಅಯ್ಯರ್ ಹೇಳಿದ್ದಾರೆ.
- ವಿಸ್ಕಿ, ವೊಡ್ಕಾ, ರಮ್, ಜಿನ್ ಮತ್ತು ಬ್ರ್ಯಾಂಡಿಯನ್ನು ಐಎಂಎಫ್‌ಎಲ್ ಹೆಸರಿನಿಂದ ಗುರುತಿಸಲಾಗುತ್ತದೆ.
- ಕರ್ನಾಟಕದಲ್ಲಿ 2024–25ರಲ್ಲಿ ಒಟ್ಟು 6.88 ಕೋಟಿ ಕೇಸ್ ಐಎಂಎಫ್‌ಎಲ್ ಮಾರಾಟವಾಗಿದೆ. ಕರ್ನಾಟಕದ ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 6.47 ಕೋಟಿ ಕೇಸ್ಗಳಷ್ಟು ಐಎಂಎಫ್‌ಎಲ್ ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 2.5 ಕೋಟಿ ಕೇಸ್ಗಳಷ್ಟು ಐಎಂಎಫ್‌ಎಲ್ ಮಾರಾಟ ಆಗಿದೆ.
- ‘ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ. ದೆಹಲಿ ಕೂಡ ಪ್ರಮುಖ ಮಾರುಕಟ್ಟೆ. ಅಲ್ಲಿ ಮಾರಾಟ ಹೆಚ್ಚಳ ಕಾಣುವುದಕ್ಕೆ ಹೊಸ ಅಬಕಾರಿ ನೀತಿಗಾಗಿ ಕಾಯುತ್ತಿದ್ದೇವೆ’ ಎಂದು ಅಯ್ಯರ್ ಹೇಳಿದ್ದಾರೆ.
ಭಾರತದಲ್ಲಿ ಜನಿಸಿದ ಚೀತಾ ಪ್ರೌಢಾವಸ್ಥೆಗೆ
ಸಂದರ್ಭ: ‘ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 16 ಚೀತಾ ಮರಿಗಳ ಪೈಕಿ ಒಂದು ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ಇದರಿಂದಾಗಿ ಚೀತಾಗಳನ್ನು ಮರುಪರಿಚಯಿಸುವ ಮೂರು ವರ್ಷಗಳ ಹಿಂದಿನ ಪ್ರಯತ್ನಕ್ಕೆ ಯಶಸ್ಸು ಸಿಗುವ ವಿಶ್ವಾಸ ಮೂಡಿದೆ.
- 2023ರ ಮಾರ್ಚ್ 29ರಂದು ನಮೀಬಿಯಾದಿಂದ ತರಿಸಿದ್ದ ‘ಜ್ವಾಲಾ’ ಚೀತಾಕ್ಕೆ ಜನಿಸಿದ ‘ಮುಖಿ’ ಮರಿಯು ಪ್ರೌಢಾವಸ್ಥೆಗೆ ತಲುಪಿದೆ. ವೇಳೆಗೆ ಮರಿ ಜನಿಸಿ, 915 ದಿನಗಳು ಅಥವಾ 30 ತಿಂಗಳು ಪೂರ್ಣವಾಗಲಿದೆ. ಇದರಿಂದ ಭಾರತದಲ್ಲಿ ಚೀತಾಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಾಣಿಸುತ್ತಿದೆ’ ಎಂದು ‘ಪ್ರಾಜೆಕ್ಟ್ ಚೀತಾ’ದ ನಿರ್ದೇಶಕ ಉತ್ತಮ್ ಕುಮಾರ್ ಶರ್ಮಾ ಅವರು ತಿಳಿಸಿದ್ದಾರೆ.
- ‘ಜ್ವಾಲಾ ಜನ್ಮ ನೀಡಿದ್ದ ನಾಲ್ಕು ಮರಿಗಳ ಪೈಕಿ ಮೂರು ಮರಿಗಳು ವಿಪರೀತ ತಾಪಮಾನದಿಂದಾಗಿ ಮೃತಪಟ್ಟಿದ್ದವು. ಮುಖಿ ಬದುಕುಳಿದು, ಚೆನ್ನಾಗಿ ಬೆಳೆದಿದೆ. ನಮ್ಮ ಪ್ರಯತ್ನಗಳು ಫಲವಾಗಿ ಪರಿವರ್ತನೆಯಾಗುತ್ತಿವೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
- ‘ಸದ್ಯ ಭಾರತದಲ್ಲಿ 27 ಚೀತಾಗಳಿದ್ದು, 16 ಭಾರತದಲ್ಲಿಯೇ ಜನಿಸಿವೆ. ಈ ಪೈಕಿ 25 ಕುನೊದಲ್ಲಿ ಇದ್ದು, ಉಳಿದ ಮೂರು ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿವೆ’ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.