- ಜಿಎಸ್ಟಿ ಕಡಿತ: ದಸರಾ ಉಡುಗೊರೆ
ಸಂದರ್ಭ: ಹೇರ್ ಆಯಿಲ್‌ನಿಂದ ಸೇರಿದಂತೆ ಕಾರ್ನ್‌ಫ್ಲೇಕ್ಸ್, ಟಿವಿ ಸೆಟ್‌ಗಳಿಂದ ಹಿಡಿದು ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿ ವರೆಗಿನ ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಂಡಿದೆ.
- ಅವಧಿ ವಿಮೆ, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿ ಸೇರಿ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್‌ಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
- ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು, ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 2017ರಲ್ಲಿ ಈ ತೆರಿಗೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ವಿಮಾ ಉತ್ಪನ್ನಗಳ ಪ್ರೀಮಿಯಂ ಮೇಲೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು.
- ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.
- ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
- ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಜಿಎಸ್‌ಟಿ ದರ ಪರಿಷ್ಕರಣೆ ಕುರಿತಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಯಾವ ರಾಜ್ಯವೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ’ ಎಂದರು.
- ‘ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹೈಎಂಡ್ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳು ಸೇರಿ ಕೆಲ ಐಷಾರಾಮಿ ವಸ್ತುಗಳ ಮೇಲೆ ವಿಶೇಷ ಶೇ 40ರಷ್ಟು ಜಿಎಸ್‌ಟಿ ವಿಧಿಸಲು ಮಂಡಳಿ ಅನುಮೋದಿಸಿದೆ’ ಎಂದು ವಿವರಿಸಿದರು.
- ‘ಗುಟ್ಕಾ, ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಹಾಗೂ ಸಿಗರೇಟ್ ಹೊರತುಪಡಿಸಿ, ಉಳಿದ ಎಲ್ಲ ವಸ್ತುಗಳ ಮೇಲಿನ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
- ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಅಂಗವಾಗಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದರು. ಅಲ್ಲದೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವ ಸಂದರ್ಭದಲ್ಲಿಯೇ ಈ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತಂದಿl 1,200 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂ ಉದ್ದದ ಎಲ್ಲ ಆಟೊಮೊಬೈಲ್ಗಳು, 350 ಸಿ.ಸಿಗಿಂತ ಹೆಚ್ಚು ಸಾಮರ್ಥ್ಯದ ಮೋಟರ್ ಸೈಕಲ್‌ಗಳು, ಯಾಚ್‌ಗಳು, ವೈಯಕ್ತಿಕ ಬಳಕೆಯ ಏರ್‌ಕ್ರಾಫ್ಟ್‌ಗಳು, ರೇಸಿಂಗ್ ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ.
- l 1,200 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂ ಉದ್ದದ ಎಲ್ಲ ಆಟೊಮೊಬೈಲ್ಗಳು, 350 ಸಿ.ಸಿಗಿಂತ ಹೆಚ್ಚು ಸಾಮರ್ಥ್ಯದ ಮೋಟರ್ ಸೈಕಲ್‌ಗಳು, ಯಾಚ್‌ಗಳು, ವೈಯಕ್ತಿಕ ಬಳಕೆಯ ಏರ್‌ಕ್ರಾಫ್ಟ್‌ಗಳು, ರೇಸಿಂಗ್ ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ.
- l ಎಲ್ಲ ಇ.ವಿಗಳ ಮೇಲೆ ಈಗ ಇರುವ ಶೇ 5ರಷ್ಟು ಜಿಎಸ್ಟಿ ಮುಂದುವರಿಕೆ.
- ಎಫ್ಡಿಐ: ಕರ್ನಾಟಕಕ್ಕೆ ಹೆಚ್ಚು
ಸಂದರ್ಭ: ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
- ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1.42 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಗಿತ್ತು. ಈ ಬಾರಿ ಇದು ₹1.63 ಲಕ್ಷ ಕೋಟಿ ಆಗಿದೆ. ಇದು ಮಾರ್ಚ್ ತ್ರೈಮಾಸಿಕದಲ್ಲಿ ₹82,210 ಕೋಟಿಯಷ್ಟಾಗಿತ್ತು.
- ಈಕ್ವಿಟಿ ಒಳಹರಿವು, ಗಳಿಕೆಯ ಮರುಹೂಡಿಕೆ ಮತ್ತು ಇತರೆ ಬಂಡವಾಳ ಹೂಡಿಕೆಯು ಹೆಚ್ಚಳವಾಗಿದ್ದು, ಒಟ್ಟು ಹೂಡಿಕೆ ₹2.21 ಲಕ್ಷ ಕೋಟಿಯಾಗಿದೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ₹1.98 ಲಕ್ಷ ಕೋಟಿಯಾಗಿತ್ತು.
- ಕರ್ನಾಟಕ ಮುಂಚೂಣಿ: ರಾಜ್ಯಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಪಟ್ಟಿಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ₹50,094 ಕೋಟಿ ಸ್ವೀಕರಿಸಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (₹47,188 ಕೋಟಿ), ತಮಿಳುನಾಡು (₹23,505 ಕೋಟಿ), ಹರಿಯಾಣ (₹11,444 ಕೋಟಿ), ಗುಜರಾತ್ (₹10,564 ಕೋಟಿ), ದೆಹಲಿ (₹8,803 ಕೋಟಿ) ಮತ್ತು ತೆಲಂಗಾಣ (₹3,477 ಕೋಟಿ) ಇವೆ.
- ಇದೇ ಅವಧಿಯಲ್ಲಿ ಅಮೆರಿಕದ ಹೂಡಿಕೆಯ ಪ್ರಮಾಣದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶ ಅಮೆರಿಕ. ಒಟ್ಟು ₹49,379 ಕೋಟಿ ಹೂಡಿಕೆ ಈ ತ್ರೈಮಾಸಿಕದಲ್ಲಿ ಅಮೆರಿಕದಿಂದ ಆಗಿದೆ. ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹13,205 ಕೋಟಿ ಬಂಡವಾಳ ಒಳಹರಿವಾಗಿತ್ತು.
- ಜೂನ್ ತ್ರೈಮಾಸಿಕದಲ್ಲಿ ಹೂಡಿಕೆ ಮಾಡಿದ ದೇಶಗಳ ಪೈಕಿ ಸಿಂಗಪುರ, ಮಾರಿಷಸ್, ಸೈಪ್ರಸ್, ಯುಎಇ, ಕೇಮನ್ ಐಸ್‌ಲ್ಯಾಂಡ್, ನೆದರ್ಲೆಂಡ್ಸ್, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.
- 2000ದ ಏಪ್ರಿಲ್‌ನಿಂದ 2025ರ ವರೆಗೆ ಅಮೆರಿಕ ₹6.71 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಮೂರನೇ ಅತಿಹೆಚ್ಚು ಎಫ್‌ಡಿಐ ಹೂಡಿಕೆ ಮಾಡಿದ ದೇಶವಾಗಿದೆ. ಮಾರಿಷಸ್ ₹16.04 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಸಿಂಗಪುರ ಎರಡನೇ ಸ್ಥಾನದಲ್ಲಿದ್ದು, ₹15.80 ಲಕ್ಷ ಕೋಟಿಯಾಗಿದೆ.
- ಕಂಪ್ಯೂಟರ್ ಯಂತ್ರಾಂಶ ಹಾಗೂ ತಂತ್ರಾಂಶ, ಸೇವೆಗಳು, ವ್ಯಾಪಾರ, ದೂರಸಂಪರ್ಕ, ವಾಹನೋದ್ಯಮ, ರಾಸಾಯನಿಕ ವಲಯಗಳು ಹೆಚ್ಚು ಹೂಡಿಕೆ ಸ್ವೀಕರಿಸಿವೆ ಎಂದು ತಿಳಿಸಿದೆ.
- ಸೇವಾ ವಲಯದ ಪ್ರಗತಿ 15 ವರ್ಷದ ಗರಿಷ್ಠ
ಸಂದರ್ಭ: ದೇಶದ ಸೇವಾ ವಲಯದ ಬೆಳವಣಿಗೆ ಆಗಸ್ಟ್ ತಿಂಗಳಿನಲ್ಲಿ 15 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ದಾಖಲಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ತಿಳಿಸಿದೆ.
- ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜುಲೈನಲ್ಲಿ 60.5 ದಾಖಲಾಗಿತ್ತು. ಆಗಸ್ಟ್‌ನಲ್ಲಿ 62.9ಕ್ಕೆ ಹೆಚ್ಚಳ ಕಂಡಿದೆ. ಹೊಸ ಕಾರ್ಯಾದೇಶ ಮತ್ತು ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದೇ ಸೂಚ್ಯಂಕ ಏರಿಕೆಗೆ ಕಾರಣ ಎನ್ನಲಾಗಿದೆ.
- ಪಿಎಂಐ ಮಾನದಂಡಗಳ ಪ್ರಕಾರ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.
- ‘ರಫ್ತು ಹೆಚ್ಚಳಗೊಂಡಿದ್ದರಿಂದ ಒಟ್ಟಾರೆ ಮಾರಾಟ ಏರಿಕೆ ಕಂಡಿದೆ. ಏಷ್ಯಾ, ಯುರೋಪ್, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ವಲಯಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ’ ಎಂದು ಎಚ್ಎಸ್‌ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.
- ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಮಾರಾಟದಿಂದ ದೇಶದ ಸೇವಾ ವಲಯದ ಕಂಪನಿಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾದವು. ಇದರಿಂದ ಕಾರ್ಮಿಕರ ವೆಚ್ಚ ಹೆಚ್ಚಳವಾಯಿತು. ಪರಿಣಾಮವಾಗಿ ತಯಾರಿಕೆ ಮತ್ತು ಉತ್ಪಾದನಾ ದರ ಏರಿಕೆಯಾಯಿತು ಎಂದು ತಿಳಿಸಿದ್ದಾರೆ.
- ಭಾರತ–ಜರ್ಮನಿ ಸಹಕಾರ ವೃದ್ಧಿ ಅನಿವಾರ್ಯ: ಜೈಶಂಕರ್
ಸಂದರ್ಭ: ಜಾಗತಿಕ ಆರ್ಥಿಕತೆ ಹಾಗೂ ಭೌಗೋಳಿಕ ರಾಜಕೀಯ ಸನ್ನಿವೇಶಗಳಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ಭಾರತ ಮತ್ತು ಜರ್ಮನಿಯು ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಂಡು ಕಾರ್ಯಪ್ರವೃತ್ತವಾಗಬೇಕಾದ ಅನಿವಾರ್ಯವನ್ನು ಸೃಷ್ಟಿಸಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
- ಜರ್ಮನಿ ವಿದೇಶಾಂಗ ಸಚಿವ ಜೋಹನ್ ವಡೆಫುಲ್ ಅವರೊಂದಿಗಿನ ಮಾತುಕತೆ ಬಳಿಕ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
- ‘ವ್ಯಾಪಾರ, ರಕ್ಷಣೆ, ಸೆಮಿಕಂಡಕ್ಟರ್ ಉತ್ಪಾದನೆ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಹಕಾರ ವೃದ್ಧಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಜೈಶಂಕರ್ ತಿಳಿಸಿದ್ದಾರೆ.
- ನಿರ್ಣಾಯಕ ಖನಿಜಗಳ ಪುನರ್ ಬಳಕೆಗೆ ₹1500 ಕೋಟಿ
ಸಂದರ್ಭ: ದೇಶದಲ್ಲಿ ನಿರ್ಣಾಯಕ ಖನಿಜಗಳ ಮರು ಬಳಕೆ ಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ₹1,500 ಕೋಟಿ ಮೊತ್ತದ ಪ್ರೋತ್ಸಾಹಕ ಯೋಜನೆಗೆ ಒಪ್ಪಿಗೆ ನೀಡಿದೆ.
- ದ್ವಿತೀಯ ಮೂಲಗಳಿಂದ ನಿರ್ಣಾಯಕ ಖನಿಜಗಳ ಉತ್ಪಾದನೆ ಮತ್ತು ಪ್ರತ್ಯೇಕಗೊಳಿಸುವ ಮರು ಬಳಕೆಯ ಸಾಮರ್ಥ್ಯವನ್ನು ವೃದ್ಧಿ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.
- ಇ–ತ್ಯಾಜ್ಯ, ಲಿಥಿಯಂ ಇಯಾನ್ ಬ್ಯಾಟರಿ ತುಣುಕುಗಳು (ಎಲ್‌ಐಬಿ) ಮತ್ತು ಅವಧಿ ಮೀರಿದ ವಾಹನಗಳಲ್ಲಿನ ಕ್ಯಾಟಲಿಟಿಕ್ (ವೇಗವರ್ಧಕ/ಉತ್ಪ್ರೇರಕಗಳು) ತ್ಯಾಜ್ಯ ಸೇರಿ ವಿವಿಧ ಮೂಲಗಳಿಂದ ಮರು ಬಳಕೆ ಮಾಡುವ ಉದ್ದೇಶದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು