Fri. Oct 10th, 2025

Kannada

ಪ್ರಚಲಿತ ವಿದ್ಯಮಾನಗಳು: 18ನೇ ಸೆಪ್ಟೆಂಬರ್ 2025

ಕರ್ನಾಟಕ: ಎಸ್‌ಐಆರ್‌ಗೆ ಮುನ್ನುಡಿ

ಸಂದರ್ಭ: ಬಿಹಾರದ ಮಾದರಿಯ ಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದು, ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ ಮತ್ತು ಮತಗಟ್ಟೆಗಳು ಬದಲಾಗಲಿವೆ.
  • ರಾಜ್ಯದಲ್ಲಿ ನಡೆಯಲಿರುವ ಎಸ್‌ಐಆರ್‌ ಕುರಿತಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಪತ್ರಕರ್ತರಿಗೆ ಕಾರ್ಯಾಗಾರ ನಡೆಸಿತು. ಅಲ್ಲಿ, ಎಸ್ಐಆರ್‌ ಪ್ರಕ್ರಿಯೆಯ ವಿವರಗಳನ್ನು ಒದಗಿಸಿದೆ.
  • ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಎಸ್‌ಐಆರ್‌ಗೆ ಸಿದ್ಧತೆ ಮಾಡಿಕೊಳ್ಳಲಾ ಗಿದೆ. ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿ ಗಳಿಗೆ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನಡೆಯುತ್ತಿದ್ದು, ಸೆಪ್ಟೆಂಬರ್ 25ರೊಳಗೆ ಪೂರ್ಣಗೊಳ್ಳಲಿದೆ.

ಗರಿಷ್ಠ 90 ದಿನಗಳಲ್ಲಿ ಎಸ್ಐಆರ್ ಪ್ರಕ್ರಿಯೆ: ಅನ್ಬುಕುಮಾರ್

l ಪ್ರತಿ ಮತಗಟ್ಟೆಗೆ ಏಜೆಂಟರನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಲಾಗಿದೆ

l ಗ್ರಾಮ ಪಂಚಾಯಿತಿ, ನಗರ ಪ್ರದೇಶದ ವಾರ್ಡ್‌ಗಳಲ್ಲಿ ವೈಫೈ ಸವಲತ್ತು ಇರುವ ಶಿಬಿರ ಆರಂಭಿಸಿ ಎಸ್‌ಐಆರ್‌ ನಡೆಸಲಾಗುತ್ತದೆ. ಚುನಾವಣಾ ಆಯೋಗದ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ

l ಅಂದಾಜು ಐದು ಕೋಟಿ ಮತದಾರರಿಗಾಗಿ 10 ಕೋಟಿಯಷ್ಟು ಎನ್ಯುಮರೇಷನ್‌ ಫಾರ್ಮ್‌ಗಳನ್ನು ಸಿದ್ಧಪಡಿಸಲಾಗಿದೆ

l ಒಬ್ಬ ಮತದಾರರಿಗೆ ಸೇರಿದ ಹಲವು ಚೀಟಿಗಳು ಇದ್ದರೆ, ಅವುಗಳ ವಿವರ ಶೇ 60ರಷ್ಟು ಹೊಂದಾಣಿಕೆಯಾದರೆ ಅದನ್ನು ತಂತ್ರಾಂಶದ ಮೂಲಕ ಪತ್ತೆ ಮಾಡಲಾಗುತ್ತದೆ

l ಬಿಎಲ್‌ಒಗಳಿಗೆ ಗೌರವಧನವನ್ನು ₹6,000ದಿಂದ ₹12,000ಕ್ಕೆ ಹೆಚ್ಚಿಸಲಾಗಿದೆ. ಎಸ್‌ಐಆರ್‌ನಲ್ಲಿ ಭಾಗಿಯಾಗುವವರಿಗೆ ಹೆಚ್ಚುವರಿಯಾಗಿ ₹6,000 ನೀಡಲಾಗುತ್ತದೆ

l ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಭಾಗಿಯಾಗಿರುವ ಸುಮಾರು 10,000 ನಮೂನೆ 6, ನಮೂನೆ 7 ಮತ್ತು ನಮೂನೆ 8 ಅನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಅವು ವಿಲೇವಾರಿ ಆಗದಿದ್ದರೆ, ಸಂಬಂಧಿತ ಮತದಾರರಿಗೆ ಎನ್ಯುಮರೇಷನ್‌ ಫಾರ್ಮ್‌ ಸೃಜಿಸಲಾಗುವುದಿಲ್ಲ

  • ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುಂದಾಗಿರುವ ಚುನಾವಣಾ ಆಯೋಗವು, ಪರಿಷ್ಕರಣೆ ವೇಳೆ ರಾಜ್ಯಗಳಲ್ಲಿನ ಅರ್ಧಕ್ಕಿಂತ ಹೆಚ್ಚು ಮತದಾರರು ಯಾವುದೇ ದಾಖಲೆಯನ್ನು ನೀಡಬೇಕಾಗಿಲ್ಲ.
  • ‘ಕೇಂದ್ರ ಚುನಾವಣೆ ಆಯೋಗ ಈ ಬಗ್ಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್‌ ತಿಳಿಸಿದರು.
  • ‘2002ರಲ್ಲಿ ರಾಜ್ಯದಲ್ಲಿ ಎಸ್ಐಆರ್ ನಡೆದಿತ್ತು. 23 ವರ್ಷಗಳ ನಂತರ ಮತ್ತೆ ಎಸ್ಐಆರ್ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 2002 ಮತದಾರರ ಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇರುವ ಮತದಾರರು ಪ್ರಸ್ತುತ ಮತದಾರರ ಪಟ್ಟಿಯಲ್ಲಿದ್ದಾರೊ ಇಲ್ಲವೋ ಎಂಬು ದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.
  • ಜಿಲ್ಲಾಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್) 2002 ಮತದಾರರ ಪಟ್ಟಿ ನೀಡಲಾಗಿದೆ. ಬಿಎಲ್ಒಗಳು ಮನೆಮನೆಗೆ ಭೇಟಿ ಪರಿಶೀಲಿಸುತ್ತಾರೆ. ಎರಡೂ ಪಟ್ಟಿಯಲ್ಲಿ ಹೆಸರು ಇರುವವರಿಗೆ ಕ್ಯೂಆರ್‌ ಕೋಡ್‌ ಆಧಾರಿತ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ನೀಡಲಾಗುತ್ತದೆ. ಇದರಿಂದ ಅನರ್ಹ ಹಾಗೂ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಸಹಾಯವಾಗಲಿದೆ’ ಎಂದು ಮಾಹಿತಿ ನೀಡಿದರು.
  • ‘ಪ್ರತಿ ಮತದಾರನಿಗೆ ಸಂಬಂಧಿಸಿದ ಗಣತಿ ನಮೂನೆಯ ಎರಡು ಪ್ರತಿಗಳು ಬಿಎಲ್‌ಒಗಳು ಬಳಿ ಇರುತ್ತವೆ. 2 ಪ್ರತಿಗಳನ್ನು ಭರ್ತಿ ಮಾಡಿದ ನಂತರ ಒಂದಕ್ಕೆ ಬಿಎಲ್‌ಒ ಸಹಿ ಮಾಡಿ ಮತದಾರನಿಗೆ ನೀಡುತ್ತಾರೆ. ಮತ್ತೊಂದು ಆಯೋಗಕ್ಕೆ ಸಲ್ಲಿಸುತ್ತಾರೆ. ಮನೆಯಲ್ಲಿ ಯಾರು ಇಲ್ಲದಿದ್ದರೆ, ಮೂರು ಬಾರಿ ಮನೆಗೆ ಭೇಟಿ ನೀಡಬೇಕು. ಜೊತೆಗೆ ಸ್ನೇಹಿತರ ಮೂಲಕ ಅವರನ್ನು ಸಂಪರ್ಕಿಸಿ, ಎಸ್‌ಐಆರ್‌ ಪ್ರಕ್ರಿಯೆ ನಡೆಸಬೇಕು. ಪತ್ರಿಕೆಗಳ ಮೂಲಕ ಸಹ ಈ ಬಗ್ಗೆ ಪ್ರಚಾರ ಮಾಡಲಿದೆ’ ಎಂದರು.
  • ‘ಎನ್ಯುಮರೇಷನ್‌ ಫಾರ್ಮ್‌ನಲ್ಲಿ ಮತದಾರರ ಗುರುತಿನ ಚೀಟಿಯ ಸಂಖ್ಯೆ, ವಿಳಾಸ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಆಧಾರ್ ಸಂಖ್ಯೆ ಸೇರಿಸಲು ಅವಕಾಶವಿದೆ. ಆಯೋಗ ಸೂಚಿಸಿದ ಯಾವುದಾದರೂ ಒಂದು ದಾಖಲೆ ಸಲ್ಲಿಕೆ ಕಡ್ಡಾಯ ’ ಎಂದರು
  • ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004 ನಡುವೆ ಎಸ್ಐಆರ್ನಡೆಸಲಾಗಿದೆ. ಮುಂದಿನ ಎಸ್ಐಆರ್ವೇಳೆ, 2002 ಹಾಗೂ 2004 ನಡುವಿನ ಸಂಬಂಧಿಸಿದ ವರ್ಷವನ್ನೇ ಆಧಾರವನ್ನಾಗಿ ಪರಿಗಣಿಸಲಾಗುವುದು ಎಂದೂ ಆಯೋಗ ಸ್ಪಷ್ಟಪಡಿಸಿದೆ.
  • ಈ ಹಿಂದಿನ ಎಸ್‌ಐಆರ್‌ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಈಗಾಗಲೇ ಸೂಚನೆ ನೀಡಲಾಗಿದೆ. ಕೆಲ ರಾಜ್ಯಗಳ ಸಿಇಒಗಳು ಇಂತಹ ಮತದಾರರ ಪಟ್ಟಿಯನ್ನು ಈಗಾಗಲೇ ಕಚೇರಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಬದಲಾಗಲಿದೆ ಮತಗಟ್ಟೆ, ವಿಭಾಗ

  • ಎಸ್‌ಐಆರ್‌ ಪ್ರಕ್ರಿಯೆಯ ಭಾಗವಾಗಿ ಮತಗಟ್ಟೆ, ವಿಭಾಗಗಳು ಬದಲಾಗಲಿವೆ. ಒಂದು ಕಟ್ಟಡ, ಒಂದು ಬೀದಿ, ಒಂದು ಮತಗಟ್ಟೆ ವಿಭಾಗದಲ್ಲಿ ವಾಸಿಸುತ್ತಿರುವ ಎಲ್ಲ ಮತದಾರರು ಒಂದೇ ಮತಗಟ್ಟೆ ಮತ್ತು ವಿಭಾಗಕ್ಕೆ ಒಳಪಡುವಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ.
  • ಒಂದು ಮತಗಟ್ಟೆಯಲ್ಲಿ 1,200ಕ್ಕಿಂತಲೂ ಹೆಚ್ಚು ಮತದಾರರು ಇರಬಾರದು. ಪ್ರತಿ ಮತಗಟ್ಟೆಗೆ 1,200 ಮತದಾರರನ್ನು ಮಿತಿಗೊಳಿಸಿ, ಹೊಸಮತಗಟ್ಟೆಗಳನ್ನು ರಚಿಸಲಾಗುತ್ತದೆ.

ತಿರಸ್ಕಾರಕ್ಕೂ ಅವಕಾಶ

  • ಆಯೋಗವು ಸೂಚಿಸಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಅವರ ಗಣತಿ ನಮೂನೆ (ಎನ್ಯುಮರೇಷನ್‌ ಫಾರ್ಮ್‌) ತಿರಸ್ಕರಿಸಿ ಶಿಫಾರಸು ಮಾಡಲು ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್‌ಒ) ಅವಕಾಶವಿದೆ. ಗಣತಿ ನಮೂನೆ, ಘೋಷಣಾ ಪತ್ರದಲ್ಲಿ ಅವುಗಳನ್ನು ಶಿಫಾರಸು ಮಾಡಲಾಗಿದೆ ಅಥವಾ ಶಿಫಾರಸು ಮಾಡಲಾಗಿಲ್ಲ ಎಂದು ಬಿಎಲ್‌ಒ ಆಯ್ಕೆ ಮಾಡಬಹುದಾಗಿದೆ.
  • ಆದರೆ ಬಿಎಲ್‌ಒಗಳು ಶಿಫಾರಸಿಗೆ ಅಗತ್ಯ ಕಾರಣಗಳನ್ನು ಒದಗಿಸಬೇಕು ಮತ್ತು ಇತರ ಕೆಲ ಮತದಾರರ ಸಹಿ ಪಡೆದು ಮಹಜರು ನಡೆಸಿರಬೇಕು. ಬಿಎಲ್‌ಒಯಿಂದ ಶಿಫಾರಸು ಆಗಿ ಬಂದ ಗಣತಿ ನಮೂನೆ ಮತ್ತು ಘೋಷಣಾ ಪತ್ರವನ್ನು ಅಂಗೀಕರಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ ಎಂದು ಆಯ್ಕೆ ಮಾಡುವ ಅಧಿಕಾರ ಮತದಾರರ ನೋಂದಣಾಧಿಕಾರಿಗೆ ನೀಡಲಾಗಿದೆ.

‘ಬಿಪಿಎಲ್‌ ಅನರ್ಹಗೊಂಡರೆ ಎಪಿಎಲ್’

ಸಂದರ್ಭ: ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಬದಲಿಸಲಾಗುವುದು. ಹೊಸ ಬಿಪಿಎಲ್‌ ಕಾರ್ಡ್‌ಗಳಿಗೆ  ಮುಂದಿನ ತಿಂಗಳು ಅರ್ಜಿ ಆಹ್ವಾನಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಈಗ ರದ್ದುಪಡಿಸಿದಷ್ಟು ಕಾರ್ಡ್‌ಗಳನ್ನು ವಿತರಿಸಲು ಮಾತ್ರ ಹೊಸದಾಗಿ ಅವಕಾಶ ಇದೆ.

  • ‘ಸರ್ಕಾರದ ಮಾನದಂಡಗಳ ಅನ್ವಯ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಷ್ಕರಿಸಲಾಗುವುದು. ಅನರ್ಹವೆಂದು ಕಂಡುಬಂದರೆ ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಯಾವ ಪಡಿತರ ಚೀಟಿಯನ್ನೂ ರದ್ದು ಮಾಡುವುದಿಲ್ಲ.
  • ‘ಎಲ್ಲ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯ ಒಳಗೆ ಸರಿಪಡಿಸಿ ಆಹಾರಧಾನ್ಯ ಹಂಚಿಕೆ ಮಾಡಲಾಗುವುದು’.
  • ‘ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ದಲ್ಲಿ ಬಿಪಿಎಲ್ ಕಾರ್ಡ್‌ಗಳು ಅತಿ ಹೆಚ್ಚು ಇವೆ. ಶೇಕಡ 75ರಷ್ಟು ಬಿಪಿಎಲ್‌ ಕಾರ್ಡ್‌ಗಳು ಕರ್ನಾಟಕ ದಲ್ಲಿವೆ. ಹೀಗಾಗಿ, ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಅನಿವಾರ್ಯವಾಗಿದೆ.
  • ನಂದಗುಡಿರಾಗಿಗುಡ್ಡ’: ಲಕ್ಷ ವರ್ಷಗಳ ನಂಟು

ಸಂದರ್ಭ: ಇಂದು ಬಿರು ಬಿಸಿಲು, ಒಣ ಭೂಮಿ, ನೀರಿನ ಕೊರತೆಯಿಂದ ಬೆಂಡಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಪ್ರದೇಶ ಮತ್ತು ಕೋಲಾರ ಜಿಲ್ಲೆಯ ಭೂಭಾಗ ಒಂದಾನೊಂದು ಕಾಲದಲ್ಲಿ ಈಗಿನ ಮಲೆನಾಡಿನಂತೆ ಹೆಚ್ಚು ಮಳೆ ಬೀಳುವ ತೇವದಿಂದ ಕೂಡಿದ ಹಸಿರಿನಿಂದ ನಳನಳಿಸುವ ಪ್ರದೇಶವಾಗಿತ್ತು ಎಂದರೆ ನಂಬುತ್ತೀರಾ?

  • ಅದರಲ್ಲೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಂದಗುಡಿಯ ‘ರಾಗಿಗುಡ್ಡ’ ಪ್ರದೇಶ ಕರ್ನಾಟಕ ಮಾತ್ರವಲ್ಲ, ಭಾರತದಲ್ಲೇ ಭೂವಿಸ್ಮಯದ ತಾಣವಾಗಿದೆ. ಭೂಮೇಲ್ಮೈನಿಂದ ಸುಮಾರು 150 ಅಡಿ ಎತ್ತರ ಮತ್ತು ಸಾವಿರಕ್ಕೂ ಹೆಚ್ಚು ಅಡಿ ಸುತ್ತಳತೆಯ ಈ ಗುಡ್ಡ ಸುತ್ತಲಿನ ಸಮತಟ್ಟಾದ ಮೇಲ್ಮೈನಿಂದ ಎದ್ದು ಕಾಣುತ್ತದೆ.
  • ಈ ಗುಡ್ಡದ ಮಹತ್ವ ಏನೆಂದರೆ ಲಕ್ಷಾಂತರ ವರ್ಷಗಳ ಹಿಂದೆ ಸಂಭವಿಸಿದ ವಿಶಿಷ್ಟ ಶೀತಲೀಕರಣ ಪ್ರಕ್ರಿಯೆ ಕುರುಹಾಗಿ ಇದು ಮೈದಳೆದಿದೆ. ಗುಡ್ಡದ ಒಡಲಿನಲ್ಲಿ ಜಂಬಿಟ್ಟಿಗೆ ಇದೆ. ಜಂಬಿಟ್ಟಿಗೆ (ಲ್ಯಾಟರೈಟ್‌) ಎಂಬ ನೈಸರ್ಗಿಕ ಶಿಲೆಯ ನಿರ್ಮಾಣದ ಸುದೀರ್ಘ ಪ್ರಕ್ರಿಯೆಯೇ ಒಂದು ಕುತೂಹಲಕರ ಕಥನ.
  • ಲಕ್ಷಾಂತರ ವರ್ಷಗಳ ಹಿಂದೆ ಈ ಪ್ರದೇಶದಲ್ಲಿದ್ದ ವಿಶಿಷ್ಟ ಹವಾಮಾನ, ಭೂಪ್ರಕ್ರಿಯೆ ಮತ್ತು ಶೀತಲೀಕರಣದ ಪರಿಣಾಮ, ಭೂಮಿಯ ವಿವಿಧ ಸ್ತರಗಳಲ್ಲಿ ಕುತೂಹಲಕರ ಖನಿಜಗಳು ಸೃಷ್ಟಿಯಾಗಿವೆ. ಕೋಲಾರ ಜಿಲ್ಲೆಯ ಬಹುಪಾಲು ಪ್ರದೇಶವು ಲ್ಯಾಟರೈಟ್ ಮತ್ತು ಲ್ಯಾಟರೈಟ್‌ನಿಂದಾದ ಮಣ್ಣಿನಿಂದ ಆವೃತವಾಗಿದೆ. ನಂದಗುಡಿಯ ರಾಗಿಗುಡ್ಡ ಲ್ಯಾಟರೈಟ್‌ ಪ್ರಕ್ರಿಯೆಯ ಪ್ರತಿನಿಧಿಯಂತೆ ಗಮನ ಸೆಳೆಯುತ್ತಿದೆ. ಹೀಗಾಗಿ, ಭೂವಿಜ್ಞಾನಿ ಗಳಿಗೆ ಹೆಚ್ಚಿನ ಸಂಶೋಧನೆಯ ಆಯಸ್ಕಾಂತ ಬಿಂದುವಾಗಿ ಸೆಳೆಯುತ್ತಿದೆ ಎನ್ನುತ್ತಾರೆ ಭೂ ವಿಜ್ಞಾನಿಗಳು.
  • ಈ ಸಂಶೋಧನೆಗೆ ವೆಸ್ಕೋ ಕಂಪನಿಯ ಮುಖ್ಯಸ್ಥ ಕೆ.ಎಸ್‌.ಶಿವಕುಮಾರ್‌ ಅವರು ಕರ್ನಾಟಕ ಅಸೋಸಿಯೇಷನ್‌ ಫಾರ್ ಅಡ್ವಾನ್ಸ್‌ಮೆಂಟ್ ಆಫ್‌ ಸೈನ್ಸ್‌ ಸಂಸ್ಥೆಗೆ ಯೋಜನಾ ರೂಪದಲ್ಲಿ ಧನ ಸಹಾಯ ಮಾಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಲ್ಯಾಟರಟೈಸೇಶನ್ಪ್ರಕ್ರಿಯೆ ಏನು?

  • ಲಾಟರಟೈಸೇಶನ್ಎಂದರೆ ಮೂಲ ಗಡಸು ಕಲ್ಲನ್ನು ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ಪರಿವರ್ತಿಸಿ ಮೆದು ಕಲ್ಲಿನ ರೂಪವನ್ನು ಕೊಡುವ ಕ್ರಿಯೆ ಆಗಿದೆ.
  • ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದ ಸುತ್ತಮುತ್ತ ಗೀರುಶಿಲೆ ಮತ್ತು ಗ್ರಾನೈಟ್‌ ಕಲ್ಲುಗಳು ಸರ್ವೇ ಸಾಮಾನ್ಯ. ಈ ಕಲ್ಲುಗಳು ವಿಶಿಷ್ಟ ಹವಾಗುಣ ಪರಿಸ್ಥಿತಿಯಲ್ಲಿ ಲ್ಯಾಟರೈಟ್‌ ಆಗಿ ಮಾರ್ಪಾಡಾಗುತ್ತವೆ.
  • ನಂದಗುಡಿಯ ಸುತ್ತಮುತ್ತ ನೈಸ್‌ ಎಂಬ ಬೂದಿ ಬಣ್ಣದ ಗಡಸು ಶಿಲೆ ಇದ್ದು, ಇದು ಲಕ್ಷಾಂತರ ವರ್ಷಗಳ ಸವಕಳಿ ಮತ್ತು ರಾಸಾಯನಿಕ ಶೀತಲೀಕರಣಕ್ಕೆ ಒಳಪಟ್ಟು ಕಂದು ಬಣ್ಣದ ಮೆದುವಾದ ಶಿಲೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಉಷ್ಣವಲಯದ (ಟ್ರಾಫಿಕಲ್) ಹವಾಗುಣವಿರಬೇಕು.

70 ದಾಟಿದವರಿಗೂ ‘ಆಯುಷ್ಮಾನ್ ಭಾರತ್‌’

ಸಂದರ್ಭ: 70 ವರ್ಷ ದಾಟಿದ ಹಿರಿಯರಿಗೆ ಕೇಂದ್ರ ಸರ್ಕಾರದ ವಯೋ ವಂದನಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಸ್ತರಿಸಿ ಆದೇಶ ಹೊರಡಿಸಿದೆ.
  • ಎಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರಿಗೆ ಚಿಕಿತ್ಸೆಗಾಗಿ ₹5 ಲಕ್ಷ ಟಾಪ್‌ ಅಪ್‌ ಒದಗಿಸಲಾಗುವುದು. ಅರ್ಜಿ ಸಲ್ಲಿಸಲು ಬಯಸುವವರಿಗೆ ನೋಂದಣಿಗಾಗಿ ಆಯುಷ್ಮಾನ್ ಅಪ್ಲಿಕೇಶನ್‌ನಲ್ಲಿ ಮತ್ತು ವೆಬ್‌ ಪೋರ್ಟಲ್‌ನಲ್ಲಿ (beneficiary.nha.in) ಪ್ರತ್ಯೇಕ ಮಾಡ್ಯೂಲ್‌ ರಚಿಸಲಾಗಿದೆ. ನೋಂದಣಿ ಮಾಡಿಕೊಂಡವರಿಗೆ ವಿಶಿಷ್ಟವಾದ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

‘ಬಿ. ಸರೋಜಾದೇವಿ ಹೆಸರಿನಲ್ಲಿ ‘ಅಭಿನಯ ಸರಸ್ವತಿ’ ಪ್ರಶಸ್ತಿ’

ಸಂದರ್ಭ: ಪಂಚ ಭಾಷಾ ನಟಿ ದಿವಂಗತ ಬಿ. ಸರೋಜಾದೇವಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರ ಹೆಸರಿನಲ್ಲಿ ರಾಜ್ಯ ಸರ್ಕಾರವು ಈ ಸಾಲಿನಿಂದ ಜಾರಿಗೆ ಬರುವಂತೆ ‘ಅಭಿನಯ ಸರಸ್ವತಿ ಬಿ. ಸರೋಜಾ ದೇವಿ’ ಪ್ರಶಸ್ತಿ ಸ್ಥಾಪಿಸಿದೆ.
  • ಈ ಪ್ರಶಸ್ತಿಯು ₹1 ಲಕ್ಷ ಮತ್ತು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿರುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ- 2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯ ನಿಯಮದಂತೆ ಈ ಪ್ರಶಸ್ತಿ ಯನ್ನು ಸ್ಥಾಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆದೇಶದಲ್ಲಿ ತಿಳಿಸಿದೆ.
  • ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
  • ಬಿ. ಸರೋಜಾದೇವಿ ಅವರ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರವು ಇತ್ತೀಚೆಗೆ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ.
  • ಹೇಗೆ ನಡೆಯಲಿದೆ ಸಮಗ್ರ ಪರಿಷ್ಕರಣೆ?

ರಾಜ್ಯದ 12 ನದಿಗಳು ಮಲಿನ

ಸಂದರ್ಭ: ಕರ್ನಾಟಕದ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಚೆ ನೀರು ಹಾಗೂ ಆಯಾ ಜಲಾನಯನ ಪ್ರದೇಶಗಳಲ್ಲಿನ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿರುವುದರಿಂದ 12 ನದಿಗಳು ಕಲುಷಿತಗೊಂಡಿವೆ.
  • ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) 2022ರಲ್ಲಿ ಜಲಶಕ್ತಿ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.
  • ರಾಜ್ಯದ ನದಿಗಳು ಮಲಿನಗೊಂಡಿರುವ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಎನ್‌ಜಿಟಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಿತವಾಗಿ ಪ್ರಗತಿ ವರದಿ ಸಲ್ಲಿಸುತ್ತಿದೆ.
  • ಗಂಗಾ ಮಾಲಿನ್ಯದ ರಾಷ್ಟ್ರೀಯ ಮಿಷನ್‌ನ ಕೇಂದ್ರ ಮೇಲ್ವಿಚಾರಣಾ ಸಮಿತಿಗೆ ಪತ್ರ ಬರೆದಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ‘ಮಲಿನ ನದಿಗಳ ಪಟ್ಟಿಯಲ್ಲಿದ್ದ ಅಘನಾಶಿನಿ, ದಕ್ಷಿಣ ಪಿನಾಕಿನಿ, ಶರಾವತಿ ಹಾಗೂ ಗಂಗಾವಳಿ ನದಿಗಳಲ್ಲಿ ಕರಗಿದ ಆಮ್ಲಜನಕದ (ಬಿಒಡಿ) ಪ್ರಮಾಣ 3 ಮಿಲಿಗ್ರಾಂ/ಲೀಟರ್‌ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಮಲಿನ ನದಿಗಳ ಪಟ್ಟಿಯಿಂದ ಕೈಬಿಡಬೇಕು’ ಎಂದು ಕೋರಿದ್ದಾರೆ. ಜತೆಗೆ, ಎನ್‌ಜಿಟಿಗೂ ವರದಿ ಸಲ್ಲಿಸಿದ್ದಾರೆ.
  • ನದಿಗಳ ಮಾಲಿನ್ಯ ಕಡಿಮೆ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಈ ಕೆಲಸ ಪ್ರಗತಿಯಲ್ಲಿದೆ. ಕ್ರಿಯಾಯೋಜನೆ ಸಿದ್ಧಗೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
  • ಮುಕ್ಕಾಲು ಪಾಲು ಗಾಜಾ ನಗರ ಸುತ್ತುವರಿದ ಇಸ್ರೇಲ್

ಸಂದರ್ಭ: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್‌ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್‌ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು ಮುಂದುವರಿಸಿದೆ.

  • ಇಸ್ರೇಲ್‌ನ ಭೂಸೇನೆಯು ಗಾಜಾ ನಗರದ ಮೇಲೆ ನಡೆಸುತ್ತಿರುವ ತೀವ್ರ ದಾಳಿಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಗಾಜಾದ ಆಸ್ಪತ್ರೆ ಯಲ್ಲಿದ್ದ 80 ರೋಗಿಗಳಿಗೆ ಈ ದಾಳಿಯ ಕಾರಣದಿಂದ ಹೊರಹೋಗುವಂತೆ ಹೇಳಲಾಗಿದೆ.
  • ಆಹಾರ, ನೀರು, ಔಷಧ ಸೇರಿದಂತೆ ಗಾಜಾ ಜನರಿಗೆ ಮೂಲಸೌಲಭ್ಯ, ನೆರವು ಒದಗಿ ಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಸುಮಾರು 20 ಸಂಸ್ಥೆಗಳು ದಾಳಿಯನ್ನು ಕಟು ಮಾತುಗಳಲ್ಲಿ ಖಂಡಿಸಿವೆ. ‘ಭೂಸೇನೆಯ ಕಾರ್ಯಾಚರಣೆಯು ನರಮೇಧದ ಯುದ್ಧವನ್ನು ವಿಸ್ತರಿಸಿದಂತೆ’ ಎಂದಿರುವ ಕತಾರ್‌, ಇಸ್ರೇಲ್‌ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ.
  • ‘ಕಳೆದ ಕೆಲವು ದಿನಗಳಲ್ಲಿ ಗಾಜಾ ನಗರದ ಎತ್ತರದ ಕಟ್ಟಡಗಳನ್ನು ಗುರಿಯಾಗಿಸಿ ಸುಮಾರು 150ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದೇವೆ’ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಈ ಕಟ್ಟಡಗಳಲ್ಲಿ ಸಾವಿರಾರು ಪ್ಯಾಲೆಸ್ಟೇನಿಯನ್ನರು ಆಶ್ರಯ‍ ಪಡೆದುಕೊಂಡಿದ್ದರು. ‘ಕಣ್ಗಾವಲು ನಡೆಸಲು ಹಮಾಸ್‌ ಬಂಡುಕೋರರು ಇಂಥ ಕಟ್ಟಡಗಳನ್ನು ಬಳಸಿಕೊಳ್ಳುತ್ತಾರೆ’ ಎಂದು ಇಸ್ರೇಲ್‌ ದೂರಿದೆ.
  • ದಕ್ಷಿಣಕ್ಕೆ ತೆರಳಲು ಎಚ್ಚರಿಕೆ: ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳುವಂತೆ ಇಸ್ರೇಲ್‌ ಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಇನ್ನೊಂದು ಹೊಸ ಮಾರ್ಗವನ್ನು ತೆರೆದಿದೆ. ‘ಈ ಮಾರ್ಗವು ಬುಧವಾರ ಸಂಜೆಯಿಂದ ಆರಂಭಗೊಂಡು ಎರಡು ದಿನ ತೆರೆದಿರಲಿದೆ’ ಎಂದು ಇಸ್ರೇಲ್‌ ತಿಳಿಸಿದೆ.
  • ದೂರಸಂಪರ್ಕ ಸಂಪೂರ್ಣ ಕಡಿತ: ‘ಉತ್ತರ ಗಾಜಾದ ಮುಖ್ಯ ದೂರಸಂಪರ್ಕ ಮೂಲಸೌರ್ಕಯದ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಬುಧವಾರ ಬೆಳಿಗ್ಗೆಯಿಂದ ಇಲ್ಲಿನ ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ’ ಎಂದು ಪ್ಯಾಲೆಸ್ಟೇನ್‌ ದೂರಸಂಪರ್ಕ ಪ್ರಾಧಿಕಾರ ಹೇಳಿದೆ.

ಹುಥಿ ವಾಯು ಪ್ರದೇಶ ಸನ್ನದ್ದ

  • ಇರಾನ್‌ ಬೆಂಬಲಿತ ಹುಥಿ ಬಂಡುಕೋರರು ಸಕ್ರಿಯವಾಗಿರುವ ಬಂದರಿನ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಬಳಿಕ ಬಂಡುಕೋರರು ತಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆ.
  • ‘ಹೊಡೇಡ ಬಂದರಿನ ಮೂಲಕ ಇರಾನ್‌ನಿಂದ ಶಸ್ತ್ರಾಸ್ತ್ರಗಳು ಬಂಡುಕೋರರನ್ನು ತಲುಪುತ್ತಿವೆ. ಈ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಬಳಸಿಕೊಳ್ಳಲಾಗುತ್ತದೆ’ ಎಂದು ಇಸ್ರೇಲ್‌ ಹೇಳಿದೆ. ‘ಇಸ್ರೇಲ್‌ನವರಿಗೆ ನಾವು ಚಳ್ಳೆಹಣ್ಣು ತಿನ್ನಿಸುತ್ತಿದ್ದೇವೆ. ನಾವು ಅವರಲ್ಲಿ ಗೊಂದಲ ಮೂಡುವಂತೆ ಮಾಡಿ, ದಾಳಿ ಮಾಡುವ ಮುನ್ನವೇ ನಮ್ಮ ವಾಯುಪ್ರದೇಶ ಬಿಟ್ಟು ಹೋಗುವಂತೆ ಮಾಡುತ್ತಿದ್ದೇವೆ’ ಎಂದು ಹುಥಿ ಬಂಡುಕೋರ ಸಂಘಟನೆ ತಿಳಿಸಿದೆ.

ಪ್ರಚಲಿತ ವಿದ್ಯಮಾನಗಳು: 17ನೇ ಸೆಪ್ಟೆಂಬರ್ 2025

ಪರಿಹಾರ ದರ ನಿಗದಿ

ಸಂದರ್ಭ: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ‘ಕೃಷ್ಣಾ ಮೇಲ್ದಂಡೆ ಯೋಜನೆ–3’ನೇ ಹಂತದ ಯೋಜನೆಗಾಗಿ ಮುಳುಗಡೆ ಆಗುವ ಮತ್ತು ನಾಲೆಗಾಗಿ ಸ್ವಾಧೀನಪಡಿ ಸಿಕೊಳ್ಳುವ ಜಮೀನಿಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ದರ ನಿಗದಿ ಮಾಡಲಾಗಿದೆ.

  • ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿದೆ. ಒಣ ಭೂಮಿಗೆ ಎಕರೆಗೆ ₹25 ಲಕ್ಷ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಕಡಿಮೆ ದರ ನಿಗದಿ ಮಾಡಲಾಗಿದೆ.
  • ಅಣೆಕಟ್ಟಿನ ಎತ್ತರ ಹೆಚ್ಚಿಸು ವುದರಿಂದ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುತ್ತದೆ. 5.94 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಇದರಿಂದ ಈ ಭಾಗದ ಜನರ ಜೀವನಮಟ್ಟವೂ ಸುಧಾರಣೆ ಆಗಲಿದೆ.
  • ‘ಭೂಸ್ವಾಧೀನದ ವಿಚಾರವಾಗಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ.  2013ರ ಭೂಸ್ವಾಧೀನ ಕಾಯ್ದೆ ಅನ್ವಯ ಈ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ.
  • ‘2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಸೆಕ್ಷನ್ 51ರ ಅಡಿ ಭೂಸ್ವಾಧೀನ, ಪುನರ್‌ವಸತಿ ಪ್ರಾಧಿಕಾರವನ್ನು ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರಾಧಿಕಾರವನ್ನು ರಚಿಸಲಿದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಾಧಿಕಾರ ರಚನೆ ಆಗಲಿದೆ.

ಏನಿದು ಕೃಷ್ಣಾ ಮೇಲ್ಡಂಡೆ ಯೋಜನೆ ?

  • ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ನೀರಾವರಿ ಯೋಜನೆಯಾಗಿದೆ.
  • ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿದೆ.
  • ಕೃಷ್ಣಾ ನದಿ ಮತ್ತು ಅದರ ಉಪನದಿಗಳಾದ ಭೀಮಾ ಹಾಗೂ ಇತರ ನದಿಗಳ ನೀರನ್ನು ಬಳಸಿಕೊಂಡು ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  • ಯೋಜನೆಯಿಂದ 6.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಗುರಿ ಇದೆ.
  • ಯುಕೆಪಿ-ಹಂತ III: ಕರ್ನಾಟಕ ಸರ್ಕಾರವು ಡಿಸೆಂಬರ್ 3, 2011 ರಂದು ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಿತು. ಯುಕೆಪಿಯ ಹಂತ III 130 ಟಿಎಂಸಿಎಫ್‌ಟಿ ನೀರನ್ನು ಬಳಸುತ್ತದೆ. ಯೋಜನೆಯ ಮೂರನೇ ಹಂತವನ್ನು ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ₹17,000 ಕೋಟಿ (US$2.0 ಬಿಲಿಯನ್) ಖರ್ಚು ಮಾಡಲಿದೆ.
  • ಹಂತ III ಆಲಮಟ್ಟಿ ಅಣೆಕಟ್ಟಿನ ಪೂರ್ಣ ಜಲಾಶಯದ ನೀರಿನ ಮಟ್ಟವನ್ನು 524 ಮೀಟರ್ (1,719 ಅಡಿ) ಗೆ ಹೆಚ್ಚಿಸುವುದನ್ನು ಒಳಗೊಂಡಿದೆ ಮತ್ತು ಇದಕ್ಕೆ 30 ಹಳ್ಳಿಗಳ ಸ್ಥಳಾಂತರದ ಅಗತ್ಯವಿರುತ್ತದೆ. ಒಂದು ಲಕ್ಷ ಎಕರೆ (405 ಕಿಮೀ2) ಭೂಮಿ ಮುಳುಗುತ್ತದೆ.
  • ಯುಕೆಪಿ ಹಂತ III ಮುಲ್ವಾಡ್, ಚಿಮ್ಮಲಗಿ ಮತ್ತು ಇಂಡಿಯಲ್ಲಿ ಲಿಫ್ಟ್ ನೀರಾವರಿ ಯೋಜನೆಗಳು ಮತ್ತು ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆ ಮತ್ತು ಭೀಮಾ ತಿರುವು ಯೋಜನೆಯನ್ನು ಒಳಗೊಂಡಿರುತ್ತದೆ. ಹಂತ III ರಾಂಪುರ, ಮಲ್ಲಾಬಾದ್, ಕೊಪ್ಪಳ ಮತ್ತು ಹೆರಕಲ್‌ನಲ್ಲಿ ಲಿಫ್ಟ್ ನೀರಾವರಿ ಯೋಜನೆಗಳ ವಿಸ್ತರಣೆಯನ್ನು ಸಹ ಒಳಗೊಂಡಿರುತ್ತದೆ.
ಯೋಜನೆಯ ಹೈಲೈಟ್ಸ್
  • ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ.
  • ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿ ಎಂ ಸಿ. ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ.
  • ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕ್ರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕ್ರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566ಎಕ್ರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.
  • ಮುಳುಗಡೆ ಹೊಂದಲಿರುವ ಜಮೀನನ್ನು 2ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ.
  • ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ರೂ. 51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ ರೂ. 87,818ಕೋಟಿ ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ ರೂ. 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.
  • ಯೋಜನೆಗೆ ಸಂಬಂಧಿಸಿದಂತೆ 9 ಉಪ ಯೋಜನಾ ಸಿವಿಲ್ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ 25,122.53 ಕೋಟಿ ರೂಪಾಯಿ ಅಂದಾಜಿಸಲಾಗಿದೆ.

ಕರಡಿ ‘ವಸಿಕರನ್’ಗೆ ಕೃತಕ ಕಾಲು

ಸಂದರ್ಭ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ‘ವಸಿಕರನ್’ ಹೆಸರಿನ ಕರಡಿಗೆ ಮೂರು ದಿನಗಳಿಂದ ಕೈಗೊಳ್ಳಲಾಗಿದ್ದ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

  • ಇದರಿಂದಾಗಿ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ.
  • ವಿಶ್ವದಲ್ಲೇ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾದ ಮೊಟ್ಟಮೊದಲ ಪ್ರಕರಣ ಇದಾಗಿದೆ.
  • ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.
  • ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ‘ವಸಿಕರನ್’ನನ್ನು ಇಲ್ಲಿಗೆ ತರಲಾಗಿತ್ತು.

ಬಫರ್‌ ಝೋನ್‌ ಕಡಿತ ಮರುಪರಿಶೀಲನೆಗೆ ಸಲಹೆ

ಸಂದರ್ಭ: ‘ಕೆರೆಗಳ ಬಫರ್‌ ಝೋನ್‌ ಕಡಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗುತ್ತದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್‌.

  • ‘ಎಲ್ಲ ಕೆರೆಗಳಿಗೆ 30 ಮೀಟರ್‌ ಬಫರ್ ಝೋನ್‌ ಅನ್ನು ನಿಗದಿಪಡಿಸಲಾಗಿದೆ. ಅದನ್ನು ಕಡಿತಗೊಳಿಸಿ ಒಂದೊಂದು ಕೆರೆಗೆ ಒಂದೊಂದು ರೀತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗದಿಪಡಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

ಸಂದರ್ಭ: ಬಂಡೀಪುರದ ಸಫಾರಿ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಕುಂಟುತ್ತಿರುವ ದೃಶ್ಯ. ಇದು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಕೆಲವು ವನ್ಯಜೀವಿ ಆಸಕ್ತರು ಆ ಹುಲಿಗೆ ಚಿಕಿತ್ಸೆ ನೀಡಲು ಮತ್ತು ಅದರ ಮರಿಗಳಿಗೆ ಕೃತಕವಾಗಿ ಆಹಾರವನ್ನೊದಗಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ ಪರಿಣಾಮ, ಇಲಾಖೆ ಏನೇನೊ ಕಸರತ್ತು ಮಾಡಿತು.

  • ಎರಡನೆಯದು: ಮೈಸೂರಿನ ಇಲವಾಲದ ಹತ್ತಿರ ಹುಲಿಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿದೆ ಎಂಬ ಸುದ್ದಿ.
  • ಮೂರನೆಯದು: ಬಂಡೀಪುರ ಹುಲಿ ಯೋಜನೆಯ ಹತ್ತಿರವಿರುವ ಕುಂದುಕೆರೆ ಗ್ರಾಮದ ಬಳಿಯಿರುವ ಪುಟ್ಟ ಗುಡ್ಡದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಕಾಣಿಸಿಕೊಂಡು, ಅವುಗಳಲ್ಲಿ ಒಂದು ಹುಲಿ ಇನ್ನೊಂದು ಹುಲಿಯಿಂದ ಗಾಯಗೊಂಡು ನಿತ್ರಾಣಗೊಂಡಿರುವ ಸುದ್ದಿ.
  • ನಾಲ್ಕನೆಯದು: ಬಂಡೀಪುರದ ಬಳಿಯಿರುವ ಬೊಮ್ಮಲಾಪುರ ಎಂಬ ಹಳ್ಳಿಯಲ್ಲಿ ಗ್ರಾಮಸ್ಥರು ಹುಲಿ ಸಂಘರ್ಷದಿಂದ ಬೇಸತ್ತು, ಹುಲಿಯನ್ನು ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆಯ ನೌಕರರನ್ನೇ ಕೂಡಿ ಹಾಕಿದ ಘಟನೆ.
  • ಈ ನಾಲ್ಕೂ ಘಟನೆಗಳು ಸ್ವತಂತ್ರವೆನಿಸಿದರೂ, ಅವುಗಳಿಗೆ ಮತ್ತು ವನ್ಯಜೀವಿ ಸಂರಕ್ಷಣೆಯ ವಿಧಾನಗಳಿಗೆ ಕೊಂಡಿಗಳಿವೆ. ನಿಸರ್ಗದಲ್ಲಿ ಹುಲಿಯನ್ನು ಭಕ್ಷಿಸುವ ಇತರ ಪ್ರಾಣಿಗಳು ಇಲ್ಲವಾದುದರಿಂದ ಅದು ಪಾರಿಸರಿಕ ಗೋಪುರದ ತುದಿಯಲ್ಲಿರುವ ವನ್ಯಜೀವಿ. ಹಾಗಾಗಿ, ಹುಲಿಗಳಿಗೆ ಉತ್ತಮ ರಕ್ಷಣೆ ಸಿಕ್ಕರೆ ಅವುಗಳ ಸಂಖ್ಯೆ ಹೆಚ್ಚುತ್ತದೆ. ಆವಾಸಸ್ಥಾನದ ವ್ಯಾಪ್ತಿ, ಆ ಪ್ರದೇಶದಲ್ಲಿರುವ ಬಲಿಪ್ರಾಣಿಗಳ ಸಾಂದ್ರತೆಗೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಕಾರಣಗಳು ನಿಯಂತ್ರಿಸುತ್ತವೆ. ಹುಲಿಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಮುಖ್ಯ ಕಾರಣಗಳು: ನೆಲಹರವಿಗಾಗಿ ಹುಲಿಗಳ ಕಾದಾಟ, ನೈಸರ್ಗಿಕ ಕಾರಣಗಳಿಂದ ಆಗುವ ಗಾಯಗಳು, ರೋಗ, ಆಹಾರ ಅಥವಾ ನೀರಿನ ಕೊರತೆ. ಇವುಗಳಲ್ಲಿ ಕೊನೆಯದು ಅಪರೂಪ.
  • ಏಕೆಂದರೆ, ಆಹಾರ ಮತ್ತು ನೀರಿನ ಕೊರತೆಯಿದ್ದರೆ ಹುಲಿಗಳ ಸಂಖ್ಯೆ ನೈಸರ್ಗಿಕವಾಗಿ ಕಡಿಮೆಯಿದ್ದು, ಅವುಗಳ ಸಂಖ್ಯೆ ಹೆಚ್ಚುವುದಿಲ್ಲ. ಇದನ್ನು ಮಲೆಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿಧಾಮ ಮತ್ತಿತರ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕಾಣಬಹುದು. ಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ, ಈ ಎರಡು ವನ್ಯಜೀವಿಧಾಮಗಳಲ್ಲಿ 12–15 ಹುಲಿಗಳಿವೆ. ಒಂದಕ್ಕೊಂದು ಹೊಂದಿಕೊಂಡಿರುವ ಈ ವನ್ಯಜೀವಿಧಾಮಗಳ ಒಟ್ಟು ಭೂ ವಿಸ್ತೀರ್ಣ 1,991 ಚ.ಕಿ.ಮೀ. (ಸುಮಾರು 4,91,987 ಎಕರೆ).
  • ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಂತೆಯೇ ಭೌಗೋಳಿಕವಾಗಿ ಕೂಡಿಕೊಂಡಿರುವ ಬಂಡೀಪುರ ಮತ್ತು ನಾಗರಹೊಳೆ ಹುಲಿ ಯೋಜನಾ ಪ್ರದೇಶಗಳ ಒಟ್ಟು ವಿಸ್ತೀರ್ಣ 1,771 ಚ.ಕಿ.ಮೀ. (ಸುಮಾರು 4,37,624 ಎಕರೆ). ಇತ್ತೀಚಿನ ವರದಿಗಳ ಪ್ರಕಾರ, ಇಲ್ಲಿರುವ ಹುಲಿಗಳ ಸಂಖ್ಯೆ 288. ಅಂದರೆ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಗಿಂತ 200 ಚ.ಕಿ.ಮೀ. ಕಡಿಮೆ ಇರುವ ಪ್ರದೇಶಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಹುಲಿಗಳು ಬಂಡೀಪುರ–ನಾಗರಹೊಳೆಯಲ್ಲಿವೆ. ಇಲ್ಲಿ ಹಲವು ದಶಕಗಳಿಂದ ಆಗಿರುವ ರಕ್ಷಣಾ ಕಾರ್ಯಗಳು ಮತ್ತು ಹುಲಿಗಳ ಆವಾಸಸ್ಥಾನಗಳ ನಿರ್ವಹಣೆಯಿಂದ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಪಾರಿಸರಿಕ ಸಮತೋಲನದ ಮಟ್ಟ ತಲುಪಿವೆ ಅಥವಾ ಅದಕ್ಕಿಂತ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಪ್ರಾಯದ ಹುಲಿಗಳು ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಯ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಈ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶ ಹುಲಿಗಳಿಗೆ ಪಾರಿಸರಿಕ ಮತ್ತು ಸಾಮಾಜಿಕವಾಗಿ ಸೂಕ್ತ ಪ್ರದೇಶಗಳಲ್ಲ. ಅಲ್ಲಿ ಅವುಗಳಿಗೆ ಬೇಕಿರುವಷ್ಟು ನೈಸರ್ಗಿಕ ಆಹಾರ ಸಿಗದಿರುವುದರಿಂದ, ಅವು ಹೆಚ್ಚಾಗಿ ಜಾನುವಾರುಗಳ ಮೇಲೆ ಅವಲಂಬಿತ ವಾಗಿವೆ. ಇದು ಸ್ಥಳೀಯರನ್ನು ತೊಂದರೆಗೆ ಸಿಲುಕಿಸಿದೆ ಮತ್ತು ಕೃಷಿ ಪ್ರದೇಶಗಳಲ್ಲಿ ಹುಲಿಗಳಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
  • ನಾವು ಪಾರಿಸರಿಕ ಮತ್ತು ಸಾಮಾಜಿಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಬಂಡೀಪುರ–ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವ ಕಾರ್ಯ ವಿಧಾನ ಗಳನ್ನು ಅಳವಡಿಸಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳ ಒತ್ತಡಕ್ಕೆ ಮಣಿದು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಅವಕಾಶ ಕೊಡದೆ ಸಂಖ್ಯೆಯನ್ನು ಅನೈಸರ್ಗಿಕವಾಗಿ ಹೆಚ್ಚಿಸುತ್ತಿದ್ದೇವೆ. ಸಾಕುಪ್ರಾಣಿಗಳು ಮತ್ತು ವನ್ಯಜೀವಿಗಳ ಬಗ್ಗೆ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳದೆ, ಹುಲಿಗಳನ್ನು ಸಾಕುಪ್ರಾಣಿಗಳ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ್ದೇವೆ.
  • ಬಂಡೀಪುರದಲ್ಲಿ ಗಾಯಗೊಂಡು ಪತ್ತೆಯಾದ ಹೆಣ್ಣು ಹುಲಿಗೆ ನಾಲ್ಕು ಮರಿಗಳಿವೆ. ಈ ತಾಯಿ ಮತ್ತು ಮರಿಗಳು ಉಳಿಯುವುದು ಬಹು ಮುಖ್ಯವಾದರೂ, ಅವುಗಳು ನೈಸರ್ಗಿಕವಾಗಿ ಉಳಿಯಬೇಕೇ ಹೊರತು ಅವುಗಳನ್ನು ಕೃತಕವಾಗಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಹುಲಿಗಳ ಸಂಖ್ಯೆಯನ್ನು ಅಸಹಜವಾಗಿ ಹೆಚ್ಚಿಸಿದಂತಾಗುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಹುಲಿಗಳು ಅಧಿಕವಾಗಿರುವ ಬಂಡೀಪುರ–ನಾಗರಹೊಳೆಯಂತಹ ಪ್ರದೇಶಗಳಲ್ಲಿ ವಾರ್ಷಿಕವಾಗಿ ಹುಲಿಗಳಲ್ಲಿ ಶೇ 25ರಷ್ಟು ನೈಸರ್ಗಿಕ ಮರಣ ಪ್ರಮಾಣವಿರುತ್ತದೆ. ಇದನ್ನು ತಡೆದರೆ, ಹುಲಿಗಳ ಸಂಖ್ಯೆ ಅವುಗಳಿಗಿರುವ ಆವಾಸಸ್ಥಾನಕ್ಕಿಂತ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ವಲಸೆ ಹೋಗಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದು ಮಾನವ–ಹುಲಿ ಸಂಘರ್ಷದಂತಹ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.
  • ಇನ್ನೊಂದು ಗಂಭೀರ ಸಮಸ್ಯೆ, ಹುಲಿಗಳ ಆವಾಸ ಸ್ಥಾನಗಳ ಅವೈಜ್ಞಾನಿಕ ನಿರ್ವಹಣೆ. ವರ್ಷಪೂರ್ತಿ ವನ್ಯಜೀವಿಗಳಿಗೆ ನೀರು ಸಿಗುವ ಹಾಗೆ ಮಾಡಲು ಹೊಸ ಕೆರೆಗಳ ನಿರ್ಮಾಣ, ಕೊಳವೆಬಾವಿಗಳನ್ನು ತೋಡುವುದು ಮಾಡುತ್ತಿದ್ದೇವೆ. ವರ್ಷಪೂರ್ತಿ ನೀರು ಸಿಗುವು ದರಿಂದ ಹುಲಿಗಳಿಗೆ ಅವಶ್ಯಕವಾದ ಸಾರಂಗ ಗಳಂತಹ ಪ್ರಾಣಿಗಳು ಅಸ್ವಾಭಾವಿಕವಾಗಿ ವೃದ್ಧಿಸುತ್ತದೆ. ಋತುಮಾನಕ್ಕೆ ಅನುಗುಣವಾಗಿ ನೀರಿದ್ದರೆ, ದೈಹಿಕವಾಗಿ ಸಮರ್ಥ ಪ್ರಾಣಿಗಳು ಮಾತ್ರ ಬದುಕಿ, ಇನ್ನುಳಿದವು ಅಸುನೀಗಿ ಅವುಗಳ ಸಂಖ್ಯೆಯನ್ನು ನಿಸರ್ಗ ಪಾರಿಸರಿಕ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ.
  • ಸಾರಂಗಗಳ ಸಂಖ್ಯೆ ಹೆಚ್ಚಾದಾಗ ಹುಲಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಅವುಗಳ ಆವಾಸಸ್ಥಾನದ ವ್ಯಾಪ್ತಿ ಹೆಚ್ಚಾಗುವುದಿಲ್ಲ. 5 ಜನರಿಗೆ ಸರಿಹೊಂದುವಂತೆ ಕಟ್ಟಿದ ಮನೆಯಲ್ಲಿ 15–20 ಜನರನ್ನು ತುರುಕಿದ ಹಾಗೆ ಆಗುತ್ತದೆ. ಇದರ ಪರಿಣಾಮವಾಗಿ ಹುಲಿಗಳು ಹೊಸ ವ್ಯಾಪ್ತಿಯನ್ನು ಹುಡುಕಿಕೊಂಡು, ತಾವು ಹುಟ್ಟಿರುವ ಪ್ರದೇಶವನ್ನು ಬಿಟ್ಟು ಕೃಷಿ ಪ್ರದೇಶಗಳಿಗೆ ಮತ್ತು ಚಿಕ್ಕಪುಟ್ಟ ಕಾಡುಗಳತ್ತ ವಲಸೆ ಹೋಗುವುದು ಪ್ರಾರಂಭವಾಗಿದೆ. ಹೀಗೆಯೇ ಮುಂದುವರಿದರೆ, ಈಗ ಮೈಸೂರು, ಮಡಿಕೇರಿ ತಲುಪಿರುವ ಹುಲಿಗಳು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆಯಿದೆ. ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದಷ್ಟೇ ನೋಡಿದರೆ ಇದು ಸಂಭ್ರಮಿಸುವ ವಿಚಾರವಾದರೂ, ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ, ಮತ್ತು ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಅಧಿಕವಾಗುತ್ತಿರುವ ಹುಲಿಗಳನ್ನು ಸೂಕ್ತವಲ್ಲದ ಪ್ರದೇಶಗಳಲ್ಲಿ ತುರುಕಲು ಪ್ರಯತ್ನಿಸುವುದು ಪಾರಿಸರಿಕ ದೃಷ್ಟಿಕೋನದಿಂದಾಗಲೀ ಅಥವಾ ಸಾಮಾಜಿಕ ದೃಷ್ಟಿಕೋನದಿಂದಾಗಲೀ ಸರಿಯಲ್ಲ. ಈ ತರಹದ ಪ್ರದೇಶಗಳಲ್ಲಿ ಹುಲಿಗಳ ಇರುವಿಕೆಯಿಂದ ಹುಲಿಗಳಿಗೆ ಕೂಡ ತೊಂದರೆಯೇ. ಸಂಘರ್ಷ ಹೆಚ್ಚಾದಂತೆ ಹುಲಿಗಳ ಬಗ್ಗೆ ಸಮಾಜಕ್ಕಿದ್ದ ತಾಳಿಕೆಯ ಸೌಹಾರ್ದ ಕಡಿಮೆಯಾಗಿ, ಅದರ ವಿರುದ್ದದ ಮನಃಸ್ಥಿತಿ ಮತ್ತು ನಡವಳಿಕೆ ಹೆಚ್ಚುತ್ತದೆ.
  • ಬೊಮ್ಮಲಾಪುರದ ಗ್ರಾಮಸ್ಥರು ತೆಗೆದುಕೊಂಡ ನಿಲುವು ಬಹುಶಃ ಹಲವು ವರ್ಷಗಳಿಂದ ಮಾನವ–ವನ್ಯಜೀವಿ ಸಂಘರ್ಷದ ಬಗ್ಗೆ ಅಂತರಂಗದೊಳಗೆ ಹುದುಗಿದ್ದ ಅಸಹಾಯಕ ಮನೋವೃತ್ತಿಯನ್ನು ತೋರಿಸುತ್ತಿರಬಹುದು. ಈಗಲಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ತರುವ ಒತ್ತಡಕ್ಕೆ ಮಣಿಯದೆ, ವನ್ಯಜೀವಿಯ ಆವಾಸಸ್ಥಾನಗಳ ಅವೈಜ್ಞಾನಿಕ ನಿರ್ವಹಣೆಯನ್ನು ತಪ್ಪಿಸಬೇಕಾಗಿದೆ. ಬಹು ಮುಖ್ಯವಾಗಿ, ಆರ್ಥಿಕ ಕಾರಣಗಳಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಿಲ್ಲಿಸದಿದ್ದರೆ ಹುಲಿಗಳಿಗಾಗಲೀ ಸಮಾಜಕ್ಕಾಗಲೀ ಒಳಿತಾಗದು.
  • ಈಗಿನ ಸಂಘರ್ಷದ ಪರಿಸ್ಥಿತಿಗೆ ವನ್ಯಜೀವಿ ಆವಾಸ ಗಳ ಅವೈಜ್ಞಾನಿಕ ನಿರ್ವಹಣೆಯೂ ಕಾರಣ. ಈ ಧೋರಣೆ ಬದಲಾಯಿಸಿಕೊಂಡರೆ, ಮುಂಬರುವ ದಿನಗಳಲ್ಲಿ ಸಂಘರ್ಷಕ್ಕೊಳಗಾಗುವ ವನ್ಯಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಣಬಹುದು. ಇದರಿಂದ ಇಲವಾಲ, ಬೊಮ್ಮಲಾಪುರ, ಇನ್ನಿತರ ಪ್ರದೇಶಗಳಿಗೆ ಹುಲಿಗಳು ಹೋಗುವುದು ಕಡಿಮೆಯಾಗಿ ಸಂಘರ್ಷ ತಗ್ಗುವ ದಿನಗಳನ್ನು ಕಾಣಬಹುದು. ಇಲ್ಲವಾದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವುದು, ಅದರ, ಮತ್ತು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯ ಜನರ ಆಕ್ರೋಶ ಇನ್ನೂ ಹೆಚ್ಚಲಿದೆ.

ಪಟ್ಟಿಯಲ್ಲಿಲ್ಲ ಹಲವು ಪ್ರಸಿದ್ಧ ತಾಣಗಳು: 1,275 ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಸಂಖ್ಯೆ

ಟೈಫನ್‌ ಕ್ಷಿಪಣಿ ಹಿಂತೆಗೆದುಕೊಳ್ಳಲು ಚೀನಾ ಆಗ್ರಹ

ಸಂದರ್ಭ: ಜಪಾನ್‌ನಲ್ಲಿ ನಿಯೋಜಿಸಿರುವ ಮಧ್ಯಮ ಶ್ರೇಣಿಯ ಟೈಫನ್‌ ಕ್ಷಿಪಣಿಯನ್ನು ಹಿಂತೆಗೆದುಕೊಳ್ಳುವಂತೆ ಅಮೆರಿಕವನ್ನು ಚೀನಾ ಒತ್ತಾಯಿಸಿದೆ.

  • ‘ಟೈಫನ್‌ ಕ್ಷಿಪಣಿಯು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಕಾಯಂ ಬೆದರಿಕೆಯಾಗಿದೆ. ಜಂಟಿ ಸಮರಾ ಭ್ಯಾಸದ ನೆಪದಲ್ಲಿ ಅಮೆರಿಕವು ಜಪಾನ್‌ನಲ್ಲಿ ಈ ಕ್ಷಿಪಣಿಯನ್ನು ನಿಯೋಜಿಸಿದೆ. ಇದನ್ನು ಹಿಂತೆಗೆದು ಕೊಳ್ಳಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್‌ ಜಿಯಾನ್‌ ಒತ್ತಾಯಿಸಿದ್ದಾರೆ.  
  • ಈ ಮೊದಲು ಫಿಲಿಪ್ಪೀನ್ಸ್‌ನಲ್ಲಿ  ‘ಟೈಫನ್‌’ ಕ್ಷಿಪಣಿ ನಿಯೋಜನೆಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಫಿಲಿಪ್ಪೀನ್ಸ್‌ ಭಾರತದಿಂದ ಬ್ರಹ್ಮೋಸ್‌ ಕ್ಷಿಪಣಿ ಖರೀದಿಸಿತ್ತು.

ಮಾತುಕತೆ ಸಕಾರಾತ್ಮಕ’:ಹೆಚ್ಚುವರಿ ತೆರಿಗೆ ರದ್ದುಪಡಿಸಲು ಅಮೆರಿಕಕ್ಕೆ ಭಾರತ ಒತ್ತಾಯ

ಸಂದರ್ಭ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಅಮೆರಿಕದ ನಿಯೋಗದ ಜೊತೆಗಿನ ಮಾತುಕತೆಯು ಸಕಾರಾತ್ಮಕವಾಗಿ ಇತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

  • ಇಬ್ಬರಿಗೂ ಅನುಕೂಲ ಆಗುವ ಒಪ್ಪಂದವೊಂದಕ್ಕೆ ಆದಷ್ಟು ಬೇಗ ಅಂತಿಮ ರೂಪ ನೀಡಲು ಎರಡೂ ದೇಶಗಳು ಒಪ್ಪಿವೆ ಎಂದು ಕೂಡ ಸಚಿವಾಲಯವು ಹೇಳಿದೆ.
  • ‘ಎರಡೂ ಕಡೆಯವರಿಗೆ ಪ್ರಯೋಜನಕಾರಿ ಆಗುವಂತಹ ವ್ಯಾಪಾರ ಒಪ್ಪಂದವನ್ನು ಬೇಗನೆ ಸಾಧ್ಯವಾಗಿಸುವ ಪ್ರಯತ್ನಕ್ಕೆ ಇನ್ನಷ್ಟು ಚುರುಕು ನೀಡಲು ತೀರ್ಮಾನಿಸಲಾಗಿದೆ’ ಎಂದು ಸಚಿವಾಲಯವು ಹೇಳಿದೆ. ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಮಂಗಳವಾರ ಇಡೀ ದಿನ ಮಾತುಕತೆ ನಡೆದಿದೆ.
  • ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಅವರ ಜೊತೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗಳು ಸಕಾರಾತ್ಮಕವಾಗಿದ್ದವು ಎಂದು ಸಚಿವಾಲಯವು ಹೇಳಿದೆ.
  • ಲಿಂಚ್ ಅವರು ನವದೆಹಲಿಗೆ ಬಂದಿದ್ದಾರೆ. ಮಾತುಕತೆ ವೇಳೆ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ವಹಿಸಿದ್ದರು.
  • ಎರಡೂ ದೇಶಗಳು ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ಮುಂದುವರಿಸಲಿವೆ. ಅಲ್ಲದೆ, ಮುಂದಿನ ಭೌತಿಕ ಸಭೆಗೆ ಸೂಕ್ತ ದಿನಾಂಕ ಯಾವುದು ಎಂಬುದನ್ನು ಕೂಡ ನಿರ್ಧರಿಸಲಿವೆ ಎಂದು ಮೂಲವೊಂದು ತಿಳಿಸಿದೆ.
  • ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಪ್ರತಿಸುಂಕದ ರೂಪದಲ್ಲಿ ಶೇ 25ರಷ್ಟು ತೆರಿಗೆ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕ್ರಮಗಳು ಜಾರಿಗೆ ಬಂದ ನಂತರದಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವ್ಯಾಪಾರ ಒಪ್ಪಂದದ ಮಾತುಕತೆಗೆ ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಶೇ 50ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಭಾರತವು ‘ಅನ್ಯಾಯ’ ಎಂದು ಹೇಳಿದೆ.
  • ಮಾತುಕತೆ ಮುಂದುವರಿಯಬೇಕು ಎಂದಾದರೆ ಭಾರತದ ಮೇಲೆ ಹೇರಿರುವ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ರದ್ದುಪಡಿಸಬೇಕು ಎಂದು ಭಾರತದ ಅಧಿಕಾರಿಗಳು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
  • ‘ಮಾತುಕತೆಯಲ್ಲಿ ಪ್ರಗತಿಯು, ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ಶೇ 25ರಷ್ಟು ತೆರಿಗೆಯನ್ನು ಅಮೆರಿಕವು ಹಿಂಪಡೆಯುವುದನ್ನು ಅವಲಂಬಿಸಿದೆ. ಅದು ಸಾಧ್ಯವಾಗದೆ ಇದ್ದರೆ ರಾಜಕೀಯವಾಗಿ ಅಥವಾ ಆರ್ಥಿಕ ದೃಷ್ಟಿಯಿಂದ ಯಾವುದೇ ಮಹತ್ವದ ತಿರುವು ಲಭಿಸುವುದಿಲ್ಲ’ ಎಂದು ಗ್ಲೋಬಲ್‌ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್‌ನ (ಜಿಟಿಆರ್‌ಐ) ಅಜಯ್ ಶ್ರೀವಾಸ್ತವ ಹೇಳಿದ್ದಾರೆ.

ಜಿಎಸ್‌ಟಿ ಇಳಿಕೆ ಕುರಿತು ಮಾಹಿತಿ ನೀಡಲು ಸೂಚನೆ

ಸಂದರ್ಭ: ಭೌತಿಕ ಮಳಿಗೆಗಳ ಮೂಲಕ ರಿಟೇಲ್‌ ಮಾರಾಟದಲ್ಲಿ ತೊಡಗಿರುವವರು ಜಿಎಸ್‌ಟಿ ದರ ಇಳಿಕೆಯಿಂದಾಗಿ ಉತ್ಪನ್ನಗಳ ಬೆಲೆಯಲ್ಲಿ ಆಗುವ ಇಳಿಕೆಯನ್ನು ಗ್ರಾಹಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.

  • ರಿಟೇಲ್‌ ವಹಿವಾಟಿನಲ್ಲಿ ತೊಡಗಿರುವವರ ಸಂಘಕ್ಕೆ ಸೂಚನೆಯೊಂದನ್ನು ರವಾನಿಸಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ), ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರು ಜಿಎಸ್‌ಟಿಯಲ್ಲಿ ಆಗಿರುವ ಇಳಿಕೆಯನ್ನು ರಸೀದಿಯಲ್ಲಿ ‘ಜಿಎಸ್‌ಟಿ ರಿಯಾಯಿತಿ’ ಎಂಬುದಾಗಿ ನಮೂದಿಸಬೇಕು ಎಂದು ಹೇಳಿದೆ.
  • ‘ಜಿಎಸ್‌ಟಿಯಿಂದಾಗಿನ ರಿಯಾಯಿತಿಯನ್ನು ಪ್ರಮುಖವಾಗಿ ತೋರಿಸಬೇಕು. ಉದಾಹರಣೆಗೆ, ಪೋಸ್ಟರ್‌ಗಳು, ಫ್ಲೈಯರ್‌ಗಳು ಹಾಗೂ ಜಾಹೀರಾತುಗಳ ಮೂಲಕ (ಟಿ.ವಿ., ಮುದ್ರಣ ಮತ್ತು ಆನ್‌ಲೈನ್‌ ಮಾಧ್ಯಮ) ತಿಳಿಸಬೇಕು’ ಎಂದು ಅದು ಸೂಚಿಸಿದೆ.

ಜಿಎಸ್ಟಿ ಇಳಿಕೆ ಲಾಭ ಗ್ರಾಹಕರಿಗೆ

  • ಜಿಎಸ್‌ಟಿ ದರದಲ್ಲಿನ ಪರಿಷ್ಕರಣೆಯ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮದರ್ ಡೈರಿ ಮಂಗಳವಾರ ಹೇಳಿದೆ. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಸಂಸ್ಕರಿತ ಆಹಾರ ಸೇರಿದಂತೆ ತನ್ನ ಬಹುತೇಕ ಉತ್ಪನ್ನಗಳ ಬೆಲೆಯು ಸೆಪ್ಟೆಂಬರ್‌ 22ರಿಂದ ಕಡಿಮೆ ಆಗಲಿದೆ ಎಂದು ಅದು ಹೇಳಿದೆ.
  • ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆ ಮದರ್ ಡೈರಿ. 200 ಗ್ರಾಂ ಪನೀರ್‌ ಬೆಲೆಯು ₹95 ಇರುವುದು ₹92ಕ್ಕೆ, 1 ಲೀಟರ್ ತುಪ್ಪದ ಬೆಲೆಯು ₹675 ಇರುವುದು ₹645ಕ್ಕೆ 100 ಗ್ರಾಂ ಬೆಣ್ಣೆಯ ಬೆಲೆಯು ₹62 ಇರುವುದು ₹58ಕ್ಕೆ ಇಳಿಕೆ ಕಾಣಲಿದೆ ಎಂದು ಹೇಳಿದೆ.

ಸತತ ನಾಲ್ಕನೇ ಸಲ ಚಿನ್ನ ಗೆದ್ದ ಕಿಪ್ಯೆಗಾನ್

ಸಂದರ್ಭ: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: 1500 ಮೀ. ಓಟದಲ್ಲಿ ಕೆನ್ಯಾ ಅಥ್ಲೀಟ್‌ ದಾಖಲೆ

  • ಫೇತ್‌ ಕಿಪ್ಯೆಗಾನ್‌ ಎಂದಿನಂತೆ ಕೊನೆಯ ಲ್ಯಾಪ್‌ನಲ್ಲಿ ಅತ್ಯಮೋಘ ವೇಗ ಸಾಧಿಸಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಸಲ ಚಿನ್ನ ಗೆದ್ದುಕೊಂಡರು.
  • ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ಕಿಪ್ಯೆಗಾನ್ ಮಂಗಳವಾರ 3ನಿ.52.15 ಸೆ.ಗಳಲ್ಲಿ ಓಟವನ್ನು ಪೂರೈಸಿ ಸಂಭ್ರಮಿಸಿದರು. ಆ ಹಾದಿಯಲ್ಲಿ ವಿಶ್ವದ ಅತಿ ಶ್ರೇಷ್ಠ ಮಧ್ಯಮ ದೂರದ ಓಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾದರು.
  • ಇದೇ ದೇಶದ ದೋರ್ಕಸ್‌ ಇವೊಯಿ 3ನಿ.54.02 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಜೆಸಿಕಾ ಹಲ್ (3:55.16) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • 31 ವರ್ಷ ವಯಸ್ಸಿನ ಕಿಪ್ಯೆಗಾನ್‌ ನಾಲ್ಕು ಪದಕಗಳನ್ನು ಪಡೆಯುವ ಮೂಲಕ, ಪುರುಷರ ವಿಭಾಗದಲ್ಲಿ ಮೊರಾಕೊದ ಹಿಶಮ್ ಎಲ್‌ ಗೆರೂಝ್‌ ಅವರು 1997–2003ರ ಅವಧಿಯಲ್ಲಿ ಗೆದ್ದ ಪದಕಗಳ ಸಾಧನೆ ಸರಿಗಟ್ಟಿದರು.
  • ಕಾರ್ಡೆಲ್‌ಗೆ ಚಿನ್ನ: ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಅಮೆರಿಕದ ಕಾರ್ಡೆಲ್‌ ಟಿಂಚ್‌ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಜಮೈಕಾದ ಇಬ್ಬರು ಓಟಗಾರರ ಪೈಪೋಟಿ ಎದುರಿಸಿದ ಅವರು 12.99 ಸೆ.ಗಳಲ್ಲಿ ದೂರ ಕ್ರಮಿಸಿ ಮೊದಲಿಗರಾದರು.
  • ಒರ್ಲಾಂಡೊ ಬೆನೆಟ್‌ (13.08 ಸೆ) ಮತ್ತು ಟೈಲರ್ ಮ್ಯಾಸನ್ (13.12 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
  • ನಾಲ್ಕನೇ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಅಮೆರಿಕದ ಗ್ರಾಂಟ್‌ ಹೊಲೊವೆ ವರ ಕನಸು ನುಚ್ಚುನೂರಾಯಿತು.
  • ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ 27 ವರ್ಷ ವಯಸ್ಸಿನ ಗ್ರಾಂಟ್‌ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನಕ್ಕೆ ಸರಿದು ನಿರಾಶರಾದರು.

ಮಹಿಳೆಯರ 400 ಮೀ. ಓಟ: ಮೆಕ್‌ಲಾಗ್ಲಿನ್‌ ವಿಶ್ವದಾಖಲೆ

ಸಂದರ್ಭ: ಅಮೆರಿಕದ ಮೆಕ್‌ಲಾಗ್ಲಿನ್–ಲೆವ್ರೋನ್‌ ಅವರು ಮಂಗಳವಾರ ನಡೆದ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದರು.

  • 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಹೊಂದಿರುವ 26 ವರ್ಷ ವಯಸ್ಸಿನ  ಮೆಕ್‌ಲಾಗ್ಲಿನ್ ಟೋಕಿಯೊದಲ್ಲಿ ಹರ್ಡಲ್ಸ್‌ ಬದಲು ಬರೇ 400 ಮೀ. ಓಟದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಅವರು 48.29 ಸೆ.ಗಳಲ್ಲಿ ಗುರಿತಲುಪಿದರು. ಇದರಿಂದಾಗಿ 2006ರಷ್ಟು ಹಿಂದೆ ಸಾನ್ಯಾ ರಿಚರ್ಡ್ಸ್‌–ರಾಸ್ ಹೆಸರಿನಲ್ಲಿದ್ದ ಹಳೆಯ ದಾಖಲೆ (48.70 ಸೆ.) ಭಗ್ನಗೊಂಡಿತು.
  • ಮೆಕ್‌ಲಾಗ್ಲಿನ್ ಅವರು ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್‌ ಆಗಿದ್ದಾರೆ.

ಅಗ್ರಸ್ಥಾನಕ್ಕೆ ಮರಳಿದ ಮಂದಾನ

ಸಂದರ್ಭ: ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಸ್ಮೃತಿ ಮಂದಾನ ಅವರು ಪ್ರಕಟವಾದ ಮಹಿಳಾ ಐಸಿಸಿ ಏಕದಿನ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.

  • ಸೆ. 30ರಂದು ಆರಂಭವಾಗುವ ಮಹಿಳಾ ಏಕದಿನ ವಿಶ್ವಕಪ್‌ಗೆ ಮೊದಲು ಅಗ್ರಸ್ಥಾನ ಪಡೆದಿರುವುದು ಮಂದಾನ ಅವರ ವಿಶ್ವಾಸ ಹೆಚ್ಚಿಸಲಿದೆ. 2019ರಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದ ಅವರು, ಈ ವರ್ಷ ಎರಡು ಸಲ ಅಲ್ಪಾ ವಧಿಗೆ ಈ ಸ್ಥಾನ ಉಳಿಸಿಕೊಂಡಿದ್ದರು.
  • ಮಂದಾನ 735 ರೇಟಿಂಗ್ ಪಾಯಿಂಟ್ಪಡೆದಿದ್ದರೆ, ಇಂಗ್ಲೆಂಡ್ ನಾಟ್ಶಿವರ್‌–ಬ್ರಂಟ್‌ 731 ಪಾಯಿಂಟ್ಸ್ಹೊಂದಿದ್ದಾರೆ.
  • ಭಾರತ ತಂಡದ ಆರಂಭ ಆಟಗಾರ್ತಿ ಪ್ರತಿಕಾ ರಾವಲ್‌ ನಾಲ್ಕು ಸ್ಥಾನ ಬಡ್ತಿ ಪಡೆದು 42ನೇ ಸ್ಥಾನದಲ್ಲಿದ್ದಾರೆ.
  • ಮುಲ್ಲನಪುರ ಪಂದ್ಯದಲ್ಲಿ ಅಜೇಯ 77 ರನ್ ಹೊಡೆದಿದ್ದ ಆಸ್ಟ್ರೇಲಿಯಾದ ಎಡಗೈ ಆಟಗಾರ್ತಿ ಬೆತ್ ಮೂನಿ ಮೂರು ಸ್ಥಾನ ಬಡ್ತಿ ಪಡೆದು ಐದನೇ ಸ್ಥಾನಕ್ಕೇರಿದ್ದಾರೆ.
  • ಭಾರತದ ಸ್ಪಿನ್ನರ್ ಸ್ನೇಹ ರಾಣಾ ಐದು ಸ್ಥಾನ ಬಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್‌ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 16ನೇ ಸೆಪ್ಟೆಂಬರ್ 2025

ವಕ್ಫ್‌ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

ಸಂದರ್ಭ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಷರತ್ತು ಸೇರಿದಂತೆ ವಕ್ಫ್‌ (ತಿದ್ದುಪಡಿ) ಕಾಯ್ದೆ–2025ರ ಕೆಲವು ಪ್ರಮುಖ ಅಂಶಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಆದರೆ, ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಯಾವ ಕಾನೂನಿಗೆ ತಡೆ?

  • 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾನೋ ಆ ವ್ಯಕ್ತಿಯು ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ದಾನ ಕೊಡಲು ಅರ್ಹ ಎಂಬ ಅಂಶಕ್ಕೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ಈ ಅಂಶಕ್ಕೆ (ಕಾಯ್ದೆಯಲ್ಲಿರುವ ಸೆಕ್ಷನ್ 3 (1), (r) ತಡೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
  • ಇನ್ನು, ಎರಡನೆಯದಾಗಿ, ವಕ್ಫ್ ಆಸ್ತಿಯನ್ನು ಗುರುತಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸರ್ಕಾರದಿಂದ ನಿಯೋಜಿಸಲಾಗಿರುವ ಅಧಿಕಾರಿಗೆ ನೀಡಿರುವ ಅಂಶಕ್ಕೂ ತಡೆಯನ್ನು ನೀಡಲಾಗಿದೆ. ಇದು ಅಧಿಕಾರ ಪ್ರತ್ಯೇಕತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನಿತರ ತಡೆಗಳು:

  • ಆಸ್ತಿ ಅತಿಕ್ರಮಣದ ಬಗ್ಗೆ ಸಂಬಂಧಿಸಿದ ಅಧಿಕಾರಿಯು ವರದಿ ಸಲ್ಲಿಸುವವರೆಗೆ ವಕ್ಫ್ ಆಸ್ತಿ ಎಂದು ಪರಿಗಣಿಸಬಾರದು ಎಂಬ ಅಂಶ (ಕಾಯ್ದೆಯಲ್ಲಿರುವ ಸೆಕ್ಷನ್ 3C (2).
  • ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ನಿಯೋಜಿತ ಅಧಿಕಾರಿಯು (ಅಥವಾ ಜಿಲ್ಲಾಧಿಕಾರಿ) ವಕ್ಫ್ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಗುರುತಿಸಿದರೆ, ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
  • ನಿಯೋಜಿತ ಅಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ, ದಾಖಲೆಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕು. ಎಂದು ವಕ್ಫ್ ಬೋರ್ಡ್ ಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂಬ ಅಂಶ. (ಸೆಕ್ಷನ್ 3ಸಿ (4)).

ಆದೇಶದ ಪ್ರಮುಖಾಂಶಗಳು

l ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಅಂಶ ಹೊಂದಿರುವ ಸೆಕ್ಷನ್ 3(1)(ಆರ್‌)ಗೆ ಪೀಠ ತಡೆ ನೀಡಿದೆ

lಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿ ದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೂ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದೆ

l‘ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ನಿಯೋಜಿತ ಅಧಿಕಾರಿ ತನ್ನ ವರದಿ ಸಲ್ಲಿಸುವವರೆಗೂ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಬಾರದು’ ಎಂದು ಹೇಳುವ ಅಂಶಕ್ಕೂ ತಡೆ ನೀಡಿದೆ

l ನಿಯೋಜಿತ ಅಧಿಕಾರಿಯು ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೆ ತಡೆ ನೀಡಲಾಗಿದೆ

l ವಿವಾದಿತ ಆಸ್ತಿಯ ಮಾಲೀಕತ್ವದ ಬಗ್ಗೆ ನ್ಯಾಯಮಂಡಳಿಯು ಅಂತಿಮ ನಿರ್ಣಯ ತೆಗೆದುಕೊಳ್ಳುವವರೆಗೆ ಮತ್ತು ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಂದಿನ ಆದೇಶದವರೆಗೆ ಆ ಆಸ್ತಿಯ ಹಕ್ಕನ್ನು ಯಾವುದೇ ಮೂರನೇ ವ್ಯಕ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ

l ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್‌ ಪರಿಷತ್ತಿನಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯಕ್ಕೆ ಮಿತಿ ಹೇರಿದೆ

l ಕೇಂದ್ರ ವಕ್ಫ್‌ ಪರಿಷತ್ತಿನ 22 ಸದಸ್ಯರಲ್ಲಿ ಗರಿಷ್ಠ ನಾಲ್ವರು ಮುಸ್ಲಿಮೇತರರು ಇರಬಹುದು

l ರಾಜ್ಯ ವಕ್ಫ್‌ ಮಂಡಳಿಯ 11 ಸದಸ್ಯರಲ್ಲಿ ಗರಿಷ್ಠ ಮೂವರು ಮುಸ್ಲಿಮೇತರರಿಗಷ್ಟೇ ಅವಕಾಶ

ಪೀಠ ಹೇಳಿದ್ದು…

lಕಾಯ್ದೆಯು ಅಸಾಂವಿಧಾನಿಕವಾಗಿದೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದೆನಿಸಿದಾಗ ಮಾತ್ರ ಅದನ್ನು ತಡೆಹಿಡಿಯಬೇಕು

lಪೀಠವು ಒಂದು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಗಣಿಸುವಾಗ ಅದರ ನೈಜ ಸ್ವರೂಪ, ಕಾರ್ಯವ್ಯಾಪ್ತಿ ಮತ್ತು ಉದ್ದೇಶವನ್ನು ಪರಿಗಣಿಸುವುದು ಅಗತ್ಯ

lಸಂವಿಧಾನದಲ್ಲಿರುವ ಅಂಶಗಳ ಸ್ಪಷ್ಟ ಉಲ್ಲಂಘನೆಯ ಹೊರತು, ಸಂಸತ್ತು ಅಥವಾ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆಯನ್ನು ಅಮಾನ್ಯವೆಂದು ಘೋಷಿಸಲು ಸಾಧ್ಯವಿಲ್ಲ

ವಕ್ಫ್ ತಿದ್ದುಪಡಿ ಮಸೂದೆ, 2025: ಭಾರತದಲ್ಲಿ ವಕ್ಫ್ ಇತಿಹಾಸ
ಪರಿಚಯ

ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿರುವ ವಕ್ಫ್ ಆಸ್ತಿಗಳನ್ನು ನಿಯಂತ್ರಿಸಲು ಮತ್ತು ರಕ್ಷಿಸಲು ಭಾರತ ಕೆಲಸ ಮಾಡುತ್ತಿದೆ. ಮೊದಲ ಪ್ರಮುಖ ಕಾನೂನು, 1954 ರ ವಕ್ಫ್ ಕಾಯ್ದೆ, ಈ ಆಸ್ತಿಗಳ ನಿರ್ವಹಣೆಗೆ ಅಡಿಪಾಯ ಹಾಕಿತು. ಕಾಲಾನಂತರದಲ್ಲಿ, ಆಡಳಿತವನ್ನು ಸುಧಾರಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕಾನೂನುಗಳನ್ನು ನವೀಕರಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ಪಾರದರ್ಶಕತೆಯನ್ನು ಹೆಚ್ಚಿಸುವುದು, ನಿರ್ವಹಣೆಯನ್ನು ಬಲಪಡಿಸುವುದು ಮತ್ತು ವಕ್ಫ್ ಸ್ವತ್ತುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸುಧಾರಣೆಗಳು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸುತ್ತವೆ.

ಕೇಂದ್ರ ಸರ್ಕಾರ ಜಾರಿಗೆ ತಂದ 1995ರ ವಕ್ಫ್ ಕಾಯ್ದೆಯು ಪ್ರಸ್ತುತ ವಕ್ಫ್ ಆಸ್ತಿಗಳನ್ನು ನಿಯಂತ್ರಿಸುತ್ತದೆ. ಪ್ರಮುಖ ಆಡಳಿತ ಮಂಡಳಿಗಳೆಂದರೆ:

ಕೇಂದ್ರ ವಕ್ಫ್ ಕೌನ್ಸಿಲ್ (ಸಿಡಬ್ಲ್ಯೂಸಿ) – ನೀತಿಯ ಬಗ್ಗೆ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಸಲಹೆ ನೀಡುತ್ತದೆ ಆದರೆ ವಕ್ಫ್ ಆಸ್ತಿಗಳನ್ನು ನೇರವಾಗಿ ನಿಯಂತ್ರಿಸುವುದಿಲ್ಲ.
ರಾಜ್ಯ ವಕ್ಫ್ ಮಂಡಳಿಗಳು (ಎಸ್ ಡಬ್ಲ್ಯೂಬಿಗಳು) – ಪ್ರತಿ ರಾಜ್ಯದಲ್ಲಿ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದು ಮತ್ತು ರಕ್ಷಿಸುವುದು.
ವಕ್ಫ್ ನ್ಯಾಯಮಂಡಳಿಗಳು – ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಂಗ ಸಂಸ್ಥೆಗಳು.
ಈ ವ್ಯವಸ್ಥೆಯು ಉತ್ತಮ ನಿರ್ವಹಣೆ ಮತ್ತು ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸುತ್ತದೆ. ವರ್ಷಗಳಲ್ಲಿ, ಕಾನೂನು ಬದಲಾವಣೆಗಳು ವಕ್ಫ್ ಆಡಳಿತವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಉತ್ತರದಾಯಿಯನ್ನಾಗಿ ಮಾಡಿವೆ.

ಭಾರತದಲ್ಲಿ ವಕ್ಫ್ ಇತಿಹಾಸದ ಅವಲೋಕನ

ಭಾರತದಲ್ಲಿ ವಕ್ಫ್ ಆಸ್ತಿಗಳನ್ನು ಆಡಳಿತವನ್ನು ಸುಧಾರಿಸಲು ಮತ್ತು ದುರಾಡಳಿತವನ್ನು ತಡೆಗಟ್ಟಲು ಹಲವಾರು ಕಾನೂನುಗಳಿಂದ ನಿಯಂತ್ರಿಸಲಾಗಿದೆ:

ಮುಸಲ್ಮಾನ ವಕ್ಫ್ ಮಾನ್ಯತೆ ಕಾಯ್ದೆ, 1913:
ಕುಟುಂಬದ ಲಾಭಕ್ಕಾಗಿ ವಕ್ಫ್ ಗಳನ್ನು ರಚಿಸಲು ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟಿತು, ಅಂತಿಮವಾಗಿ ದತ್ತಿ ಉದ್ದೇಶಗಳಿಗೆ ಕಾರಣವಾಯಿತು.
ವಕ್ಫ್ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು ಆದರೆ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.

  1. ಮುಸಲ್ಮಾನ್ ವಕ್ಫ್ ಕಾಯ್ದೆ, 1923: ವಕ್ಫ್ ನಿರ್ವಹಣೆಯಲ್ಲಿ ಸರಿಯಾದ ಲೆಕ್ಕಪತ್ರ ಮತ್ತು ಪಾರದರ್ಶಕತೆಗಾಗಿ ನಿಯಮಗಳನ್ನು ಪರಿಚಯಿಸಿತು.
  2. ಮುಸಲ್ಮಾನ ವಕ್ಫ್ ಮಾನ್ಯತಾ ಕಾಯ್ದೆ, 1930: ಕುಟುಂಬ ವಕ್ಫ್ ಗಳ ಕಾನೂನು ಸಿಂಧುತ್ವವನ್ನು ಬಲಪಡಿಸಿತು, 1913 ರ ಕಾಯ್ದೆಗೆ ಕಾನೂನು ಬೆಂಬಲವನ್ನು ನೀಡಿತು.
  3. ವಕ್ಫ್ ಕಾಯ್ದೆ, 1954:

ವಕ್ಫ್ ಆಸ್ತಿಗಳ ಮೇಲ್ವಿಚಾರಣೆಗಾಗಿ ಮೊದಲ ಬಾರಿಗೆ ರಾಜ್ಯ ವಕ್ಫ್ ಮಂಡಳಿಗಳನ್ನು (ಎಸ್ ಡಬ್ಲ್ಯೂಬಿ) ರಚಿಸಲಾಯಿತು.
ಭಾರತದ ಸ್ವಾತಂತ್ರ್ಯದ ನಂತರ ವಕ್ಫ್ ನಿರ್ವಹಣೆಯನ್ನು ಬಲಪಡಿಸಲಾಯಿತು.
ರಾಜ್ಯ ವಕ್ಫ್ ಮಂಡಳಿಗಳ ಮೇಲ್ವಿಚಾರಣೆಗಾಗಿ 1964 ರಲ್ಲಿ ಸೆಂಟ್ರಲ್ ವಕ್ಫ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು ಮತ್ತು ವಕ್ಫ್ ಗಳ ಕೇಂದ್ರೀಕರಣಕ್ಕೆ ಮಾರ್ಗವನ್ನು ಒದಗಿಸಿದರು.
ಈ ಕೇಂದ್ರೀಯ ಸಂಸ್ಥೆಯು ವಕ್ಫ್ ಕಾಯ್ದೆ, 1954 ರ ಸೆಕ್ಷನ್ 9 (1) ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾದ ವಿವಿಧ ರಾಜ್ಯ ವಕ್ಫ್ ಮಂಡಳಿಗಳ ಅಡಿಯಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ.

  1. ವಕ್ಫ್ ಕಾಯ್ದೆ, 1954 (1959, 1964, 1969, ಮತ್ತು 1984) ಗೆ ತಿದ್ದುಪಡಿಗಳು: ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳ ಆಡಳಿತವನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದ್ದವು.
  2. ವಕ್ಫ್ ಕಾಯ್ದೆ, 1995: ಈ ಸಮಗ್ರ ಕಾಯ್ದೆಯು 1954 ರ ಕಾಯ್ದೆ ಮತ್ತು ಅದರ ತಿದ್ದುಪಡಿಗಳನ್ನು ರದ್ದುಗೊಳಿಸಿತು:

ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತವನ್ನು ನಿಯಂತ್ರಿಸಲು ಇದನ್ನು ಜಾರಿಗೆ ತರಲಾಯಿತು.
ಇದು ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಮಂಡಳಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅಧಿಕಾರ ಮತ್ತು ಕಾರ್ಯಗಳನ್ನು ಮತ್ತು ಮುತವಳ್ಳಿಯ ಕರ್ತವ್ಯಗಳನ್ನು ಸಹ ಒದಗಿಸುತ್ತದೆ.
ವಕ್ಫ್ ನ್ಯಾಯಮಂಡಳಿಗಳು, ಸಿವಿಲ್ ನ್ಯಾಯಾಲಯಗಳಿಗೆ ಹೋಲುವ ಅಧಿಕಾರಗಳನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳನ್ನು ರಚಿಸಿದರು.
ನ್ಯಾಯಾಧಿಕರಣದ ತೀರ್ಪುಗಳು ಅಂತಿಮ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುವುದಿಲ್ಲ.

  1. ವಕ್ಫ್ (ತಿದ್ದುಪಡಿ) ಕಾಯ್ದೆ, 2013 ಈ ಕೆಳಗಿನವುಗಳನ್ನು ಒಳಗೊಂಡಂತೆ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸಿತು:

ಮುಸ್ಲಿಂ ಕಾನೂನು ತಜ್ಞರು ಸೇರಿದಂತೆ ಮೂವರು ಸದಸ್ಯರ ವಕ್ಫ್ ನ್ಯಾಯಮಂಡಳಿಗಳನ್ನು ರಚಿಸಿದರು.
ಪ್ರತಿ ರಾಜ್ಯ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳಾ ಸದಸ್ಯರ ಅಗತ್ಯವಿತ್ತು.
ವಕ್ಫ್ ಆಸ್ತಿಗಳ ಮಾರಾಟ ಅಥವಾ ಉಡುಗೊರೆಯನ್ನು ನಿಷೇಧಿಸಲಾಯಿತು.
ಉತ್ತಮ ಬಳಕೆಗಾಗಿ ವಕ್ಫ್ ಆಸ್ತಿಗಳ ಗುತ್ತಿಗೆ ಅವಧಿಯನ್ನು 3 ವರ್ಷದಿಂದ 30 ವರ್ಷಗಳಿಗೆ ಹೆಚ್ಚಿಸಲಾಗಿದೆ.

  1. ವಕ್ಫ್ (ತಿದ್ದುಪಡಿ) ಮಸೂದೆ, 2025, ಮತ್ತು ಮುಸಲ್ಮಾನ ವಕ್ಫ್ (ರದ್ದತಿ) ಮಸೂದೆ, 2024

ವಕ್ಫ್ ಆಡಳಿತವನ್ನು ಆಧುನೀಕರಿಸುವುದು, ಕಾನೂನು ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
1995ರ ಕಾಯ್ದೆ ಮತ್ತು 2013ರ ತಿದ್ದುಪಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಯೋಜನೆಗಳು

ಕ್ವಾಮಿ ವಕ್ಫ್ ಬೋರ್ಡ್ ತರಾಕಿಯಾತಿ ಯೋಜನೆ (ಕ್ಯೂಡಬ್ಲ್ಯೂಬಿಟಿಎಸ್) ಮತ್ತು ಶಹರಿ ವಕ್ಫ್ ಸಂಪತ್ತಿ ವಿಕಾಸ್ ಯೋಜನೆ (ಎಸ್ ಡಬ್ಲ್ಯೂಎಸ್ ವಿವೈ) ಅನ್ನು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ (ಎಂಒಎಂಎ) ಮೂಲಕ ಜಾರಿಗೆ ತರಲಾಗುತ್ತಿದೆ. ಈ ಎರಡು ಯೋಜನೆಗಳು ರಾಜ್ಯ ವಕ್ಫ್ ಮಂಡಳಿಗಳ ಯಾಂತ್ರೀಕರಣ ಮತ್ತು ಆಧುನೀಕರಣಕ್ಕಾಗಿವೆ.

ಕ್ಯೂಡಬ್ಲ್ಯೂಬಿಟಿಎಸ್ ಅಡಿಯಲ್ಲಿ, ವಕ್ಫ್ ಆಸ್ತಿಗಳ ದಾಖಲೆಗಳನ್ನು ಗಣಕೀಕರಣಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಮತ್ತು ವಕ್ಫ್ ಮಂಡಳಿಗಳ ಆಡಳಿತವನ್ನು ಹೆಚ್ಚಿಸಲು ಮಾನವಶಕ್ತಿಯನ್ನು ನಿಯೋಜಿಸಲು ಸಿಡಬ್ಲ್ಯೂಸಿ ಮೂಲಕ ರಾಜ್ಯ ವಕ್ಫ್ ಮಂಡಳಿಗಳಿಗೆ ಸರ್ಕಾರಿ ಅನುದಾನ (ಜಿಐಎ) ಒದಗಿಸಲಾಗುತ್ತದೆ.
ವಕ್ಫ್ ಆಸ್ತಿಗಳಲ್ಲಿ ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಎಸ್ ಡಬ್ಲ್ಯೂಎಸ್ ವಿವೈ ವಕ್ಫ್ ಮಂಡಳಿಗಳು ಮತ್ತು ಸಂಸ್ಥೆಗಳಿಗೆ ಬಡ್ಡಿರಹಿತ ಸಾಲವನ್ನು ನೀಡುತ್ತದೆ.
2019-20 ರಿಂದ 2023-24 ರವರೆಗೆ ಕ್ಯೂಡಬ್ಲ್ಯೂಬಿಟಿಎಸ್ ಮತ್ತು ಎಸ್ ಡಬ್ಲ್ಯೂಎಸ್ ವಿವೈ ಅಡಿಯಲ್ಲಿ ಕ್ರಮವಾಗಿ 23.87 ಕೋಟಿ ಮತ್ತು 7.16 ಕೋಟಿ ರೂ.

ತೀರ್ಮಾನ:

1913 ರಿಂದ 2024 ರವರೆಗೆ ಭಾರತದಲ್ಲಿ ವಕ್ಫ್ ಕಾನೂನುಗಳಲ್ಲಿನ ಬದಲಾವಣೆಗಳು ಸರಿಯಾದ ಆಡಳಿತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವಾಗ ಸಮಾಜದ ಪ್ರಯೋಜನಕ್ಕಾಗಿ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಬಲವಾದ ಪ್ರಯತ್ನವನ್ನು ತೋರಿಸುತ್ತವೆ. ಪ್ರತಿಯೊಂದು ಕಾನೂನು ವಕ್ಫ್ ದತ್ತಿಗಳ ಮುಖ್ಯ ಉದ್ದೇಶವನ್ನು ಉಳಿಸಿಕೊಂಡು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ವಕ್ಫ್ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಅಂತರ್ಗತಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

‘ಅಕ್ರಮವಿದ್ದರೆ ಎಸ್‌ಐಆರ್‌ ರದ್ದು’

ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸಮಯದಲ್ಲಿ ಕೇಂದ್ರ ಚುನಾವಣಾ ಆಯೋಗ ಅಳವಡಿಸಿ ಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಸಂಪೂರ್ಣ ಪ್ರಕ್ರಿಯೆ ಯನ್ನೇ ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

  • ಬಿಹಾರದ ಎಸ್‌ಐಆರ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್‌ 7ರಂದು ನಡೆಸುವುದಾಗಿ ನ್ಯಾಯಮೂರ್ತಿ ಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿತು. ಈ ಪ್ರಕ್ರಿಯೆಯ ಕುರಿತು ಅರೆಬರೆ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದೂ ಪೀಠ ಹೇಳಿತು. 

ವಕೀಲರ ವಾದವೇನು?

  • ಎಸ್‌ಐಆರ್‌ ನ ಸಂಪೂರ್ಣ ‍ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಅದನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ
  • ಬಫರ್ಝೋನ್ಕಡಿತ ಮಸೂದೆ ವಾಪಸ್

ಸಂದರ್ಭ:  ಕೆರೆಗಳ ಸಂರಕ್ಷಿತ ಪ್ರದೇಶವನ್ನು (ಬಫರ್‌ ಝೋನ್‌) ಕಡಿಮೆ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ’ಯನ್ನು ಸ್ಪಷ್ಟೀಕರಣ ಕೇಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

  • ಕೆರೆಗಳು ಮತ್ತು ರಾಜಕಾಲುವೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ ವನ್ನು ನಿಗದಿಪಡಿಸಲು ಹಾಗೂ ಬಫರ್‌ಝೋನ್‌ನಲ್ಲಿ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಗಳನ್ನು ಕೈಗೊಳ್ಳಲು ಮಸೂದೆ ತಿದ್ದುಪಡಿಗೆ ಸರ್ಕಾರ ಮುಂದಾಗಿತ್ತು.
  • ಆದರೆ, ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಿಕರ ಸಂಘವಾದ ‘ಬೆಂಗಳೂರು ಟೌನ್ ಹಾಲ್‌’, ರಾಜ್ಯಪಾಲರಿಗೆ ಪತ್ರ ಬರೆದು ಮಸೂದೆಗೆ ಅಂಕಿತ ಹಾಕದಂತೆ ಮನವಿ ಮಾಡಿತ್ತು.
  • ‘ಕೆರೆಗಳ ಬಫರ್ ಝೋನ್‌ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ. ಪರಿಸರ ಸಮತೋಲನ ಕಾಪಾಡಲು 30 ಮೀಟರ್‌ ಬದಲು 300 ಮೀಟರ್‌ಗೆ ಬಫರ್ ಝೋನ್‌ ಹೆಚ್ಚಿಸುವ ಅಗತ್ಯವಿದೆ’ ಎಂದು ಸಂಘವು ಪತ್ರದಲ್ಲಿ ಪ್ರತಿಪಾದಿಸಿತ್ತು.
  • ‘ಬೆಂಗಳೂರು ಟೌನ್ ಹಾಲ್‌’ ಸಂಘದ ಪತ್ರದಲ್ಲಿದ್ದ ಅಂಶಗಳನ್ನು ಉಲ್ಲೇಖಿಸಿ ಸ್ಪಷ್ಟೀಕರಣ ಕೇಳಿರುವ ರಾಜ್ಯಪಾಲರು, ಆ ಅಂಶಗಳಿಗೆ ವಿವರವಾದ ಸ್ಪಷ್ಟನೆಗಳ ಸಹಿತ ಕಡತ ಮತ್ತೊಮ್ಮೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
  • ಮತಾಂತರಗೊಂಡವರ ಜಾತಿ ಯಾವುದು?

ಸಂದರ್ಭ: ಜಾತಿ ತಾರತಮ್ಯ, ಶೋಷಣೆಗೆ ಗುರಿಯಾಗಿದ್ದ ದಲಿತರು ಸೇರಿದಂತೆ ದುರ್ಬಲ ಜಾತಿಗಳ ಲಕ್ಷಾಂತರ ಮಂದಿ ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ದಲಿತರು ಮತಾಂತರವಾದ ನಂತರವೂ ತಾರತಮ್ಯ, ಸಾಮಾಜಿಕ–ಆರ್ಥಿಕ ಅಸಮಾನತೆ ಎದುರಿಸುತ್ತಿದ್ದಾರೆ. ಹೀಗಾಗಿ ತಮ್ಮನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದೇ ಪರಿಗಣಿಸಿ, ಸೌಲಭ್ಯಗಳನ್ನು ನೀಡಬೇಕು ಎಂದು ಹಲವು ದಶಕಗಳಿಂದ ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರು ಹೋರಾಟ ಮಾಡುತ್ತಿದ್ದಾರೆ.

  • ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಎಸ್ಸಿ ಸಮು ದಾಯಗಳನ್ನು, 342ನೇ ವಿಧಿ ಅಡಿಯಲ್ಲಿ ಪರಿಶಿಷ್ಟ ಪಂಗಡಗಳನ್ನು ಮತ್ತು 340ನೇ ವಿಧಿಯಲ್ಲಿ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸಲಾಗುತ್ತಿದೆ.
  • ಎಸ್ಸಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸುವ ಇಲ್ಲವೇ ತೆಗೆಯುವ ಅಧಿಕಾರ ಸಂಸತ್ಗೆ ಮಾತ್ರ ಇದೆ. ಸಂಸತ್ತಿನ ನಿರ್ಧಾರದ ಬಳಿಕ ರಾಷ್ಟ್ರಪತಿಯವರು ಸಹಿ ಹಾಕಿ ಅದನ್ನು ಅಧಿಕೃತಗೊಳಿಸುತ್ತಾರೆ.
  • ಒಬ್ಬ ಎಸ್‌ಸಿ ವ್ಯಕ್ತಿಯು ಹಿಂದೂ ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರಗೊಂಡರೆ, ಅವರನ್ನು ಎಸ್‌ಸಿ ಎಂದು ಪರಿಗಣಿಸಲಾಗದು ಎಂದು 341ನೇ ವಿಧಿಯು ಹೇಳುತ್ತದೆ.
  • 1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸುವ ಬಗ್ಗೆ ಯಾವುದೇ ತಿದ್ದುಪಡಿ ಆಗಿಲ್ಲ.
  • ಒಬಿಸಿ ಮೀಸಲಾತಿ: ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಎಸ್‌ಸಿಗಳನ್ನು ಕೆಲವು ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂದರೆ, ರಾಜ್ಯ ಸರ್ಕಾರಗಳು ಬಯಸಿದರೆ, ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಮರನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಬಹುದು. ಆದರೆ, ಈ ಎರಡೂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸಬಹುದೇ ಎನ್ನುವ ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.
  • ಧರ್ಮದ ಆಧಾರದಲ್ಲಿ ಎಸ್‌ಸಿಗಳನ್ನು ಗುರುತಿಸುವ 1950ರ ಸಾಂವಿಧಾನಿಕ ಆದೇಶವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎನ್ನುವುದು ದಲಿತ ಕ್ರೈಸ್ತ ಸಂಘಟನೆಗಳ ಆರೋಪವಾಗಿದೆ. 15(1) ವಿಧಿಗೆ (ಧರ್ಮದ ಹೆಸರಿನಲ್ಲಿ ತಾರತಮ್ಯ ಸಲ್ಲದು) ಆದೇಶವು ವಿರುದ್ಧವಾಗಿದೆ ಎನ್ನುವುದು ಅವರ ವಾದ. ಹೀಗಾಗಿ ದಲಿತರು ಮತಾಂತರಗೊಂಡರೂ ಅವರ‌‌ನ್ನು ಎಸ್‌ಸಿ ಎಂದೇ ಗುರುತಿಸಬೇಕು ಎನ್ನುವುದು ಅವರ ಆಗ್ರಹ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಸಂವಿಧಾನ ಹೇಳುತ್ತಿದ್ದು, ಮೀಸಲಾತಿ ನಿರಾಕರಿಸಲೂ ಧರ್ಮ ಆಧಾರವಾಗಬಾರದು ಎನ್ನುವುದು ಅವರ ಪ್ರತಿಪಾದನೆ.
  • 1983ರ ಸೂಸೈ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ ದಲ್ಲಿ 1950ರ ಸಾಂವಿಧಾನಿಕ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮತಾಂತರದ ನಂತರವೂ ಜಾತಿ ಮುಂದುವರಿ ಯುತ್ತದೆ ಎನ್ನುವುದನ್ನು ಆ ಪ್ರಕರಣದ ತೀರ್ಪಿನಲ್ಲಿ ಸು‍ಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆದರೆ, ಮತಾಂತರಗೊಂಡ ದಲಿತರು ಹಿಂದೂ ದಲಿತರಷ್ಟೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಸೂಕ್ತ ಆಧಾರ ಇಲ್ಲ ಎಂದಿತು. ಮತಾಂತರಗೊಂಡವರ ಶೋಷಣೆಯ ಸ್ವರೂಪ ಏನು ಅನ್ನುವುದರ ಬಗ್ಗೆ ಸಾಮಾಜಿಕ–ಆರ್ಥಿಕ ದತ್ತಾಂಶ ಒದಗಿಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು.
  • ಅದರ ನಂತರ ಈ ವಿಚಾರದಲ್ಲಿ ಸಾಕಷ್ಟು ಕಾನೂನು ಹೋರಾಟ, ಶಾಸಕಾಂಗದ ಪ್ರಯತ್ನಗಳು ನಡೆದಿವೆ. ಆದರೆ, ಇದುವರೆಗೂ ಯಾವುದೇ ಫಲಶ್ರುತಿ ಸಿಕ್ಕಿಲ್ಲ. ಸಮಾನತೆ, ಘನತೆಯನ್ನು ಅರಸಿ ಮತಾಂತರಗೊಂಡ ದಲಿತರು ಮತ್ತು ಇತರ ದುರ್ಬಲ ಜಾತಿಗಳ ಜನರು, ಆ ಕಾರಣಕ್ಕಾಗಿ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಒಂದು ಮಾನವೀಯ ವಿಚಾರವನ್ನಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯವೂ ಇದೆ.

ಹೋರಾಟಕ್ಕೆ ದಶಕಗಳ ಇತಿಹಾಸ

  • ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಕೂಡ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸವಿದೆ. ಈಗಲೂ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಮತಾಂತರಗೊಂಡವರಿಗೂ ಎಸ್‌ಸಿ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತಲೇ ಬಂದಿದೆ. ದಲಿತ ಕ್ರೈಸ್ತರು, ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಅಭಿಪ್ರಾಯಪಟ್ಟ ಉದಾಹರಣೆಗಳೂ ಇವೆ. ‌
  • lಭಾರತೀಯ ರಿಜಿಸ್ಟ್ರಾರ್‌ ಜನರಲ್‌ (ಆರ್‌ಜಿಐ) ಕಚೇರಿಯು ಆರಂಭದಿಂದಲೂ ಹಿಂದೂ ಅಥವಾ ಸಿಖ್‌ ಧರ್ಮದವರನ್ನು ಬಿಟ್ಟು ಉಳಿದವರನ್ನು ಎಸ್‌ಸಿ ವ್ಯಾಪ್ತಿಗೆ ತರುವುದನ್ನು ಆಕ್ಷೇಪಿಸುತ್ತಲೇ ಇದೆ. ಅಸ್ಪೃಶ್ಯತೆ ಆಚರಣೆಯಿಂದ ಸಾಮಾಜಿಕವಾಗಿ ತಾರತಮ್ಯ ಅನುಭವಿಸುತ್ತಿರುವ ಸಮುದಾಯಗಳಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುತ್ತದೆ ಎಂದು 1978ರಲ್ಲಿ ಅದು ಅಭಿಪ್ರಾಯ ಪಟ್ಟಿತ್ತು
  • l2001ರಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪವಾದಾಗಲೂ ಆರ್‌ಜಿಐ ತನ್ನ ಹಿಂದಿನ ಅಭಿಪ್ರಾಯವನ್ನೇ ವ್ಯಕ್ತಪಡಿಸಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಭಿನ್ನವಾದ ಜಾತಿಯ ಗುಂಪುಗಳಿಗೆ ಸೇರಿದವರು. ಈ ಕಾರಣದಿಂದ ‘ಒಂದು ಜನಾಂಗೀಯ ಗುಂಪಿ’ಗೆ ಸೇರಿದವರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಜಿಐ ಪ್ರತಿಪಾದಿಸಿತ್ತು. ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮ ಮತ್ತು ಅದರ ಕವಲುಗಳಲ್ಲಿ ಮಾತ್ರ ಇದೆ. ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಂತಹ ಆಚರಣೆ ಇಲ್ಲದಿರುವುದರಿಂದ, ಪರಿಶಿಷ್ಟ ಜಾತಿಯವರು ಈ ಧರ್ಮಗಳಿಗೆ ಮತಾಂತರಗೊಂಡಾಗ ಅವರ ಎಸ್‌ಸಿ ಮಾನ್ಯತೆ ಹೋಗುತ್ತದೆ ಎಂಬುದು ಅದರ ಮತ್ತೊಂದು ವಾದ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಕೂಡ ಇದೇ ವಾದವನ್ನು ಮಂಡಿಸಿದೆ
  • lದಲಿತ ಕ್ರೈಸ್ತರನ್ನು ಎಸ್‌ಸಿಗೆ ಸೇರಿದವರು ಎಂದು ಪರಿಗಣಿಸುವ ಪ್ರಸ್ತಾವವನ್ನು 2019ರಲ್ಲಿ ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಅವರನ್ನು ಎಸ್‌ಸಿ ವರ್ಗದಿಂದ ಹೊರಗಿಡುವುದಕ್ಕೆ 1936ರ ಬ್ರಿಟಿಷ್‌ ಆಡಳಿತದ ಆದೇಶವನ್ನು ಉಲ್ಲೇಖಿಸಿತ್ತು. ಬ್ರಿಟಿಷ್‌ ಸರ್ಕಾರವು ಜಾತಿಗಳನ್ನು ಪಟ್ಟಿ ಮಾಡುವಾಗ ‘ಶೋಷಿತ ವರ್ಗಗಳು’ ಎಂಬ ವರ್ಗೀಕರಣ ಮಾಡಿತ್ತು. ಆದರೆ, ಈ ವರ್ಗಗಳಲ್ಲಿರುವ ಜಾತಿಯಿಂದ ಭಾರತೀಯ ಕ್ರೈಸ್ತರನ್ನು ಹೊರಗಿಟ್ಟಿತ್ತು
  • lದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರಿಗೆ ಎಸ್‌ಸಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವವರು, 2007ರಲ್ಲಿ ಯುಪಿಎ ಸರ್ಕಾರ ರಚಿಸಿದ್ದ ರಂಗನಾಥ್‌ ಮಿಶ್ರಾ ನೇತೃತ್ವದ ಸಮಿತಿ ಮಾಡಿದ ಶಿಫಾರಸುಗಳನ್ನು ಉಲ್ಲೇಖಿಸುತ್ತಿದ್ದಾರೆ. ‘ಜನರು ಸ್ವಯಂಪ್ರೇರಿತರಾಗಿ ಮತಾಂತರಗೊಂಡಿರುವುದು ಅವರು ಹೊಂದಿರುವ ಎಸ್‌ಸಿ ಮಾನ್ಯತೆ ಮೇಲೆ ಪರಿಣಾಮ ಬೀರಬಾರದು’ ಎಂದು ಸಮಿತಿ ಹೇಳಿತ್ತು. ಆದರೆ, ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಎನ್‌ಡಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು
  • lಕಳೆದ ವರ್ಷ ಪ್ರಕರಣವೊಂದರಲ್ಲಿ ತಮಿಳುನಾಡಿನ ಮಹಿಳೆಯೊಬ್ಬರಿಗೆ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಆ ಮಹಿಳೆಯ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದು ವಿಚಾರಣೆ ವೇಳೆ ದೃಢಪಟ್ಟಿತ್ತು
  • lಕ್ರೈಸ್ತ ಧರ್ಮಕ್ಕೆ ಮತಾಂತರ ಆದ ತಕ್ಷಣ ಜನರು ಪರಿಶಿಷ್ಟ ಜಾತಿಯ ಮಾನ್ಯತೆ ಕಳೆದುಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್‌ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು
  • ಸಗಟು ಹಣದುಬ್ಬರ ಏರಿಕೆ: ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

ಸಂದರ್ಭ: ದೇಶದ ಸಗಟು  ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • ಆಹಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಸಗಟು ಹಣದುಬ್ಬರವು ಏರಿಕೆಯಾಗಿದೆ ಎಂದು ಅದು ತಿಳಿಸಿದೆ.
  • ಸಗಟು ಹಣದುಬ್ಬರ ಪ್ರಮಾಣವು ಜುಲೈ ಮತ್ತು ಜೂನ್ನಲ್ಲಿ ಕ್ರಮವಾಗಿ ಶೇ (–)0.58 ಮತ್ತು ಶೇ (–) 0.19ರಷ್ಟಿತ್ತು. ಏಪ್ರಿಲ್ನಲ್ಲಿ ಇದು ಶೇ 0.85ರಷ್ಟಿತ್ತು. ಕಳೆದ ಆಗಸ್ಟ್ನಲ್ಲಿ ಶೇ 1.25ರಷ್ಟು ಇತ್ತು ಎಂದು ತಿಳಿಸಿದೆ.
  • ಆಹಾರ ಪದಾರ್ಥಗಳು, ತಯಾರಿಕಾ ವಲಯದ ವಸ್ತುಗಳು, ಆಹಾರೇತರ ಉತ್ಪನ್ನಗಳು, ಸಾರಿಗೆ ಉಪಕರಣಗಳ ಬೆಲೆ ಹೆಚ್ಚಳವಾಗಿದೆ. ಇದು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ತಿಳಿಸಿದೆ.
  • ಜುಲೈನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆ ಪ್ರಮಾಣ ಶೇ 6.29ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.06ಕ್ಕೆ ತಗ್ಗಿದೆ. ತರಕಾರಿಗಳು ಮತ್ತು ಧಾನ್ಯಗಳ ಬೆಲೆ ಇಳಿಕೆ ಪ್ರಮಾಣ ಕ್ರಮವಾಗಿ ಶೇ 14.18 ಮತ್ತು ಶೇ 14.85ರಷ್ಟು ಆಗಿದೆ. ಜುಲೈನಲ್ಲಿ ಇದು ಕ್ರಮವಾಗಿ ಶೇ 28.96 ಮತ್ತು ಶೇ 15.12ರಷ್ಟು ಇತ್ತು.
  • ಜಿಎಸ್‌ಟಿ ಪರಿಷ್ಕರಣೆಯಿಂದ ಹಣದುಬ್ಬರವು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.
  • ಕಚ್ಚಾ ತೈಲ, ಸರಕುಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆಯಿಂದಾಗಿ ಸೆಪ್ಟೆಂಬರ್‌ ನಲ್ಲಿ ಸಗಟು ಹಣದುಬ್ಬರವು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಐಸಿಆರ್‌ಎ ಅಂದಾಜಿಸಿದೆ.
  • ಆಹಾರ ಪದಾರ್ಥಗಳ ಬೆಲೆ ಏರಿಕೆ ಯಿಂದ ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ 2.07ರಷ್ಟು ದಾಖಲಾಗಿತ್ತು.
  • ಅಮೆರಿಕಕ್ಕೆ ರಫ್ತು ಆಗಸ್ಟ್ನಲ್ಲಿ ಇಳಿಕೆ

ಸಂದರ್ಭ: ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತುಗಳ ಪ್ರಮಾಣವು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇಕಡ 14ರಷ್ಟು ಕಡಿಮೆ ಆಗಿದೆ.

  • ಭಾರತದ ಸರಕುಗಳ ಮೇಲೆ ಅಮೆರಿಕವು ಆಗಸ್ಟ್‌ನಿಂದ ಶೇ 50ರಷ್ಟು ತೆರಿಗೆ ವಿಧಿಸುತ್ತಿದೆ. ಆಗಸ್ಟ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ ₹60,464 ಕೋಟಿ ಮೌಲ್ಯದ ಸರಕುಗಳು, ಸೇವೆಗಳು ರಫ್ತಾಗಿವೆ. ಜುಲೈನಲ್ಲಿ ರಫ್ತು ಮೊತ್ತವು ₹70,512 ಕೋಟಿ ಆಗಿತ್ತು.
  • ಅಮೆರಿಕಕ್ಕೆ ಆಗುವ ರಫ್ತಿನ ಮೊತ್ತ ಕಡಿಮೆ ಆಗಿದ್ದರೂ, ಭಾರತದ ರಫ್ತು ಪಟ್ಟಿಯಲ್ಲಿ ಅಮೆರಿಕವು ಆಗಸ್ಟ್‌ನಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
  • ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ರಫ್ತು ಪ್ರಮಾಣವು ಶೇ 7.15ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.
  • ಅಮೆರಿಕದ ನಂತರದ ಸ್ಥಾನದಲ್ಲಿ ಯುಎಇ, ನೆದರ್ಲೆಂಡ್ಸ್‌, ಚೀನಾ, ಬ್ರಿಟನ್ ಇವೆ.
  • ಆಗಸ್ಟ್‌ 7ರಿಂದ ಅನ್ವಯ ಆಗುವಂತೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕವು ಆಗಸ್ಟ್‌ 27ರಿಂದ ಅನ್ವಯ ಆಗುವಂತೆ ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ವಿಧಿಸುತ್ತಿದೆ.
  • ಆರ್ಇಐಟಿಈಕ್ವಿಟಿಎಂದು ಪರಿಗಣನೆ

ಸಂದರ್ಭ: ಮ್ಯೂಚುವಲ್‌ ಫಂಡ್‌ಗಳ ಪಾಲಿಗೆ ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳನ್ನು (ಆರ್‌ಇಐಟಿ) ‘ಈಕ್ವಿಟಿ’ ಎಂದು ವರ್ಗೀಕರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತೀರ್ಮಾನಿಸಿರುವುದು ಪ್ರಗತಿಪರ ನಡೆ ಎಂದು ಉದ್ಯಮ ವಲಯ ಹೇಳಿದೆ.

  • ಸೆಬಿ ನಡೆಯು ಆರ್‌ಇಐಟಿಗಳಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
  • ಆರ್‌ಇಐಟಿಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಸೆಬಿ ಕಳೆದ ವಾರ, ಸೆಬಿ (ಮ್ಯೂಚುವಲ್ಫಂಡ್ಸ್‌) ನಿಯಮ – 1996’ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಿದೆ. ತಿದ್ದುಪಡಿ ತಂದು ಆರ್‌ಇಐಟಿಗಳನ್ನು ‘ಈಕ್ವಿಟಿ’ ಎಂದು ವರ್ಗೀಕರಿಸಲಾಗುತ್ತದೆ. ಆದರೆ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ ವರ್ಗೀಕರಣವನ್ನು ‘ಹೈಬ್ರಿಡ್’ ಎಂದೇ ಉಳಿಸಿಕೊಳ್ಳಲಾಗುತ್ತದೆ.
  • ಸೆಬಿ ಕೈಗೊಂಡಿರುವ ತೀರ್ಮಾನದ ಪರಿಣಾಮವಾಗಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗುತ್ತದೆ, ಇನ್ನಷ್ಟು ಹೆಚ್ಚು ಆರ್‌ಇಐಟಿಗಳು ಭಾರತದ ಷೇರುಪೇಟೆ ಗಳಲ್ಲಿ ನೋಂದಾಯಿತವಾಗಲು ಇದು ಉತ್ತೇಜನ ನೀಡುತ್ತದೆ ಎಂದು ಭಾರತೀಯ ಆರ್‌ಇಐಟಿಗಳ ಸಂಘಟನೆಯು (ಐಆರ್‌ಎ) ಹೇಳಿದೆ. ಷೇರುಪೇಟೆ ನೋಂದಾಯಿತ ಆರ್‌ಇಐಟಿಗಳ ಪ್ರತಿನಿಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ಆರ್‌ಇಐಟಿಗಳು ಆದಾಯ ತಂದುಕೊಡುವ ರಿಯಲ್‌ ಎಸ್ಟೇಟ್‌ ಆಸ್ತಿಗಳ ಮಾಲೀಕತ್ವ ಹೊಂದಿರುತ್ತವೆ ಅಥವಾ ಅಂತಹ ಆಸ್ತಿಗಳನ್ನು ನಿರ್ವ ಹಿಸುತ್ತಿರುತ್ತವೆ. ಅವು ಹೂಡಿಕೆದಾರರಿಗೆ ಆಸ್ತಿಯನ್ನು ನೇರವಾಗಿ ಖರೀದಿಸದೆಯೇ ಅವುಗಳ ಆದಾಯದಲ್ಲಿ ಒಂದು ಪಾಲನ್ನು ಪಡೆದುಕೊಳ್ಳಲು ನೆರವಾಗುತ್ತವೆ.
  • ಜಾಗತಿಕ ಮಟ್ಟದಲ್ಲಿ ಕೂಡ ಆರ್‌ಇಐಟಿಗಳು ಈಕ್ವಿಟಿ ಸೂಚ್ಯಂಕಗಳ ಭಾಗವಾಗಿವೆ, ಸೆಬಿ ಈಗ ತೆಗೆದು ಕೊಂಡಿ ರುವ ತೀರ್ಮಾನವು ಪ್ರಗತಿಪರವಾದುದು ಎಂದು ಐಆರ್‌ಎ ಹೇಳಿದೆ. ದೇಶದಲ್ಲಿ ಈಗ ಐದು ಆರ್‌ಇಐಟಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ.
  • ವಂತಾರಕ್ಕೆ ಎಸ್ಐಟಿ ಕ್ಲೀನ್ಚಿಟ್

ಸಂದರ್ಭ: ವನ್ಯಜೀವಿ ರಕ್ಷ‌ಣಾ ಮತ್ತು ಪುನರ್ವಸತಿ ಕೇಂದ್ರ ‘ವಂತಾರ’ದ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಸುಪ್ರೀಂ ಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ.

  • ‘ಅನಂತ್‌ ಅಂಬಾನಿ ಅವರು ಜಾಮ್‌ನಗರದಲ್ಲಿ ನಡೆಸುತ್ತಿರುವ ‘ವಂತಾರ’ದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಎಸ್‌ಐಟಿ ವರದಿ ನೀಡಿದ್ದು, ಅದನ್ನು ಸ್ವೀಕರಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
  • ‘ವಂತಾರದ ಕಾರ್ಯಚಟುವಟಿಕೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿ ನೀಡಿರು‌ವ ವರದಿ ತೃಪ್ತಿ ನೀಡಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿ ದ್ದೇವೆ’ ಎಂದು ‌ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್, ಪಿ.ಬಿ.ವರಾಳೆ ಅವರ ಪೀಠ ತಿಳಿಸಿದೆ.
  • ‘ಇಂತಹ ಆರೋಪಗಳನ್ನು ಇನ್ನೂ ಮುಂದೆ ಪರಿಗಣಿಸಲಾಗುವುದಿಲ್ಲ. ತಜ್ಞರ ಸಹಕಾರದೊಂದಿಗೆ ತನಿಖಾ ತಂಡವು ಎಲ್ಲ ವಿಧದಲ್ಲಿ ಪರಿಶೀಲನೆ ನಡೆಸಿದೆ. ತನಿಖಾ ತಂಡ ನೀಡಿರುವ ವರದಿಯ ಆಧಾರದಲ್ಲಿಯೇ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ. ಈ ವರದಿಯ ಶಿಫಾರಸು ಮತ್ತು ಸಲಹೆಗಳ ಆಧಾರದಲ್ಲಿ ಕ್ರಮಕೈಗೊಳ್ಳಲು ಎಲ್ಲ ಅಧಿಕಾರಿಗಳು ಸ್ವತಂತ್ರರಾಗಿರುತ್ತಾರೆ’ ಎಂದು ಹೇಳಿದೆ.
  • ಭಾರತ ಮತ್ತು ವಿದೇಶಗಳಿಂದ ಕಾನೂನುಬಾಹಿರವಾಗಿ ‘ವಂತಾರ’ವು ವನ್ಯಪ್ರಾಣಿಗಳನ್ನು ಪಡೆದುಕೊಳ್ಳುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿರುವ ಆರೋಪಗಳು ಮತ್ತು ಈ ಬಗ್ಗೆ ಎನ್‌ಜಿಒ ಮತ್ತು ವನ್ಯಜೀವಿ ಸಂಘಟನೆಗಳು ನೀಡಿದ್ದ ದೂರುಗಳ ಆಧಾರದಲ್ಲಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಈ ಕುರಿತ ತನಿಖೆಗಾಗಿ ಆಗಸ್ಟ್‌ 25ರಂದು ಎಸ್‌ಐಟಿ ರಚಿಸಿತ್ತು.
  • ನ್ಯಾ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌, ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಹೇಮಂತ್‌ ನಗ್ರಾಲೆ ಮತ್ತು ಕಂದಾಯ ಸೇವೆಗಳ ಹಿರಿಯ ಅಧಿಕಾರಿ ಅನಿಷ್‌ ಗುಪ್ತಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.
  • ವಂತಾರದಲ್ಲಿನ ಬಂಧಿತ ಆನೆಗಳನ್ನು ಅವುಗಳ ಮಾಲೀಕ‌ರಿಗೆ ಹಿಂದಿರುಗಿಸಲು ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಕೋರಿ ಸಿ.ಆರ್‌. ಜಯ ಸುಕಿನ್‌ ಸಲ್ಲಿಸಿರುವ ಅರ್ಜಿ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋರ್ಟ್‌ ಆ.14ರಂದು ಹೇಳಿತ್ತು.
  • ವೈಶಾಲಿಗೆ ಗ್ರ್ಯಾಂಡ್ಸ್ವಿಸ್ಚೆಸ್ ಕಿರೀಟ: ಮುಂದಿನ ವರ್ಷದ ಕ್ಯಾಂಡಿಡೇಟ್ಸ್ಗೂ ಅರ್ಹತೆ

ಸಂದರ್ಭ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್‌.ವೈಶಾಲಿ ಸತತ ಎರಡನೇ ಬಾರಿ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಆ ಮೂಲಕ ಮುಂದಿನ ವರ್ಷದ ಮಹಿಳಾ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಸಂಪಾದಿಸಿದರು.

  • ಮಾಜಿ ವಿಶ್ವ ಮಹಿಳಾ ಚಾಂಪಿಯನ್‌ ಝೊಂಗ್‌ಯಿ ತಾನ್ ಜೊತೆ ಹೋರಾಡಿ ಡ್ರಾ ಸಾಧಿಸಿದ ಅವರು ಅಂತಿಮವಾಗಿ 11 ಸುತ್ತುಗಳಿಂದ 8 ಅಂಕ ಕಲೆಹಾಕಿದರು.
  • ಅಜರ್‌ಬೈಜಾನ್‌ನ ಉಲ್ವಿಯಾ ಫತಾಲಿಯೇವಾ ಜೊತೆ ಡ್ರಾ ಮಾಡಿಕೊಂಡ ರಷ್ಯಾದ ಕ್ಯಾತರಿನಾ ಲಾಗ್ನೊ ಸಹ ಎಂಟು ಅಂಕ ಪಡೆದರೂ ಟೈಬ್ರೇಕರ್‌ನಲ್ಲಿ ಎರಡನೇ ಸ್ಥಾನಕ್ಕೆ ಸರಿದರು. ಈ ಟೂರ್ನಿಯಿಂದ ಇಬ್ಬರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಕಾರಣ ಲಾಗ್ನೊ ಸಹ ಅವಕಾಶ ಪಡೆದರು.
  • ಈ ಟೂರ್ನಿಯಲ್ಲಿ ವೈಶಾಲಿ ಆರು ಪಂದ್ಯ ಗೆದ್ದು, ಒಂದು ಸೋತು, ನಾಲ್ಕು ಡ್ರಾ ಮಾಡಿಕೊಂಡರು.
  • ವೈಶಾಲಿ ಅವರು ಕ್ಯಾಂಡಿಡೇಟ್ಸ್ಗೆ ಅರ್ಹತೆ ಪಡೆದ ಭಾರತದ ಮೂರನೇ ಆಟಗಾರ್ತಿ. ಜಾರ್ಜಿಯಾದ ಬಟುಮಿಯಲ್ಲಿ ವಿಶ್ವಕಪ್‌ ಗೆದ್ದುಕೊಂಡಿದ್ದ ದಿವ್ಯಾ ದೇಶಮುಖ್ ಮತ್ತು ರನ್ನರ್ ಅಪ್‌ ಆಗಿದ್ದ ಕೋನೇರು ಹಂಪಿ ಅವರು ಈ ಮೊದಲೇ ಅರ್ಹತೆ ಪಡೆದಿದ್ದರು.
  • ಕಜಾಕಸ್ತಾನದ ಬಿಬಿಸಾರ ಅಸೌನ್ಬಯೇವಾ, ಚೀನಾದ ತಾನ್ಝೊಂಗ್ಯಿ ಮತ್ತು  ಯಕ್ಸಿನ್ ಸಾಂಗ್ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.
  • ಓಪನ್ ವಿಭಾಗದಲ್ಲಿ ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಅನಿಶ್‌ ಗಿರಿ ಎಂಟು ಅಂಕ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಗಿರಿ ಜೊತೆಗೆ ಈ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಮಥಾಯಸ್‌ ಬ್ಲೂಬಾಮ್, ಹಿಕಾರು ನಕಾಮುರಾ (ರೇಟಿಂಗ್ ಆಧಾರ), ಆರ್‌.ಪ್ರಜ್ಞಾನಂದ ಮತ್ತು ಫ್ಯಾಬಿಯಾನ ಕರುವಾನ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವುದು ಖಚಿತವಾಗಿದೆ.‌
  • ಕೊನೆಯ ಮೂರು ಸ್ಥಾನಗಳು, ಗೋವಾದಲ್ಲಿ ಮುಂದಿನ ತಿಂಗಳು ನಡೆಯುವ ವಿಶ್ವಕಪ್‌ನಲ್ಲಿ ತೀರ್ಮಾನವಾಗಲಿವೆ. ಕ್ಯಾಂಡಿಡೇಟ್ಸ್ ವಿಜೇತರು ಹಾಲಿ ವಿಶ್ವ ಚಾಂಪಿಯನ್‌ ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ.
  • ಭಾರತದ ಅರ್ಜುನ್ ಇರಿಗೇಶಿ, ನಿಹಾಲ್ ಸರಿನ್, ವಿದಿತ್ ಗುಜರಾತಿ ತಲಾ 7 ಅಂಕ, ಪ್ರಣವ್‌ ವಿ. 6.5 ಅಂಕ ಪಡೆದರು.
  • ವಿಶ್ವದಾಖಲೆಯೊಂದಿಗೆ ಡುಪ್ಲಾಂಟಿಸ್ಗೆ ಚಿನ್ನ
  • ಸ್ವೀಡನ್‌ನ ದಿಗ್ಗಜ ಅಥ್ಲೀಟ್ ಮೊಂಡೊ ಡುಪ್ಲಾಂಟಿಸ್ ಅವರು ಪೋಲ್‌ವಾಲ್ಟ್‌ ನಲ್ಲಿ ವಿಶ್ವದಾಖಲೆಯೊಂದಿಗೆ ಮೂರನೇ ಬಾರಿ ವಿಶ್ವ ಚಾಂಪಿಯನ್‌ ಷಿಪ್‌ ನಲ್ಲಿ ಚಿನ್ನದ ಪದಕ ಗೆದ್ದರು.
  • 25 ವರ್ಷ ವಯಸ್ಸಿನ ಈ ತಾರೆ, ಟೋಕಿಯೋದ ನ್ಯಾಷನಲ್ ಸ್ಟೇಡಿಯಂ ನಲ್ಲಿ 6.30 ಮೀ ಜಿಗಿದು 14ನೇ ಬಾರಿ ವಿಶ್ವ ದಾಖಲೆ ಸ್ಥಾಪಿಸಿದರು.

ಪ್ರಚಲಿತ ವಿದ್ಯಮಾನಗಳು: 15ನೇ ಸೆಪ್ಟೆಂಬರ್ 2025

ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ

ಸಂದರ್ಭ: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ‘ಶಾಲೆಯಲ್ಲೇ ಕೌಶಲ’ ಎಂಬ ಕಾರ್ಯಕ್ರಮ ರೂಪಿಸಿದೆ.
  • ಮೊದಲ ಹಂತದಲ್ಲಿ 200 ಸರ್ಕಾರಿ ಪ್ರೌಢಶಾಲೆಗಳು ಹಾಗೂ 50 ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿದ್ದು, ಒಟ್ಟು 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಇನ್ನಷ್ಟು ಶಾಲಾ–ಕಾಲೇಜುಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ.
  • ಈಗಾಗಲೇ ಶಾಲಾ–ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಯಾವ ಐಟಿಐನಲ್ಲಿ ತರಬೇತಿ ನೀಡಬೇಕು ಎಂಬುದನ್ನು ಅಂತಿಮಗೊಳಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದ್ದು, ತರಬೇತಿ ನೀಡುವ ಕೆಲಸವನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾಡಲಿದೆ.
  • ವಾರದಲ್ಲಿ ಮೂರು ದಿನ, ನಿತ್ಯ ಎರಡು ಗಂಟೆ ಕಾಲ ಆಯಾ ಶಾಲೆ ಗಳೊಂದಿಗೆ ಮ್ಯಾಪಿಂಗ್‌ ಮಾಡಲಾದ ಐಟಿಐಗಳ ತರಬೇತುದಾರರು ಶಾಲೆಗಳಿಗೆ ತೆರಳಿ ತಾಂತ್ರಿಕ ತರಬೇತಿ ನೀಡುತ್ತಾರೆ. ಇದಕ್ಕಾಗಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ 250 ತರಬೇತುದಾರರನ್ನು ಗುರುತಿಸ ಲಾಗಿದೆ. ಪ್ರಾಯೋಗಿಕ ತರಬೇತಿಯನ್ನು ಶಾಲೆಗಳಿಗೆ 10 ಕಿ.ಮೀ. ಅಂತರದಲ್ಲಿರುವ ಐಟಿಐಗಳಲ್ಲೇ ಶನಿವಾರ ನಾಲ್ಕು ಗಂಟೆ ನೀಡಲಾಗುತ್ತದೆ. 
  • ಈ ಕಾರ್ಯಕ್ರಮದಡಿ ವಿದ್ಯಾರ್ಥಿ ಗಳಿಗೆ ಇಂಟರ್ನ್‌ಶಿಪ್‌ ಕಡ್ಡಾಯ ವಾಗಲಿದೆ. ಪ್ರೌಢಶಾಲಾ ಹಂತದಲ್ಲಿ 8, 9ನೇ ತರಗತಿ ಹಾಗೂ ಕಾಲೇಜು ಹಂತದಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಹೆಚ್ಚು ಮಕ್ಕಳು ದಾಖಲಾತಿ ಇರುವ ಶಾಲಾ–ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.
  • ತರಬೇತಿಗಾಗಿ ಈ ವರ್ಷ ₹5.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿದ್ದು, ಇದನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿ ಭರಿಸಲಾಗುತ್ತದೆ.

ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌

  • ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳ ಬಗ್ಗೆ ತಿಳಿಸಿಕೊಡುವ ಇದಕ್ಕೆ ಜೂನಿಯರ್‌ ಟೆಕ್ನಿಷಿಯನ್‌ ಕೋರ್ಸ್‌ ಎಂದು ಹೆಸರಿಡಲಾಗಿದೆ. ಆಟೊಮೊಬೈಲ್‌, ಆಟೊ ಮಿಷನ್‌, ಪ್ಲಂಬಿಂಗ್‌, ಎಲೆಕ್ಟ್ರಿಕ್‌ ವಾಹನಗಳ ನಿರ್ವಹಣೆ–ರಿಪೇರಿ, ಇಂಟರ್‌ನೆಟ್‌, ಬೇಸಿಕ್‌ ಕಂಪ್ಯೂಟರ್‌ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.

‘ಸಹಜೀವನ ಬಳಿಕ ಮದುವೆಗೆ ನಿರಾಕರಿಸಿದರೆ ಅಪರಾಧವಲ್ಲ’

ಸಂದರ್ಭ: ಸಹಜೀವನದಲ್ಲಿದ್ದು ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗುವು ದಕ್ಕೆ ಪುರುಷನೊಬ್ಬ ನಿರಾಕರಿಸಿದಲ್ಲಿ ಅದು ಗಂಭೀರ ಅಪರಾಧವಾಗು ವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ.
  • ‘ಸರಿ– ತಪ್ಪುಗಳನ್ನು ನಿರ್ಧರಿಸಬಲ್ಲ ಸಾಮರ್ಥ್ಯ ವಿರುವ ವಯಸ್ಕರಿಬ್ಬರು ಹಲವು ವರ್ಷ ಸಹಜೀವನ ನಡೆಸುತ್ತಿದ್ದರೆ, ಅವರು ಅಂತಹ ಸಂಬಂಧವನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡಿಕೊಂಡಿರುತ್ತಾರೆ ಹಾಗೂ ಅದರಿಂದಾಗುವ ಪರಿಣಾಮಗಳ ಕುರಿತು ಅವರಿಗೆ ಅರಿವು ಇರುತ್ತದೆ ಎಂದೇ ಊಹಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಅರುಣಕುಮಾರ್‌ ಸಿಂಗ್‌ ದೇಶವಾಲ್ ಅವರು ಇದ್ದ ಪೀಠ ಹೇಳಿದೆ.
  • ಸಹಜೀವನ ಸಂಗಾತಿ ಯಾಗಿದ್ದ ಪುರುಷನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ವೇಳೆ, ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
  • ‘ಮದುವೆ ಮಾಡಿಕೊಳ್ಳುವ ಭರವಸೆ ಇದ್ದ ಕಾರಣವೇ ಒಪ್ಪಿತ ಸಂಬಂಧಕ್ಕೆ ಸಮ್ಮತಿಸಿದ್ದೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯ ಇಲ್ಲ’ ಎಂದು ಸೆಪ್ಟೆಂಬರ್‌ 8ರಂದು ಹೊರಡಿಸಿರುವ ಆದೇಶದಲ್ಲಿ ಪೀಠ ಹೇಳಿದೆ.
  • ಒಪ್ಪಿತ ಸಂಬಂಧದಲ್ಲಿದ್ದ ಪುರುಷನ ವಿರುದ್ಧ ತಾನು ನೀಡಿದ್ದ ದೂರನ್ನು ಮಹೋಬಾ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿ ಕಳೆದ ವರ್ಷ ಆಗಸ್ಟ್‌ 17ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.

ಜೈವಿಕ ತಂತ್ರಜ್ಞಾನ ಸಂಶೋಧನೆಗೆ ವರದಾನ

ಸಂದರ್ಭ: ಇಪ್ಪತ್ತೊಂದನೇ ಶತಮಾನವನ್ನು ಜ್ಞಾನ ಮತ್ತು ವಿಜ್ಞಾನದ ಶತಮಾನ ಎಂದು ಕರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಬಯೊಟೆಕ್ನಾಲಜಿ ಅಥವಾ ಜೈವಿಕ ತಂತ್ರಜ್ಞಾನ ಕ್ಷೇತ್ರವು ಬೆಳೆಯುತ್ತಿದೆ.
  • ಮಾನವ ಜೀವನದ ಗುಣಮಟ್ಟ ಸುಧಾರಣೆ, ಆಹಾರ ಭದ್ರತೆ, ಆರೋಗ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆ‌, ಕೈಗಾರಿಕಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ಕ್ರಾಂತಿಯನ್ನು ಉಂಟುಮಾಡುತ್ತಿದೆ.
  • ಈ ತಂತ್ರಜ್ಞಾನದಲ್ಲಿನ ಸಂಶೋಧನೆ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿದೆ.‌   ಜೆನೆಟಿಕ್‌ ಎಂಜಿನಿಯರಿಂಗ್‌, ಮಾಲಿಕ್ಯುಲಾರ್‌ ಬಯಾಲಜಿ , ಅಗ್ರಿಕಲ್ಚರಲ್‌ ಬಯೊಟೆಕ್ನಾಲಜಿ, ಫಾರ್ಮಸ್ಯೂಟಿಕಲ್‌ ಬಯೊಟೆಕ್ನಾಲಜಿ, ಇಂಡಸ್ಟ್ರಿಯಲ್‌ ಬಯೊಪ್ರೋಸೆಸಸ್‌ ಹಾಗೂ ಎನ್‌ವಿರಾನ್‌ಮೆಂಟಲ್‌ ಬಯೊಟೆಕ್ನಾಲಜಿ ಪ್ರಮುಖವಾಗಿವೆ. ಉದಾಹರಣೆಗೆ, ಜೆನೆಟಿಕ್‌ ಎಂಜಿನಿಯರಿಂಗ್‌ ಮೂಲಕ ತಳಿ ಪರಿವರ್ತಿತ ಬೆಳೆಗಳು (ಜೆನೆಟಿಕಲಿ ಮಾಡಿಫೈಡ್‌ ಕ್ರಾಪ್ಸ್‌) ಅಭಿವೃದ್ಧಿಯಾಗಿದ್ದು, ಅವು ಹೆಚ್ಚಿನ ಉತ್ಪಾದನೆ, ಕೀಟ ನಿರೋಧಕತೆಗೆ ಕಾರಣವಾಗಿವೆ. ಆರೋಗ್ಯ ಕ್ಷೇತ್ರದಲ್ಲಿ, ಕೃತಕ ಇನ್ಸುಲಿನ್ ಉತ್ಪಾದನೆ, ಲಸಿಕೆಗಳ ತಯಾರಿಕೆಯು ಜೈವಿಕ ತಂತ್ರಜ್ಞಾನ ಸಂಶೋಧನೆಯ ಫಲ. ಜೆನೋಮ್ ತಿದ್ದುಪಡಿ ತಂತ್ರಜ್ಞಾನವು ವೈದ್ಯಕೀಯ ರಂಗದಲ್ಲಿ ನವೀನ ಸಂಶೋಧನೆಯ ದಿಕ್ಕನ್ನು ತೋರಿಸುತ್ತಿದೆ.

ಉದ್ಯೋಗಾವಕಾಶ: ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಅವಕಾಶಗಳು ತೆರೆದಿವೆ.

1.ಆರೋಗ್ಯ ಕ್ಷೇತ್ರ– ಔಷಧ ಕಂಪನಿಗಳು, ಲಸಿಕೆ ತಯಾರಿಕಾ ಘಟಕಗಳು, ಕ್ಲಿನಿಕಲ್ ಸಂಶೋಧನಾ ಸಂಸ್ಥೆಗಳು.

2.ಕೃಷಿ ಕ್ಷೇತ್ರ– ಬೀಜ ಉತ್ಪಾದನಾ ಕಂಪನಿಗಳು, ಸಸ್ಯ ಸಂಶೋಧನಾ ಕೇಂದ್ರಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು.

3.ಪರಿಸರ ನಿರ್ವಹಣೆ– ಜಲಶುದ್ಧೀಕರಣ ಘಟಕಗಳು, ತ್ಯಾಜ್ಯ ನಿರ್ವಹಣಾ ಕೈಗಾರಿಕೆಗಳು, ನವೀನ ಶಕ್ತಿಯ ತಂತ್ರಜ್ಞಾನ.

4.ಕೈಗಾರಿಕಾ ಕ್ಷೇತ್ರ– ಎನ್‌ಜೈಮ್ ತಯಾರಿಕೆ, ಜೈವಿಕ ಇಂಧನ, ಬಯೊಫಾರ್ಮಸ್ಯೂಟಿಕಲ್ಸ್.

5.ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು– ಸಂಶೋಧನಾ ಸಹಾಯಕ, ಉಪನ್ಯಾಸಕ, ವಿಜ್ಞಾನಿ ಹುದ್ದೆಗಳು.

6.ವಿದೇಶದಲ್ಲಿ ಅವಕಾಶ– ಅಮೆರಿಕ, ಯುರೋಪ್, ಜಪಾನ್, ಸಿಂಗಪುರದಂತಹ ದೇಶಗಳಲ್ಲಿ ಸಂಶೋಧನೆ ಹಾಗೂ ಕೈಗಾರಿಕಾ ಕೆಲಸಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಇದೇ ರೀತಿ, ಬಯೊಟೆಕ್ನಾಲಜಿಯಲ್ಲಿ ಸ್ಟಾರ್ಟ್‌–ಅಪ್ ಉದ್ದಿಮೆಗಳು ಕೂಡ ವೇಗವಾಗಿ ಬೆಳೆಯುತ್ತಿವೆ. ಆರೋಗ್ಯ ನಿರ್ಣಾಯಕ ಕಿಟ್‌ಗಳು, ಸಸ್ಯ ಆಧಾರಿತ ಉತ್ಪನ್ನಗಳು, ಜೈವಿಕ ಇಂಧನ, ಆಹಾರ ತಂತ್ರಜ್ಞಾನದಲ್ಲಿ ಯುವ ಉದ್ಯಮಿಗಳು ಹೊಸ ಹಾದಿ ತೆರೆಯುತ್ತಿದ್ದಾರೆ.

ಅಸ್ಸಾಂ: ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಕಂಪ

ಸಂದರ್ಭ: ಗುವಾಹಟಿ/ ಕೋಲ್ಕತ್ತ/ ಇಂಫಾಲ್‌/ ಇಟಾನಗರ (ಪಿಟಿಐ): ಅಸ್ಸಾಂನಲ್ಲಿ ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಮಿಯು ಕಂಪನ.
  • ರಾಜ್ಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 5.8ರಷ್ಟು ದಾಖಲಾಗಿತ್ತು. 4.58ಕ್ಕೆ ಎರಡನೇ ಬಾರಿ ಸಂಭವಿಸಿದ ಭೂಕಂಪನದ ತೀವ್ರತೆಯು 3.1ರಷ್ಟು ಮತ್ತು 5.21ಕ್ಕೆ ಮೂರನೇ ಬಾರಿಗೆ ಸಂಭವಿಸಿದ ಭೂಕಂಪದ ತೀವ್ರತೆಯು 2.9ರಷ್ಟಿತ್ತು. 6.11ಕ್ಕೆ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪದ ತೀವ್ರತೆಯು 2.7ರಷ್ಟು ದಾಖಲಾಗಿದೆ.
  • ಅಸ್ಸಾಂನ ಉದಲಗುರಿ ಮತ್ತು ಸೋನಿತ್‌ಪುರದಲ್ಲಿ ಭೂಕಂಪನದ ಕೇಂದ್ರ ಬಿಂದುಗಳು ಪತ್ತೆಯಾಗಿವೆ.
  • ಮಣಿಪುರ ಮತ್ತು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.

ವಿಶ್ವ ಬಾಕ್ಸಿಂಗ್: ಭಾರತಕ್ಕೆ ‘ಚಿನ್ನ ಡಬಲ್’

ಸಂದರ್ಭ: ಜೈಸ್ಮಿನ್ ಲಾಂಬೊರಿಯಾ (57ಕೆ.ಜಿ) ಮತ್ತು ಮೀನಾಕ್ಷಿ ಹೂಡಾ (48ಕೆ.ಜಿ) ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದರು.

  • ಪ್ಯಾರಿಸ್‌ ಒಲಿಂಪಿಕ್ ಕೂಟದ ಮಹಿಳೆಯರ 57 ಕೆ.ಜಿ. ವಿಭಾಗದ ಬೆಳ್ಳಿ ಪದಕ ವಿಜೇತ ಬಾಕ್ಸರ್‌ ಪೋಲೆಂಡ್‌ನ ಜೂಲಿಯಾ ಎಸ್‌ಝೆರೆಮೆತಾ ಅವರನ್ನು ಜೈಸ್ಮಿನ್ ಸೋಲಿಸಿದರು. ಭಾರತದ ಬಾಕ್ಸರ್ 4–1 (30-27 29-28 30-27 28-29 29-28) ರಿಂದ ಕಠಿಣ ಪೈಪೋಟಿ ಯೊಡ್ಡಿದ ತಮ್ಮ ಎದುರಾಳಿಯನ್ನು ಸೋಲಿಸಿದರು. ಇದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
  • ಮಧ್ಯಾಹ್ನದ ನಂತರ ನಡೆದ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಮೀನಾಕ್ಷಿ ಅವರು ಕಜಾಕಸ್ತಾನದ ನಾಝೀಂ ಕೈಝೈಬೆ ವಿರುದ್ಧ ಜಯಭೇರಿ ಬಾರಿಸಿದರು. ನಾಝೀಂ ಅವರು ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಕಂಚಿನ ಪದಕ ಪಡೆದಿದ್ದರು.
  • ಇದರೊಂದಿಗೆ ಜೈಸ್ಮಿನ್ ಮತ್ತು ಮೀನಾಕ್ಷಿ ಅವರು ವಿಶ್ವ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನ ಗೆದ್ದ ಭಾರತೀಯ ಬಾಕ್ಸರ್‌ಗಳ  ಯಾದಿಯಲ್ಲಿ ಸ್ಥಾನ ಪಡೆದರು. ಆರು ಸಲ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್  (2002, 2005, 2006, 2008, 2010 ಮತ್ತು 2018), ಎರಡು ಬಾರಿ ಚಾಂಪಿಯನ್ ನಿಖತ್ ಜರೀನ್ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ ಆರ್‌.ಎಲ್ (2006), ಕೆ.ಸಿ. ಲೇಖಾ (2006), ನೀತು ಗಂಗಾಸ್ (2023), ಲವ್ಲಿನಾ ಬೊರ್ಗೊಹೈನ್ (2023) ಮತ್ತು ಸವಿತಿ ಬೂರಾ (2023) ಅವರ ನಂತರ ಜೈಸ್ಮಿನ್ ಮತ್ತು ಮೀನಾಕ್ಷಿ ಅವರೂ ಈ ಪಟ್ಟಿಗೆ ಸೇರ್ಪಡೆಯಾದರು. 24 ವರ್ಷದ ಜೈಸ್ಮಿನ್ ಅವರಿಗೆ ಇದು ಮೂರನೇ ವಿಶ್ವ ಚಾಂಪಿಯನ್‌ಷಿಪ್.
  • ಮಹಿಳೆಯರ ವಿಭಾಗದಲ್ಲಿ ಮತ್ತೆರಡು ಪದಕಗಳೂ ಭಾರತಕ್ಕೆ ಒಲಿದವು. ನೂಪುರ್ ಶೆರಾನ್ (80 ಕೆ.ಜಿ ಮೇಲ್ಪಟ್ಟು) ಮತ್ತು ಪೂಜಾರಾಣಿ (80 ಕೆ.ಜಿ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
  • 80 ಕೆ.ಜಿ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ ನೂಪುರ್ ಅವರು 2–3ರ ಅಲ್ಪ ಅಂತರದ ಸೋಲನ್ನು ಪೋಲೆಂಡ್‌ನ ಅಗಾತಾ ಕಾಜಾಮರಸ್ಕಾ ವಿರುದ್ಧ ಅನುಭವಿಸಿದರು. ತಾಂತ್ರಿಕ ಅಂಕಗಳೊಂದಿಗೆ ಪೋಲೆಂಡ್ ಬಾಕ್ಸರ್ ಮೇಲುಗೈ ಸಾಧಿಸಿದರು.
  • ಪೂಜಾ ಅವರು ಸೆಮಿಫೈನಲ್‌ನಲ್ಲಿ 1–4ರಿಂದ ಸ್ಥಳೀಯ ಫೆವರಿಟ್ ಎಮಿಲಿ ಅಷ್ಕಿತ್ ವಿರುದ್ಧ ಸೋತು ಕಂಚಿನ ಪದಕ ಪಡೆದರು.

ಏಷ್ಯಾ ಕಪ್: ಭಾರತ ರನ್ನರ್ಸ್‌ ಅಪ್‌

ಸಂದರ್ಭ: ಭಾರತ ಮಹಿಳಾ ತಂಡವು ಭಾನುವಾರ ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಚೀನಾ ವಿರುದ್ಧ 1–4 ಗೋಲುಗಳಿಂದ ಪರಾಭವಗೊಂಡು, ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಯಿತು.
  • ಈ ಸೋಲಿನೊಂದಿಗೆ ಸಲೀಮಾ ಟೆಟೆ ಬಳಗವು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಸುವರ್ಣಾವಕಾಶವನ್ನು ಕಳೆದುಕೊಂಡಿತು. ಚಾಂಪಿಯನ್‌ ಚೀನಾ ತಂಡವು ವಿಶ್ವಕಪ್‌ಗೆ ಟಿಕೆಟ್‌ ‍ಪಡೆದುಕೊಂಡಿತು.
  • ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಫಾರ್ವರ್ಡ್‌ ಆಟಗಾರ್ತಿ ನವನೀತ್‌ ಅವರು ಮೊದಲ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು  ಗಳಿಸಿ, ಆತಿಥೇಯರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದರು.
  • ನಂತರದಲ್ಲಿ ಚೀನಾ ತಂಡವು ಸತತ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಹೊಡೆಯುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಭಾರತದ ಆಟಗಾರ್ತಿಯರು 21ನೇ ನಿಮಿಷದವರೆಗೆ ಮುನ್ನಡೆ ಕಾಯ್ದುಕೊಂಡರು. ಆದರೆ, ನಾಲ್ಕನೇ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಜಿಕ್ಸಿಯಾ ಔ ಅವರು ಚೆಂಡನ್ನು ಗುರಿ ಸೇರಿಸಿದ್ದರಿಂದ ಉಭಯ ತಂಡಗಳ ಸ್ಕೋರ್‌ ಸಮಬಲಗೊಂಡಿತು.
  • 41ನೇ ನಿಮಿಷದಲ್ಲಿ ಹಾಂಗ್ ಲಿ ಅವರು ಫೀಲ್ಡ್‌ ಗೋಲು ಬಾರಿಸಿ ಆತಿಥೇಯ ತಂಡಕ್ಕೆ 2–1 ಮುನ್ನಡೆ ಒದಗಿಸಿದರು. ನಂತರದಲ್ಲಿ ಮೀರಾಂಗ್ ಝೌ (51ನೇ ನಿಮಿಷ) ಮತ್ತು ಜಿಯಾಕಿ ಜಾಂಗ್ (53ನೇ ನಿ) ಗೋಲು ತಂದಿತ್ತು. ಚೀನಾ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
  • ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತಕ್ಕೆ ಇದು ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಸೂಪರ್‌ ಫೋರ್‌ ಹಂತದಲ್ಲೂ 1–4 ಗೋಲುಗಳಿಂದ ಭಾರತ ಪರಾಭವಗೊಂಡಿತ್ತು.
  • ಜಪಾನ್‌ಗೆ ಗೆಲುವು: ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ತಂಡವು 2–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದವು.

ಶೂಟಿಂಗ್‌ ವಿಶ್ವಕಪ್‌: ಮೇಘನಾಗೆ ಕಂಚು

ಸಂದರ್ಭ: ಅನುಭವಿ ಶೂಟರ್‌ ಮೇಘನಾ ಸಜ್ಜನರ್ ಅವರು ಐಎಸ್‌ಎಸ್‌ಎಫ್‌ ವಿಶ್ವಕಪ್‌ ರೈಫಲ್‌/ ಪಿಸ್ತೂಲ್ ವಿಶ್ವಕಪ್‌ ನಲ್ಲಿ ಕಂಚಿನ ಪದಕ ಗೆದ್ದರು. ಋತುವಿನ ಕೊನೆಯ ವಿಶ್ವಕಪ್‌ ಟೂರ್ನಿಯಲ್ಲಿ ಭಾರತವು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
  • ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಕರ್ನಾಟಕದ ಮೇಘನಾ 230.0 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ವಿಶ್ವಕಪ್‌ನಲ್ಲಿ ಅವರಿಗೆ ದೊರೆತ ಚೊಚ್ಚಲ ಪದಕ ಇದಾಗಿದೆ.
  • ಚೀನಾದ ಉದಯೋನ್ಮುಖ ತಾರೆ ಪೆಂಗ್ ಕ್ಸಿನ್ಲು 255.3 ಅಂಕ ಸಂಪಾದಿಸಿ, ವಿಶ್ವದಾಖಲೆ ಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿ ದರು. ಅವರು ಸ್ವದೇಶದ ವಾಂಗ್ ಜಿಫೀ (254.8) ಅವರ ದಾಖಲೆಯನ್ನು ಮುರಿದರು. ನಾರ್ವೆಯ ಜೀನೆಟ್ ಹೆಗ್ ಡ್ಯುಸ್ಟಾಡ್ ಬೆಳ್ಳಿ ಪದಕ ಗೆದ್ದರು.
  • 31 ವರ್ಷದ ಮೇಘನಾ (632.7) ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ದೊಂದಿಗೆ ಫೈನಲ್‌ ಪ್ರವೇಶಿಸಿದ್ದರು. ಪೆಂಗ್ (637.4) ಅಗ್ರಸ್ಥಾನ ಪಡೆದಿದ್ದರು.

ಪ್ರಚಲಿತ ವಿದ್ಯಮಾನಗಳು: 13ನೇ ಸೆಪ್ಟೆಂಬರ್ 2025

  • ಮತಾಂತರಗೊಂಡವರು ಕ್ರೈಸ್ತರೇ

ಸಂದರ್ಭ: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಮತ್ತು ಒಕ್ಕಲಿಗರಲ್ಲಿ ಯಾರೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರೆ ಲ್ಲರೂ ಕ್ರೈಸ್ತರೇ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
  • ‘ಮತಾಂತರಗೊಂಡವ‌ರ ಧರ್ಮ ವನ್ನು ಉಲ್ಲೇಖಿಸುವಾಗ ಅವರ ಮೂಲ ಜಾತಿಯ ಹೆಸರು ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಮತಾಂತರ ಗೊಂಡವರು ಕ್ರೈಸ್ತರೇ ಆಗುತ್ತಾರೆ’ ಎಂದರು.
  • ‘ಸಮೀಕ್ಷೆಗೆ ಬಂದಾಗ ಏನು ಬರೆಯುತ್ತಾರೋ ಬರೆಯಲಿ. ಮತಾಂತರ ಗೊಂಡವರು ಅಥವಾ ಜಾತಿಧರ್ಮದ ಹೆಸರಿನ ಗೊಂದಲ ಇದ್ದರೆ ಅದನ್ನು ಹಿಂದುಳಿದ ವರ್ಗಗಳ ಆಯೋಗ ವಿಶ್ಲೇಷಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಮಾತ್ರ ಸಂಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.
  • ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್‌. ಕುಂಬಾರ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್ಸೇರಿ 100ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
  • ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌, ಪೆಂಟಕೋಸ್ಟ್‌ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿ ಕೊಳ್ಳಲು ಅವಕಾಶ ನೀಡಿದೆ’ ಎಂದು ಬಿಜೆಪಿ ನಾಯಕರು ದೂರಿದ್ದರು.

ವೀರಶೈವ– ಲಿಂಗಾಯತ.. ಏನಾದರೂ ಬರೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

  • ‘ವೀರಶೈವ– ಲಿಂಗಾಯತರು ಧರ್ಮ ಮತ್ತು ಜಾತಿಯನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದರು.
  • ‘ವೀರಶೈವ ಲಿಂಗಾಯತರು ಹಿಂದೂ ಧರ್ಮ ಎಂಬುದನ್ನು ಬಳಸದೇ ಲಿಂಗಾಯತ ಧರ್ಮ ಎಂದೇ ನಮೂದಿಸಬೇಕು ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮದ ಉಲ್ಲೇಖ ಇಲ್ಲ. ಹೀಗಾಗಿ ಏನೆಂದು ಬರೆಸಬೇಕೆಂಬ ಗೊಂದಲಕ್ಕೆ ಆ ಸಮುದಾಯದ ಜನ ಸಿಲುಕಿದ್ದಾರೆ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
  • ‘ಅವರು ‘ವೀರಶೈವ–ಲಿಂಗಾಯತ’ ಧರ್ಮ ಅಂತ ಬರೆಯಿಸಲಿ, ‘ವೀರಶೈವ’ ಧರ್ಮ ಅಂತಾನೆ ಬರೆಯಿಸಲಿ, ಕೇವಲ ವೀರಶೈವ ಅಥವಾ ಲಿಂಗಾಯತ ಅಂತ ಬೇಕಾದರೂ ಬರೆಯಿಸಿಕೊಳ್ಳಲಿ. ನಮಗೆ ಬೇಕಾಗಿರುವುದು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಮಾತ್ರ. ಏನು ಬೇಕಾದರೂ ಬರೆಯಿಸಿಕೊಳ್ಳಲಿ’ ಎಂದು ಹೇಳಿದರು.
  • ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಯಿಸಬೇಕು ಎಂದು ಆ ಸಮುದಾಯದ ಕೆಲವು ಮಠಾಧೀಶರು ಮತ್ತು ಪ್ರಮುಖರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಸಮೀಕ್ಷೆಯ ಕೈಪಿಡಿಯಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ ಮತ್ತು ಇತರೆ ಎಂದು ಇದೆ. ‘ಪ್ರಮುಖ 7 ಧರ್ಮಗಳ ಹೊರತಾಗಿ ಇತರೆ ಧರ್ಮಗಳಿದ್ದಲ್ಲಿ, ಅವುಗಳನ್ನು ಇತರೆ ವಿಭಾಗದಲ್ಲಿ ಕೋಡ್ಸಂಖ್ಯೆ 11ರಲ್ಲಿ ನಮೂದಿಸಬಹುದುಎಂದು ಸೂಚಿಸಲಾಗಿದೆ.
  • ಡಿಸೆಂಬರ್ನಲ್ಲಿ ಜಾತಿವಾರು ಸಮೀಕ್ಷೆ ವರದಿ ಸಲ್ಲಿಕೆ: ಸಿ.ಎಂ

ಸಂದರ್ಭ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೇ 22ರಂದು ಆರಂಭಗೊಂಡು ಅ.7ರವರೆಗೆ ನಡೆಯಲಿದ್ದು, ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆಯಾಗಲಿದೆ.

  • ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಇರುತ್ತದೆ. ಅದರಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು ಕೌಶಲ್ಯ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸ ಲಾಗುವುದು. ಈಗಾಗಲೇ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವ ಕೆಲಸ ನಡೆದಿದೆ. ರಾಜ್ಯದ 2 ಕೋಟಿ ಮನೆಗಳ ಪೈಕಿ ಈವರೆಗೆ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ.
  • ಶಿಕ್ಷಕರು ಮನೆಗೆ ಸಮೀಕ್ಷೆ ಬರುವುದಕ್ಕೆ 3 ದಿನಗಳ ಮೊದಲೇ ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿಗಳನ್ನು ವಿತರಿಸುತ್ತಾರೆ. ಇದರಿಂದ ಮನೆಯ ಸದಸ್ಯರು ಎಲ್ಲ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಲು ಸಹಾಯಕವಾಗುತ್ತದೆ. ಪ್ರಶ್ನೆಗಳನ್ನು ಓದಲು ಬಾರದಿದ್ದವರು ಬೇರೆಯವರ ಸಹಾಯ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಅದಕ್ಕಾಗಿ ಪ್ರತಿಯೊಂದು ಕುಟುಂಬಗಳೂ ತಯಾರಿರಬೇಕು. ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿ ವಿತರಿಸುತ್ತಾರೆ.
  • ಒಂದು ವೇಳೆ ಯಾರಿಗಾದರೂ ಸಮೀಕ್ಷೆಯಲ್ಲಿ ಭಾಗವಹಿಸಲು ಆಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದೇ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ವೈಬ್‌ಸೈಟ್‌ನಲ್ಲಿ ಸಮೀಕ್ಷೆಯ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ಸಮೀಕ್ಷೆಗೆ ವಿನೂತನ ವಿಧಾನ

ಈ ಸಮೀಕ್ಷೆಯಲ್ಲಿ ಎಲ್ಲಾ ಕುಟುಂಬಗಳು ಪೂರ್ಣವಾಗಿ ಒಳ್ಳಗೊಳ್ಳಬೇಕು ಎಂಬ ಕಾರಣಕ್ಕಾಗಿ ವಿನೂತನ ಸಮೀಕ್ಷಾ ವಿಧಾನ ಅನುಸರಿಸಲಾಗುತ್ತಿದೆ.

  • ರಾಜ್ಯದ ಬಹುಪಾಲು ಮನೆಗಳು ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳಿಗೆ  ಆರ್‌.ಆರ್‌ ಸಂಖ್ಯೆ ಹೊಂದಿರುವ ಎಲೆಕ್ಟ್ರಿಕ್‌ ಮೀಟರ್‌ಗಳು ಇರುತ್ತವೆ. ಈ ಮಾಹಿತಿ ಆಧರಿಸಿ ಮನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಹೀಗಾಗಿ ಎಲ್ಲ ಮನೆಗಳು ಮತ್ತು ಕುಟುಂಬಗಳು ಈ ಜಾಲದಲ್ಲಿ ಬಂದಿವೆ.
  •  ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳನ್ನೂ ಪ್ರತ್ಯೇಕ ವಿಧಾನದಿಂದ ಸಮೀಕ್ಷೆಗೆ ಒಳಪಡಿಸಲಾಗುವುದು. ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳನ್ನು ಬಳಸಿ ಅಂತಹ ಮನೆಗಳನ್ನು ಜಿಯೋಟ್ಯಾಗ್‌ ಮಾಡಿ, ಸಮೀಕ್ಷಾ ಬ್ಲಾಕ್‌ಗಳನ್ನು ರಚಿಸಲಾಗಿದೆ. ಈ ಮೂಲಕ 2 ಕೋಟಿ ಕುಟುಂಬಗಳ 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳ‍ಪಡಿಸಲಾಗುವುದು.

‘ಗ್ಯಾರಂಟಿ’ ಮಾಹಿತಿಯೂ ಸಂಗ್ರಹ

  • ಯಾವುದೇ ಕುಟುಂಬ ಸರ್ಕಾರದಿಂದ ಪಡೆದ ಸವಲತ್ತು, ಎಂದರೆ ಗಂಗಾ ಕಲ್ಯಾಣ, ಭೂಒಡೆತನ, ಸ್ವಾವಲಂಬಿ ಸಾರಥಿ, ಪ್ರೇರಣಾ ಯೋಜನೆ(ಕಿರುಸಾಲ), ಸ್ವಯಂ ಉದ್ಯೋಗ(ನೇರ ಸಾಲ), ಕೈಗಾರಿಕಾ ನಿವೇಶನ, ಕೈಗಾರಿಕೆ ಸ್ಥಾಪಿಸಲು ನೆರವು. ಕೃಷಿ ಸಂಬಂಧಿತ ನೆರವು, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗಲ ವಿಕಲ ವೇತನದ ಜತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಾಹಿತಿ ನೀಡಬೇಕು. ಇದರಿಂದ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿದೆಯೆ ಎಂಬ ಮಾಹಿತಿ ಸಿಗುತ್ತದೆ.
  • ಚಲನಚಿತ್ರಗಳ ಟಿಕೆಟ್ ಗರಿಷ್ಠ ದರ ₹200

ಸಂದರ್ಭ: ರಾಜ್ಯದಲ್ಲಿ ಮಲ್ಟಿ ಪ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಟಿಕೆಟ್‌ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

  • ಈ ನಿಯಮ ಜಾರಿಗೆ ಬಂದಿದ್ದು, ಕನ್ನಡ ಸೇರಿ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಈ ಆದೇಶ ಅನ್ವಯವಾಗಲಿದೆ. ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನ ಹೊಂದಿರುವ ಪ್ರೀಮಿಯಂ ಸೌಲಭ್ಯ ಗಳನ್ನು ಒಳಗೊಂಡ ಮಲ್ಟಿಪ್ಲೆಕ್ಸ್‌ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.
  • ಯಾವುದೇ ಭಾಷೆಯ ಚಿತ್ರವಾದರೂ ಸರಿ ಗರಿಷ್ಠ ದರ ₹200 ದಾಟುವಂತಿಲ್ಲ. ಟಿಕೆಟ್ಮೇಲೆ ಶೇ 18ರಷ್ಟು ತೆರಿಗೆ ಇರುತ್ತದೆ.
  • ಚಿತ್ರ ಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ₹150ಕ್ಕಿಂತ ಕಡಿಮೆ ಆಗಲಿದೆ.
  • ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್‌ ದರದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್‌ ದರ ₹2,000–₹3000 ದಾಟುತ್ತಿತ್ತು.
  • ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ದರವನ್ನು ನಿಗದಿ ಮಾಡಬೇಕು ಎಂಬುದು ಕನ್ನಡ ಚಲನಚಿತ್ರ ರಂಗದ ಬೇಡಿಕೆಯಾಗಿತ್ತು.
  • ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ಸಾ.ರಾ.ಗೋವಿಂದು ಕೈಜೋಡಿಸಿದ್ದರು.
  • ‘ತಮಿಳುನಾಡು, ಆಂಧ್ರದಲ್ಲೂ ಟಿಕೆಟ್‌ ದರ ಕಡಿಮೆ ಇದೆ. ಅಲ್ಲಿ ತೆರಿಗೆಯೂ ಸೇರಿ ಟಿಕೆಟ್‌ ದರ ₹150ರಿಂದ ₹200ರ ಒಳಗೆ ಇದೆ. ಕರ್ನಾಟಕದಲ್ಲಿ ಮಾತ್ರ ಅತ್ಯಂತ ದುಬಾರಿ ಆಗಿತ್ತು. ಇದರಿಂದ ಕನ್ನಡ ಚಿತ್ರಗಳ ಮೇಲೂ ಪರಿಣಾಮ ಬೀರಿತ್ತು. ಹೊಸ ಅಧಿಸೂಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.
  • ಶರಾವತಿ ಪಂಪ್ಡ್ ಸ್ಟೋರೇಜ್: 120 ಎಕರೆಯಷ್ಟೇ ಬಳಕೆ

ಸಂದರ್ಭ: ‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ 120 ಎಕರೆಯಷ್ಟೇ ಬಳಕೆಯಾಗಲಿದ್ದು, ಹೆಚ್ಚುವರಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

  • ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಯೋಜನೆಗೆ ಗುರುತಿಸಿರುವ ಪ್ರದೇಶದಲ್ಲಿ ಸರ್ಕಾರದ ಜಾಗವೇ ಇದೆ. 40 ಎಕರೆಯಷ್ಟು ಖಾಸಗಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು.
  • ಶಿವನಸಮುದ್ರ ಯೋಜನೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನುಷ್ಠಾನಗೊಂಡಿತ್ತು. ‘ವಿದ್ಯುತ್ ಉತ್ಪಾದನೆ ಮಾಡಿದರೆ ನೀರಿನ ಸತ್ವ ಹೋಗುತ್ತದೆ, ಆ ನೀರನ್ನು ಕೃಷಿಗೆ ಬಳಸಲು ಆಗುವು ದಿಲ್ಲ’ ಎಂದು ಸ್ವಹಿತಾಸಕ್ತಿಯ ಕೆಲವರು ಸುಳ್ಳು ಹಬ್ಬಿಸಿದ್ದರು. ಅಂಥ ಜನ ಎಲ್ಲಾ ಕಾಲದಲ್ಲೂ ಇರುತ್ತಾರೆ’ ಎಂದರು.
  • ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

ಸಂದರ್ಭ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ ತಿಂಗಳಿನಲ್ಲಿ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

  • ಚಿಲ್ಲರೆ  ಹಣದುಬ್ಬರ  ಪ್ರಮಾಣವು  ಜುಲೈನಲ್ಲಿ ಶೇ 1.61ರಷ್ಟಿತ್ತು.  2024ರ ಆಗಸ್ಟ್‌ನಲ್ಲಿ ಶೇ 3.65ರಷ್ಟಿತ್ತು. 9 ತಿಂಗಳಿನಿಂದ ಇಳಿಕೆ ಕಂಡಿದ್ದ ಹಣ ದುಬ್ಬರವು ಈಗ ಸ್ವಲ್ಪ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಶೇ 5.48 ದಾಖಲಾಗಿತ್ತು. 
  • ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಎಣ್ಣೆ ಮತ್ತು ವೈಯಕ್ತಿಕ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಣ ದುಬ್ಬರ ಏರಿಕೆಯಾಗಿದೆ ಎಂದು ತಿಳಿಸಿದೆ.
  • ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ  ಪ್ರಮಾಣವು ಶೇ 4 ಹಂತದಲ್ಲಿ ಇರಬೇಕು, ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ.
  • ದೇಶದ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಜುಲೈನಲ್ಲಿ ಶೇ 1.18ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.69ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಶೇ 2.1ರಿಂದ ಶೇ 2.47ಕ್ಕೆ ಹೆಚ್ಚಳವಾಗಿದೆ.
  • ‘ಆಹಾರ ಮತ್ತು ಪಾನೀಯ ವಿಭಾಗದ ವಸ್ತುಗಳ ದರದಲ್ಲಿನ ಹೆಚ್ಚಳದಿಂದ ಹಣದುಬ್ಬರವು ಆಗಸ್ಟ್‌ನಲ್ಲಿ ಹೆಚ್ಚಾಗಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಇತ್ತೀಚೆಗೆ ಸುರಿದ ಹೆಚ್ಚಿನ ಮಳೆ ಮತ್ತು ದೇಶದ ಕೆಲವು ಭಾಗದಲ್ಲಿ ಉಂಟಾದ ಪ್ರವಾಹವು ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಬಹುದು. ಇದರಿಂದ ದರವು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಎರಡನೇ ಸ್ಥಾನ

  • ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದ ಲ್ಲಿದ್ದು, ಶೇ 3.81ರಷ್ಟಿದೆ.
  • ಮೊದಲ ಸ್ಥಾನದಲ್ಲಿ ಕೇರಳ ಶೇ 9.04 ಹೊಂದಿದ್ದರೆ, ಅಸ್ಸಾಂನಲ್ಲಿ ಅತಿ ಕಡಿಮೆ ಹಣದುಬ್ಬರ (–) ಶೇ 0.66 ಇದೆ.
  • .ಐನಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ನಿತಿನ್ಗಡ್ಕರಿ

ಸಂದರ್ಭ: ‘ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಇದರಿಂದ ರೈತರ ಜೀವನ ಮಟ್ಟ ಸುಧಾರಿಸಲಿದೆ.

  • ‘ಸದ್ಯ ದೇಶದಲ್ಲಿ 350ರಿಂದ 400 ಕಾರ್ಖಾನೆಗಳು ಎಥೆನಾಲ್‌ ಉತ್ಪಾದಿಸುತ್ತಿವೆ. ಜೋಳದಿಂದ ಎಥೆನಾಲ್‌ ಉತ್ಪಾದಿಸುವುದರಿಂದ ರೈತರಿಗೆ ₹45 ಸಾವಿರ ಕೋಟಿಯಷ್ಟು ಆದಾಯ ಸಿಗುತ್ತಿದೆ. ಮೊದಲು ಜೋಳಕ್ಕೆ ಕ್ವಿಂಟಲ್‌ಗೆ ₹1,200 ದರ ಇತ್ತು. ಈಗ ಅದು ₹2,800ಕ್ಕೆ ಏರಿಕೆಯಾಗಿದೆ.
  • ₹882 ಕೋಟಿ ವೆಚ್ಚದಲ್ಲಿ ಸೌರಕೋಶ ಘಟಕ

ಸಂದರ್ಭ: ‘ಜಪಾನಿನ ಹೊಸಾಡಾ ಹೋಲ್ಡಿಂಗ್ಸ್‌ ಕಂಪನಿಯು ರಾಜ್ಯದಲ್ಲಿ  ಸೌರಕೋಶ ತಯಾರಿಕಾ ಘಟಕವನ್ನು ಸ್ಥಾಪಿಸಲು ₹882 ಕೋಟಿ ಹೂಡಿಕೆ ಮಾಡಲಿದೆ.

  • ಬಂಡವಾಳ ಆಕರ್ಷಣೆಗಾಗಿ ಜಪಾನ್‌ ಪ್ರವಾಸದಲ್ಲಿರುವ ಎಂ.ಬಿ.ಪಾಟೀಲರು ಹೋಸಾಡಾ ಹೋಲ್ಡಿಂಗ್ಸ್‌ ಅಧ್ಯಕ್ಷ ನಕಾಮುರಾ ಸ್ಯಾನ್‌ ಅವರ ಭೇಟಿಯ ನಂತರ ಈ ಮಾಹಿತಿ ನೀಡಿದ್ದಾರೆ.
  • ‘ತೋಂಗ್‌ ತರ್‌ ಎನರ್ಜಿ ಸೊಲ್ಯೂಷನ್ಸ್‌ (ಟಿಟಿಇಎಸ್‌) ಸಹಯೋಗದಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಟಿಟಿಇಎಸ್‌ ಕಂಪನಿಯು ₹490 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ ಹೊಸಾಡಾ ಹೋಲ್ಡಿಂಗ್ಸ್‌ ಸಹಯೋಗದಲ್ಲಿ ಒಟ್ಟು ₹882 ಕೋಟಿ ಹೂಡಿಕೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
  • ‘ಸೌರಫಲಕಗಳಲ್ಲಿ ಬಳಸುವ ಸೌರಕೋಶಗಳ ತಯಾರಿಕೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ. ದೇಶದ ಸೌರಕೋಶಗಳ ಬೇಡಿಕೆ ಪೂರೈಸುವಲ್ಲಿ ರಾಜ್ಯಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಈ ಘಟಕದಿಂದ 500 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.
  • ‘ಕ್ರೀಡಾ ಪರಿಕರಗಳ ತಯಾರಿಕಾ ಕಂಪನಿ ಇನಾಬತಾವು ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸಲಿದ್ದು, 2027ರಲ್ಲಿ ಅದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಡೈ ತಯಾರಿಕಾ ಕಂಪನಿ ಟೆತ್ಸುಜಿಕಾವಾ ರಾಜ್ಯದಲ್ಲಿನ ತನ್ನ ಘಟಕವನ್ನು ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿಸಿದೆ’ ಎಂದು ಹೇಳಿದ್ದಾರೆ.
  • ಯುರೋಪ್ಅಡ್ಡಿ: ಮಾತುಕತೆ ಸ್ಥಗಿತ

ಸಂದರ್ಭ:‘ರಷ್ಯಾ–ಉಕ್ರೇನ್‌ ಸಂಘರ್ಷ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಮಾತುಕತೆಯೂ ಸ್ಥಗಿತಗೊಂಡಿದ್ದು, ಐರೋಪ್ಯ ದೇಶಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿವೆ’ ಎಂದು ಕ್ರೆಮ್ಲಿನ್‌ ತಿಳಿಸಿದೆ.

  • ಮಾತುಕತೆಗೆ ರಷ್ಯಾವೂ ಈಗಲೂ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದೆ.
  • ರಷ್ಯಾ ಹಾಗೂ ಉಕ್ರೇನ್‌ನ ಸಂಧಾನಕಾರರು ಈ ವರ್ಷದಲ್ಲಿ ಇಸ್ತಾಂಬುಲ್‌ನಲ್ಲಿ ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಜುಲೈ 23ರಂದು ನಡೆದ ಕೊನೆಯ ಮಾತುಕತೆಯಲ್ಲಿ ಯುದ್ಧದಲ್ಲಿ ಸಿಕ್ಕಿಬಿದ್ದ ಯುದ್ಧ ಕೈದಿಗಳು ಹಾಗೂ ಮೃತಪಟ್ಟ ಯೋಧರ ದೇಹಗಳ ಹಸ್ತಾಂತರ ಸಂಬಂಧ ಹಲವು ಮಾತುಕತೆಗಳು ನಡೆದಿದ್ದವು.
  • ಉಕ್ರೇನ್ ‘ವಾಸ್ತವ ಸ್ಥಿತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ರಷ್ಯಾ ಆರೋಪಿಸಿದೆ. ತನಗೆ ಸೇರಿದ ಜಾಗವನ್ನು ವಶಕ್ಕೆ ಪಡೆಯಲು ರಷ್ಯಾವು ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಉಕ್ರೇನ್ ದೂರಿದೆ.
  • ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸಲು ನಡೆಸಿದ ಪ್ರಯತ್ನಗಳು ಕೂಡ ಫಲ ನೀಡಿಲ್ಲ.
  • ‘ಮಾತುಕತೆ ಮಾರ್ಗವೂ ಸಿದ್ಧ ಗೊಂಡಿದ್ದು, ಕಾರ್ಯನಿರ್ವಹಿಸುತ್ತಿವೆ. ಆದರೆ, ಯುರೋಪ್‌ ರಾಷ್ಟ್ರಗಳು ಇದಕ್ಕೆ ಅಡ್ಡಿಯಾಗುತ್ತಿವೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
  • ನೇಪಾಳ: ಸುಶೀಲಾ ಕಾರ್ಕಿ ಪ್ರಧಾನಿ

ಸಂದರ್ಭ: ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • ‘ಜೆನ್‌–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್‌ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.
  • ಸಂಸತ್ತು ವಿಸರ್ಜನೆ: ನೇಪಾಳ ಸಂಸತ್ತನ್ನು ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ‘ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಲಾಗಿದೆ. 2026ರ ಮಾರ್ಚ್‌ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ’ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
  • ದೇಶದಾದ್ಯಂತ ಪಟಾಕಿ ನಿಷೇಧಿಸಿ

ಸಂದರ್ಭ: ದೆಹಲಿಯಲ್ಲಿ ಮಾತ್ರ ಪಟಾಕಿ ನಿಷೇಧ ಮಾಡಿರುವುದನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ದೇಶದಾದ್ಯಂತ ಈ ಬಗ್ಗೆ ನಿಯಮ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

  • ‘ಶುದ್ಧ ಗಾಳಿಯನ್ನು ಪಡೆಯುವುದು ದೆಹಲಿ ಜನರ ಹಕ್ಕಾಗಿದ್ದರೆ, ದೇಶದ ಇತರ ನಾಗರಿಕರಗೂ ಆ ಹಕ್ಕು ಇರುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್ ಅವರಿದ್ದ ಪೀಠ ತಿಳಿಸಿದೆ.
  • ದೆಹಲಿಯಲ್ಲಿ ಪಟಾಕಿ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಈ ರೀತಿಯ ನಿಯಮಗಳು ದೇಶದಾದ್ಯಂತ ಇರಬೇಕು. ಇದನ್ನು ಕೇವಲ ದೆಹಲಿಗೆ ಸೀಮಿತಗೊಳಿಸಬಾರದು. ಯಾಕೆಂದರೆ, ಉಳಿದವರೂ ಈ ದೇಶದ ನಾಗರಿಕರು’ ಎಂದು ನ್ಯಾಯಪೀಠ ಹೇಳಿದೆ.
  • ಪಕ್ಷಗಳ ನಿಯಂತ್ರಣಕ್ಕೆ ನಿಯಮ: ಆಯೋಗಕ್ಕೆ ನೋಟಿಸ್

ಸಂದರ್ಭ: ಜಾತ್ಯತೀತ, ಪಾರದರ್ಶಕ ಮತ್ತು ನ್ಯಾಯವನ್ನು ಉತ್ತೇಜಿಸಲು ರಾಜಕೀಯ ಪಕ್ಷಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ನಿಯಮಗಳನ್ನು ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

  • ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರ್ಧರಿಸಿತು. ಅಲ್ಲದೆ ಅರ್ಜಿಯು ನೋಂದಾಯಿತ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಒಳಗೊಳ್ಳುವಂತೆ ಉಲ್ಲೇಖಿಸಲು ಪೀಠವು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅವರಿಗೆ ಹೇಳಿತು.
  • ಈ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಭಾರತ ಕಾನೂನು ಆಯೋಗಕ್ಕೂ ಪೀಠ ನೋಟಿಸ್‌ ಜಾರಿ ಮಾಡಿತು.
  • ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಮ ಮತ್ತು ನಿಬಂಧನೆಗಳಿಲ್ಲ. ಇದರಿಂದಾಗಿ ಅನೇಕ ಪ್ರತ್ಯೇಕತಾವಾದಿಗಳು ದೇಣಿಗೆ ಸಂಗ್ರಹಿಸಲು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸಿಕೊಂಡಿದ್ದಾರೆ. ಪಕ್ಷಗಳ ಕೆಲ ಪದಾಧಿಕಾರಿಗಳು ಪೊಲೀಸರ ರಕ್ಷಣೆಯನ್ನೂ ಪಡೆಯುತ್ತಿ ದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ

ಸಂದರ್ಭ: ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದಂಪತಿಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

  • ಮಗಳ ಮದುವೆಯ ಖರ್ಚಿಗಾಗಿ ₹10 ಲಕ್ಷ ನೀಡುವಂತೆ ತಂದೆಗೆ ಸೂಚಿಸಿದ ಪೀಠ, ದಂಪತಿಯ ವಿಚ್ಛೇದನಕ್ಕೆ ಕುಟುಂಬ ನ್ಯಾಯಾಲಯವು ನೀಡಿದ್ದ ಅನುಮತಿಯನ್ನು ಎತ್ತಿಹಿಡಿಯಿತು.
  • ವಿಚ್ಛೇದನದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠ ನಡೆಸಿತು. 1996ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸಂಬಂಧ ಸಂಪೂರ್ಣ ಬೇರ್ಪಟ್ಟಿರುವುದು ಮತ್ತು ಮಧ್ಯಸ್ಥಿಕೆಯ ಪ್ರಯತ್ನ ವಿಫಲವಾಗಿರುವುದನ್ನು ಪೀಠವು ಗಮನಿಸಿತು.
  • ‘ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದ ಹೊರತಾಗಿಯೂ ತನ್ನ ಮಗಳ ವಿವಾಹದ ವೆಚ್ಚಗಳನ್ನು ಭರಿಸುವುದು ಪುರುಷನ ಕರ್ತವ್ಯವಾಗಿದೆ. ಆದ್ದರಿಂದ ಈ ಉದ್ದೇಶಕ್ಕಾಗಿ ₹10 ಲಕ್ಷವನ್ನು ನೀಡಬೇಕೆಂದು ಬಯಸುತ್ತೇವೆ’ ಎಂದು ಪೀಠ ತಿಳಿಸಿತು.
  • ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿ ಕುಟುಂಬ ನ್ಯಾಯಾಲಯವು 2019ರಲ್ಲಿ ಹಾಗೂ ದೆಹಲಿ ಹೈಕೋರ್ಟ್ 2023ರಲ್ಲಿ ನೀಡಿದ್ದ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
  • ಸಭಾಪತಿಯಾಗಿ ರಾಧಾಕೃಷ್ಣನ್ಪದಗ್ರಹಣ

ಸಂದರ್ಭ: ನೂತನ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪಿ.ರಾಧಾಕೃಷ್ಣನ್‌ ಅವರು, ರಾಜ್ಯಸಭೆಯ ಸಭಾಪತಿಯಾಗಿ ಪದಗ್ರಹಣ ಮಾಡಿದರು.

  • ರಾಜ್ಯಸಭೆ ಸಭಾಪತಿಗಳ ಕಚೇರಿಗೆ ತೆರಳಿದ ರಾಧಾಕೃಷ್ಣನ್‌ ಅವರು ಮೇಲ್ಮನೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಪದಗ್ರಹಣ ದಾಖಲೆಗಳಿಗೆ ಸಹಿ ಮಾಡಿದರು. ಗೃಹ ಇಲಾಖೆಯೂ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್‌ ಅವರ ಪದಗ್ರಹಣ ಸಂಬಂಧ ಪ್ರತ್ಯೇಕ ಅಧಿಸೂಚನೆಯನ್ನೂ ಹೊರಡಿಸಿತು.

ಪ್ರಚಲಿತ ವಿದ್ಯಮಾನಗಳು: 12ನೇ ಸೆಪ್ಟೆಂಬರ್ 2025

ನದಿ ಜೋಡಣೆ: ಪಾಲು ಹೆಚ್ಚಳಕ್ಕೆ ಪಟ್ಟು

ಸಂದರ್ಭ: ಗೋದಾವರಿ–ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸೇರಿದಂತೆ ಪಾಲುದಾರ ರಾಜ್ಯಗಳು, ನೀರಿನ ಪಾಲನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸ್ಪಷ್ಟಪಡಿಸಿವೆ.
  • ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಅಂತರ್‌ ನದಿಗಳ ಜೋಡಣೆಯ ವಿಶೇಷ ಸಮಿತಿಯ 23ನೇ ಸಭೆ ಒಮ್ಮತಾಭಿಪ್ರಾಯಕ್ಕೆ ಬರುವಲ್ಲಿ ವಿಫಲ ಆಯಿತು.
  • ಇನ್ನೊಂದೆಡೆ, ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿತು.
  • ನದಿ ಜೋಡಣೆಗೆ ತಾತ್ವಿಕ ಒಪ್ಪಿಗೆ ವ್ಯಕ್ತಪಡಿಸಿರುವ ತೆಲಂಗಾಣವು, ಪೋಲವರಂನಿಂದಲೇ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿಯಿತು.
  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ. ರಾಜ್ಯಕ್ಕೆ ನೈಜವಾಗಿ 2.19 ಟಿಎಂಸಿ ಅಡಿ ಮಾತ್ರ ಸಿಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬುದು ಕರ್ನಾಟಕದ ಪ್ರಮುಖ ತಕರಾರು. ಈ ಮಹಾ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಧ್ವನಿ ಎತ್ತಿದೆ.

147 ಟಿಎಂಸಿ ಅಡಿಗಾಗಿ ಜಟಾಪಟಿ

  • ಗೋದಾವರಿಕಾವೇರಿ ನದಿಗಳ ಜೋಡಣೆ ಯೋಜನೆಯಲ್ಲಿ ಗೋದಾವರಿಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್‌–ಕಾವೇರಿ ನದಿಗಳ ಜೋಡಣೆ ಮಾಡಲಾಗುವುದು.
  • ಗೋದಾವರಿ ಕಣಿವೆಯ ಹೆಚ್ಚುವರಿ 248 ಟಿಎಂಸಿ ಅಡಿ ನೀರನ್ನು ಕೃಷ್ಣಾ, ಪೆನ್ನಾರ್ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯಗಳು ಒಪ್ಪಿರಲಿಲ್ಲ. ಬಳಿಕ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಲಾಗಿತ್ತು.
  • ಗೋದಾವರಿ ನದಿಯ ಉಪನದಿ ಇಂದ್ರಾವಳಿಯಲ್ಲಿ ಬಳಕೆಯಾಗದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವು ಯೋಜನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬೇಡ್ತಿವರದಾ ನದಿ ಜೋಡಣೆಯಿಂದ 18 ಟಿಎಂಸಿ ಅಡಿ ನೀರು ದೊರಕಲಿದೆ ಎಂದು ಅಂದಾಜಿಸಲಾಗಿದೆ.

ವಿಷ್ಣು, ಸರೋಜಾದೇವಿಗೆ ‘ಕರ್ನಾಟಕ ರತ್ನ’

ಸಂದರ್ಭ: ಚಲನಚಿತ್ರ ನಟ ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
  • ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕರ್ನಾಟಕ ರತ್ನಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸದ್ಯವೇ ನಿಗದಿ ಮಾಡಲಿದೆ ಎಂದು ತಿಳಿಸಿದರು.
  • ‘ವಿಷ್ಣುವರ್ಧನ್ ಅವರು ಕನ್ನಡದ ಮೇರುನಟರ ಪೈಕಿ ಒಬ್ಬರು. ಇವರಿಗೆ ಕರ್ನಾಟಕ ರತ್ನ ನೀಡಬೇಕು’ ಎಂದು ವಿಷ್ಣುವರ್ಧನ್ ಕುಟುಂಬ, ಅಭಿಮಾನಿಗಳ ಸಂಘ ಮತ್ತು ಚಲನಚಿತ್ರ ಕಲಾವಿದರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
  • ಅಭಿಮಾನ್‌ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇತ್ತೀಚೆಗೆ ರಾತ್ರೋರಾತ್ರಿ ನೆಲಸಮ ಮಾಡಿದ್ದರಿಂದ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಮೀನು ನೀಡಬೇಕು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು.
  • ಅಲ್ಲದೇ, ನಟಿಯರಾದ ಜಯಮಾಲಾ, ಶ್ರುತಿ, ತಾರಾ ಅನೂರಾಧ, ಮಾಳವಿಕಾ ಅವಿನಾಶ್ ಅವರು ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ನೀಡುವ ತೀರ್ಮಾನ ಕೈಗೊಂಡಿದೆ.

ಕುವೆಂಪುಗೆಭಾರತರತ್ನ: ಶಿಫಾರಸು

  • ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ‘ಭಾರತರತ್ನ’ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಕರ್ನಾಟಕ ರತ್ನ ಪ್ರಶಸ್ತಿ

  • ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
  • ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
  • ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ.

ಸಿನಿಮಾ ಕ್ಷೇತ್ರದ್ದೆ ಮೇಲುಗೈ

  • ಈ ಹಿಂದೆ ನೀಡಿದ 10 ಕರ್ನಾಟಕ ಪ್ರಶಸ್ತಿಗಳು ಹಾಗೂ ಹೊಸದಾಗ ಘೋಷಣೆಯಾಗಿರುವ ಪ್ರಶಸ್ತಿಗಳು ಸೇರಿ ಒಟ್ಟು 12 ಮಂದಿಯಲ್ಲಿ ನಾಲ್ಕು ಮಂದಿ ಸಿನಿಮಾ ಕ್ಷೇತ್ರದವರಾಗಿದ್ದಾರೆ. ಉಳಿದಂತೆ ಸಮಾಜ ಸೇವೆಗೆ ಶಿವಕುಮಾರ ಸ್ವಾಮೀಜಿ, ಡಿ ವೀರೇಂದ್ರ ಗೌಡ, ಸಾಹಿತ್ಯಕ್ಕೆ ಕುವೆಂಪು, ದೇ ಜವರೇಗೌಡ, ವೈದ್ಯಕೀಯ ಸಾಧನೆಗೆ ಖ್ಯಾತ ಹೃದ್ರೋಗ ತಜ್ಞ ದೇವಿಪ್ರಸಾದ್ ಶೆಟ್ಟಿ, ರಾಜಕೀಯ ಸಾಧನೆಗೆ ಎಸ್‌ ನಿಜಲಿಂಗಪ್ಪ, ಸಂಗೀತ ಕ್ಷೇತ್ರದಲ್ಲಿ ಭೀಮಸೇನ ಜೋಷಿ, ವಿಜ್ಞಾನಿ ಸಿಎನ್‌ಆರ್‌ ರಾವ್‌ ಪಡೆದುಕೊಂಡಿದ್ದಾರೆ.

200 ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದರುವ ವಿಷ್ಣು

  • ನಟ ವಿಷ್ಣುವರ್ಧನ್ ಅವರು 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 14 ಬಾರಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಫಿಲ್ಮ್‌ಫೇರ್ ಪ್ರಶಸ್ತಿಗಳು, 8 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರವು ವಾರ್ಷಿಕ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ಮರುನಾಮಕರಣ ಮಾಡಿತ್ತು.

ಪಂಚಭಾಷೆ ತಾರೆಗೆ ಒಲಿದ ಪ್ರಶಸ್ತಿ

  • ಬಿ. ಸರೋಜಾದೇವಿ ಅವರು ಬೆಂಗಳೂರು ಮೂಲದ ದಕ್ಷಿಣ ಭಾರತದ ಖ್ಯಾತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ, “ಅಭಿನಯ ಸರಸ್ವತಿ” ಎಂದು ಖ್ಯಾತರಾಗಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಕನ್ನಡದ “ಮಹಾಕವಿ ಕಾಳಿದಾಸ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು, 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. 2025 ರಲ್ಲಿ ಅನಾರೋಗ್ಯ ಕಾರಣಕ್ಕೆ ನಿಧನರಾದರು.

ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ

ಸಂದರ್ಭ: ನಗರದ ಖಾಸಗಿ ಆಸ್ಪತ್ರೆ ಗಳಲ್ಲಿ ಐವಿಎಫ್ (ಕೃತಕ ಗರ್ಭಧಾರಣೆ) ಚಿಕಿತ್ಸಾ ವೆಚ್ಚ ದುಬಾರಿ ಆಗಿರುವುದ ರಿಂದ, ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಬಿವಿಎಂಸಿಆರ್‌ಐ) ಈ ಕೇಂದ್ರ ತಲೆಯೆತ್ತಲಿದೆ.
  • ಬದಲಾದ ಜೀವನಶೈಲಿಯಿಂದ ಜನರಲ್ಲಿ ಫಲವತ್ತತೆ ದರ ಕುಸಿಯುತ್ತಿದೆ. ಇದರಿಂದಾಗಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸಾ ವೆಚ್ಚ ಭರಿಸುವುದು ಬಡ, ಮಧ್ಯಮ ವರ್ಗದವರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ ಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ.
  • ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಇರುವ ಎಬಿವಿಎಂಸಿಆರ್‌ಐನಲ್ಲಿ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸಿವಿಲ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭಿಸುವ ಸಾಧ್ಯತೆಯಿದೆ.
  • ಈ ಕೇಂದ್ರವು ತಜ್ಞ ವೈದ್ಯರ ಕೊಠಡಿಗಳು, ಪ್ರಯೋಗಾಲಯ, ನೋಂದಣಿ ಕೌಂಟರ್‌, ಸಮಾಲೋಚನಾ ಕೊಠಡಿ ಸೇರಿ ವಿವಿಧ ವಿಭಾಗಗಳನ್ನು ಹೊಂದಲಿದೆ. ಡೇ ಕೇರ್‌ ಸೆಂಟರ್‌ನಂತೆ (ಹೊರರೋಗಿ ವಿಭಾಗ) ಕಾರ್ಯ ನಿರ್ವಹಿಸಲಿದೆ. ಐವಿಎಫ್‌ಗೆ ನಿಗದಿಪಡಿ ಸಲಾದ ಮಾನದಂಡದ ಅನುಸಾರ ಕೇಂದ್ರವನ್ನು ಸಜ್ಜುಗೊಳಿಸಲಾಗುತ್ತದೆ. ಬಳಿಕ ಸ್ತ್ರೀರೋಗ ತಜ್ಞರು ಒಳಗೊಂಡಂತೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
  • ದುಬಾರಿ ಚಿಕಿತ್ಸೆ: ಮಕ್ಕಳಾಗದೇ ಇರುವ ಮಹಿಳೆಯರ ಅಂಡಾಣು ಹಾಗೂ ಪುರುಷರ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಫಲವತ್ತಾಗಿಸಿ, ನಂತರ ಭ್ರೂಣವನ್ನು ಮಹಿಳೆಯ ಗರ್ಭಕ್ಕೆ ಸೇರಿಸುವ ಕಾರ್ಯವಿಧಾನವೇ ಐವಿಎಫ್. ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಈ ತಂತ್ರಜ್ಞಾನ ವರದಾನವಾಗಿ ಪರಿಣಮಿಸಿದೆ.
  • ಖಾಸಗಿ ಕ್ಲಿನಿಕ್‌ಗಳಲ್ಲಿ ಈ ಚಿಕಿತ್ಸೆಗೆ ₹1.5 ಲಕ್ಷದಿಂದ ₹5 ಲಕ್ಷದವರೆಗೆ ವೆಚ್ಚವಾಗಲಿದೆ. ಈ ಚಿಕಿತ್ಸೆ ಆರೋಗ್ಯ ವಿಮೆಗಳಡಿ ಸೇರ್ಪಡೆಯಾಗದಿರುವುದರಿಂದ, ಬಡ–ಮಧ್ಯಮ ವರ್ಗದವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ.
  • ಐವಿಎಫ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆ, ಈ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 2023–24ನೇ ಸಾಲಿನ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸಾ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬರದಿರುವುದರಿಂದ ಈ ಘೋಷಣೆ ಕಾರ್ಯಗತವಾಗಿರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ನಗರದಲ್ಲಿ ಈ ಕ್ಲಿನಿಕ್ ನಿರ್ಮಿಸುತ್ತಿದೆ.

ಎಬಿಎಆರ್ಕೆಗೆ ಒಳಪಡದ ಚಿಕಿತ್ಸೆ

  • ಐವಿಎಫ್ ಚಿಕಿತ್ಸೆಯು ಸರ್ಕಾರಿ ಆರೋಗ್ಯ ವಿಮೆಯಾದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿ ಸೇರ್ಪಡೆಯಾಗಿಲ್ಲ. ಈ ಯೋಜನೆಯಡಿ ಮಂಡಿಚಿಪ್ಪು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಸೇರಿದಂತೆ 1,650 ಚಿಕಿತ್ಸಾ ಪ್ಯಾಕೇಜ್‌ಗಳಿವೆ. ಆದರೆ, ಐವಿಎಫ್‌ಗೆ ಸಂಬಂಧಿಸಿದ ಚಿಕಿತ್ಸೆಗಳು ಒಳಪಟ್ಟಿಲ್ಲ. ಆದ್ದರಿಂದ ಎಬಿವಿಎಂಸಿಆರ್‌ಐನಲ್ಲಿ ಚಿಕಿತ್ಸಾ ಕೇಂದ್ರ ಸಜ್ಜುಗೊಂಡ ಬಳಿಕ, ವೈದ್ಯಕೀಯ ತಜ್ಞರ ಸಮಿತಿ ಕೈಗೆಟುಕುವ ದರ ನಿಗದಿಪಡಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

‘ಕಾಗದ, ನೋಟ್‌ಬುಕ್‌ ಮೇಲಿನ ಜಿಎಸ್‌ಟಿ ಗೊಂದಲ ಬಗೆಹರಿಸಿ’

ಸಂದರ್ಭ: ‘ಪಠ್ಯಪುಸ್ತಕ, ನೋಟ್‌ಬುಕ್‌ಗಳಿಗೆ ಶೂನ್ಯ ಜಿಎಸ್‌ಟಿ, ಕಾಗದಕ್ಕೆ ಶೇ 18 ರಷ್ಟು ಜಿಎಸ್‌ಟಿ ವಿಧಿಸಿರುವುದು ಗೊಂದಲ ಉಂಟು ಮಾಡಿದೆ. ಕಾರ್ಪೊರೇಟ್‌ ಕಂಪನಿಗಳಿಗೆ ಮಾತ್ರ ಲಾಭವಾಗ ಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಯಾವುದೇ ಲಾಭವಿಲ್ಲ’ ಎಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರ ಸಂಘ ತಿಳಿಸಿದೆ.
  • ‘ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಶೂನ್ಯ ಜಿಎಸ್‌ಟಿ ಮಾಡಿರುವ ಉದ್ದೇಶ ಒಳ್ಳೆಯದಿದೆ. ಆದರೆ, ತಪ್ಪಾದ ನಿಯಮದಿಂದಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಬದಲಾಗಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ’ ಎಂದು ಸಂಘದ ಮಾಜಿ ಕಾರ್ಯದರ್ಶಿ ಶರವಣ್‌ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
  • ‘ಮಿಲ್‌ನಿಂದ ಸರಬರಾಜಾಗುವ ಕಾಗದವು ಶಾಲಾ ಪಠ್ಯ ಪುಸ್ತಕಕ್ಕೆ ಬಳಕೆಯಾಗುತ್ತದೆಯೇ? ಇಲ್ಲವೇ? ಎಂಬುದು ಗೊತ್ತಾಗುವುದಿಲ್ಲ. ಅದಕ್ಕೆ ಶೇ 18 ಜಿಎಸ್‌ಟಿ ಕಟ್ಟಬೇಕು. ಶಾಲಾ ಪಠ್ಯ ಅಥವಾ ನೋಟ್‌ ಬುಕ್‌ ತಯಾರಿಸಿದಾಗ ಶೇ 18 ಜಿಎಸ್‌ಟಿ ವಾಪಸ್‌ ಬರುವುದಿಲ್ಲ. ಹಾಗಾಗಿ ₹100 ಪುಸ್ತಕ ಖರೀದಿಸಲು ₹118 ನೀಡಬೇಕಾಗುತ್ತದೆ’ ಎಂದರು.
  • ‘ಹಿಂದೆ ಎಲ್ಲದಕ್ಕೂ ಶೇ 12 ಜಿಎಸ್‌ಟಿ ಇದ್ದಾಗ ಈ ಗೊಂದಲಗಳಿರಲಿಲ್ಲ. ಈಗ ಕಾಗದ ತಯಾರಿ ಮತ್ತು ನೋಟ್‌ಬುಕ್‌, ಪಠ್ಯಪುಸ್ತಕ ತಯಾರಿ ಎಲ್ಲವನ್ನು ಒಂದೇ ಕಡೆ ಮಾಡುವುದು ಕಾರ್ಪೊರೇಟ್‌ ಕಂಪನಿಗಳು ಮಾತ್ರ. ಅವರಿಗೆ ಶೂನ್ಯ ಜಿಎಸ್‌ಟಿಯ ಲಾಭ ಸಿಗಲಿದೆ. ಆ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಲು ಸಾಧ್ಯ. ಇದರಿಂದ ಸಣ್ಣದಾಗಿ ವ್ಯಾಪಾರ ಮಾಡಿಕೊಂಡಿರುವ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರು ಅಂಗಡಿಯ ಬಾಗಿಲು ಹಾಕಬೇಕಾದ ಪರಿಸ್ಥಿತಿ ಬರಲಿದೆ’ ಎಂದರು.
  • ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ 5ರ ಜಿಎಸ್‌ಟಿ ಅಡಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.

ಪೊಲೀಸರ ಆರೋಗ್ಯ ತಪಾಸಣೆಗೆ ‘ಖುಷಿ’ ಯೋಜನೆ   

ಸಂದರ್ಭ: ಹ್ಯಾಪಿಯೆಸ್ಟ್‌ ಹೆಲ್ತ್‌ ಸಂಸ್ಥೆ ಹಾಗೂ ನಗರ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗೆ ‘ಖುಷಿ’ ಯೋಜನೆ ಜಾರಿ ಮಾಡಲಾಗಿದೆ.
  • ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಈ ಯೋಜನೆಗೆ ಚಾಲನೆ ನೀಡಿದರು.
  • ಪೊಲೀಸರ ಆರೋಗ್ಯ ನಿರ್ವಹಣೆಗೆ ರೂಪಿಸಲಾದ ಯೋಜನೆ ಇದಾಗಿದೆ. ಮಧುಮೇಹ, ಅಧಿಕ ರಕ್ತದ ಒತ್ತಡ, ಬೊಜ್ಜು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಬಹುದು.
  • ಪೊಲೀಸ್‌ ವೃತ್ತಿಯಲ್ಲಿ ದೀರ್ಘಾವಧಿ ಕೆಲಸ, ಅತಿಯಾದ ಒತ್ತಡದ ವಾತಾವರಣ, ಅನಿಯಮಿತ ದಿನಚರಿಗಳಿರುತ್ತವೆ. ಪೊಲೀಸರ ಆರೋಗ್ಯದ ಕಾಳಜಿ ಹಾಗೂ ನಿರ್ವಹಣೆ ಸುಲಭವಾಗಿಲ್ಲ. ವೈಯಕ್ತಿಕ ಯೋಗಕ್ಷೇಮದ ಜೊತೆಗೆ ವೃತ್ತಿಪರ ದಕ್ಷತೆ ಮತ್ತು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
  • ಜೀವನಶೈಲಿಯ ಸಮಸ್ಯೆಗಳು ಮತ್ತು ಪೊಲೀಸರು ಎದುರಿಸುತ್ತಿರುವ ಅನೇಕ ಆರೋಗ್ಯ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಂಡು ‘ಖುಷಿ ಯೋಜನೆ’ ಜಾರಿಗೆ ತರಲಾಗಿದೆ ಎಂದು ಹ್ಯಾಪಿಯೆಸ್ಟ್‌ ಹೆಲ್ತ್‌ ಯೋಜನೆ ಅಧಿಕಾರಿಗಳು ತಿಳಿಸಿದರು.
  • ಹ್ಯಾಪಿಯೆಸ್ಟ್‌ ಹೆಲ್ತ್‌ನ ಮುಖ್ಯ ಸಂಪಾದಕ ರವಿ ಜೋಶಿ ಮಾತನಾಡಿ, ‘ಸಮಾಜದ ಬೆನ್ನೆಲುಬು ಆಗಿರುವ ಪೊಲೀಸ್‌ ಸಿಬ್ಬಂದಿ ಸಮತೋಲನ ಜೀವನ ನಡೆಸಲು ಸಹಾಯ ಮಾಡುವುದೇ ಈ ಯೋಜನೆಯ ಉದ್ದೇಶ’ ಎಂದು ಹೇಳಿದರು.
  • ‘ಮಧುಮೇಹ, ಅಧಿಕ ರಕ್ತದ ಒತ್ತಡ ಹಾಗೂ ಬೊಜ್ಜಿನಂತಹ ಸಮಸ್ಯೆಗಳನ್ನು ಪರೀಕ್ಷಿಸದೇ ಬಿಟ್ಟರೆ ಅವುಗಳು ಸದ್ದಿಲ್ಲದೇ ಜೀವನದ ಗುಣಮಟ್ಟ ಹಾಳು ಮಾಡುತ್ತವೆ’ ಎಂದು ಹ್ಯಾಪಿಯೆಸ್ಟ್‌ ಹೆಲ್ತ್‌ನ ಸಿಇಒ ಶ್ರೀನಿವಾಸ್‌ ನಾರಾಯಣ್ ಹೇಳಿದರು.
  • ‘ಪ್ರಾಜೆಕ್ಟ್‌ ಖುಷಿ’ ಯೋಜನೆ ಅಡಿ ಮೂರು ತಿಂಗಳು ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬಯೊ ಸಿಎನ್‌ಜಿ ಘಟಕಕ್ಕೆ ಜಮೀನು

ಸಂದರ್ಭ: ಪ್ರತಿ ನಿತ್ಯ 300 ಟನ್‌ ಘನತ್ಯಾಜ್ಯವನ್ನು ಬಳಸಿಕೊಂಡು ಬಯೊ ಸಿಎನ್‌ಜಿ (ಕಂಪ್ರೆಸ್ಡ್‌ ನ್ಯಾಚುರಲ್‌ ಗ್ಯಾಸ್) ಉತ್ಪಾದಿಸಲು 18 ಎಕರೆ ಭೂಮಿಯನ್ನು 25 ವರ್ಷಗಳಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಗೇಲ್‌ ಇಂಡಿಯಾ ಸಂಸ್ಥೆಯಿಂದ ನಿತ್ಯ 300 ಟನ್‌ ಘನತ್ಯಾಜ್ಯ ಸಿಎನ್‌ಜಿ ಉತ್ಪಾದನೆ.
  • ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ಹರಳಗುಂಟೆ ಗ್ರಾಮದಲ್ಲಿ ಹಿಂದಿನ ಬಿಬಿಎಂಪಿ ಮಾಲೀಕತ್ವದಲ್ಲಿರುವ ಸರ್ವೆ ನಂ. 39, 45, 46ರ ಒಟ್ಟು ವಿಸ್ತೀರ್ಣ 29.29 ಎಕರೆಯಲ್ಲಿ 10 ಎಕರೆ ಜಮೀನು ಹಾಗೂ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮಾಲೀಕತ್ವದಲ್ಲಿರುವ ಸರ್ವೆ ನಂ. 39, 40, 45, 46ರ ಎಂಟು ಎಕರೆ ಜಮೀನನ್ನು ಗೇಲ್‌ ಇಂಡಿಯಾ ಸಂಸ್ಥೆಗೆ ಗುತ್ತಿಗೆ ನೀಡಲು ಸಮ್ಮತಿಸಲಾಗಿದೆ.
  • ಪ್ರತಿನಿತ್ಯ 300 ಟನ್‌ ಘನತ್ಯಾಜ್ಯ ವನ್ನು ಬಳಸಿಕೊಂಡು ಬಯೊ ಸಿಎನ್‌ಜಿ ಉತ್ಪಾದಿಸುವ ಘಟಕವನ್ನು ಗೇಲ್‌ ಸಂಸ್ಥೆ ಸ್ಥಾಪಿಸಲಿದೆ. ಮುಂದಿನ ದಿನಗಳಲ್ಲಿ ಈ ಘಟಕದ ಸಾಮರ್ಥ್ಯವನ್ನು 500 ಟನ್‌ಗೆ ವಿಸ್ತರಿಸಲೂ ಅನುಮೋದನೆ ನಿಡಲಾಗಿದೆ. ಕಂದಾಯ ಇಲಾಖೆ ಹಾಗೂ ಬಿಎಸ್‌ಡಬ್ಲ್ಯುಎಂಎಲ್‌ ಜಂಟಿ ಸರ್ವೆ ನಡೆಸಿ ಭೂಮಿಯನ್ನು ಹಸ್ತಾಂತರಿಸಬೇಕು. ಭವಿಷ್ಯದಲ್ಲಿ ಉದ್ಭವಿಸ ಬಹುದಾದ ಕಾರ್ಯಾಚರಣೆ ಯಲ್ಲಿನ ತೊಡಕುಗಳನ್ನು ಬಗೆಹರಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಪ್ರಾಧಿಕಾರವನ್ನಾಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
  • ಎರಡು ಆಸ್ಪತ್ರೆ: ಯಲಹಂಕದ ಬೆಳ್ಳಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸುವ ಬದಲು, ತಲಾ 100 ಹಾಸಿಗೆಗಳ ಎರಡು ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲು ಸಚಿವ ಸಂಪುಟ ನಿರ್ಣಯಿಸಿದೆ.
  • ಯಲಹಂಕದ ಬೆಳ್ಳಹಳ್ಳಿ ಸರ್ವೆ ನಂ.55ರ ಐದು ಎಕರೆ ಜಮೀನಿನಲ್ಲಿ ₹50 ಕೋಟಿ ವೆಚ್ಚದಲ್ಲಿ ಹಾಗೂ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆಯ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.

100 ಎಂಎಲ್‌ಡಿ ಎಸ್‌ಟಿಪಿ

  • ಬೆಂಗಳೂರು ಜಲಮಂಡಳಿ ವತಿಯಿಂದ ಬೈರಮಂಗಲದ ಕೆರೆ ದಡದಲ್ಲಿ ಪ್ರತಿ ನಿತ್ಯ 100 ದಶಲಕ್ಷ ಲೀಟರ್‌ (ಎಂಎಲ್‌ಡಿ) ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಹಾಗೂ 25 ಎಂಎಲ್‌ಡಿ ಸಾಮರ್ಥ್ಯದ ತೃತೀಯ ಹಂತದ ಎಸ್‌ಟಿಪಿಗಳ ಏಳು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅಂದಾಜು ₹391.82 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

3ಡಿ ವಾಯು ಕಣ್ಗಾವಲು ರೇಡಾರ್‌ ನಿರ್ಮಾಣ

ಸಂದರ್ಭ: ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್ ಲಿಮಿಟೆಡ್‌ (ಟಿಎಎಸ್‌ಎಲ್‌) ಎಂಜಿನಿಯರಿಂಗ್‌ ಕ್ಷೇತ್ರದ ಪ್ರಮುಖ ಸಂಸ್ಥೆ ಇಂದ್ರಾ ಸಹಯೋಗದಲ್ಲಿ ಸುಧಾರಿತ ನೌಕಾ ವಾಯು ಕಣ್ಗಾವಲು ರೇಡಾರ್‌ ಅನ್ನು ನಿರ್ಮಿಸಿದೆ.
  • 3ಡಿ ವಾಯು ಕಣ್ಗಾವಲು ರೇಡಾರ್‌ (3ಡಿ–ಎಎಸ್‌ಆರ್‌) ತಯಾರಿಸುವ ಮೂಲಕ ಮುಂದಿನ ಪೀಳಿಗೆಯ ನೌಕಾ ಕಣ್ಗಾವಲು ರೇಡಾರ್‌ ವ್ಯವಸ್ಥೆಯನ್ನು ನಿರ್ಮಿಸುವ ಹಾಗೂ ಸಂಯೋಜಿಸುವ ಸಾಮರ್ಥ್ಯ ಪ್ರದರ್ಶಿಸಿದ ಭಾರತದ ಮೊದಲ ಕಂಪನಿಯಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ 3ಡಿ–ಎಎಸ್‌ಆರ್‌– ಲಾಂಜಾ–ಎನ್‌ ಅನ್ನು ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಟಿಎಎಸ್‌ಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.
  • ಭಾರತದ ರಕ್ಷಣಾ ಸ್ವಾವಲಂಬನೆಯ ಅನ್ವೇಷಣೆಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಯುದ್ಧನೌಕೆಯ ಎಲ್ಲ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆ ಸಾಧಿಸುವಂತೆ ರೇಡಾರ್‌ಅನ್ನು ತಯಾರಿಸಲಾಗಿದೆ. ಕರ್ನಾಟಕದ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ನಲ್ಲಿ ರೇಡಾರ್‌ನ ಜೋಡಣೆ, ಸಂಯೋಜನೆ ಹಾಗೂ ಪರೀಕ್ಷಾ ಕಾರ್ಯವನ್ನು ನಡೆಸಲಾಗಿದೆ ಎಂದು ಹೇಳಿದೆ.

ಮಾರಿಷಸ್‌ಗೆ ₹6,000 ಕೋಟಿ ಪ್ಯಾಕೇಜ್

ಸಂದರ್ಭ: ಭಾರತವು ಮಾರಿಷಸ್‌ಗೆ ₹6,000 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಗುರುವಾರ ಘೋಷಿಸಿದೆ. ಕಡಲ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಏಳು ಒಪ್ಪಂ‌ದಗಳಿಗೆ ಸಹಿ ಹಾಕಿದೆ.
  • ಮಾರಿಷಸ್ ಪ್ರಧಾನಿ  ನವೀನ್‌ಚಂದ್ರ ರಾಮಗುಲಾಂ ಅವರೊಂದಿಗೆ ವಾರಾಣಸಿಯಲ್ಲಿ ಗುರುವಾರ ಮಾತುಕತೆ ನಡೆಸಿದ ಮೋದಿ, ‘ಭಾರತ ಮತ್ತು ಮಾರಿಷಸ್‌ ಎರಡು ದೇಶಗಳಾಗಿದ್ದರೂ ಅವುಗಳ ಕನಸು ಮತ್ತು ಗುರಿ ಒಂದೇ. ಭಾರತ ಮತ್ತು ಮಾರಿಷಸ್‌ ಪಾಲುದಾರ ರಾಷ್ಟ್ರಗಳಷ್ಟೇ ಅಲ್ಲ, ಒಂದೇ ಕುಟುಂಬದ ಸದಸ್ಯರಂತೆ. ಮಾರಿಷಸ್‌ನ ವಿಶೇಷ ಆರ್ಥಿಕ ವಲಯದ ಭದ್ರತೆ ಮತ್ತು ಕಡಲ ಸಾಮರ್ಥ್ಯವನ್ನು ಬಲಪಡಿಸಲು ಭಾರತ ಸಂಪೂರ್ಣ ಬದ್ಧವಾಗಿದೆ’ ಎಂದು ಅವರು ಹೇಳಿದರು.
  • ಮಾರಿಷಸ್‌ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ ಬಳಿಕ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸಲು ಭಾರತ ಮತ್ತು ಮಾರಿಷಸ್‌ ಕೆಲಸ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
  • ವಿಶೇಷ ಆರ್ಥಿಕ ಪ್ಯಾಕೇಜ್‌ ಅಡಿಯಲ್ಲಿ, ಬಂದರು, ವಿಮಾನ ನಿಲ್ದಾಣ, ರಸ್ತೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಗೂ ಹೊಸ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸುವುದು ಸೇರಿದಂತೆ ಕನಿಷ್ಠ 10 ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಮಾರಿಷಸ್‌ಗೆ ಸಹಾಯ ಮಾಡಲಿದೆ.
  • ಈ ಪ್ಯಾಕೇಜ್‌ ಕೇವಲ ಸಹಾಯವಲ್ಲ, ಬದಲಿಗೆ ಭವಿಷ್ಯದ ಹೂಡಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
  • ಈ ಏಳು ಒಪ್ಪಂದಗಳು ಶಿಕ್ಷಣ, ವಿದ್ಯುತ್, ಜಲವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅನುಕೂಲವಾಗಲಿವೆ.

ವಲಸೆ ಪ್ರಕ್ರಿಯೆ ತ್ವರಿತ ಕಾರ್ಯಕ್ರಮ ವಿಸ್ತರಣೆ

ಸಂದರ್ಭ: ವಲಸೆ ಅನುಮತಿಗಳನ್ನು ತ್ವರಿತವಾಗಿ ಒದಗಿಸುವ ಎಫ್‌ಟಿಐ–ಟಿಟಿಪಿ (ಫಾಸ್ಟ್‌ಟ್ರ್ಯಾಕ್‌ ವಲಸೆ–ವಿಶ್ವಸನೀಯ ಪ್ರಯಾಣಿಕ ಯೋಜನೆ) ಸೌಲಭ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೆಚ್ಚುವರಿಯಾಗಿ ಐದು ವಿಮಾನ ನಿಲ್ದಾಣಗಳಲ್ಲಿ ಚಾಲನೆ ನೀಡಿದರು.
  • ಈ ಯೋಜನೆಯ ಅಡಿಯಲ್ಲಿ ಭಾರತದ ಪ್ರಜೆಗಳು ಹಾಗೂ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಇರುವವರಿಗೆ ತ್ವರಿತವಾಗಿ ವಲಸೆ ಅನುಮತಿಗಳನ್ನು ನೀಡಲಾಗುತ್ತದೆ.
  • ಈ ಯೋಜನೆಗೆ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಜುಲೈನಲ್ಲಿ ಮೊದಲು ಚಾಲನೆ ನೀಡಲಾಗಿತ್ತು. ಈಗ ಇದನ್ನು ಲಖನೌ, ತಿರುವನಂತಪುರ, ತಿರುಚಿರಾಪಳ್ಳಿ, ಕೊಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಿಗೆ ಕೂಡ ಗುರುವಾರ ವಿಸ್ತರಣೆ ಮಾಡಲಾಗಿದೆ.
  • ‘ಈ ಯೋಜನೆಯು ವಲಸೆ ಪ್ರಕ್ರಿಯೆಗಳನ್ನು ಸರಳವಾಗಿಸುತ್ತದೆ, ತ್ವರಿತವಾಗಿಸುತ್ತದೆ’ ಎಂದು ಸಚಿವ ಶಾ ಅವರು ಹೇಳಿದ್ದಾರೆ. ಅರ್ಹ ಪ್ರಯಾಣಿಕರಿಗೆ ಇ–ಗೇಟ್ ಸೌಲಭ್ಯವನ್ನು ಬಳಸಲು ಹಾಗೂ ಎಂದಿನ ವಲಸೆ ಸರತಿ ಸಾಲನ್ನು ತಪ್ಪಿಸಿಹೋಗಲು ಅವಕಾಶ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಬಯಸುವ ಪ್ರಯಾಣಿಕರು ಆನ್‌ಲೈನ್‌ ಮೂಲಕ (www.ftittp.mha.gov.in) ಅರ್ಜಿ ಸಲ್ಲಿಸಿ, ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಅಲ್ಲದೆ, ಇತರ ಕೆಲವು ಮಾಹಿತಿಯನ್ನೂ ಒದಗಿಸಬೇಕು. ಎಫ್‌ಟಿಐ ನೋಂದಣಿಯು ಗರಿಷ್ಠ ಐದು ವರ್ಷಗಳ ಅವಧಿಗೆ ಅಥವಾ ಪಾಸ್‌ಪೋರ್ಟ್‌ನ ಅವಧಿಯವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಚಾಲ್ತಿಯಲ್ಲಿ ಇರುತ್ತದೆ.

6,856 ಆದಿವಾಸಿ ಕುಟುಂಬಕ್ಕೆ ‘ಗೃಹಭಾಗ್ಯ’

ಸಂದರ್ಭ: ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ‘ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆ’ಯಡಿ ಮನೆಗಳನ್ನು ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
  • ಇದಕ್ಕಾಗಿ ₹160 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಪ್ರತಿ ಮನೆಯನ್ನು ₹4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೋಲಿಗ, ಹಸಲ, ಗೌಡ್ಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡು ಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಪಣಿಯನ್ ಮತ್ತಿತರ ಸಮುದಾಯಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದರು.
  • ನಿಯಮ ಸರಳೀಕರಣ: ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳ ತಿದ್ದುಪಡಿ’ಗೆ ಒಪ್ಪಿಗೆ ನೀಡಲಾಗಿದೆ.
  • ಈ ತಿದ್ದುಪಡಿಯಿಂದಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ, ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವಾಗ, ಕೆರೆಗಳಲ್ಲಿ ಹೂಳು ತೆಗೆಯುವಾಗ, ಕೃಷಿ ಮತ್ತು ಮೀನುಗಾರಿಕೆ ಹೊಂಡ ಗಳ ನಿರ್ಮಾಣ ವೇಳೆ ದೊರೆಯುವ ಮರಳು, ಮತ್ತಿತರ ಉಪಖನಿಜಗಳನ್ನು ಬಳಕೆ ಮಾಡಿದ ನಂತರ ಉಳಿದದ್ದನ್ನು ಸಾಗಣೆಗೆ ಅವಕಾಶ ನೀಡಲಾಗುವುದು. ರಾಜಧನ ಮತ್ತು ಇತರ ಪಾವತಿಗಳಲ್ಲಿ ಸೋರಿಕೆ ಆಗುವುದನ್ನು ತಡೆಯಲು ನಿಯಮ ಸರಳೀಕರಣ ಮಾಡಲಾಗಿದೆ.

ಪ್ರಮುಖ ತೀರ್ಮಾನಗಳು:

  • lಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ 2.0 (ಕೆ.ಜಿಐಎಸ್‌ 2.0) ಅನ್ನು ಅನುಷ್ಠಾನಗೊಳಿಸಲು  ₹150 ಕೋಟಿ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು. ದತ್ತಾಂಶ ಸಂಗ್ರಹ ಸ್ಥಳ, ಹೋಸ್ಟಿಂಗ್ಮೂಲ ಸೌಕರ್ಯ ಮತ್ತು ಅದರ ಭದ್ರತೆ ಕೈಗೊಳ್ಳಲಾಗುವುದು. ಡ್ರೋನ್ಮತ್ತು ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಸ್ವಯಂ ಚಾಲಿತವಾಗಿ ಅಳವಡಿಸಿಕೊಳ್ಳುತ್ತದೆ.
  • lಬಯೋ ಡೀಸೆಲ್‌(ಬಿ–100) ಅನ್ನು ಹೈ ಸ್ಪೀಡ್ಡೀಸೆಲ್ನೊಂದಿಗೆ ಮಿಶ್ರಣ ಮಾಡುವ (ಪರವಾನಗಿ) ಆದೇಶ 2025 ಕರಡು ಅಧಿಸೂಚನೆಗೆ ಅನುಮೋದನೆ.
  • lಪಿಎಂ ಕುಸುಮ್‌–ಬಿ ಯೋಜನೆಯಡಿ ನೆಟ್‌ವರ್ಕ್‌ ಗ್ರಿಡ್‌ನಿಂದ ಎಷ್ಟೇ ದೂರದಲ್ಲಿದ್ದರೂ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಅದರ ವೆಚ್ಚದ ಶೇ 50 ರಷ್ಟು ಮೊತ್ತವನ್ನು ಸಹಾಯಧನ ನೀಡಲು ತೀರ್ಮಾನ.  ಇದರಿಂದ ರೈತರ ಬೆಳೆಗಳಿಗೆ ಹಗಲು ನೀರು ನೀಡಬೇಕು ಎಂಬ ಬೇಡಿಕೆ ಈಡೇರಲಿದೆ.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್

ಸಂದರ್ಭ: ಡಿಜಿ– ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯ ಗ್ರಾಮ ಅಧಿಕಾರಿಗಳು, ಕಂದಾಯ ಆಡಳಿತ ಅಧಿಕಾರಿಗಳಿಗೆ 3500 ಕ್ರೋಮ್‌ಬುಕ್ ಖರೀದಿಸಿ, ವಿತರಿಸಲು ತೀರ್ಮಾನಿಸಲಾಗಿದೆ.
  • ಇದರ ಒಟ್ಟು ವೆಚ್ಚ ₹19.25 ಕೋಟಿ. ಪ್ರತಿ ಕ್ರೋಮ್‌ಬುಕ್‌ನ ಬೆಲೆ ₹55,000 ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು
  • ಹಿರಿಯರಿಗೆವಯೋ ವಂದನಾ’: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 70 ವರ್ಷ ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಹಿರಿಯರಿಗೆ (ಇಎಸ್‌ಐಎಸ್ ಫಲಾನುಭವಿಗಳು) ಆರೋಗ್ಯ ಸೇವೆಗಳ ಪ್ರಯೋಜನ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ.
  • ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಮಾರ್ಗಸೂಚಿಗಳ ಪ್ರಕಾರ ‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳು, ಅಂಗನವಾಡಿಗೆ ದಾಖಲಾಗಿರುವ ಮಕ್ಕಳ ಕುಟುಂಬದ ಹಿರಿಯರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಪಾಟೀಲ ಹೇಳಿದರು.

ಇವಿಎಂ ಬದಲು ಮತಪತ್ರ ಸುಗ್ರೀವಾಜ್ಞೆ ಇಲ್ಲ

  • ಜಿಬಿಎ ಮತ್ತು ಇತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಮತ ಪತ್ರಬಳಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸದಿರಲು ಸರ್ಕಾರ ತೀರ್ಮಾನಿಸಿದೆ.
  • ತಿದ್ದುಪಡಿ ಮಾಡಿದ ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಇಂದು ಈ ವಿಷಯ ಚರ್ಚೆಗೆ ಬರಲಿಲ್ಲ. ‘ಕಾನೂನಿಗೆ ತಿದ್ದುಪಡಿ ಮಾಡಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ಇವಿಎಂ ಅಥವಾ ಮತಪತ್ರ ಎರಡರಲ್ಲಿ ಯಾವುದಾದರೂ ಒಂದನ್ನು ಬಳಸಬಹುದು ಎಂಬ ಅಂಶ ಸುಪ್ರೀಂಕೋರ್ಟ್ ಒಂದು ತೀರ್ಪಿನಲ್ಲಿದೆ. ಹೀಗಾಗಿ ಸುಗ್ರೀವಾಜ್ಞೆಯ ಅವಶ್ಯ ಬೀಳದು ಎಂಬ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.

ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಸಂದರ್ಭ: ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರು ಅಂಕಿತ ಹಾಕುವುದಕ್ಕೆ ಕಾಲಮಿತಿ ವಿಧಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿರುವ ಪ್ರಶ್ನೆಗಳ ಕುರಿತು 10 ದಿನಗಳವರೆಗೆ ವಾದ–ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತು.
  • ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿ ಗಳಾದ ಸುರ್ಯಕಾಂತ್, ವಿಕ್ರಮ್ ನಾಥ್‌, ಪಿ.ಎಸ್‌.ನರಸಿಂಹ ಮತ್ತು ಎ.ಎಸ್‌.ಚಂದೂರ್ಕರ್‌ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ಕುರಿತು ಆಗಸ್ಟ್‌ 19ರಿಂದ ವಿಚಾರಣೆ ಪ್ರಾರಂಭಿಸಿತ್ತು.
  • ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ವಾದದ ಮುಕ್ತಾಯದೊಂದಿಗೆ ಪೀಠವು ತೀರ್ಪನ್ನು ಕಾಯ್ದಿರಿಸಿತು. ಕೇಂದ್ರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರೂ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
  • ರಾಷ್ಟ್ರಪತಿ ಅವರು ಎತ್ತಿದ್ದ ಪ್ರಶ್ನೆಗಳನ್ನು ಆಕ್ಷೇಪಿಸಿದ ವಿರೋಧ ಪಕ್ಷಗಳ ಆಡಳಿತವಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ತೆಲಂಗಾಣ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳ ಪರ ವಕೀಲರು ವಿರೋಧಗಳನ್ನು ದಾಖಲಿಸುವ ಮೂಲಕ ತಮ್ಮ ವಾದ ಅಂತಿಮಗೊಳಿಸಿದರು.
  • ಮಸೂದೆಗಳಿಗೆ ಅಂಕಿತ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಪ್ರಶ್ನಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ಏಪ್ರಿಲ್‌ 8ರಂದು ತೀರ್ಪು ನೀಡಿತ್ತು. ಪರಿಶೀಲನೆಗಾಗಿ ರಾಜ್ಯ‍ಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ರಾಷ್ಟ್ರಪತಿಯ ವರಿಗೆ ಕಾಲಮಿತಿ ನಿಗದಿ ಮಾಡಿತ್ತು.  ಇದರ ಬೆನ್ನಲ್ಲೇ, ರಾಷ್ಟ್ರಪತಿಯ ವರು ಸುಪ್ರೀಂ ಕೋರ್ಟ್‌ಗೆ ಐದು ಪುಟಗಳ ಪತ್ರ ಬರೆದು, 14 ಪ್ರಶ್ನೆಗಳನ್ನು ಎತ್ತಿದ್ದರು.

ಸೋನಿಯಾ ವಿರುದ್ಧದ ಅರ್ಜಿ ವಜಾ

  • ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ (1983) ಪಡೆಯುವುದಕ್ಕೂ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದರು ಎಂದು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
  • ಪೌರತ್ವದ ವಿಷಯವು ಕೇಂದ್ರ ಸರ್ಕಾರದ ವಿಶೇಷ, ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಅನಗತ್ಯವಾಗಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದರು.
  • ಪಟ್ನಾ ಹೈಕೋರ್ಟ್ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪವನ್ಕುಮಾರ್ಹೆಸರು ಶಿಫಾರಸು

ಸಂದರ್ಭ: ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯನ್ನಾಗಿ ನೇಮಕ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನ ನ್ಯಾಯ ಮೂರ್ತಿ ಪವನ್‌ಕುಮಾರ್‌ ಬಿ.ಭಜಂತ್ರಿ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.

  • ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ವಿಕ್ರಮ್‌ನಾಥ್‌ ಅವರ ನ್ನೊಳಗೊಂಡ ಕೊಲಿಜಿಯಂ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.
  • ಇದಲ್ಲದೆ, ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯಾಗಿ ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮೆನ್‌ ಸೇನ್‌ ಹಾಗೂ ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ಸುಂದರ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ.
  • 2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ಪಂಜಾಬ್‌–ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ಅವರು, ನಂತರದಲ್ಲಿ ಪಟ್ನಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ 2021ರ ಅ.20ರಂದು ವರ್ಗಾವಣೆಗೊಂಡಿದ್ದರು. 2025ರ ಅಕ್ಟೋಬರ್ 22ರಂದು ನಿವೃತ್ತಿ ಹೊಂದಲಿದ್ದಾರೆ.
  • ಸದನ ಇರುವುದು ಜನರ ಒಳಿತಿಗಾಗಿ

ಸಂದರ್ಭ: ಸಂಸತ್ತು ಅಥವಾ ವಿಧಾನ ಮಂಡಲದ ಸದನಗಳು ಇರುವುದು ಜನರ ಸಮಸ್ಯೆ–ಆಗುಹೋಗುಗಳ ಚರ್ಚೆಗೆ. ಅದನ್ನು ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಬಳಸಿಕೊಳ್ಳಬಾರದು ಎಂಬ ಅಭಿಪ್ರಾಯಕ್ಕೆ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇದಿಕೆ ಸಾಕ್ಷಿಯಾಯಿತು.

  • ನಗರದಲ್ಲಿ ಇದೇ 12 ಮತ್ತು 13ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್ ಮತ್ತು ಉಪಸ್ಪೀಕರ್‌, ಎಲ್ಲ ರಾಜ್ಯಗಳ ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿ ಭಾಗಿಯಾಗಲಿದ್ದಾರೆ.
  • ದೇಶದ ಎಲ್ಲ ರಾಜ್ಯಗಳಿಂದ ಬಂದಿದ್ದ ಗಣ್ಯರನ್ನು ಬರಮಾಡಿಕೊಂಡ ನಂತರ ಸಾಕ್ಷ್ಯಚಿತ್ರವೊಂದರ ಮೂಲಕ ಅವರೆಲ್ಲರಿಗೆ ಕರ್ನಾಟಕ ಸಂಸ್ಕೃತಿ–ಪರಂಪರೆ ಮತ್ತು ಹೆಗ್ಗಳಿಕೆಯನ್ನು ಪರಿಚಯಿಸಿಕೊಡಲಾಯಿತು. ದೇಶದ ಮೊದಲ ಸಂಸತ್ತು ‘ಅನುಭವ ಮಂಟಪ’. ಭಾರತದ ಪ್ರಜಾಪ್ರಭುತ್ವದ ತಳಹದಿಯನ್ನು ಕರ್ನಾಟಕದ ವಚನ ಚಳವಳಿಯಿಂದಲೇ ಕಾಣಬಹುದು ಎಂದು ಸಾಕ್ಷ್ಯಚಿತ್ರವು ವಿವರಿಸಿತು.
  • ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ‘ಸದನಗಳಲ್ಲಿ ನಡೆಯುವ ಕಲಾಪವನ್ನು ಇನ್ನಷ್ಟು ಉತ್ತಮಗೊಳಿಸುವ ಹಾದಿಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸುತ್ತೇವೆ’ ಎಂದರು.
  • ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ‘ಸದನಗಳು ಇರುವುದು ಚರ್ಚೆ ಮತ್ತು ಸಂವಾದದ ಮೂಲಕ ಜನರ ಕಷ್ಟ, ಸಮಸ್ಯೆ, ಆಗುಹೋಗುಗಳ ಬಗ್ಗೆ ಗಮನಹರಿಸಲು. ಜನಪ್ರತಿನಿಧಿಗಳು ಇದೇ ಹಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಸಭಾಧ್ಯಕ್ಷರ ಮೇಲಿದೆ’ ಎಂದರು.
  • ‘ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಳ್ಳುವ ಮುನ್ನ ಸುದೀರ್ಘವಾದ ಚರ್ಚೆ ನಡೆದಿದೆ. ವಾದ–ಪ್ರತಿವಾದಗಳು, ಸಮ್ಮತಿ–ಅಸಮ್ಮತಿಗಳು ಹಾಗೂ ಅವೆಲ್ಲವನ್ನು ಒಳಗೊಂಡ ಸಮನ್ವಯವಾದದ ರೂಪವಾಗಿ ಸಂವಿಧಾನ ರೂಪುಗೊಂಡಿದೆ. ಸದನ–ಕಲಾಪವನ್ನು ಇನ್ನಷ್ಟು ಉತ್ತಮವಾಗಿ ಹೇಗೆ ನಡೆಸಬಹುದು ಎಂಬುದರ ಸಾಧ್ಯತೆಗಳನ್ನು ಈ ಎರಡು ದಿನಗಳ ಸಮ್ಮೇಳನದಲ್ಲಿ ಪರಿಶೀಲಿಸೋಣ’ ಎಂದು ಕರೆ ನೀಡಿದರು.
  • ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನ ಕೊಡುಗೆಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್‌ ಪ್ರಸ್ತಾಪಿಸಿದರೆ, ವಿಧಾನ ಪರಿಷತ್ತಿನ ಮಹತ್ವವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ವಿವರಿಸಿದರು. ಉ‍ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.

ಪ್ರಚಲಿತ ವಿದ್ಯಮಾನಗಳು: 11ನೇ ಸೆಪ್ಟೆಂಬರ್ 2025

ಮರುಸಿಂಚನ: 27 ಜಿಲ್ಲೆಗಳಿಗೆ ವಿಸ್ತರಣೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ರೂಪಿಸಿರುವ ಯೋಜನೆ

ಸಂದರ್ಭ: ಕಲಿಕೆಯಲ್ಲಿ ಹಿಂದುಳಿ ದಿರುವ ಮಕ್ಕಳಿಗಾಗಿ ರೂಪಿಸಿರುವ ಮರುಸಿಂಚನ ಯೋಜನೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾರಿ ಗೊಳಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿನ ಸುಮಾರು 18 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುವ ಸಾಧ್ಯತೆ ಇದೆ.

  • ‘ಎರಡು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಈ ಯೋಜನೆಯನ್ನು 2025–26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.
  • ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಗುರುತಿಸಿ, ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ ಮೂಲಕ ಅವರ ಕಲಿಕಾ ಮಟ್ಟವನ್ನು ಸುಧಾರಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರಿಗೆ ಮಾಡ್ಯೂಲ್‌ಗಳ ಕೈಪಿಡಿ ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಮಕ್ಕಳಿಗೆ ಕಲಿಸಲಾಗುತ್ತದೆ.
  • ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಹಾಗೂ ಇಂಗ್ಲಿಷ್‌ ವಿಷಯಗಳಲ್ಲಿ ಅಭ್ಯಾಸ ಪುಸ್ತಕಗಳನ್ನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಲಿದೆ.
  • ಸ್ವಯಂ ಸೇವಾ ಸಂಸ್ಥೆಗಳಾದ ಪೀಪಲ್ಫಾರ್ಆಕ್ಷನ್ಸಂಸ್ಥೆ ಮತ್ತು ಜೆಪಾಲ್ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿದ್ದು, ಕಾಲಕಾಲಕ್ಕೆ ಅಗತ್ಯ ಸಲಹೆಗಳನ್ನು ನೀಡಲಿವೆ.
  • ಕಲಿಕೆಯಲ್ಲಿ ಶೇ 40ಕ್ಕಿಂತ ಕಡಿಮೆ ಇರುವ ಅಥವಾ ಶೇ 60ಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಮರುಸಿಂಚನ ಯೋಜನೆಯಡಿ ಪರಿಹಾರ ಬೋಧನೆ ತರಗತಿಗಳನ್ನು ನಡೆಸಬೇಕೇ ಎಂಬುದು ಇನ್ನೂ ಅಂತಿಮವಾಗಿಲ್ಲ.
  • ಗುಣಮಟ್ಟ ಸುಧಾರಣೆ: 10ನೇ ತರಗತಿಯಲ್ಲಿ ಕಡಿಮೆ ಫಲಿತಾಂಶ, ಉತ್ತೀರ್ಣರಾಗದೆ ಇರುವುದು ಕಂಡುಬಂದಿದೆ. ಅಲ್ಲದೆ ಮಕ್ಕಳು ಯಾವ ಹಂತದಲ್ಲಿ ಎಷ್ಟು ಕಲಿತಿರಬೇಕೊ, ಅಷ್ಟು ಕಲಿತಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು  ಆಯಾ ತರಗತಿಯಿಂದಲೇ ಗುಣಮಟ್ಟದಲ್ಲಿ ಸುಧಾರಣೆ ತರಲು ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ.
  • ಅಭ್ಯಾಸ ಪುಸ್ತಕ 80ರಿಂದ 100 ಪುಟ ಇರಲಿದ್ದು, ಮಕ್ಕಳ ಸಾಮರ್ಥ್ಯವನ್ನು ಅರಿತು ಪೂರಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಸಲಾಗುತ್ತದೆ. ಸಾಮಾನ್ಯ ತರಗತಿ ಹೊರತುಪಡಿಸಿ, ಹೆಚ್ಚುವರಿಯಾಗಿ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕಲಿಸುವುದರಿಂದ ಮಕ್ಕಳ ಕಲಿಕಾ ಮಟ್ಟದಲ್ಲಿ ಸುಧಾರಣೆಯಾಗಿರುವುದು ಮೌಲ್ಯಾಂಕನದಿಂದ ದೃಢಪಟ್ಟಿದೆ. ಇದನ್ನು ಆಧರಿಸಿ ವರ್ಷ ಎಲ್ಲ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.

ಪ್ರಾಯೋಗಿಕ ಯೋಜನೆ ಯಶಸ್ವಿ

  • 17 ಜಿಲ್ಲೆಗಳ 93 ತಾಲ್ಲೂಕುಗಳಲ್ಲಿ 9ನೇ ತರಗತಿ ಮಕ್ಕಳಿಗೆ 2023–24ರಲ್ಲಿ ಪ್ರಾಯೋಗಿಕವಾಗಿ ಮರುಸಿಂಚನ ಯೋಜನೆ ಜಾರಿಗೊಳಿಸಲಾಗಿತ್ತು. ಕಳೆದ ವರ್ಷ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಸ್ತರಿಸಲಾಗಿತ್ತು. ಇದು ಯಶಸ್ವಿಯಾಗಿರುವುದನ್ನು ಗಮನಿಸಿ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.
  • ರಾಜ್ಯದಲ್ಲಿ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಿವೆ. ಪೈಕಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಚೆನ್ನಾಗಿದೆ. ಆ ಜಿಲ್ಲೆಗಳಲ್ಲೂ ಕೆಲವು ಶಾಲೆಗಳಲ್ಲಿನ ಮಕ್ಕಳ ಕಲಿಕಾ ಮಟ್ಟ ಕಡಿಮೆ ಇರಬಹುದು. ಆದರೆ, ಆ ಜಿಲ್ಲೆಗಳಲ್ಲಿ ಮರುಸಿಂಚನ ಜಾರಿ ಮಾಡುವ ಬಗ್ಗೆ ಸದ್ಯಕ್ಕೆ ನಿರ್ಧರಿಸಿಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಗಳು ತಿಳಿಸಿವೆ.
  • ದೇಶದಾದ್ಯಂತ ಎಸ್ಐಆರ್ಗೆ ಸಿದ್ಧತೆ

ಸಂದರ್ಭ: ವರ್ಷಾಂತ್ಯದ ವೇಳೆಗೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಲು ಮುಂದಾಗಿರುವ ಚುನಾ ವಣಾ ಆಯೋಗ, ಈ ಕುರಿತು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

  • ರಾಷ್ಟ್ರದಾದ್ಯಂತ ಎಸ್‌ಐಆರ್‌ ನಡೆಸಲು ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು, ವಿವೇಕ್‌ ಜೋಶಿ ಅವರೂ ಪಾಲ್ಗೊಂಡಿದ್ದರು.
  • ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್‌ ಸಿಂಗ್‌ ಗುಂಜಿ ಯಾಲ್‌ ಅವರು, ವಿವಾದಗಳ ನಡುವೆಯೂ ರಾಜ್ಯದಲ್ಲಿ ಎಸ್‌ಐಆರ್‌ ಜಾರಿಗೆ ಅಳವಡಿಸಿಕೊಂಡ ಕಾರ್ಯ ತಂತ್ರ, ನಿಯಮಗಳು, ನಡೆಸಿದ ಕಸರತ್ತಿನ ವಿವರವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
  • ಮುಂದಿನ ವರ್ಷದ (2026) ಏಪ್ರಿಲ್‌–ಮೇ ತಿಂಗಳಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಅದಕ್ಕೂ ಮುನ್ನವೇ, ವರ್ಷಾಂತ್ಯದಲ್ಲಿ ಎಸ್ಐಆರ್ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
  • ಸಭೆಯಲ್ಲಿ ಹಾಜರಿದ್ದ ಸಿಇಒಗಳು ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟಾರೆ ಮತದಾರರ ಸಂಖ್ಯೆ, ಹಿಂದೆ ನಡೆದಿದ್ದ ಎಸ್‌ಐಆರ್‌ ಮತ್ತು ಮತದಾರರ ಪಟ್ಟಿಯ ಕುರಿತು ವಿವರವಾದ ಮಾಹಿತಿಯನ್ನು ಪ್ರಸ್ತುತ ಪಡಿಸಿದರು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
  • ದೇಶದಾದ್ಯಂತ ಎಸ್‌ಐಆರ್‌ ನಡೆಸಲು ಚುನಾವಣಾ ಆಯೋಗ ಜೂನ್‌ 24ರಂದು ನಿರ್ಧರಿಸಿತ್ತು. ಅಕ್ಟೋಬರ್‌–ನವೆಂಬರ್‌ನಲ್ಲಿ ಚುನಾವಣೆ ನಡೆಯಲಿ ರುವ ಬಿಹಾರದಿಂದ ಅದನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು. ದೇಶದ ಇತರ ಭಾಗಗಳಿಗೆ ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದೂ ಆಯೋಗ ಹೇಳಿತ್ತು.
  • ದೇಶದಲ್ಲಿ 2003ರಲ್ಲಿ ಕೊನೆಯ ದಾಗಿ ಎಸ್ಐಆರ್ನಡೆಸಲಾಗಿತ್ತು. ನಗರೀಕರಣ, ಹೆಚ್ಚುತ್ತಿರುವ ವಲಸೆ ಯಿಂದಾಗಿ ಮತದಾರರ ಪಟ್ಟಿಯಲ್ಲಿ ಪದೇ ಪದೇ ಬದಲಾವಣೆಗಳು ಆಗುತ್ತಿವೆ. ಹೀಗಾಗಿ ಎಸ್ಐಆರ್ಅಗತ್ಯವಾಗಿದೆಎಂದು ಚುನಾವಣಾ ಆಯೋಗ ಪ್ರತಿಪಾದಿಸಿತ್ತು.
  • ಬಾಂಗ್ಲಾ ಮತ್ತು ಮ್ಯಾನ್ಮಾರ್ಅಕ್ರಮ ವಲಸಿಗರನ್ನು ಹಲವು ರಾಜ್ಯಗಳಲ್ಲಿ ಪತ್ತೆ ಮಾಡಿದ ನಂತರ ವಿದೇಶಿ ಅಕ್ರಮ ವಲಸಿಗರನ್ನು ಪಟ್ಟಿಯಿಂದ ತೆಗೆಯುವುದು ವಿಶೇಷ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶ.

ಹೊರರಾಜ್ಯಗಳಲ್ಲಿ ನೆಲಸಿರುವವರಿಗೆ ‘ಘೋಷಣಾ ಅರ್ಜಿ’

  • ಹೊರರಾಜ್ಯಗಳಲ್ಲಿ ನೆಲಸಿರುವವರಿಗಾಗಿಯೇ ಹೆಚ್ಚುವರಿ ಯಾಗಿಘೋಷಣಾ ಅರ್ಜಿಯೊಂದನ್ನು ಪರಿಚಯಿಸಲು ಆಯೋಗ ಮುಂದಾಗಿದೆ. 1987 ಜುಲೈ 1 ಮತ್ತು 2004 ಡಿಸೆಂಬರ್ 2 ಮಧ್ಯೆ ಭಾರತದಲ್ಲಿ ಜನಿಸಿರುವ ಬಗ್ಗೆ ಅವರೆಲ್ಲ ದೃಢಪಡಿಸಬೇಕು. ಜನ್ಮ ದಿನಾಂಕ ಮತ್ತು ವಾಸಸ್ಥಳದ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು.
  • ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಈಗಾಗಲೇ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆಯೋಗಕ್ಕೆ ಸೂಚನೆ ನೀಡಿದೆ. ಕೆಲವು ರಾಜ್ಯಗಳು 2002 ಮತ್ತು 2004ರ ಮಧ್ಯೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿದ್ದವು.

ಆಧಾರ್‌ ಪರಿಗಣನೆಗೆ ಸೂಚನೆ

  • ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮತದಾರರ ಗುರುತಿನ ದಾಖಲೆಯಾಗಿ ಆಧಾರ್‌ ಕಾರ್ಡ್‌ ಅನ್ನು ಪರಿಗಣಿಸುವಂತೆ ಚುನಾವಣಾ ಆಯೋಗವು ಬಿಹಾರದ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
  • ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಈ ನಿರ್ದೇಶನ ನೀಡಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗವು, ಮತದಾರರ ಗುರುತಿಗೆ ಗೊತ್ತುಪಡಿಸಲಾದ 11 ದಾಖಲೆಗಳ ಜೊತೆಗೆ 12ನೇ ದಾಖಲೆಯಾಗಿ ಆಧಾರ್ಕಾರ್ಡ್ಅನ್ನು ಪರಿಗಣಿಸಬಹುದು ಎಂದು ತಿಳಿಸಿದೆ.
  • ಸೈಬರ್ಕಮಾಂಡ್ಘಟಕ ರಚನೆ

ಸಂದರ್ಭ: ‘ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಗಮನದಲ್ಲಿ ರಿಸಿಕೊಂಡು ರೂಪಿಸಲಾಗಿರುವ ದೇಶದ ಮೊದಲ ಸೈಬರ್ ಕಮಾಂಡ್‌ ಘಟಕವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

  • ನಗರದ ‘ನ್ಯೂಸ್ಪೇಸ್‌ ರಿಸರ್ಚ್‌ ಆ್ಯಂಡ್‌ ಟೆಕ್ನಾಲಜೀಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿ’ಯ ಅಧಿಕೃತ ಪ್ರತಿನಿಧಿ ಭಾವನಾ ವಿಜಯಕುಮಾರ್ ಸಲ್ಲಿಸಿದ್ದ ರಿಟ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಪ್ರಕರಣದಲ್ಲಿ ಇಂತಹದೊಂದು ಸ್ವತಂತ್ರ ಘಟಕವನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
  • ಈ ಆದೇಶದ ಅನುಪಾಲನೆಯನ್ನು ಪರಿಗಣಿಸಿ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರನ್ನು ತೆರೆದ ಕೋರ್ಟ್‌ ಹಾಲ್‌ಗೆ ಬರಮಾಡಿಕೊಂಡ ನ್ಯಾಯಪೀಠ, ಸೈಬರ್ ಕಮಾಂಡ್‌ ಘಟಕ ಅಥವಾ ಸೈಬರ್ ಕಮಾಂಡ್‌ ಸೆಂಟರ್‌ (ಸಿಸಿಸಿ) ರಚನೆಯ ಆದೇಶ ಕೇವಲ ಕಾಗದದಲ್ಲಿ ಉಳಿಯುವಂತಾಗಬಾರದು ಎಂದು ಹೇಳಿತು.
  • ಸೈಬರ್ ಅಪರಾಧಗಳ ತನಿಖೆಯಲ್ಲಿನ ಪ್ರಗತಿ ಅಥವಾ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಪ್ರಕರಣಗಳನ್ನು ಒಂದೇ ಸೂರಿನಡಿ ತರಬೇಕು. ಸಿಸಿಸಿಯ ಇಂತಹ ಏಕೀಕರಣವನ್ನು ತೋರಿಸುವ ನಿಮ್ಮ ವರದಿಯನ್ನು ಅಮಿಕಸ್ ಕ್ಯೂರಿ ಮೂಲಕ ಈ ನ್ಯಾಯಪೀಠಕ್ಕೆ ಸಲ್ಲಿಸಬೇಕು. ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದಕ್ಕಾಗಿ ಕ್ರಮ ತೆಗೆದುಕೊಳ್ಳುವುದು ಸಿಸಿಸಿಯ ಆದ್ಯ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
  • ‘ಈ ಸಂಸ್ಥೆ ಅಥವಾ ಕೇಂದ್ರವು ದೇಶದ ಮೊದಲ ಸೈಬರ್‌ ಕಮಾಂಡ್‌ ಘಟಕ (ಸಿಸಿಯು) ಅಥವಾ ಸಿಸಿಸಿ ಎಂಬ ಹೆಗ್ಗಳಿಕೆ ಎಂಬುದನ್ನು ಮರೆಯಬೇಡಿ’ ಎಂದು ಸೂಚಿಸಿತು.
  • ‘ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ಸ್ಥಾಪಿಸಿರುವ ಸದರಿ ಘಟಕವು, ಹೊಸ ಯುಗದ ತನಿಖಾ ಕೇಂದ್ರಗಳೊಂದಿಗೆ ಹೊಸ ನಮೂನೆಯ ತಾಂತ್ರಿಕ ಯುಗದ ಅಪರಾಧಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು. ಈ ಘಟಕದ ಅಧಿಕಾರಿಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸು ವಂತೆ ಮಾಡಬೇಕು. ಆಗ ಮಾತ್ರ ರಾಜ್ಯವು ಸೈಬರ್ ಅಪರಾಧದಿಂದ ಹೊರಹೊಮ್ಮುತ್ತಿರುವ ಅಪಸವ್ಯಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು ನ್ಯಾಯಪೀಠ ಎಚ್ಚರಿಸಿದೆ.
  • ‘ಸಿಸಿಸಿ ಅಥವಾ ಸೈಬರ್ ಕಮಾಂಡೊ ಘಟಕ ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ಹೊಸ ಉದಯವನ್ನು ಸೂಚಿಸುವ ದೀಪವಾಗಿರಬೇಕು’ ಎಂದು ಸ್ಪಷ್ಟಪಡಿಸಿದೆ. ‘ನ್ಯಾಯಾಲಯ ನೀಡಿರುವ ಈ ಆದೇಶದ ಅನುಪಾಲನೆ ಕುರಿತಂತೆ ಕೈಗೊಳ್ಳಲಾಗುವ ಕ್ರಮಗಳನ್ನು ಇದೇ 24ಕ್ಕೆ ವಿವರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
  • 371 ಮರ: ‘ಜೀವವೈವಿಧ್ಯ ಪಾರಂಪರಿಕ ತಾಣ

ಸಂದರ್ಭ: ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯಲ್ಲಿ 371 ಮರಗಳಿರುವ ಎಂಟು ಎಕರೆಗೂ ಹೆಚ್ಚು ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.

  • ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸುವುದಕ್ಕೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಹೋರಾಟ ವನ್ನೂ ನಡೆಸಿದ್ದರು. ಪರಿಸರ ಕಾರ್ಯಕರ್ತರ ಒತ್ತಾಸೆ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಭರವಸೆಯಂತೆ ಈ ಪ್ರದೇಶವು ‘ಜೀವವೈವಿಧ್ಯ ಪಾರಂಪರಿಕ ತಾಣ’ವಾಗಿದೆ.
  • ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದ 167 ಎಕರೆಯನ್ನು ಹಿಂದೆಜೀವವೈವಿಧ್ಯ ಪಾರಂಪರಿಕ ತಾಣಎಂದು ಘೋಷಿಸಲಾಗಿತ್ತು. ಇದರ ನಂತರ, ರೈಲ್ವೆ ಕಂಟೊನ್ಮೆಂಟ್ಕಾಲೊನಿ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಮಂಡಳಿಯ ವಿಶೇಷ ಸಭೆ ನಡೆಯಿತು. ಬೆಂಗಳೂರಿನ ಕಂಟೊನ್ಮೆಂಟ್ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 8.61 ಎಕರೆ ಪ್ರದೇಶವನ್ನು ಹಸಿರು ವಲಯವನ್ನಾಗಿ  ಪರಿಗಣಿಸಿ, ಸಂರಕ್ಷಣೆಯ ಅಗತ್ಯವನ್ನು ಮನಗಂಡು, ಜೀವ ವೈವಿದ್ಯ ಕಾಯ್ದೆ–2002 ನಿಬಂಧನೆಗಳ ಅಡಿಯಲ್ಲಿ ಸ್ಥಳವನ್ನುಜೀವವೈವಿದ್ಯ ಪಾರಂಪರಿಕ ತಾಣ’ (ಬಿಎಚ್ಎಸ್‌) ಎಂದು ಘೋಷಿಸಲು ತೀರ್ಮಾನಿಸಲಾಯಿತು.
  • ರಾಜಧಾನಿಯ ಹೃದಯ ಭಾಗದಲ್ಲಿ 50 ಜಾತಿಯ 371 ಮರಗಳಿದ್ದು, ರಮಣೀಯ ಸೌಂದರ್ಯ, ಹಕ್ಕಿಗಳ ಚಿಲಿಪಿಲಿಯ ಹಸಿರು ತಾಣವಾಗಿದೆ. ನಗರದ ವಾಸಯೋಗ್ಯತೆ ಯನ್ನು ಉತ್ತಮಪಡಿಸಿ, ಹಸಿರುಹಾಸು ಈ ಪ್ರದೇಶದ ಹೆಗ್ಗುರುತಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಷರತ್ತುಗಳು ಏನು?

lಸೂಕ್ಷ್ಮ ಅನುಮೋದಿತ ನಿರ್ವಹಣಾ ಯೋಜನೆಯಂತೆ ಪಾರಂಪರಿಕ ತಾಣವನ್ನು ನಿರ್ವಹಿಸಬೇಕು

lಸ್ಥಳೀಯರ ಹಕ್ಕುಗಳು ಮತ್ತು ಸವಲತ್ತುಗಳು ಸದಾ ಅಸ್ತಿತ್ವದಲ್ಲಿರುತ್ತವೆ

lಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನರಿಗೆ ಪಾಲ್ಗೊಳ್ಳಲು ಅವಕಾಶ ಇರಬೇಕು

lಜೀವವೈವಿಧ್ಯತೆಯ ಸಂರಕ್ಷಣೆಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ

  • ಇಟಲಿ ಪ್ರಧಾನಿ ಜತೆ ಮೋದಿ ಮಾತುಕತೆ

ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

  • ‘ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದೆ. ಭಾರತ– ಇಟಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಇಮ್ಮಡಿಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.
  • ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂಬ ಕುರಿತೂ ಮಾತನಾಡಿದೆವು’ ಎಂದು ಮೋದಿ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
  • ‘ಭಾರತ–ಯುರೋಪ್‌ ಒಕ್ಕೂಟದ ವ್ಯಾಪಾರ ಒಪ್ಪಂದ ಮ‌ತ್ತು ‘ಭಾರತ– ಮಧ್ಯಪ್ರಾಚ್ಯ– ಯುರೋಪ್‌ ಆರ್ಥಿಕ ಕಾರಿಡಾರ್‌’ (ಐಎಂಇಇಸಿ) ಅನುಷ್ಠಾನಕುರಿತು ಬೆಂಬಲ ನೀಡಿದ್ದಕ್ಕಾಗಿ ಮೆಲೊನಿ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದೂ ಹೇಳಿದ್ದಾರೆ.  ಭಾರತ ಮತ್ತು ಯುರೋಪ್‌ ಒಕ್ಕೂಟವು ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಬಲಗೊಳಿಸುವತ್ತ ಮುಂದುವರಿದಿವೆ.
  • ಬಿಆರ್ಎಸ್ಗೆ ಅಧಿಕ ಆದಾಯ
  • ಕೈಗಾರಿಕೆಗೆ ಎರಡು ಎಕರೆ: ಭೂಮಿ ಪರಿವರ್ತನೆ ಅಗತ್ಯವಿಲ್ಲ

ಸಂದರ್ಭ: ಕೃಷಿ ಭೂಮಿ ಖರೀದಿ ಸರಳೀಕರಣ ಮತ್ತು ಕೆಲವು ಉದ್ದೇಶ ಗಳಿಗೆ ಭೂಮಿ ಪರಿವರ್ತನೆ ನಿಯಮ ಸಡಿಲಿಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ)’ ಮಸೂದೆ ಸೇರಿ ವಿವಿಧ ಮಸೂದೆಗಳಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಅಂಕಿತ ಹಾಕಿದ್ದಾರೆ. ಆ ಬೆನ್ನಲ್ಲೆ, ರಾಜ್ಯ ಸರ್ಕಾರ ಗೆಜೆಟ್‌ ಹೊರಡಿಸಿದೆ.

  • ಶಿಕ್ಷಣ ಸಂಸ್ಥೆಗಳಿಗೆ ಅಥವಾ ಕೈಗಾರಿಕೆ ಗಳಿಗೆ ಎರಡು ಎಕರೆವರೆಗಿನ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡುವ, ಶಿಕ್ಷಣ ಸಂಸ್ಥೆ ಗಳು ಮತ್ತು ಕೈಗಾರಿಕೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಕೃಷಿ ಭೂಮಿ ಖರೀದಿಗೆ ಮಿತಿ, ಜಿಲ್ಲಾಧಿಕಾರಿಗಳಿಗೆ ಭೂಮಿ ಖರೀದಿಸುವ ಅಧಿಕಾರ, ಕೃಷಿ ಭೂಮಿ ಯನ್ನು ಅನುಮತಿ ಇಲ್ಲದೆ ಅಥವಾ ಪರಿವರ್ತನೆ ಮಾಡದೆ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ₹ 1 ಲಕ್ಷ ದಂಡ, ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಕೃಷಿ ಭೂಮಿಯ ಸ್ವಯಂ ಚಾಲಿತ ಪರಿವರ್ತನೆ ಪ್ರಮಾಣಪತ್ರ ನೀಡಲು ಕೂಡಾ ಕರ್ನಾಟಕ ಭೂ ಸುಧಾರಣೆ, ಇತರೆ ಕಾನೂನು ಮಸೂದೆ ಅವಕಾಶ ನೀಡಿದೆ.
  • ಇತರ ಮಸೂದೆಗಳು: ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬನವಾಸಿ ಅಭಿವೃದ್ಧಿ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಅಥವಾ ಕಂದಾಯ ಮಂತ್ರಿ ಅಥವಾ ಮುಖ್ಯಮಂತ್ರಿ ಆಯ್ಕೆ ಮಾಡಿದ ಯಾರಾದರು ಸಚಿವರು ಪದನಿಮಿತ್ತ ಅಧ್ಯಕ್ಷರಾಗಿ ಮಾಡಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗಳಿಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
  • ಲಿಫ್ಟ್‌, ಎಸ್ಕಲೇಟರ್‌ ಅಥವಾ ಪ್ಯಾಸೆಂಜರ್‌ ಕನ್ವೇಯರ್‌ಗಳನ್ನು ಭಾರತೀಯ ಗುಣಮಟ್ಟ ಬ್ಯೂರೊ ಪದ್ಧತಿ ಗಳ ಅಸ್ತಿತ್ವದಲ್ಲಿರುವ ಸಂಬಂಧಪಟ್ಟ ಸಂಹಿತೆ ಮತ್ತು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ವಿನಿಮಯಗಳ ಅನ್ವಯ ಸ್ಥಾಪಿಸಲು ನಿರ್ದೇಶಿಸುವ ಉದ್ದೇಶದ ‘ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ಮಸೂದೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿ ರಚಿಸಲು ಅವಕಾಶ ಕಲ್ಪಿಸಲು ರೂಪಿಸಿದ ‘ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ,ನಿಯಂತ್ರಣ) (ತಿದ್ದುಪಡಿ) ಮಸೂದೆ, ಎಸ್ಮಾ ವಿಧಿಸುವ ಅವಕಾಶ ವನ್ನು ಮುಂದಿನ 20 ವರ್ಷಗಳ ಅವಧಿ ವಿಸ್ತರಿಸಲು ಅವಕಾಶ ನೀಡುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ಮಸೂದೆ, ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇ 1ರಷ್ಟು ಅಗ್ನಿ ಸೆಸ್‌ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ’ಗೂ ಅಂಕಿತ ಹಾಕಿದ್ದಾರೆ.
  • ಮನೆಮನೆಯ ಕಥೆ: ಪೋಷಕರ ಪಾಲನೆ ಭತ್ಯೆ ಹೆಚ್ಚಳಕ್ಕೆ ಶಿಫಾರಸು
  • ರಾಜ್ಯ ಸ್ಥಾನಮಾನಕ್ಕಾಗಿ ಸತ್ಯಾಗ್ರಹ

ಸಂದರ್ಭ: ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವುದರ ಜೊತೆಗೆ ಅದನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ಲೇಹ್‌ನಲ್ಲಿ 35 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ ತಿಳಿಸಿದ್ದಾರೆ. ಲೇಹ್‌ ಅಪೆಕ್ಸ್‌ ನಿಯೋಗ (ಎಲ್‌ಎಬಿ) ಕೂಡ ಇದನ್ನು ಸ್ಪಷ್ಟಪಡಿಸಿದೆ.

  • ‘ಕಳೆದ ಎರಡು ತಿಂಗಳಿಂದ ನಮ್ಮ ಬೇಡಿಕೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಂಗ್ಚುಕ್‌ ತಿಳಿಸಿದರು.
  • ಲೇಹ್‌ನ ಹಿಲ್‌ ಕೌನ್ಸಿಲ್‌ ಚುನಾವಣೆ ಶೀಘ್ರವೇ ನಡೆಯಲಿದ್ದು, ಕೇಂದ್ರ ಸರ್ಕಾರವು ಕಳೆದ ಬಾರಿಯ ಚುನಾವಣೆಯಲ್ಲೇ ಲಡಾಖ್‌ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಭರವಸೆ ನೀಡಿತ್ತು. ಇದನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.  ಗಾಂಧಿ ಜಯಂತಿಯು ಸತ್ಯಾಗ್ರಹದ ಪ್ರಮುಖ ದಿನವಾಗಲಿದೆ ಎಂದೂ ಅವರು ಹೇಳಿದ್ದಾರೆ.
  • ಕೊಪ್ಪಳದಲ್ಲಿ ಉಕ್ಕು ಘಟಕ ಸ್ಥಾಪನೆಗೆ ₹2,345 ಕೋಟಿ

ಸಂದರ್ಭ: ಬಜಾಜ್‌ ಸಮೂಹದ ಮುಕುಂದ ಸುಮಿ ಸಹಭಾಗಿತ್ವ ದಲ್ಲಿ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಜಪಾನಿನ ಸುಮಿಟಾವೊ ಕಂಪನಿ ₹2,345 ಕೋಟಿ ಹೂಡಿಕೆ ಮಾಡಲಿದೆ.

  • ಬಂಡವಾಳ ಆಕರ್ಷಣೆಗಾಗಿ ಜಪಾನ್‌ ಪ್ರವಾಸದಲ್ಲಿರುವ ಅವರು ಸುಮಿಟಾವೊ ಪ್ರತಿನಿಧಿಗಳ ಜತೆಗಿನ ಸಭೆಯ ನಂತರ ಈ ಮಾಹಿತಿ ನೀಡಿದ್ದಾರೆ. ಘಟಕವು ವಾರ್ಷಿಕ 3.50 ಲಕ್ಷ ಟನ್ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. 2028 ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ. ಅಲ್ಲದೆ ಸುಮಿಟಾವೊ ಕಂಪನಿಯು ರಾಜ್ಯದಲ್ಲಿ ಬಯೊಮಾಸ್‌ ಘಟಕವನ್ನೂ ಸ್ಥಾಪಿಸಲಿದೆ.
  • ‘ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್‌ ಕಾರ್ಖಾನೆಯ ಪುನರಾರಂಭದ ಸಂಬಂಧ  ಜೆಎಫ್‌ಇ ಷೋಜಿ ಕಂಪನಿಯ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ₹400 ಕೋಟಿ ಹೂಡಿಕೆ ಮಾಡಲು ಕಂಪನಿ ಮುಂದೆ ಬಂದಿದೆ. ವಿದ್ಯುತ್‌ಚಾಲಿತ ವಾಹನಗಳ ಮೋಟರ್‌ಗಳ ಕೋರ್‌ಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸುವ ಬಗ್ಗೆ ಪರಿಶೀಲನೆ ನಡೆಯಲಿದೆ. ಅದರ ಭಾಗವಾಗಿ ಜೆಎಫ್‌ಇ ಷೋಜಿ ಪ್ರತಿನಿಧಿಗಳನ್ನು ಎನ್‌ಜಿಇಎಫ್‌ ಕಾರ್ಖಾನೆ ಭೇಟಿಗೆ ಆಹ್ವಾನಿಸಲಾಗಿದೆ.
  • ಯಸ್ಕಾವಾ ಕಂಪನಿಯು ಬೆಂಗಳೂರಿನಲ್ಲಿ ಮೋಷನ್‌ ಕಂಟ್ರೋಲ್‌ ಮತ್ತು ವೇರಿಯೇಬಲ್‌ ಫ್ರೀಕ್ವೆನ್ಸಿ ಡ್ರೈವ್‌ನ ತಯಾರಕ ಘಟಕ ಸ್ಥಾಪಿಸುವ ಬಗ್ಗೆ ಆಸಕ್ತಿ ತೋರಿಸಿದೆ ಎಂದಿದ್ದಾರೆ.
  • ದೇಶದ ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಣೆ

ಸಂದರ್ಭ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದ ದೇಶದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಫಿಚ್ ರೇಟಿಂಗ್ಸ್ ಸಂಸ್ಥೆಯು ಶೇಕಡ 6.9ಕ್ಕೆ ಹೆಚ್ಚಿಸಿದೆ. ಈ ಮೊದಲು ಅದು ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.

  • ಜೂನ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದುದು ಹಾಗೂ ದೇಶಿ ಮಾರುಕಟ್ಟೆಯಲ್ಲಿನ ಬಳಕೆ ಆಧಾರಿತ ಬೇಡಿಕೆಯು ಅಂದಾಜು ಹೆಚ್ಚಿಸುವುದಕ್ಕೆ ಕಾರಣ ಎಂದು ಸಂಸ್ಥೆ ಹೇಳಿದೆ.
  • ಸುಂಕ ಸಂಬಂಧಿ ಅನಿಶ್ಚಿತತೆಗಳ ನಂತರ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹಲವು ಸಂಸ್ಥೆಗಳು ತಗ್ಗಿಸಿದ್ದವು. ಈಗ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹೆಚ್ಚು ಮಾಡುತ್ತಿರುವ ಮೊದಲ ಜಾಗತಿಕ ರೇಟಿಂಗ್ಸ್ ಸಂಸ್ಥೆ ಫಿಚ್ ಆಗಿದೆ.
  • ಅಮೆರಿಕದ ಜೊತೆಗಿನ ವ್ಯಾಪಾರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಈಚಿನ ತಿಂಗಳುಗಳಲ್ಲಿ ತೀವ್ರಗೊಂಡಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿದೆ.
  • ‘ಇದು ಕಾಲಕ್ರಮೇಣ ಮಾತುಕತೆ ಮೂಲಕ ಕಡಿಮೆ ಮಟ್ಟಕ್ಕೆ ಬರಲಿದೆ ಎಂಬುದು ನಮ್ಮ ನಿರೀಕ್ಷೆ. ಆದರೆ ವ್ಯಾಪಾರ ಸಂಬಂಧದ ಸುತ್ತಲಿನ ಅನಿಶ್ಚಿತತೆಗಳು ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು. ಜಿಎಸ್‌ಟಿ ವ್ಯವಸ್ಥೆಗೆ ಸರ್ಕಾರವು ಸುಧಾರಣೆ ತಂದಿದೆ. ಇದು ಗ್ರಾಹಕರು ಈ ವರ್ಷದಲ್ಲಿ ಹಾಗೂ ಮುಂದಿನ ಹಣಕಾಸು ವರ್ಷಗಳಲ್ಲಿ ಹೆಚ್ಚು ವೆಚ್ಚ ಮಾಡುವಂತೆ ಉತ್ತೇಜನ ನೀಡಲಿದೆ’ ಎಂದು ಫಿಚ್ ಹೇಳಿದೆ.
  • ಎಸ್ಎಸ್ಎಲ್ವಿ ತಂತ್ರಜ್ಞಾನ: ಇಸ್ರೊಎಚ್ಎಎಲ್ಒಪ್ಪಂದ

ಸಂದರ್ಭ: ‘ಸಣ್ಣ ಉಪಗ್ರಹ ಉಡ್ಡಯನ ವಾಹನ’ಗಳ (ಎಸ್‌ಎಸ್‌ಎಲ್‌ವಿ) ಉತ್ಪಾದನಾ ತಂತ್ರಜ್ಞಾನ ವರ್ಗಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಜತೆ ಒಡಂಬಡಿಕೆ ಮಾಡಿಕೊಂಡಿದೆ.

  • ಇದು ಬಾಹ್ಯಾಕಾಶ ವಲಯದಲ್ಲಿ ಉದ್ಯಮ ಸಹಭಾಗಿತ್ವದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗಿದೆ.
  • ತಂತ್ರಜ್ಞಾನ ವರ್ಗಾವಣೆ ಕುರಿತ 100ನೇ ಒಪ್ಪಂದಕ್ಕೆ ‘ಇಸ್ರೊ’, ‘ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಎಲ್‌), ‘ಇನ್‌ಸ್ಪೇಸ್‌’ ಹಾಗೂ ‘ಎಚ್‌ಎಎಲ್‌’ ಸಹಿ ಮಾಡಿವೆ. 
  • ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ 24 ತಿಂಗಳುಗಳ ಒಳಗೆ ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ‘ಇನ್‌ಸ್ಪೇಸ್‌’ ಕೇಂದ್ರ ತಿಳಿಸಿದೆ.  
  • ಈ ಅವಧಿಯಲ್ಲಿ ಎಸ್‌ಎಸ್‌ಎಲ್‌ವಿಗಳಿಗೆ ಸಂಬಂಧಿಸಿದ ತಾಂತ್ರಿಕ ಜ್ಞಾನ ಮತ್ತು ತರಬೇತಿಯನ್ನು ‘ಇಸ್ರೊ’ ಸಂಸ್ಥೆಯು ಎಚ್‌ಎಎಲ್‌ಗೆ ವರ್ಗಾಯಿಸಲಿದೆ ಎಂದು ಅದು ಹೇಳಿದೆ. 
  • ‘ವಾಣಿಜ್ಯ ಉದ್ದೇಶಕ್ಕೆ ಬಾಹ್ಯಾಕಾಶ ವಲಯವನ್ನು ಭಾರತವು ಉದಾರೀಕರಿಸಿರುವುದರಿಂದ ಅವಕಾಶಗಳು ವೃದ್ಧಿಸುತ್ತಿವೆ. ಇದಕ್ಕೆ ಪೂರಕವಾಗಿ ಕ್ರಿಯಾತ್ಮಕ ತಂತ್ರಜ್ಞಾನ ವರ್ಗಾವಣೆ ಕಾರ್ಯವಿಧಾನವನ್ನು ಇಸ್ರೊ ಹೊಂದಿದೆ’ ಎಂದು ‘ಇಸ್ರೊ’ ಅಧ್ಯಕ್ಷ ವಿ.ನಾರಾಯಣನ್‌ ಪ್ರತಿಕ್ರಿಯಿಸಿದ್ದಾರೆ. 
  • ಎಸ್‌ಎಸ್‌ಎಲ್‌ವಿ ತಂತಜ್ಞಾನ ವರ್ಗಾವಣೆಗೆ ಇಸ್ರೊ, ಎಚ್‌ಎಎಲ್‌, ಎನ್‌ಎಸ್‌ಐಎಲ್‌ ಮತ್ತು ಇನ್‌ಸ್ಪೇಸ್‌ ಒಂದಾಗಿರುವುದು ಈ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. ಇದು ಬಾಹ್ಯಾಕಾಶ ಉದ್ಯಮವನ್ನು ಸಬಲೀಕರಿಸಲು, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಉಡಾವಣಾ ಸೇವೆಗಳಿಗಾಗಿ ಭಾರತವನ್ನು ಜಾಗತಿಕ ಕೇಂದ್ರವಾಗಿ ಸ್ಥಾಪಿಸಬಯಸಿರುವ ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ‘ಇನ್‌ಸ್ಪೇಸ್‌’ನ ಅಧ್ಯಕ್ಷ ಪವನ್‌ ಕುಮಾರ್‌ ಗೋಯೆಂಕಾ ಹೇಳಿದ್ದಾರೆ.

ಪ್ರಚಲಿತ ವಿದ್ಯಮಾನಗಳು: 10ನೇ ಸೆಪ್ಟೆಂಬರ್ 2025

  • ಎನ್ಡಿಎಯ ರಾಧಾಕೃಷ್ಣನ್ದೇಶದ 15ನೇ ಉಪರಾಷ್ಟ್ರಪತಿ

ಸಂದರ್ಭ: ಜಗದೀಪ್‌ ಧನಕರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದರು. ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚು ಮತಗಳನ್ನು ಪಡೆದು ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು.

  • ರಾಧಾಕೃಷ್ಣನ್‌ ಅವರ ಪರವಾಗಿ ಒಟ್ಟು 452 ಮತಗಳು ಚಲಾವಣೆ ಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿ ಪಿ.ಸಿ. ಮೋದಿ ಅವರು ಪ್ರಕಟಿಸಿದರು.
  • ‘ಒಟ್ಟು 767 ಸಂಸದರು (ಶೇ 98.2) ಮತಚಲಾಯಿಸಿದ್ದು, ಅವುಗಳಲ್ಲಿ 752 ಮತಗಳು ಮಾನ್ಯಗೊಂಡಿವೆ ಮತ್ತು 15 ಮತಗಳು ಅಮಾನ್ಯಗೊಂಡಿವೆ. ಅಂಚೆ ಮತಪತ್ರ ಸಲ್ಲಿಸಿದ್ದ ಸಂಸದರೊಬ್ಬರು ‘ಅದನ್ನು ಪರಿಗಣಿಸಬೇಡಿ’ ಎಂದು ಆನಂತರ ಹೇಳಿದ್ದರಿಂದ ಅದನ್ನು ಪರಿಗಣಿಸಿಲ್ಲ.
  • ಅಡ್ಡಮತದಾನದ ಲಾಭ ಬಿಜೆಪಿಗೆ: ‘ರಾಧಾಕೃಷ್ಣನ್‌ ಅವರ ಪರವಾಗಿ ಕೆಲ ಅಡ್ಡಮತದಾನ ನಡೆದಿರುವುದನ್ನು ಫಲಿತಾಂಶ ಸೂಚಿಸುತ್ತದೆ. ವಿರೋಧ ಪಕ್ಷಗಳ ಕನಿಷ್ಠ 15 ಸದಸ್ಯರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ. ಅದಕ್ಕೂ ಮುನ್ನ ಮಾತನಾಡಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಇವೆ. ಎಲ್ಲ 315 ಸಂಸದರು ಮತ ಚಲಾಯಿಸಿದ್ದಾರೆ’ ಎಂದಿದ್ದರು.
  • ಯೋಜನೆಗಳಿಗೆಸುಪ್ರೀಂನಿರ್ಬಂಧಮಹದಾಯಿ-–ಕೋಟಿಗಾಂವ್ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆ ಕೂಡದು

ಸಂದರ್ಭ: ಮಹದಾಯಿ- ಕೋಟಿಗಾಂವ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಅಥವಾ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

  • ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಧಾಮವು ಕಾಳಿ ಹುಲಿ ಮೀಸಲು ಪ್ರದೇಶ, ಭೀಮಘಡ ವನ್ಯಜೀವಿಧಾಮ ಮತ್ತು ಭಗವಾನ್‌ ಮಹಾವೀರ ರಾಷ್ಟ್ರೀಯ ಉದ್ಯಾನ ಒಳಗೊಂಡಂತೆ ಭೌಗೋಳಿಕವಾಗಿ ಕರ್ನಾಟಕದ ಜೊತೆಗೆ ಬೆಸೆದುಕೊಂಡಿದೆ.
  • ವನ್ಯಜೀವಿಧಾಮದಲ್ಲಿ ವಾಣಿಜ್ಯ ಯೋಜನೆಗಳಿಗೆ ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಗೋವಾ ಫೌಂಡೇಷನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಈ ನಿರ್ದೇಶನ ನೀಡಿತು.
  • ಮಹದಾಯಿ ವನ್ಯಜೀವಿ ಅಭಯಾರಣ್ಯ ಮತ್ತು ಪಕ್ಕದ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಆರು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿದೆ. ಬಳಿಕ ವಿಚಾರಣೆಯನ್ನು ಎಂಟು ವಾರ ಮುಂದೂಡಿದೆ.
  • ಮಹದಾಯಿ ವನ್ಯಜೀವಿಧಾಮ ಹಾಗೂ ಆಸುಪಾಸಿನ ಪ್ರದೇಶಗಳನ್ನುಹುಲಿ ಸಂರಕ್ಷಣಾ ಮೀಸಲು ಅರಣ್ಯವೆಂದು ಮೂರು ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಬಾಂಬೆ ಹೈಕೋರ್ಟ್ ಗೋವಾ ಪೀಠವು ಗೋವಾ ಸರ್ಕಾರಕ್ಕೆ 2023ರಲ್ಲಿ ನಿರ್ದೇಶನ ನೀಡಿತ್ತು.
  • ವನ್ಯಜೀವಿಧಾಮ ಹಾಗೂ ಸಮೀಪದ ಅರಣ್ಯ ಭಾಗದಲ್ಲಿ ಜನವಸತಿಗಳಿವೆ ಹಾಗೂ ಹುಲಿ ಗೋವಾದ ಸ್ಥಳೀಯ ವನ್ಯಜೀವಿ ಯಲ್ಲ ಎಂಬ ಕಾರಣ ನೀಡಿ ಮೀಸಲು ಅರಣ್ಯವಾಗಿ ಘೋಷಿಸಲು ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.
  • ಕರ್ನಾಟಕ, ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಭಾಗಗಳ ಜೊತೆಗೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ಮಹದಾಯಿ ವನ್ಯಜೀವಿ ಧಾಮದಲ್ಲಿ ಕೆಲವು ಹುಲಿಗಳು ಕಾಣಿಸಿಕೊಂಡಿದ್ದವು. ಇದನ್ನು ಹುಲಿ ಮೀಸಲು ಪ್ರದೇಶವಾಗಿ ಘೋಷಿಸಬೇಕು ಎಂಬ ಬೇಡಿಕೆ ಎದ್ದಿತ್ತು. ಕೆಲವು ವರ್ಷಗಳ ಹಿಂದೆ ಮಹದಾಯಿ ವನ್ಯಜೀವಿ ಧಾಮದಲ್ಲಿ ನಾಲ್ಕು ಹುಲಿಗಳ ಹತ್ಯೆಯಾಗಿತ್ತು.
  • ಪ್ರದೇಶವು ಹುಲಿ ಸಂತತಿ ವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇದನ್ನು ಮೀಸಲು ಅರಣ್ಯವಾಗಿ ಘೋಷಿಸಬೇಕು ಎಂದು ಎನ್ಟಿಸಿಎ ಸಲಹೆ ನೀಡಿತ್ತು.
  • ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಮಹದಾಯಿಯಲ್ಲಿ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಹಕ್ಕು ಹೊಂದಿವೆ. ಆದರೆ, ಅದಕ್ಕೆ ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ಪಡೆಯಬೇಕಿದೆ. ಗೋವಾ ಸರ್ಕಾರ ಮತ್ತು ಅಲ್ಲಿನ ಪರಿಸರವಾದಿಗಳ ನಡುವಿನ ಹೋರಾಟವು ಕರ್ನಾಟಕದ ಮೇಲೆ ನೇರ ಪರಿಣಾಮ ಬೀರುವುದಿಲ್ಲ
  • ಜಿಬಿಎ: ಮೂರು ಅಂತಸ್ತಿನ ಕಟ್ಟಡಗಳಿಗೆ ಒಸಿ ವಿನಾಯಿತಿ

ಸಂದರ್ಭ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ 1,200 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿರುವ ಮೂರು ಅಂತಸ್ತಿನ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.

  • ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಕಲಂ 241(7)ರಂತೆ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದ ಅನ್ವಯ ಈ ವಸತಿ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
  • 1,200 ಚದರ ಅಡಿ ನಿವೇಶನದಲ್ಲಿ ನೆಲ ಹಾಗೂ 2 ಅಂತಸ್ತು ಅಥವಾ ಸ್ಟಿಲ್ಟ್‌ + ಮೂರು ಅಂತಸ್ತಿನ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲಾಗಿದೆ. ಜಿಬಿಎ ಮುಖ್ಯ ಆಯುಕ್ತರ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ ಸಣ್ಣ ಪ್ರಮಾಣದ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡುವುದರಿಂದ, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಸಹಕಾರಿಯಾದಂತಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
  • ಪ್ರತಿ ವರ್ಷ 1,200 ಚದರಡಿಗಿಂತ ಕಡಿಮೆ ವಿಸ್ತೀರ್ಣದ ನಿವೇಶನಗಳಲ್ಲಿ ಸುಮಾರು ನಾಲ್ಕು ಸಾವಿರ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡಲಾಗುತ್ತಿದೆ.
  • ಧಾರವಾಡದಲ್ಲಿ ಹಿಟಾಚಿ ಘಟಕ

ಸಂದರ್ಭ: ‘ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

  • ಜಪಾನ್‌ ಪ್ರವಾಸದಲ್ಲಿರುವ ಅವರು ಹಿಟಾಚಿ ಕಂಪನಿಯ ಪ್ರತಿನಿಧಿಗಳ ಭೇಟಿಯ ನಂತರ ಹೊರಡಿಸಿದ ಪ್ರಕಟಣೆ ಯಲ್ಲಿ ಈ ಮಾಹಿತಿ ನೀಡಿದ್ದಾರೆ.
  • ಧಾರವಾಡದಲ್ಲಿ ಕೇಂದ್ರವು 2027 ವೇಳೆಗೆ ಕಾರ್ಯಾರಂಭ ಮಾಡಲಿದೆ. ವಾಹನಗಳ ಏರ್ಬ್ಯಾಗ್ ಬಿಡಿ ಭಾಗಗಳ ತಯಾರಿಕಾ ಕಂಪನಿ ಅಸಾಹಿ ಕಸೆಯಿ ಅಡ್ವಾನ್ಸ್ಡ್ಬೆಂಗಳೂರಿನಲ್ಲಿ ಬಿಡಿ ಭಾಗಗಳ ತಯಾರಿಕಾ ಘಟಕ ಸ್ಥಾಪಿಸುವುದಾಗಿ ಹೇಳಿದೆ’ ಎಂದಿದ್ದಾರೆ.
  • ಅಪರೂಪದ ಶಾಸನ ಪತ್ತೆ

ಸಂದರ್ಭ: ತಾಲ್ಲೂಕಿನ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿನ ಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಲ್ಲಿನ ಉಭಯ ದೇವರುಗಳ ಆರಾಧನೆಯನ್ನು ಉಲ್ಲೇಖಿಸುವ ಅಪರೂಪದ ಅಪ್ರಕಟಿತ ಮ್ಯಾಂಗನೀಸ್ ಶಾಸನ ಪತ್ತೆಯಾಗಿದೆ.

  • 10 ಅಡಿ ಎತ್ತರವಿರುವ ಮ್ಯಾಂಗನೀಸ್ ಬಂಡೆಯಲ್ಲಿ 3 ಅಡಿ ಎತ್ತರ 3 ಅಡಿ ಅಗಲದಲ್ಲಿ ಆರು ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ.
  • ಮರುಜನ್ಮ ಮತ್ತು ಮೋಕ್ಷಕ್ಕೆ ಸಂಬಂಧಿಸಿದ ಶಾಸನ ಇದಾಗಿದ್ದು ಮಾನವನಿಗೆ ನೀತಿ ಬೋಧಿಸುವ ಪ್ರತೀಕವಾಗಿದೆ ಎಂದು ಕೃಷ್ಣದೇವರಾಯ ವಿಶ್ವಾವಿದ್ಯಾಲಯದ ಪ್ರೊ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
  • ಮಿಜೋರಾಂ ರಾಜಧಾನಿಗೆ ರೈಲುಮಾರ್ಗ ಸಿದ್ಧ

ಸಂದರ್ಭ: ಮಿಜೋರಾಂ ರಾಜ್ಯದ ರಾಜಧಾನಿ ಐಜ್ವಾಲ್‌ಗೆ ಸಂಪರ್ಕಿಸುವ ರೈಲು ಮಾರ್ಗ ಕಣಿವೆಗಳ ನಡುವೆ ಅತ್ಯಧಿಕ ಸೇತುವೆ ಮತ್ತು ಸುರಂಗಗಳೊಂದಿಗೆ ಸಿದ್ಧಗೊಂಡಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ. 

  • ಈಶಾನ್ಯ ಭಾರತದ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಇರಲಿಲ್ಲ.
  • ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ಉಳಿದ ಏಳು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಾಮಗಾರಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
  • ಮಿಜೋರಾಂನ ರಾಜಧಾನಿ ಐಜ್ವಾಲ್ಕಡಿದಾದ ಬೆಟ್ಟಗಳ ಮೇಲೆ ಇರುವುದರಿಂದ ರೈಲು ಸಂಪರ್ಕ ಕಾಮಗಾರಿ ನಿಧಾನವಾಗಿ ನಡೆದಿದ್ದು, 11 ವರ್ಷಗಳ ಬಳಿಕ ಪೂರ್ಣಗೊಂಡಿದೆ.
  • ಅಸ್ಸಾಂನಿಂದ ಮಿಜೋರಾಂನ ಬೈರಾಬಿವರೆಗೆ ಬ್ರಾಡ್ಗೇಜ್ರೈಲು ಮಾರ್ಗ 2016ರಲ್ಲಿ ನಿರ್ಮಾಣವಾಗಿತ್ತು. ಬೈರಾಬಿಗೆ ಮೊದಲ ಸರಕು ರೈಲು ವರ್ಷ ಬಂದಿತ್ತು. ಇದುವೇ ರಾಜ್ಯದಲ್ಲಿ ಸಂಚರಿಸಿದ ಮೊದಲ ರೈಲು ಆಗಿತ್ತು. ಇದೀಗ ಬೈರಾಬಿಯಿಂದ ಐಜ್ವಾಲ್ ಸೈರಾಂಗ್ವರೆಗೆ ರೈಲು ಮಾರ್ಗವಾಗಿದ್ದು, ಸರಕು ರೈಲುಗಳಲ್ಲದೇ ಪ್ರಯಾಣಿಕರ ರೈಲುಗಳೂ ಸಂಚರಿಸಲಿವೆ.
  • 51.38 ಕಿ.ಮೀ. ಉದ್ದದ ಮಾರ್ಗದಲ್ಲಿ 48 ಸುರಂಗಗಳು, 55 ದೊಡ್ಡ ರೈಲು ಸೇತುವೆಗಳು, 88 ಸಣ್ಣ ಸೇತುವೆಗಳಿವೆ. 1.86 ಕಿ.ಮೀ. ಉದ್ದದ ಸುರಂಗವು ದೊಡ್ಡ ರೈಲು ಸುರಂಗ ಮಾರ್ಗವಾಗಿದ್ದರೆ, 114 ಮೀಟರ್‌ ಎತ್ತರದ ದೊಡ್ಡ ಸೇತುವೆಯೂ ಇದೆ. ಒಟ್ಟು ಆರು ಸೇತುವೆಗಳು ದೆಹಲಿಯ ಕುತುಬ್ಮೀನಾರ್ಗಿಂತ (72 ಮೀಟರ್‌) ಅಧಿಕ ಎತ್ತರವನ್ನು ಹೊಂದಿವೆ
  • ‘ಐಜ್ವಾಲ್‌ ಮತ್ತು ಕೊಲಸಿಬ್‌ ಜಿಲ್ಲೆಗಳಲ್ಲಿ ಸಾಗುವ ಈ ಮಾರ್ಗವನ್ನು ₹8,071 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೈರಾಬಿ, ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ನಿಲ್ದಾಣಗಳಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಒಂದೆರಡು ವಾರದಲ್ಲಿ ಉದ್ಘಾಟನೆಗೆ ಪ್ರಧಾನಿ ಕಚೇರಿಯಿಂದ ದಿನಾಂಕ ನಿಗದಿಯಾಗಲಿದೆ’ ಎಂದು ಈಶಾನ್ಯ ಗಡಿನಾಡು ರೈಲ್ವೆ (ನಾರ್ತ್‌ ಈಸ್ಟ್‌ ಫ್ರಾಂಟಿಯರ್‌ ರೈಲ್ವೆ) ಅಧಿಕಾರಿ.
  • ‘ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು, ಐಜ್ವಾಲ್‌ನಿಂದ ಗಡಿಭಾಗಗಳಿಗೂ ವಿಸ್ತರಿಸಲು ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
  • ರೈಲು ಹಳಿಗಳೇ ಸೌರ ವಿದ್ಯುತ್ಸ್ಥಾವರ

ಸಂದರ್ಭ: ಈ ವರ್ಷದ ಜೂನ್‌ ಅಂತ್ಯದಲ್ಲಿ ಭಾರತೀಯ ರೈಲ್ವೆಗೆ ಸಂಬಂಧಿಸಿದ ಒಂದು ಪೋಸ್ಟ್‌ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ‘ಭಾರತವು ರೈಲು ಹಳಿಗಳನ್ನು ವಿದ್ಯುತ್‌ ಸ್ಥಾವರನ್ನಾಗಿ ಪರಿವರ್ತಿಸುತ್ತಿದೆ’ ಎಂದು ಆ ಪೋಸ್ಟ್‌ ಹೇಳಿತ್ತು.

  • ಸುಸ್ಥಿರ ಮೂಲಸೌಕರ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಂತಹ ಬೆಳವಣಿಗೆ ಇದಾಗಿದ್ದು, ‘ಸನ್‌ ವೇಸ್‌’ (Sun Ways) ಎಂಬ ಭಾರತದ ಸ್ಟಾರ್ಟ್‌ಅಪ್‌ ಕಂಪನಿಯು ರೈಲು ಹಳಿಗಳ ಮಧ್ಯೆ ಸೌರಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್‌ ಉತ್ಪಾದಿಸಲು ಹೊರಟಿದೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು.
  • ದೇಶದ ಪ್ರಮುಖ ಸುದ್ದಿ ಸಂಸ್ಥೆ ಪಿಟಿಐ, ಜುಲೈ 7ರಂದು ಈ ಪೋಸ್ಟ್‌ ಬಗ್ಗೆ ಫ್ಯಾಕ್ಟ್‌ಚೆಕ್‌ ಮಾಡಿತ್ತು. ‘ಹಳಿಗಳ ನಡುವೆ ಸೌರಫಲಕಗಳನ್ನು ಅಳವಡಿಸುವ ಯೋಜನೆಯನ್ನು ಭಾರತೀಯ ರೈಲ್ವೆಯು ಕೈಗೆತ್ತಿಕೊಂಡಿಲ್ಲ; ಪೋಸ್ಟ್‌ನಲ್ಲಿರುವ ಚಿತ್ರ ಸ್ವಿಟ್ಜರ್ಲೆಂಡ್‌ಗೆ ಸಂಬಂಧಿಸಿ ದ್ದಾಗಿದ್ದು, ಸನ್ವೇ ಕಂಪನಿ ಭಾರತದ್ದಲ್ಲಸ್ವಿಟ್ಜರ್ಲೆಂಡ್ನದ್ದು. ಅಲ್ಲಿ ಅದು ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿತ್ತು. 
  • ಇದಾಗಿ, ಒಂದೂವರೆ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್‌ ನಿಜವಾಗಿರುವ ಸುದ್ದಿ ಉತ್ತರ ಪ್ರದೇಶದಿಂದ ಬಂದಿದೆ. ವಾರಾಣಸಿಯಲ್ಲಿರುವ ಭಾರತೀಯ ರೈಲ್ವೆಯ ಬನಾರಸ್ಲೋಕೋಮೋಟಿವ್ವರ್ಕ್ಸ್‌ (ಬಿಎಲ್ಡಬ್ಲ್ಯು) ಘಟಕವು ಸದ್ದಿಲ್ಲದೇ ಹಳಿಗಳ ನಡುವೆ ಸೌರಫಲಕ ಗಳನ್ನು ಯಶಸ್ವಿಯಾಗಿ ಅಳವಡಿಸಿ ಸೂರ್ಯನ ಶಾಖದಿಂದ ವಿದ್ಯುತ್ಉತ್ಪಾದಿಸುವ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಿದೆ. ಸ್ವಾತಂತ್ರ್ಯೋತ್ಸವದ ದಿನದಂದು ಯೋಜನೆಗೆ ಚಾಲನೆ ನೀಡಲಾಗಿದೆ.
  • 2030 ವೇಳೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ರೈಲ್ವೆ ಹೊಂದಿದ್ದು, ಆ ದಿಸೆಯಲ್ಲಿ ಈ ಪ್ರಾಯೋಗಿಕ ಯೋಜನೆ ಮಹತ್ವದ ಮೈಲಿಗಲ್ಲು ಎಂದು ರೈಲ್ವೆಯ ಅಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಮಾತ್ರವಲ್ಲ, 2070 ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಭಾರತ ಹಾಕಿಕೊಂಡಿದೆ. ಅದನ್ನು ಸಾಧಿಸುವ ನಿಟ್ಟಿನಲ್ಲೂ ಈ ಯೋಜನೆ ಮಹತ್ವದ್ದು. ಸ್ವಿಟ್ಜರ್ಲೆಂಡ್‌ ಬಿಟ್ಟು ಬೇರೆ ದೇಶಗಳಲ್ಲಿ ಇಂತಹ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಭಾರತದಲ್ಲಂತೂ ಇದು ಮೊದಲ ಪ್ರಯತ್ನ.
  • ಬನಾರಸ್‌ನ ಲೋಕೋಮೋಟಿವ್ ವರ್ಕ್ಸ್‌ನ ಎಂಜಿನಿಯರ್‌ಗಳು ಈ ಯೋಜನೆಯ ರೂವಾರಿಗಳು. ಬಿಎಲ್‌ಡಬ್ಲ್ಯು ವರ್ಕ್ಸ್‌ಶಾಪ್‌ನ ಲೈನ್‌–19ರಲ್ಲಿ 70 ಮೀಟರ್‌ನಷ್ಟು ದೂರಕ್ಕೆ 28 ಸೌರಫಲಕ ಗಳನ್ನು ಅಳವಡಿಸಲಾಗಿದ್ದು, ಇದು 15 ಕಿಲೋ ವಾಟ್ನಷ್ಟು ಸೌರ ವಿದ್ಯುತ್ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಂದು ಕಿ.ಮೀ ಉದ್ದಕ್ಕೆ ಫಲಕ ಅಳವಡಿಸಿದರೆ 220 ಕಿಲೋ ವ್ಯಾಟ್ನಷ್ಟು ಸೌರವಿದ್ಯುತ್ಉತ್ಪಾದಿಸಬಹುದು. ಪ್ರತಿ ಕಿ.ಮೀನಲ್ಲಿ ಒಂದು ದಿನಕ್ಕೆ 880 ಯುನಿಟ್ಗಳಂತೆ ಒಂದು ವರ್ಷದಲ್ಲಿ 3.20 ಲಕ್ಷ ಯುನಿಟ್ಗಳಷ್ಟು ವಿದ್ಯುತ್ಉತ್ಪಾದಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
  • ದೇಶದಲ್ಲಿ ರೈಲ್ವೆಯ ಜಾಲ 1.2 ಲಕ್ಷ ಕಿ.ಮೀನಷ್ಟು ಉದ್ದವಿದೆ. ಈ ತಂತ್ರಜ್ಞಾನವನ್ನು ರೈಲ್ವೆ ಯಾರ್ಡ್‌ಗಳಲ್ಲಿರುವ ಹೆಚ್ಚು ಬಳಕೆ ಯಲ್ಲಿರದ ಹಳಿಗಳಲ್ಲಿ ಬಳಸಬಹುದು. ಇದರಲ್ಲಿ ಸೌರಫಲಕಗಳ ಅಳವಡಿಕೆಗೆ ಹಳಿಗಳ ನಡುವಿನ ಖಾಲಿ ಜಾಗವನ್ನು ಬಳಸುವುದರಿಂದ ಯೋಜನೆಗಾಗಿ ಭೂಮಿಯನ್ನು ಸ್ವಾಧೀನ ಮಾಡುವ ಅಗತ್ಯವಿಲ್ಲ ಎಂಬುದು ಅಧಿಕಾರಿಗಳ ವಾದ.

ಫಲಕ ತೆರವುಗೊಳಿಸುವ ತಂತ್ರಜ್ಞಾನ

  • ಆಗಸ್ಟ್‌ 15ರಂದು ಯೋಜನೆಗೆ ಚಾಲನೆ ನೀಡುವ ವೇಳೆ ಸೌರಫಲಕಗಳನ್ನು ಅಳವಡಿಸಿದ 78 ಮೀಟರ್‌ ಉದ್ದದ ಹಳಿಯ ಮೇಲೆ ರೈಲು ಎಂಜಿನ್‌ ಅನ್ನು ಓಡಿಸಲಾಗಿತ್ತು. ಫಲಕ ಅಳವಡಿಕೆ ನಂತರ ಎದುರಾಗಬಹುದಾದ ಸವಾಲುಗಳನ್ನು ಪರಿಗಣಿಸಿಯೇ ಇದರ ವಿನ್ಯಾಸ ರೂಪಿಸಲಾಗಿದೆ. ದೇಶೀಯವಾಗಿ ವಿನ್ಯಾಸವನ್ನು ಸಿದ್ಧಪಡಿಸ ಲಾಗಿದೆ. ರೈಲು ಸಂಚರಿಸುವಾಗ ರೈಲು ಹಳಿಗಳು ಅದುರುವುದರಿಂದ, ಇದರ ಪ್ರಭಾವವನ್ನು ಕಡಿಮೆ ಮಾಡುವುದಕ್ಕಾಗಿ ಫಲಕಗಳಿಗೆ ರಬ್ಬರ್‌ ಚೌಕಟ್ಟುಗಳನ್ನು ಹೊಂದಿರುವ ಪ್ಯಾಡ್‌ ಬಳಸಲಾಗಿದೆ. ಹಳಿಯ ಕೆಳಗೆ, ಜಲ್ಲಿ ಮೇಲೆ ಹಾಕಲಾಗಿರುವ ಕಾಂಕ್ರೀಟ್‌ ಪಟ್ಟಿಗೆ ಫಲಕಗಳನ್ನು ಅಂಟಿಸಲಾಗಿದೆ. ಇದಕ್ಕಾಗಿ ಎಪಾಕ್ಸಿ ಅಂಟನ್ನು ಬಳಸಲಾಗಿದೆ. ಹಳಿ ನಿರ್ವಹಣೆ, ಸ್ವಚ್ಛತೆಗಾಗಿ ಫಲಕಗಳನ್ನು ಸುಲಭವಾಗಿ ತೆರವುಗೊಳಿಸಬಹುದು ಎಂಬುದು ಅಧಿಕಾರಿಗಳ ವಿವರಣೆ.

ಶೂನ್ಯ ಇಂಗಾಲ ಗುರಿಯೆಡೆಗೆ

  • ಸುಸ್ಥಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಬಳಕೆಯ ಮೂಲಕ ನಿರ್ವಹಣಾ ವೆಚ್ಚವನ್ನು ಉಳಿತಾಯ ಮಾಡಲು ಯತ್ನಿಸುತ್ತಿರುವ ರೈಲ್ವೆಯು ಸೌರಶಕ್ತಿಯಿಂದ ವಿದ್ಯುತ್‌ ಉತ್ಪಾದಿಸಿ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವತ್ತ ದೃಷ್ಟಿ ನೆಟ್ಟಿದೆ. ವರ್ಷದ ಫೆಬ್ರುವರಿ ಅಂಕಿಅಂಶಗಳ ಪ್ರಕಾರ, ರೈಲ್ವೆಯು ಈವರೆಗೆ ದೇಶದಾದ್ಯಂತ ಇರುವ 2,249 ರೈಲ್ವೆ ನಿಲ್ದಾಣಗಳು ಹಾಗೂ ಇತರ ಕಟ್ಟಡಗಳಲ್ಲಿ ಒಟ್ಟು 209 ಮೆಗಾ ವಾಟ್ಸಾಮರ್ಥ್ಯದ ಸೌರ ಘಟಕಗಳನ್ನು ಅಳವಡಿಸಿದೆ.
  • ಹಳಿಗಳ ನಡುವಿನ ಖಾಲಿ ಜಾಗ ಬಳಸಿ ಸೌರ ವಿದ್ಯುತ್‌ ಉತ್ಪಾದಿಸುವ ರೈಲ್ವೆಯ ಯೋಜನೆಯು 2030ರ ವೇಳೆಗೆ ಇಂಗಾಲ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಗುರಿ ಸಾಧನೆಯ ದಿಸೆಯಲ್ಲಿ ಮತ್ತೊಂದು ಪ್ರಯತ್ನ.
  • ಆಂಧ್ರಪ್ರದೇಶ: ರೋಗಿಯಲ್ಲಿಮೆಲಿಯೊಯಿಡೊಸಿಸ್ದೃಢ

ಸಂದರ್ಭ: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತುರಕಪಲೆಂ ಗ್ರಾಮದ ರೋಗಿಯೊಬ್ಬರಲ್ಲಿ ‘ಮೆಲಿಯೊಯಿಡೊಸಿಸ್’ (ಬ್ಯಾಕ್ಟೀರಿ ಯಾದಿಂದ ಹರಡುವ ಸೋಂಕು) ಇರುವುದು ದೃಢಪಟ್ಟಿದೆ.

  • 1,200 ಜನರು ವಾಸಿಸುತ್ತಿರುವ ಈ ಪುಟ್ಟ ಗ್ರಾಮದಲ್ಲಿ ಜುಲೈನಿಂದ ಇದುವರೆಗೆ ನಿಗೂಢ ಆರೋಗ್ಯ ಸಮಸ್ಯೆಗಳಿಂದಾಗಿ 23 ಮಂದಿ ಮೃತ ಪಟ್ಟಿದ್ದರು. ಸರಣಿ ಸಾವುಗಳ ನಡುವೆಯೇ ಬ್ಯಾಕ್ಟೀರಿಯಾ ಸೋಂಕಿನ ಮೊದಲ ಪ್ರಕರಣ ದೃಢಪಟ್ಟಿದೆ.
  • ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ರೋಗಿಯಲ್ಲಿ ‘ಮೆಲಿಯೊಯಿಡೊಸಿಸ್’ ಸೋಂಕು ಇರುವುದು ದೃಢಪಟ್ಟಿದೆ ಎಂದು ಗುಂಟೂರು ಜಿಲ್ಲಾಧಿಕಾರಿ ಎಸ್‌.ನಾಗಲಕ್ಷ್ಮಿ ಮಂಗಳವಾರ ಹೇಳಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಈ ಗ್ರಾಮದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ತಲಾ 10 ಮಂದಿ ಹಾಗೂ ಸೆಪ್ಟೆಂಬರ್‌ನಲ್ಲಿ ಮೂವರು ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ. ಇವರಲ್ಲಿ ಆರಂಭದಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಬಳಿಕ ಅಂಗಾಂಗ ವೈಫಲ್ಯಗೊಂಡು ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬಹುತೇಕರು 55 ವರ್ಷದವರಾಗಿದ್ದರು.
  • ಪರಿಷ್ಕೃತ ಎಂಆರ್ಪಿ ಪ್ರಕಟಿಸಿ: ಸೂಚನೆ

ಸಂದರ್ಭ: ಉತ್ಪನ್ನಗಳ ತಯಾರಕರು ಮತ್ತು ಆಮದುಗಾರರು ಜಿಎಸ್‌ಟಿ ದರದಲ್ಲಿ ಆಗಿರುವ ಪರಿಷ್ಕರಣೆ ಯನ್ನು ಪ್ರತಿಫಲಿಸುವ ರೀತಿಯಲ್ಲಿ ಹೊಸ ಎಂಆರ್‌ಪಿ ದರವನ್ನು ಉತ್ಪನ್ನಗಳ ಮೇಲೆ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

  • ಉತ್ಪನ್ನಗಳನ್ನು ಪ್ಯಾಕ್‌ ಮಾಡಲು ಬಳಸುವ ಪೊಟ್ಟಣಗಳ ಮೇಲೆ ಹಳೆಯ ಎಂಆರ್‌ಪಿ ಇದ್ದರೆ, ಅವುಗಳನ್ನು ಡಿಸೆಂಬರ್‌ 31ರವರೆಗೆ ಅಥವಾ ಅವುಗಳ ದಾಸ್ತಾನು ಇರುವವರಿಗೆ (ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯ) ಬಳಕೆ ಮಾಡಬಹುದು ಎಂದು ಹೇಳಿದೆ. ಆದರೆ, ಇಂತಹ ಪೊಟ್ಟಣಗಳ ಮೇಲೆ ಪರಿಷ್ಕೃತ ಎಂಆರ್‌ಪಿಯನ್ನೂ ಪ್ರಕಟಿಸಬೇಕಾಗುತ್ತದೆ.
  • ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಜಿಎಸ್‌ಟಿ ಮಂಡಳಿ ತಗ್ಗಿಸಿದೆ. ಪರಿಷ್ಕೃತ ಜಿಎಸ್‌ಟಿ ದರವು ಸೆಪ್ಟೆಂಬರ್‌ 22ರಿಂದ ಜಾರಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರವು ಕಂಪನಿಗಳಿಗೆ ಈ ಸೂಚನೆ ನೀಡಿದೆ.
  • ‘ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮಾರಾಟವಾಗದ ಉತ್ಪನ್ನಗಳ ಮೇಲಿನ ಎಂಆರ್‌ಪಿ ದರವನ್ನು ಡಿಸೆಂಬರ್‌ 31ರವರೆಗೆ (ಅಥವಾ ದಾಸ್ತಾನು ಖಾಲಿಯಾಗುವವರೆಗೆ) ಪರಿಷ್ಕರಿಸ ಬಹುದು. ಪರಿಷ್ಕರಿಸುವ ದರವು ಜಿಎಸ್‌ಟಿಯಿಂದ ಆದ ಬದಲಾವಣೆಯನ್ನು ಮಾತ್ರ ತೋರಿಸಬೇಕು. ತೆರಿಗೆಯಿಂದ ಆದ ಹೆಚ್ಚಳ ಅಥವಾ ಇಳಿಕೆಯನ್ನು ಮಾತ್ರ ಅದರಲ್ಲಿ ತೋರಿಸಬಹುದು’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಕ್ಸ್‌ ಮೂಲಕ ತಿಳಿಸಿದ್ದಾರೆ.
  • ಸ್ಟಿಕ್ಕರ್ ಬಳಸಿ, ಸ್ಟ್ಯಾಂಪ್ ಬಳಸಿ ಅಥವಾ ಆನ್‌ಲೈನ್‌ ಪ್ರಿಂಟ್ ಮೂಲಕ ಪರಿಷ್ಕೃತ ಎಂಆರ್‌ಪಿಯನ್ನು ತೋರಿಸಬಹುದು. ಜೊತೆಯಲ್ಲೇ, ಮೂಲ ಎಂಆರ್‌ಪಿ ಕೂಡ ಕಾಣುವಂತೆ ಇರಬೇಕು ಎಂದು ಸೂಚಿಸಲಾಗಿದೆ. ಬೆಲೆಯಲ್ಲಿನ ಪರಿಷ್ಕರಣೆಗೆ ಸಂಬಂಧಿಸಿದಂತೆ ತಯಾರ ಕರು, ಪ್ಯಾಕ್‌ ಮಾಡುವವರು ಅಥವಾ ಆಮದುದಾರರು ಕನಿಷ್ಠ ಎರಡು ಜಾಹೀರಾತುಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪತ್ರಿಕೆಗಳ ಮೂಲಕ ನೀಡಬೇಕಿದೆ.
  • ಬೆಲೆ ಪರಿಷ್ಕರಣೆ ಬಗ್ಗೆ ಗ್ರಾಹಕರಿಗೆ ಜಾಹೀರಾತು ಹಾಗೂ ಸಾರ್ವಜನಿಕ ನೋಟಿಸ್‌ ಮೂಲಕ ಮಾಹಿತಿ ನೀಡಬೇಕು. ಇದರಿಂದಾಗಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಜೋಶಿ ಅವರು ಹೇಳಿದ್ದಾರೆ.
  • ರಾಜಕೀಯ ಅಸ್ಥಿರತೆಯ ನೋಟ
  • ನಾಮಕಾವಸ್ಥೆ ಮುಖ್ಯಸ್ಥರುನಿಯಮಗಳ ಪ್ರಕಾರ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ: ಕರ್ನಾಟಕ ವಾದ

ಸಂದರ್ಭ: ಸಂವಿಧಾನದ ಪ್ರಕಾರ, ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕೇವಲ ನಾಮಕಾವಸ್ಥೆ ಮುಖ್ಯಸ್ಥರು. ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರು ಎಂದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪ್ರತಿಪಾದಿಸಿದೆ.

  • ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ನ್ಯಾಯಾಲಯ ಗಡುವು ನಿಗದಿ ಮಾಡಬಹುದೇ ಎಂಬ ವಿಷಯದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಳಿರುವ ಸಲಹೆಗೆ ಸಂಬಂಧಿಸಿದ ವಿಚಾರಣೆ ವೇಳೆ ಕರ್ನಾಟಕ ಈ ಅಭಿಪ್ರಾಯ ವ್ಯಕ್ತಪಡಿಸಿತು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯನ್‌ ವಾದ ಮಂಡಿಸಿದರು.
  • ‘ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಬದ್ಧರಾಗಿದ್ದಾರೆ. ಇದು ಭಾರತದಲ್ಲಿ ಆಡಳಿತದ ಮೂಲಭೂತ ಕಲ್ಪನೆಯಾಗಿದೆ ಮತ್ತು ಸುಪ್ರೀಂ ಕೋರ್ಟ್ ಇದನ್ನು ಅನುಮೋದಿಸಿದೆ‘ ಎಂದು ಅವರು ವಾದಿಸಿದರು.
  • ‘ನಿಯಮಗಳ ಪ್ರಕಾರ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ. ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲನೆಗಾಗಿ ವಿಧಾನಸಭೆಗೆ ಮರಳಿಸುವ ಉದ್ದೇಶದಿಂದ ಅಂಕಿತ ಹಾಕುವುದನ್ನು ತಡೆಹಿಡಿಯುವ ಅಧಿಕಾರವನ್ನಷ್ಟೇ ಹೊಂದಿದ್ದಾರೆ. ಆದರೆ, ವಿಧಾನಸಭೆಯಲ್ಲಿ ಮತ್ತೊಮ್ಮೆ ಮಸೂದೆ ಅನುಮೋದನೆಗೊಂಡಲ್ಲಿ ರಾಜ್ಯಪಾಲರು ಅಂಕಿತ ನೀಡಲೇಬೇಕ’ ಎಂದು ವಾದಿಸಿದರು. ‘ಸಂಸದೀಯ ಪ್ರಜಾಪ್ರಭುತ್ವವು ಶಾಸಕಾಂಗದ ಮೂಲಕ ವ್ಯಕ್ತವಾಗುವ ಸಾಮೂಹಿಕ ಅಭಿವ್ಯಕ್ತಿಯಾಗಿದೆ. ಕಾರ್ಯಾಂಗವು ಶಾಸಕಾಂಗದಿಂದ ರೂಪುಗೊಳ್ಳುತ್ತದೆ ಮತ್ತು ಅದಕ್ಕೆ ಉತ್ತರದಾಯಿಯಾಗಿರುತ್ತದೆ. ಕಾನೂನನ್ನು ರೂಪಿಸುವ ಅಂತಿಮ ಜವಾಬ್ದಾರಿ ಶಾಸಕಾಂಗದ ಮೇಲಿದೆ‘ ಎಂದು ಅವರು ಹೇಳಿದರು.

ಸೂಕ್ತ ಸಮಯದಲ್ಲಿ ಮಸೂದೆಗೆ ಅಂಗೀಕಾರ: ಸುಪ್ರೀಂ ಸಲಹೆ 

  • ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ಹಾಕುವ ಅಧಿಕಾರ ನೀಡುವ ಸಂವಿಧಾನದ 200 ನೇ ‍ಪರಿಚ್ಛೇದದಲ್ಲಿ ‘ಸಾಧ್ಯವಾದಷ್ಟು ಬೇಗ’ ಎಂಬ ಅಂಶ ಇಲ್ಲದೆ ಇದ್ದರೂ ಕೂಡ ರಾಜ್ಯಪಾಲರು ‘ಸೂಕ್ತ ಸಮಯ‘ದಲ್ಲಿ ಕ್ರಮ ಕೈಗೊಳ್ಳುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
  • ಎಂಟನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐದು–ಸದಸ್ಯರ ಸಾಂವಿಧಾನಿಕ ಪೀಠ, ‘ಕೇವಲ ಸಂವಿಧಾನವನ್ನಷ್ಟೇ ವಿಶ್ಲೇಷಿಸಲಾಗುವುದು, ವೈಯಕ್ತಿಕ ಪ್ರಕರಣಗಳನ್ನಲ್ಲ’ ಎಂದು ಸ್ಪಷ್ಟಪಡಿಸಿದೆ.
  • ‘ತುರ್ತು ಪ್ರಕರಣಗಳಲ್ಲಿ ರಾಜ್ಯಪಾಲರು 24 ಗಂಟೆಗಳ ಒಳಗೆ ಕಾರ್ಯ ನಿರ್ವಹಿಸಬೇಕಾಗಬಹುದು’ ಎಂದು ಪೀಠ ಹೇಳಿದೆ.
  • ಸಂವಿಧಾನ 200 ಪರಿಚ್ಛೇದವು ರಾಜ್ಯಪಾಲರಿಗೆ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳಿಗೆ ಅಂಕಿತ ನೀಡುವ, ಮಸೂದೆ ತಡೆ ಹಿಡಿಯುವ ಅಥವಾ ಮಸೂದೆಯನ್ನು ಮರಳಿ ಕಳುಹಿಸುವ ಅಥವಾ ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಿರಿಸುವ ಅಧಿಕಾರ ನೀಡುತ್ತದೆ.
  • ಪರಿಚ್ಛೇದ 200ರ ಮೊದಲ ನಿಯಮದ ಅನುಸಾರ, ರಾಜ್ಯಪಾಲರು ತಮಗೆ ಬಂದ ಮಸೂದೆಯನ್ನು ಸಾಧ್ಯವಾಷ್ಟು ಶೀಘ್ರದಲ್ಲಿ ಅಂಕಿತ ಹಾಕಬೇಕು ಅಥವಾ  ಮರುಪರಿಶೀಲನೆಗಾಗಿ ಸದನಕ್ಕೆ ಮರಳಿ ಕಳುಹಿಸಬೇಕು (ಹಣಕಾಸಿನ ಮಸೂದೆ ಹೊರತುಪಡಿಸಿ). ವಿಧಾನಸಭೆಯಲ್ಲಿ ಅದನ್ನು ಮರುಪರಿಶೀಲಿಸಿ ಕಳುಹಿಸಿದ ನಂತರ ಅದಕ್ಕೆ ಅಂಕಿತ ಹಾಕುವುದಕ್ಕೆ ವಿಳಂಬ ಮಾಡಬಾರದು.
  • ಇಂದೋರ್, ಅಮರಾವತಿ, ದೇವಾಸ್ನಗರ ಪ್ರಥಮ
  • ಹಿಮಾಚಲಕ್ಕೆ ₹1,500 ಕೋಟಿ ನೆರವು

ಸಂದರ್ಭ: ಭಾರಿ ಮಳೆಯಿಂದಾಗಿ ತೀವ್ರ ಹಾನಿಗೆ ಒಳಗಾಗಿರುವ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದರು. ರಾಜ್ಯಕ್ಕೆ ತಕ್ಷಣಕ್ಕೆ ₹1,500 ಕೋಟಿ ಬಿಡುಗಡೆ ಮಾಡುವುದಾಗಿ ಅವರು ಘೋಷಣೆ ಮಾಡಿದರು.

  • ಜೂನ್‌ 20ರಿಂದ ಸೆಪ್ಟೆಂಬರ್‌ 8ರವರೆಗೆ ರಾಜ್ಯಕ್ಕೆ ಸುಮಾರು ₹4,122 ಕೋಟಿ ನಷ್ಟವಾಗಿದೆ. ಮಳೆ ಸಂಬಂಧಿತ ಅವಘಡ ಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ಹೇಳಿದರು. ಹೆಲಿಕಾಪ್ಟರ್‌ ಮೂಲಕ ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿ ಪಡೆದುಕೊಂಡರು.
  • ರಾಜ್ಯ ವಿಪತ್ತು ನಿರ್ವಹಣೆ ಪಡೆ ನಿಧಿಗೆ ಮತ್ತು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ ಕೇಂದ್ರ ಸರ್ಕಾರವು ನೀಡುವ ಹಣವನ್ನೇ ಮುಂಗಡವಾಗಿ (₹1,500 ಕೋಟಿ) ನೀಡಲಾಗುತ್ತಿದೆ. ಈ ನಿಧಿಗಳಿಗೆ ಎರಡನೇ ಕಂತಿನಲ್ಲಿ ಕೇಂದ್ರವು ಹಣ ಪಾವತಿ ಮಾಡಬೇಕಿತ್ತು.
  • ಮಳೆಹಾನಿ ಅಂದಾಜಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಈಗಾಗಲೇ ಸಚಿವರ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ. ಈ ತಂಡದ ವರದಿ ಬಂದ ಬಳಿಕ, ಕೇಂದ್ರ ಸರ್ಕಾರವು ಮುಂದಿನ ಹಂತದ ಆರ್ಥಿಕ ನೆರವು ನೀಡಲಿದೆ ಎನ್ನಲಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.
  • ‘ಶಿಕ್ಷಣ, ಕೃಷಿ ಸೇರಿದಂತೆ ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಭಾರಿ ನಷ್ಟವಾಗಿದೆ. ಜನರ ಜೀವನ ಸಹಜಸ್ಥಿತಿಗೆ ಮರಳುವಂತೆ ಮಾಡಬೇಕಿದೆ ಇದಕ್ಕಾಗಿ ಬಹು ಆಯಾಮದ ಯೋಜನೆಗಳನ್ನು ರೂಪಿಸಬೇಕು’ ಎಂದು ಪ್ರಧಾನಿ ಹೇಳಿದರು.

ಪಂಜಾಬ್‌ಗೆ ₹1,600 ಕೋಟಿ ನೆರವು

  • ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿರುವ ಪಂಜಾಬ್‌ಗೆ ಪ್ರಧಾನಿ ಮೋದಿ ಅವರು ₹1,600 ಕೋಟಿ ನೆರವು ಘೋಷಣೆ ಮಾಡಿದರು. ರಾಜ್ಯಕ್ಕೆ ಈಗಾಗಲೇ ₹12 ಸಾವಿರ ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯಕ್ಕೆ ಸುಮಾರು ₹13 ಸಾವಿರ ಕೋಟಿ ನಷ್ಟವಾಗಿದೆ’ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಮನೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಲಾಯಿತು.

ಪ್ರಚಲಿತ ವಿದ್ಯಮಾನಗಳು: 9ನೇ ಸೆಪ್ಟೆಂಬರ್ 2025

ಆಧಾರ್ ಪರಿಗಣನೆಗೆ ಸೂಚನೆ

ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮತದಾರರ ಗುರುತಿನ ದಾಖಲೆಯಾಗಿ ಆಧಾರ್‌ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
  • ಪ್ರಸ್ತುತ ಬಿಹಾರದಲ್ಲಿ ಎಸ್ಐಆರ್ಪ್ರಕ್ರಿಯೆಗೆ 11 ದಾಖಲೆಗಳನ್ನು ಗೊತ್ತುಪಡಿಸಲಾಗಿದೆ. ಮತದಾರರು ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕಿದೆ.
  • ನ್ಯಾಯಮೂರ್ತಿ ಸೂರ್ಯ ಕಾಂತ್ಮತ್ತು ಜಾಯ್ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 12ನೇ ದಾಖಲೆಯಾಗಿಆಧಾರ್‌’ ಅನ್ನು ಪರಿಗಣಿಸುವಂತೆ ಹೇಳಿದೆ.
  • ಆದಾಗ್ಯೂ, ಆಧಾರ್ಸಂಖ್ಯೆಯು ಪೌರತ್ವಕ್ಕೆ ಪುರಾವೆ ಅಲ್ಲ. ಅದನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬಹುದಷ್ಟೆ ಎಂದು ನ್ಯಾಯಪೀಠ ಹೇಳಿದೆ.
  • ಮತದಾರ ಸಲ್ಲಿಸಿದ ಆಧಾರ್‌ ಕಾರ್ಡ್‌ ಅಸಲಿ ಹೌದೇ ಅಲ್ಲವೇ ಎನ್ನುವುದನ್ನು ಆಯೋಗವು ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
  • ‘ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಯಾರೂ ಬಯಸುತ್ತಿಲ್ಲ. ಆಯೋಗವು ನೈಜ ಮತದಾರರಿಗೆ ಮಾತ್ರ ಮತ ಚಲಾವಣೆಗೆ ಅವಕಾಶ ನೀಡಬೇಕು. ನಕಲಿ ದಾಖಲೆಗಳ ಆಧಾರದಲ್ಲಿ ನೈಜ ಪ್ರಜೆಗಳು ಎಂದು ಹೇಳಿಕೊಳ್ಳುತ್ತಿರುವವರನ್ನು ಮತದಾರರ ಪಟ್ಟಿಯಿಂದ ಹೊರಹಾಕಬೇಕು’ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.
  • ಆಧಾರ್‌ ಅನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ನಿರ್ದೇಶನಗಳನ್ನು ನೀಡುವಂತೆ ಆಯೋಗಕ್ಕೆ ನ್ಯಾಯಪೀಠ ಹೇಳಿತು.
  • ಇದೇ ವೇಳೆ, ಆಧಾರ್‌ ಕಾರ್ಡನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸದ್ದಕ್ಕೆ ಸಂಬಂಧಿಸಿದಂತೆ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ವಿವರಣೆ ನೀಡುವಂತೆ ಕೇಳಿತು. ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರು, 99.6ರಷ್ಟು ಮತದಾರರ ಹೆಸರನ್ನು ಒಳಗೊಂಡ ಕರಡು ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
  • ಗ್ಯಾರಂಟಿಗಳಿಗೆ ₹97,813 ಕೋಟಿ ವೆಚ್ಚ

ಸಂದರ್ಭ: ಗ್ಯಾರಂಟಿ ಯೋಜನೆಯಡಿ ಈವರೆಗೆ ₹97,813 ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
  • ಈ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ₹50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನು ಭವಿಗಳಿಗೆ ₹18,139 ಕೋಟಿ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ ₹623 ಕೋಟಿ, ಶಕ್ತಿ ಯೋಜನೆಯಡಿ 544 ಕೋಟಿ ಬಾರಿ ಪ್ರಯಾಣಿಸಿದ್ದಕ್ಕೆ ₹13,903 ಕೋಟಿ ಮತ್ತು ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿ ಗಳಿಗೆ ₹11,821.17 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
  • ಮರಣ ಹೊಂದುವ ಫಲಾನುಭವಿ ಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್‌ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದರು.
  • ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಅನರ್ಹ ಬಿಪಿಎಲ್‌ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್‌ ಮಟ್ಟದಲ್ಲಿ ನಡೆಸಬೇಕು. ಈ ಕುರಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು  ಸಿದ್ದರಾಮಯ್ಯ ಹೇಳಿದರು.

ವಿಶ್ವದಾಖಲೆ ಸೃಷ್ಟಿಸಿದ ಶಕ್ತಿ ಯೋಜನೆ

  • ‘ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ 500 ಕೋಟಿಗೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ‘ಗೋಲ್ಡನ್‌ ಬುಕ್ ಆಫ್‌ ರೆಕಾರ್ಡ್ಸ್‌’ ನಲ್ಲಿ ದಾಖಲಾಗಿದೆ. ಇದಕ್ಕೆ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಸಭೆಯಲ್ಲಿ ಹೇಳಿದ  ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿ ಪ್ರಮಾಣ ಪತ್ರ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
  • ಮತಪತ್ರಕಡ್ಡಾಯ: 4 ಮಸೂದೆ ಸಿದ್ಧ

ಸಂದರ್ಭ: ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು, ರಹಸ್ಯ ಮತದಾನ ವ್ಯವಸ್ಥೆಗೆ ‘ಮತಪತ್ರ’ (ಬ್ಯಾಲಟ್ ಪೇಪರ್) ಬಳಕೆ ಕಡ್ಡಾಯಗೊಳಿಸಲು ಸಂಬಂಧಪಟ್ಟ ಕಾಯ್ದೆಗಳ ತಿದ್ದುಪಡಿಗೆ ನಾಲ್ಕು ಮಸೂದೆ ಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

  • ಇದೇ 11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗಳ ಕರಡನ್ನು ಮಂಡನೆ ಮಾಡಲಾಗುತ್ತಿದೆ. ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
  • ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವ ದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿ ಸುವ ಮಹತ್ವದ ನಿರ್ಣಯವನ್ನು ಸೆ. 4ರಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿತ್ತು.

ಸರ್ಕಾರದ ಸಮರ್ಥನೆಗಳೇನು?:

  • ಮತಪತ್ರದ ಗೌಪ್ಯತೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೂಲ ಆಧಾರವಾಗಿದ್ದು, ಪ್ರಜಾಸತ್ತಾತ್ಮಕ ಪ್ರಕ್ರಿ ಯೆಯ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಮತದಾರರನ್ನು ಬಲವಂತ, ಬೆದರಿಕೆ ಮತ್ತು ಅನುಚಿತ ಪ್ರಭಾವದಿಂದ ರಕ್ಷಿಸುತ್ತದೆ ಎಂದು ಹಲವು ತೀರ್ಪುಗ ಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಕುಲದೀಪ್‌ ನಾಯರ್‌ ವಿರುದ್ಧದ ಕೇಂದ್ರ ಸರ್ಕಾರ (2006) ಪ್ರಕರಣದಲ್ಲಿ ‘ಮತದಾರರ ಸ್ವಾಯತ್ತತೆಯನ್ನು ಖಚಿತಪಡಿಸಿ ಕೊಳ್ಳಲು ಮತ್ತು ಬಾಹ್ಯ ಒತ್ತಡಗಳನ್ನು ತಡೆಯಲು ಸಾರ್ವತ್ರಿಕ ಚುನಾವಣೆಗಳಿಗೆ ರಹಸ್ಯ ಮತದಾನ ಅತ್ಯಗತ್ಯವಾಗಿದೆ’ ಎಂದೂ ಸ್ಪಷ್ಟಪಡಿ ಸಿದೆ. ಆ ಮೂಲಕ, ಮುಕ್ತ ಚುನಾವಣೆಗಳ ಸಾಂವಿಧಾನಿಕ ಆದೇಶ ಎತ್ತಿ ಹಿಡಿದಿದೆ.
  • ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸದ ಮಹತ್ವವನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದ್ದು, ಮತ ಪತ್ರದ ಗೌಪ್ಯತೆ ಕಾಪಾಡುವಾಗ ಪಾರ ದರ್ಶಕತೆ ಹೆಚ್ಚಿಸಲು ಇವಿಎಂಗಳಲ್ಲಿ ದಾಖಲಾಗುವ ಮತಗಳ ಪರಿಶೀಲನೆಗೆ ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್ ) ಪರಿಚಯಿಸಿತ್ತು. ಅಲ್ಲದೆ, ಇವಿಎಂ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಪರಿಹರಿಸಲು ನಿರಂತರ ಸುಧಾರಣೆಗಳ ಅಗತ್ಯವನ್ನೂ ಎತ್ತಿ ತೋರಿಸಿದೆ. ಆದರೆ, ಇವಿಎಂಗಳಲ್ಲಿನ ದೌರ್ಬಲ್ಯಗಳು ಮತ್ತು ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳ ಮೂಲಕ ಚುನಾವಣಾ ಕುತಂತ್ರಗಳ ಸಾಧ್ಯತೆಯ ಕುರಿತು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿರುವುದರಿಂದ, ಸಾರ್ವಜನಿಕ ನಂಬಿಕೆಯನ್ನು ಮರು ಸ್ಥಾಪಿ ಸಲು ಸದೃಢವಾದ ರಹಸ್ಯ ಮತಪತ್ರ ವ್ಯವಸ್ಥೆಗೆ ಮರಳುವ ಅಗತ್ಯ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ನೀಡಿದೆ.
  • ಈ ಕಳವಳಗಳ ಕಾರಣಕ್ಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಗದ ಮತಪತ್ರ ವ್ಯವಸ್ಥೆಗೆ ಮರಳಲು ನಿರ್ಧರಿಸಲಾಗಿದೆ.  ಕಾಗದ ಮತಪತ್ರಗಳು ಅಥವಾ ಇತರ ಗೌಪ್ಯ ಕಾರ್ಯವಿಧಾನ ಗಳ ಬಳಕೆಯ ಮೂಲಕ ರಹಸ್ಯ ಮತ ದಾನ ವ್ಯವಸ್ಥೆಯು, ಮತದಾರರು ಪ್ರತೀ ಕಾರದ ಭಯ ಇಲ್ಲದೆ ತಮ್ಮ ಮತ ಚಲಾ ಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ ಎಂದೂ ವಿವರಿಸಿದೆ.

ತಿದ್ದುಪಡಿ ಮಸೂದೆಗಳು ಯಾವುವು?

  • l ಗ್ರೇಟರ್‌ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ)
  • l ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ)
  • l ಕರ್ನಾಟಕ ನಗರ ಪಾಲಿಕೆಗಳು (ಎರಡನೇ ತಿದ್ದುಪಡಿ)
  • l ಕರ್ನಾಟಕ ಪುರಸಭೆಗಳು (ತಿದ್ದುಪಡಿ)

ವಿಧಾನ ಮಂಡಲಕ್ಕೆ ಅಧಿಕಾರವಿದೆ

  • ‘ಸ್ಥಳೀಯ ಪ್ರಾಧಿಕಾರಗಳಿಗೆ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಕಾಗದ ಮತಪತ್ರಗಳನ್ನು ಬಳಸಿಕೊಂಡು ರಹಸ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಆ ಮೂಲಕ, ರಾಜ್ಯ ಚುನಾವಣಾ ಆಯೋಗವು ಮತದಾರರ ಗೌಪ್ಯತೆ ಮತ್ತು ಚುನಾವಣಾ ಸಮಗ್ರತೆಯೊಂದಿಗೆ ಚುನಾವಣೆಗಳನ್ನು ನಡೆಸಲು ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ.
  • ಮಸೂದೆ ರೂಪಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಮಸೂದೆಯಲ್ಲಿರುವ ಉಪಬಂಧಗಳು ಕೇಂದ್ರದ ಜಾರಿಯಲ್ಲಿರುವ ಯಾವುದೇ ಕಾಯ್ದೆಯ ಉಪಬಂಧಗಳಿಗೆ ವ್ಯತಿರಿಕ್ತ ಆಗುವುದಿಲ್ಲ. ಹೀಗಾಗಿ, ಮಸೂದೆಗಳನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸುವ ಅಗತ್ಯವೂ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಪ್ರತಿಪಾದಿಸಿದೆ.
  • ಹಿಮಾಲಯದಲ್ಲಿಪಲ್ಲಾಸ್ಕ್ಯಾಟ್‌’

ಸಂದರ್ಭ: ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ‘ಪಲ್ಲಾಸ್‌ ಕ್ಯಾಟ್’ ಎಂಬ ವಿರಳ ಜಾತಿಯ ಕಾಡುಬೆಕ್ಕಿನ ಚಿತ್ರಗಳು ಇದೇ ಮೊದಲ ಬಾರಿ ಸೆರೆಯಾಗಿವೆ.

  • ಇದರೊಂದಿಗೆ ಹಿಮಾಲಯದಲ್ಲಿ 4,200 ಮೀಟರ್ಗಿಂತ ಹೆಚ್ಚಿನ ಎತ್ತರದಲ್ಲಿ 6 ವಿವಿಧ ಜಾತಿಯ ಕಾಡಿನ ಬೆಕ್ಕುಗಳ ಇರುವಿಕೆಯು ಪತ್ತೆಯಾದಂತಾಗಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ಭಾರತ ಘಟಕವು ತಿಳಿಸಿದೆ.
  • ಈವರೆಗೆ 5 ವಿಧದ ಕಾಡು ಬೆಕ್ಕಿನ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಅವುಗಳೆಂದರೆ: ಸ್ನೋ ಲೆಪರ್ಡ್, ಕ್ಲೌಡೆಡ್ಲೆಪರ್ಡ್, ಲೆಪರ್ಡ್ ಕ್ಯಾಟ್‌, ಕಾಮನ್ಲೆಪರ್ಡ್ ಮತ್ತು ಮಾರ್ಬಲ್ಡ್ಕ್ಯಾಟ್ಗಳು.
  • ಭಾರತದ ವಿಶ್ವ ವನ್ಯಜೀವಿ ಸಂಸ್ಥೆಯು ಹಿಮಾಲಯದಲ್ಲಿನ ವನ್ಯಜೀವಿ ಪರಿಸರದ ಕುರಿತು ತವಾಂಗ್‌ ಹಾಗೂ ಪಶ್ಚಿಮ ಕಮೆಂಗ್‌ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತಿದೆ.
  • ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಇರುವಿಕೆಯು ದೇಶದ ಮಹತ್ವದ ದಾಖಲೆಯಾಗಿದ್ದು, ನೂತನ ಅಧ್ಯಯನಕ್ಕೆ ದಾರಿಯಾಗಿದೆ.
  • ರಾಜ್ಯ ಅರಣ್ಯ ಇಲಾಖೆಯ ಬೆಂಬಲ ಹಾಗೂ ಸ್ಥಳೀಯರ ಬೆಂಬಲದೊಂದಿಗೆ ಸಂಸ್ಥೆಯು‘ರಿವೈವಿಂಗ್‌ ಟ್ರಾನ್ಸ್‌–ಹಿಮಾಲಯನ್‌ ರೇಂಜ್‌ಲ್ಯಾಂಡ್ಸ್– ಎ ಕಮ್ಯುನಿಟಿ– ಲೆಡ್ ವಿಶನ್‌ ಫಾರ್‌ ಪೀಪಲ್‌ ಆ್ಯಂಡ್‌ ನೇಚರ್’ ಯೋಜನೆಯಡಿ ಸಮೀಕ್ಷೆ ನಡೆಸುತ್ತಿವೆ.
  • 2024ರ ಸೆಪ್ಟೆಂಬರ್‌ನಲ್ಲಿ ಹಿಮಾಲಯದ 2,000 ಚದರ ಅಡಿ ಕಿ.ಮೀ ಎತ್ತರದಲ್ಲಿ 83 ಕಡೆ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
  • ಲಿಪುಲೇಖ್ವ್ಯಾಪಾರ ಒಪ್ಪಂದ ರದ್ದುಪಡಿಸಿ
  • ಲಿಪುಲೇಖ್‌ ಪಾಸ್‌ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್‌–ಯುಎಂಎಲ್‌ ಒತ್ತಾಯಿಸಿದೆ.
  • ಕೋಲಾರದಲ್ಲಿ .ವಿ ತಯಾರಿಕೆ

ಸಂದರ್ಭ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಪಾನಿನ ಹೋಂಡಾ ಕಂಪನಿಯು ಸುಮಾರು ₹600 ಕೋಟಿ ವೆಚ್ಚದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ.

  • ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಜಪಾನ್ ಪ್ರವಾಸದಲ್ಲಿದ್ದು, ಅಲ್ಲಿ ಹೋಂಡಾ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರನ್ನು ಭೇಟಿ ಮಾಡಿ ಚರ್ಚಿಸಿತು.
  • ಈ ವೇಳೆ, ನೋರಿಯಾ ಅವರು ಈ ವಿಷಯ ತಿಳಿಸಿದರು. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
  • ಭಾರತದಲ್ಲಿನ ತನ್ನ ಮೊದಲ ವಿದ್ಯುತ್ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ನರಸಾಪುರದಲ್ಲಿ ಕಾರ್ಯಾರಂಭ ಮಾಡಲಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಈ ಒಪ್ಪಂದಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಕಂಪನಿಯು ನಿಯೋಗಕ್ಕೆ ಮಾಹಿತಿ ನೀಡಿದೆ.
  • ಸಚಿವರ ನೇತೃತ್ವದ ನಿಯೋಗವು, ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿತು.
  • ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡಿದೆ. ಟೋಕಿಯೊ ಎಲೆಕ್ಟ್ರಾನ್‌, ಮಿತ್ಸುಬಿಸಿ ಎಲೆಕ್ಟ್ರಿಕ್‌, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್‌ ಮತ್ತು ರೆಸ್ಟರ್‌ ಹೋಲ್ಡಿಂಗ್ಸ್‌ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.
  • ಮಿತ್ಸುಬಿಸಿ ಎಲೆಕ್ಟ್ರಿಕ್‌ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
  • ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿ ರುವುದಾಗಿ ಯೋಕೊಗವಾ ಎಲೆಕ್ಟ್ರಿಕ್‌ ತಿಳಿಸಿದೆ.
  • ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಆಯುಕ್ತೆ ಗುಂಜನ್ ಕೃಷ್ಣ ಇದ್ದಾರೆ.

ಇಎಂಎಸ್ಸೇವೆಗೆ ಮನವಿ

  • ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಸೇವೆಗಳನ್ನು (ಇಎಂಎಸ್‌) ಆರಂಭಿಸಲು ಮುಂದಾಗಬೇಕು ಎಂದು ಜಪಾನಿನ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್‌ ಹೋಲ್ಡಿಂಗ್ಸ್‌ಗೆ ಸಚಿವರು ಮನವಿ ಮಾಡಿದ್ದಾರೆ.
  • ಇಸ್ರೇಲ್ ಜೊತೆ ಹೂಡಿಕೆ ಒಪ್ಪಂದಕ್ಕೆ ಸಹಿ

ಸಂದರ್ಭ: ಭಾರತ ಮತ್ತು ಇಸ್ರೇಲ್‌ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವೆ ಹೂಡಿಕೆಗಳಿಗೆ ಉತ್ತೇಜನ ನೀಡಲು ನೆರವಾಗಲಿದೆ ಎಂದು ಅದು ತಿಳಿಸಿದೆ.

  • ‘ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಮಾಡಲಾಗಿದೆ’ ಎಂದು ಹಣಕಾಸು ಸಚಿವಾಲಯವು ಎಕ್ಸ್‌ ಮೂಲಕ ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೊಟ್ರಿಕ್ ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
  • ದಕ್ಷಿಣ ಪಿನಾಕಿನಿ: ನ್ಯಾಯಮಂಡಳಿಗೆ ತಮಿಳುನಾಡು ಪಟ್ಟು

ಸಂದರ್ಭ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸಬೇಕು ಎಂದು ತಮಿಳುನಾಡು ಸರ್ಕಾರ ಮತ್ತೆ ಪಟ್ಟು ಹಿಡಿದಿದೆ.

  • ವಿವಾದ ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಕರೆದಿದ್ದ ಎರಡು ಸಭೆಗಳನ್ನು ತಮಿಳುನಾಡು ಬಹಿಷ್ಕರಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲೂ ತಮಿಳುನಾಡು ಇದೇ ನಿಲುವು ತಳೆಯಿತು.
  • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪಿನಾಕಿನಿ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018 ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019 ನವೆಂಬರ್ತಿಂಗಳಲ್ಲಿ ಮನವಿ ಮಾಡಿತ್ತು.
  • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು. ಈ ನಡುವೆ, ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು ಹಾಗೂ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
  • ಆರ್ಥಿಕ ನೀತಿಗಳು ಪಾರದರ್ಶಕವಾಗಿರಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್

ಸಂದರ್ಭ: ಜಾಗತಿಕ ಆರ್ಥಿಕ ನೀತಿಗಳು ನ್ಯಾಯಯುತ, ಪಾರದರ್ಶಕ ಮತ್ತು ಎಲ್ಲರಿಗೂ ಪ್ರಯೋಜನವಾಗುವಂತೆ ಇರಬೇಕು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಪಾದಿಸಿದರು.

  • ‘ಬ್ರಿಕ್ಸ್‌’ ರಾಷ್ಟ್ರಗಳ ನಾಯಕರ ವರ್ಚುವಲ್‌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ವ್ಯಾಪಾರ ಮತ್ತು ಹೂಡಿಕೆಗಾಗಿ ಜಗತ್ತು ಇಂದು ಸ್ಥಿರ ವಾತಾವರಣವನ್ನು ಬಯಸುತ್ತಿದೆ’ ಎಂದರು.
  • ‘ಅಂತರರಾಷ್ಟ್ರೀಯ ವ್ಯಾಪಾರ ನೀತಿಯು ಮುಕ್ತ, ನಿಷ್ಪಕ್ಷಪಾತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶೇಷ ಒತ್ತು ನೀಡುವ ತತ್ವಗಳನ್ನು ಆಧರಿಸಿರಬೇಕು’ ಎಂದು ಹೇಳಿದರು.
  • ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಶೃಂಗಸಭೆಯಲ್ಲಿ ಪಾಲ್ಗೊಂಡರು. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೂ ಶೃಂಗದಲ್ಲಿ ಭಾಗವಹಿಸಿದ್ದಾರೆ.
  • ಅರ್ಜಿ ವರ್ಗಾವಣೆಗೆಸುಪ್ರೀಂಒಪ್ಪಿಗೆಆನ್ಲೈನ್ಗೇಮಿಂಗ್ನಿಷೇಧ: ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರ

ಸಂದರ್ಭ: ‘ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ’ ಪ್ರಶ್ನಿಸಿ ಮೂರು ಹೈಕೋರ್ಟ್‌ಗಳಿಗೆ ಸಲ್ಲಿಕೆ ಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ.

  • ದೆಹಲಿ, ಕರ್ನಾಟಕ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳ ಮುಂದೆ ಬಾಕಿ ಇರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿತು.
  • ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾ ಗಿರುವ ಅರ್ಜಿಗಳು ಮತ್ತು ಇದುವರೆಗೆ ನಡೆದಿರುವ ವಿಚಾರಣೆಯ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ವರ್ಗಾಯಿಸುವಂತೆ ಪೀಠವು ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ನಿರ್ದೇಶಿಸಿತು.
  • ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಸಿ.ಎ.ಸುಂದರಂ ಹಾಗೂ ಅರವಿಂದ ದಾತಾರ್‌ ಅವರ ವಾದ ಅಲಿಸಿದ ಪೀಠ, ‘ಸಮಯವನ್ನು ಉಳಿಸಲಿಕ್ಕಾಗಿ ಈ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್‌ ರೂಪದಲ್ಲಿ ನಡೆಯಲಿ’ ಎಂದು ಹೇಳಿತು.
  • ಹೈಕೋರ್ಟ್‌ಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮನವಿ ಮಾಡಿತ್ತು.
  • ಕಾನೂನಿನಲ್ಲಿರುವ ಅಂಶಗಳ ಕುರಿತು ಒಂದೇ ರೀತಿಯ ಪ್ರಶ್ನೆಗಳನ್ನು ಎತ್ತಿರುವ ಹಲವು ಅರ್ಜಿಗಳು ವಿವಿಧ ಹೈಕೋರ್ಟ್‌ಗಳ ಮುಂದೆ ಬಾಕಿಯಿರು ವುದರಿಂದ, ಅಭಿಪ್ರಾಯಗಳ ಭಿನ್ನತೆ ಅಥವಾ ಬಹುವಿಧದ ವಿಚಾರಣೆಗಳನ್ನು ತಪ್ಪಿಸಲು ಅದನ್ನು ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ಅಥವಾ ಯಾವುದಾದರೂ ಹೈಕೋರ್ಟ್‌ಗೆ ವರ್ಗಾಯಿಸುವುದು ಒಳ್ಳೆಯದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
  • ಆನ್‌ಲೈನ್ ಜೂಜು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಹೆಡ್‌ ಡಿಜಿಟಲ್‌ ವರ್ಕ್ಸ್‌ ಪ್ರೈವೆಟ್‌ ಲಿಮಿಟೆಡ್‌, ಬಘೀರಾ ಕೇರಮ್ ಪ್ರೈವೆಟ್‌ ಲಿಮಿಟೆಡ್‌ ಮತ್ತು ಕ್ಲಬ್‌ಬೂಮ್‌ ಇಲೆವೆನ್ ಸ್ಪೋರ್ಟ್ಸ್‌ ಆ್ಯಂಡ್‌ ಎಂಟರ್‌ಟೇನ್‌ಮೆಂಟ್ ಪ್ರೈವೆಟ್‌ ಲಿಮಿಟೆಡ್‌ ಕಂಪನಿಗಳು ಕ್ರಮವಾಗಿ ಕರ್ನಾಟಕ ಹೈಕೋರ್ಟ್‌, ದೆಹಲಿ ಹೈಕೋರ್ಟ್‌ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿವೆ.
  • ಅಲ್ಕರಾಜ್ಗೆ ಅಮೆರಿಕ ಓಪನ್ ಕಿರೀಟ

ಸಂದರ್ಭ: ಕಾರ್ಲೋಸ್‌ ಅಲ್ಕರಾಜ್ ಅವರು ನಾಲ್ಕು ಸೆಟ್‌ಗಳ ಫೈನಲ್‌ ಸೆಣಸಾಟದಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಬದ್ಧ ಎದುರಾಳಿಗಳ ಸೆಣಸಾಟದಲ್ಲಿ ಸ್ಪೇನ್‌ನ ಆಟಗಾರ ತಮ್ಮ ಪ್ರಭುತ್ವವನ್ನು ಮತ್ತೊಮ್ಮೆ ಸ್ಥಾಪಿಸಿದರು.

  • 22 ವರ್ಷ ವಯಸ್ಸಿನ ಅಲ್ಕರಾಜ್ ಫೈನಲ್ನಲ್ಲಿ 6–2, 3–6, 6–1, 6–4 ರಿಂದ ಗೆಲುವು ಸಾಧಿಸಿ ಎರಡನೇ ಸಲ ಅಮೆರಿಕ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಒಟ್ಟಾರೆ ಅವರಿಗೆ ಇದು ಆರನೇ ಗ್ರ್ಯಾನ್ಸ್ಲಾಮ್ಪ್ರಶಸ್ತಿಯಾಗಿದೆ.
  • ಜುಲೈ ತಿಂಗಳಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಕೈಲಿ ಅನುಭವಿಸಿದ ಸೋಲಿಗೆ ಅಲ್ಕರಾಜ್‌ ಇಲ್ಲಿ ಸೇಡು ತೀರಿಸಿಕೊಂಡರು. ಅದು ಪ್ರಮುಖ ಟೂರ್ನಿಗಳ ಫೈನಲ್‌ನಲ್ಲಿ ಅವರಿಗೆ ಮೊದಲ ಸೋಲಾಗಿತ್ತು.
  • ಅಗ್ರಪಟ್ಟ: ಇಲ್ಲಿ ಪಡೆದ ಪ್ರಶಸ್ತಿಯೊಂದಿಗೆ ಅಲ್ಕರಾಜ್ ಅವರು ಸೆಪ್ಟೆಂಬರ್‌ 2023ರ ನಂತರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಸಿನ್ನರ್ ಅವರನ್ನು ಹಿಂದೆಹಾಕಿ ಮರಳಿ ಅಗ್ರಸ್ಥಾನಕ್ಕೇರಿದರು. ಮಾತ್ರವಲ್ಲ, ಹಾರ್ಡ್ಕೋರ್ಟ್ನಲ್ಲಿ 25 ವರ್ಷದ ಸಿನ್ನರ್ ಅವರ ಸತತ 27 ಗೆಲುವುಗಳ ಸರಪಣಿಯನ್ನು ತುಂಡರಿಸಿದರು.
  • ಅಲ್ಕರಾಜ್ ಅವರು ಸಿನ್ನರ್ ಎದುರಿನ ಈ ಹಿಂದಿನ ಎಂಟು ಮುಖಾಮುಖಿಗಳಲ್ಲಿ ಏಳನ್ನು ಗೆದ್ದಂತಾಗಿದೆ. ಒಟ್ಟಾರೆ ಸಿನ್ನರ್ ವಿರುದ್ಧ ಅವರು 10–5 ಗೆಲುವಿನ ದಾಖಲೆ ಹೊಂದಿದ್ದಾರೆ.
  • ಕಳೆದ ಎಂಟು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಇವರಿಬ್ಬರು ತಲಾ ನಾಲ್ಕನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ವಿಶ್ವ ಟೆನಿಸ್‌ನಲ್ಲಿ ಹಳೆಯ ಹುಲಿ ನೊವಾಕ್ ಜೊಕೊವಿಚ್‌ ಅವರನ್ನೂ ಸೇರಿದಂತೆ ಎಲ್ಲರ ಮೇಲೂ ಪ್ರಾಬಲ್ಯ ಮೆರೆದಿದ್ದಾರೆ.
  • ಫ್ಲಷಿಂಗ್ ಮಿಡೋಸ್‌ನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಯಾರೂ ಪ್ರಶಸ್ತಿ ಉಳಿಸಿಕೊಂಡಿಲ್ಲ. ಕಳೆದ ಸಲದ ವಿಜೇತ ಸಿನ್ನರ್ ಸಹ ಆ ಸಾಲಿಗೆ ಸೇರಿದರು. ರೋಜರ್ ಫೆಡರರ್‌ ಅವರು 2004 ರಿಂದ 08ರವರೆಗೆ ಸತತ ಐದು ಸಲ ಪ್ರಶಸ್ತಿ ಗೆದ್ದಿದ್ದರು. ನಂತರ ಯಾರೂ ಇಲ್ಲಿ ಸತತವಾಗಿ ಚಾಂಪಿಯನ್ ಆಗಿಲ್ಲ.
  • ಜಾವೆಲಿನ್ಥ್ರೋ: ನೀರಜ್ದಾಖಲೆ ಮುರಿದ ಶಿವಂ

ಸಂದರ್ಭ: ಜಾವೆಲಿನ್ ಥ್ರೋಪಟು ಶಿವಂ ಲೋಹಕರೆ ಅವರು ಜಾಲಹಳ್ಳಿಯಲ್ಲಿ ನಡೆದ ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

  • ಆರ್ಮಿ ರೆಡ್‌ ತಂಡವನ್ನು ಪ್ರತಿನಿಧಿಸಿದ 20 ವರ್ಷದ ಶಿವಂ (ಮಹಾರಾಷ್ಟ್ರ) ಅವರು 84.31 ಮೀಟರ್‌ ದೂರ ಈಟಿಯನ್ನು ಎಸೆದರು. ಮೂಲಕ ನೀರಜ್ಚೋಪ್ರಾ (83.80 ಮೀ) ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಅವರು ಮುರಿದರು. ಈ ಕೂಟವು ವಿಶ್ವ ಅಥ್ಲೆಟಿಕ್ಸ್‌ನಿಂದ ಮಾನ್ಯತೆ ಪಡೆಯದ ಕಾರಣ ವೈಯಕ್ತಿಕ ಶ್ರೇಷ್ಠ ದಾಖಲೆಗೆ ಪರಿಗಣಿಸುವುದಿಲ್ಲ.
  • ಕರ್ನಾಟಕದ ಮಣಿಕಂಠ ಹೋಬಳಿದಾರ್ ಅವರು ಆರ್ಮಿ ರೆಡ್ ತಂಡವನ್ನು ಪ್ರತಿನಿಧಿಸಿ 100 ಮೀ, 200 ಮೀ ಮತ್ತು 4×100 ಮೀ ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದರು.
  • ಫುಟ್ಬಾಲ್‌: ಭಾರತಕ್ಕೆ 3ನೇ ಸ್ಥಾನ    

ಸಂದರ್ಭ: ಹಿಸೋರ್ (ತಾಜಿಕಿಸ್ತಾನ), (ಪಿಟಿಐ): ಭಾರತ, ಸಿಎಎಫ್‌ಎ ನೇಷನ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತನಗಿಂತ ಮೇಲಿನ ಕ್ರಮಾಂಕದ ಒಮಾನ್ ತಂಡವನ್ನು ಪೆನಾಲ್ಟಿಯಲ್ಲಿ 3–2 ಗೋಲುಗಳಿಂದ ಸೋಲಿಸಿ ಪದಾರ್ಪಣೆ ಯಲ್ಲಿ ಮೂರನೇ ಸ್ಥಾನ ಗಳಿಸಿತು.

  • ಆಧಾರ್ ಪರಿಗಣನೆಗೆ ಸೂಚನೆ

ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮತದಾರರ

ಗುರುತಿನ ದಾಖಲೆಯಾಗಿ ಆಧಾರ್‌ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

  • ಪ್ರಸ್ತುತ ಬಿಹಾರದಲ್ಲಿ ಎಸ್ಐಆರ್ಪ್ರಕ್ರಿಯೆಗೆ 11 ದಾಖಲೆಗಳನ್ನು ಗೊತ್ತುಪಡಿಸಲಾಗಿದೆ. ಮತದಾರರು ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕಿದೆ.
  • ನ್ಯಾಯಮೂರ್ತಿ ಸೂರ್ಯ ಕಾಂತ್ಮತ್ತು ಜಾಯ್ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 12ನೇ ದಾಖಲೆಯಾಗಿಆಧಾರ್‌’ ಅನ್ನು ಪರಿಗಣಿಸುವಂತೆ ಹೇಳಿದೆ.
  • ಆದಾಗ್ಯೂ, ಆಧಾರ್ಸಂಖ್ಯೆಯು ಪೌರತ್ವಕ್ಕೆ ಪುರಾವೆ ಅಲ್ಲ. ಅದನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬಹುದಷ್ಟೆ ಎಂದು ನ್ಯಾಯಪೀಠ ಹೇಳಿದೆ.
  • ಮತದಾರ ಸಲ್ಲಿಸಿದ ಆಧಾರ್‌ ಕಾರ್ಡ್‌ ಅಸಲಿ ಹೌದೇ ಅಲ್ಲವೇ ಎನ್ನುವುದನ್ನು ಆಯೋಗವು ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
  • ‘ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಯಾರೂ ಬಯಸುತ್ತಿಲ್ಲ. ಆಯೋಗವು ನೈಜ ಮತದಾರರಿಗೆ ಮಾತ್ರ ಮತ ಚಲಾವಣೆಗೆ ಅವಕಾಶ ನೀಡಬೇಕು. ನಕಲಿ ದಾಖಲೆಗಳ ಆಧಾರದಲ್ಲಿ ನೈಜ ಪ್ರಜೆಗಳು ಎಂದು ಹೇಳಿಕೊಳ್ಳುತ್ತಿರುವವರನ್ನು ಮತದಾರರ ಪಟ್ಟಿಯಿಂದ ಹೊರಹಾಕಬೇಕು’ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.
  • ಆಧಾರ್‌ ಅನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ನಿರ್ದೇಶನಗಳನ್ನು ನೀಡುವಂತೆ ಆಯೋಗಕ್ಕೆ ನ್ಯಾಯಪೀಠ ಹೇಳಿತು.
  • ಇದೇ ವೇಳೆ, ಆಧಾರ್‌ ಕಾರ್ಡನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸದ್ದಕ್ಕೆ ಸಂಬಂಧಿಸಿದಂತೆ ನೀಡಿದ್ದ ಶೋಕಾಸ್‌ ನೋಟಿಸ್‌ಗೆ ವಿವರಣೆ ನೀಡುವಂತೆ ಕೇಳಿತು. ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರು, 99.6ರಷ್ಟು ಮತದಾರರ ಹೆಸರನ್ನು ಒಳಗೊಂಡ ಕರಡು ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
  • ಗ್ಯಾರಂಟಿಗಳಿಗೆ ₹97,813 ಕೋಟಿ ವೆಚ್ಚ

ಸಂದರ್ಭ: ಗ್ಯಾರಂಟಿ ಯೋಜನೆಯಡಿ ಈವರೆಗೆ ₹97,813 ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
  • ಈ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ₹50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನು ಭವಿಗಳಿಗೆ ₹18,139 ಕೋಟಿ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ ₹623 ಕೋಟಿ, ಶಕ್ತಿ ಯೋಜನೆಯಡಿ 544 ಕೋಟಿ ಬಾರಿ ಪ್ರಯಾಣಿಸಿದ್ದಕ್ಕೆ ₹13,903 ಕೋಟಿ ಮತ್ತು ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿ ಗಳಿಗೆ ₹11,821.17 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
  • ಮರಣ ಹೊಂದುವ ಫಲಾನುಭವಿ ಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್‌ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದರು.
  • ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಅನರ್ಹ ಬಿಪಿಎಲ್‌ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್‌ ಮಟ್ಟದಲ್ಲಿ ನಡೆಸಬೇಕು. ಈ ಕುರಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು  ಸಿದ್ದರಾಮಯ್ಯ ಹೇಳಿದರು.

ವಿಶ್ವದಾಖಲೆ ಸೃಷ್ಟಿಸಿದ ಶಕ್ತಿ ಯೋಜನೆ

  • ‘ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ 500 ಕೋಟಿಗೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ‘ಗೋಲ್ಡನ್‌ ಬುಕ್ ಆಫ್‌ ರೆಕಾರ್ಡ್ಸ್‌’ ನಲ್ಲಿ ದಾಖಲಾಗಿದೆ. ಇದಕ್ಕೆ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಸಭೆಯಲ್ಲಿ ಹೇಳಿದ  ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿ ಪ್ರಮಾಣ ಪತ್ರ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
  • ಮತಪತ್ರಕಡ್ಡಾಯ: 4 ಮಸೂದೆ ಸಿದ್ಧ

ಸಂದರ್ಭ: ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು, ರಹಸ್ಯ ಮತದಾನ ವ್ಯವಸ್ಥೆಗೆ ‘ಮತಪತ್ರ’ (ಬ್ಯಾಲಟ್ ಪೇಪರ್) ಬಳಕೆ ಕಡ್ಡಾಯಗೊಳಿಸಲು ಸಂಬಂಧಪಟ್ಟ ಕಾಯ್ದೆಗಳ ತಿದ್ದುಪಡಿಗೆ ನಾಲ್ಕು ಮಸೂದೆ ಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.

  • ಇದೇ 11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗಳ ಕರಡನ್ನು ಮಂಡನೆ ಮಾಡಲಾಗುತ್ತಿದೆ. ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
  • ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವ ದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿ ಸುವ ಮಹತ್ವದ ನಿರ್ಣಯವನ್ನು ಸೆ. 4ರಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿತ್ತು.

ಸರ್ಕಾರದ ಸಮರ್ಥನೆಗಳೇನು?:

  • ಮತಪತ್ರದ ಗೌಪ್ಯತೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೂಲ ಆಧಾರವಾಗಿದ್ದು, ಪ್ರಜಾಸತ್ತಾತ್ಮಕ ಪ್ರಕ್ರಿ ಯೆಯ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಮತದಾರರನ್ನು ಬಲವಂತ, ಬೆದರಿಕೆ ಮತ್ತು ಅನುಚಿತ ಪ್ರಭಾವದಿಂದ ರಕ್ಷಿಸುತ್ತದೆ ಎಂದು ಹಲವು ತೀರ್ಪುಗ ಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಕುಲದೀಪ್‌ ನಾಯರ್‌ ವಿರುದ್ಧದ ಕೇಂದ್ರ ಸರ್ಕಾರ (2006) ಪ್ರಕರಣದಲ್ಲಿ ‘ಮತದಾರರ ಸ್ವಾಯತ್ತತೆಯನ್ನು ಖಚಿತಪಡಿಸಿ ಕೊಳ್ಳಲು ಮತ್ತು ಬಾಹ್ಯ ಒತ್ತಡಗಳನ್ನು ತಡೆಯಲು ಸಾರ್ವತ್ರಿಕ ಚುನಾವಣೆಗಳಿಗೆ ರಹಸ್ಯ ಮತದಾನ ಅತ್ಯಗತ್ಯವಾಗಿದೆ’ ಎಂದೂ ಸ್ಪಷ್ಟಪಡಿ ಸಿದೆ. ಆ ಮೂಲಕ, ಮುಕ್ತ ಚುನಾವಣೆಗಳ ಸಾಂವಿಧಾನಿಕ ಆದೇಶ ಎತ್ತಿ ಹಿಡಿದಿದೆ.
  • ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸದ ಮಹತ್ವವನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದ್ದು, ಮತ ಪತ್ರದ ಗೌಪ್ಯತೆ ಕಾಪಾಡುವಾಗ ಪಾರ ದರ್ಶಕತೆ ಹೆಚ್ಚಿಸಲು ಇವಿಎಂಗಳಲ್ಲಿ ದಾಖಲಾಗುವ ಮತಗಳ ಪರಿಶೀಲನೆಗೆ ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್ ) ಪರಿಚಯಿಸಿತ್ತು. ಅಲ್ಲದೆ, ಇವಿಎಂ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಪರಿಹರಿಸಲು ನಿರಂತರ ಸುಧಾರಣೆಗಳ ಅಗತ್ಯವನ್ನೂ ಎತ್ತಿ ತೋರಿಸಿದೆ. ಆದರೆ, ಇವಿಎಂಗಳಲ್ಲಿನ ದೌರ್ಬಲ್ಯಗಳು ಮತ್ತು ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳ ಮೂಲಕ ಚುನಾವಣಾ ಕುತಂತ್ರಗಳ ಸಾಧ್ಯತೆಯ ಕುರಿತು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿರುವುದರಿಂದ, ಸಾರ್ವಜನಿಕ ನಂಬಿಕೆಯನ್ನು ಮರು ಸ್ಥಾಪಿ ಸಲು ಸದೃಢವಾದ ರಹಸ್ಯ ಮತಪತ್ರ ವ್ಯವಸ್ಥೆಗೆ ಮರಳುವ ಅಗತ್ಯ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ನೀಡಿದೆ.
  • ಈ ಕಳವಳಗಳ ಕಾರಣಕ್ಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಗದ ಮತಪತ್ರ ವ್ಯವಸ್ಥೆಗೆ ಮರಳಲು ನಿರ್ಧರಿಸಲಾಗಿದೆ.  ಕಾಗದ ಮತಪತ್ರಗಳು ಅಥವಾ ಇತರ ಗೌಪ್ಯ ಕಾರ್ಯವಿಧಾನ ಗಳ ಬಳಕೆಯ ಮೂಲಕ ರಹಸ್ಯ ಮತ ದಾನ ವ್ಯವಸ್ಥೆಯು, ಮತದಾರರು ಪ್ರತೀ ಕಾರದ ಭಯ ಇಲ್ಲದೆ ತಮ್ಮ ಮತ ಚಲಾ ಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ ಎಂದೂ ವಿವರಿಸಿದೆ.

ತಿದ್ದುಪಡಿ ಮಸೂದೆಗಳು ಯಾವುವು?

  • l ಗ್ರೇಟರ್‌ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ)
  • l ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ)
  • l ಕರ್ನಾಟಕ ನಗರ ಪಾಲಿಕೆಗಳು (ಎರಡನೇ ತಿದ್ದುಪಡಿ)
  • l ಕರ್ನಾಟಕ ಪುರಸಭೆಗಳು (ತಿದ್ದುಪಡಿ)

ವಿಧಾನ ಮಂಡಲಕ್ಕೆ ಅಧಿಕಾರವಿದೆ

  • ‘ಸ್ಥಳೀಯ ಪ್ರಾಧಿಕಾರಗಳಿಗೆ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಕಾಗದ ಮತಪತ್ರಗಳನ್ನು ಬಳಸಿಕೊಂಡು ರಹಸ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಆ ಮೂಲಕ, ರಾಜ್ಯ ಚುನಾವಣಾ ಆಯೋಗವು ಮತದಾರರ ಗೌಪ್ಯತೆ ಮತ್ತು ಚುನಾವಣಾ ಸಮಗ್ರತೆಯೊಂದಿಗೆ ಚುನಾವಣೆಗಳನ್ನು ನಡೆಸಲು ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ.
  • ಮಸೂದೆ ರೂಪಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಮಸೂದೆಯಲ್ಲಿರುವ ಉಪಬಂಧಗಳು ಕೇಂದ್ರದ ಜಾರಿಯಲ್ಲಿರುವ ಯಾವುದೇ ಕಾಯ್ದೆಯ ಉಪಬಂಧಗಳಿಗೆ ವ್ಯತಿರಿಕ್ತ ಆಗುವುದಿಲ್ಲ. ಹೀಗಾಗಿ, ಮಸೂದೆಗಳನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸುವ ಅಗತ್ಯವೂ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಪ್ರತಿಪಾದಿಸಿದೆ.
  • ಹಿಮಾಲಯದಲ್ಲಿಪಲ್ಲಾಸ್ಕ್ಯಾಟ್‌’

ಸಂದರ್ಭ: ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ‘ಪಲ್ಲಾಸ್‌ ಕ್ಯಾಟ್’ ಎಂಬ ವಿರಳ ಜಾತಿಯ ಕಾಡುಬೆಕ್ಕಿನ ಚಿತ್ರಗಳು ಇದೇ ಮೊದಲ ಬಾರಿ ಸೆರೆಯಾಗಿವೆ.

  • ಇದರೊಂದಿಗೆ ಹಿಮಾಲಯದಲ್ಲಿ 4,200 ಮೀಟರ್ಗಿಂತ ಹೆಚ್ಚಿನ ಎತ್ತರದಲ್ಲಿ 6 ವಿವಿಧ ಜಾತಿಯ ಕಾಡಿನ ಬೆಕ್ಕುಗಳ ಇರುವಿಕೆಯು ಪತ್ತೆಯಾದಂತಾಗಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ಭಾರತ ಘಟಕವು ತಿಳಿಸಿದೆ.
  • ಈವರೆಗೆ 5 ವಿಧದ ಕಾಡು ಬೆಕ್ಕಿನ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಅವುಗಳೆಂದರೆ: ಸ್ನೋ ಲೆಪರ್ಡ್, ಕ್ಲೌಡೆಡ್ಲೆಪರ್ಡ್, ಲೆಪರ್ಡ್ ಕ್ಯಾಟ್‌, ಕಾಮನ್ಲೆಪರ್ಡ್ ಮತ್ತು ಮಾರ್ಬಲ್ಡ್ಕ್ಯಾಟ್ಗಳು.
  • ಭಾರತದ ವಿಶ್ವ ವನ್ಯಜೀವಿ ಸಂಸ್ಥೆಯು ಹಿಮಾಲಯದಲ್ಲಿನ ವನ್ಯಜೀವಿ ಪರಿಸರದ ಕುರಿತು ತವಾಂಗ್‌ ಹಾಗೂ ಪಶ್ಚಿಮ ಕಮೆಂಗ್‌ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತಿದೆ.
  • ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಇರುವಿಕೆಯು ದೇಶದ ಮಹತ್ವದ ದಾಖಲೆಯಾಗಿದ್ದು, ನೂತನ ಅಧ್ಯಯನಕ್ಕೆ ದಾರಿಯಾಗಿದೆ.
  • ರಾಜ್ಯ ಅರಣ್ಯ ಇಲಾಖೆಯ ಬೆಂಬಲ ಹಾಗೂ ಸ್ಥಳೀಯರ ಬೆಂಬಲದೊಂದಿಗೆ ಸಂಸ್ಥೆಯು‘ರಿವೈವಿಂಗ್‌ ಟ್ರಾನ್ಸ್‌–ಹಿಮಾಲಯನ್‌ ರೇಂಜ್‌ಲ್ಯಾಂಡ್ಸ್– ಎ ಕಮ್ಯುನಿಟಿ– ಲೆಡ್ ವಿಶನ್‌ ಫಾರ್‌ ಪೀಪಲ್‌ ಆ್ಯಂಡ್‌ ನೇಚರ್’ ಯೋಜನೆಯಡಿ ಸಮೀಕ್ಷೆ ನಡೆಸುತ್ತಿವೆ.
  • 2024ರ ಸೆಪ್ಟೆಂಬರ್‌ನಲ್ಲಿ ಹಿಮಾಲಯದ 2,000 ಚದರ ಅಡಿ ಕಿ.ಮೀ ಎತ್ತರದಲ್ಲಿ 83 ಕಡೆ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
  • ಲಿಪುಲೇಖ್ವ್ಯಾಪಾರ ಒಪ್ಪಂದ ರದ್ದುಪಡಿಸಿ
  • ಲಿಪುಲೇಖ್‌ ಪಾಸ್‌ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್‌–ಯುಎಂಎಲ್‌ ಒತ್ತಾಯಿಸಿದೆ.
  • ಕೋಲಾರದಲ್ಲಿ .ವಿ ತಯಾರಿಕೆ

ಸಂದರ್ಭ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಪಾನಿನ ಹೋಂಡಾ ಕಂಪನಿಯು ಸುಮಾರು ₹600 ಕೋಟಿ ವೆಚ್ಚದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕಾ ಘಟಕವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ.

  • ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಜಪಾನ್ ಪ್ರವಾಸದಲ್ಲಿದ್ದು, ಅಲ್ಲಿ ಹೋಂಡಾ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರನ್ನು ಭೇಟಿ ಮಾಡಿ ಚರ್ಚಿಸಿತು.
  • ಈ ವೇಳೆ, ನೋರಿಯಾ ಅವರು ಈ ವಿಷಯ ತಿಳಿಸಿದರು. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
  • ಭಾರತದಲ್ಲಿನ ತನ್ನ ಮೊದಲ ವಿದ್ಯುತ್ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ನರಸಾಪುರದಲ್ಲಿ ಕಾರ್ಯಾರಂಭ ಮಾಡಲಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಈ ಒಪ್ಪಂದಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಕಂಪನಿಯು ನಿಯೋಗಕ್ಕೆ ಮಾಹಿತಿ ನೀಡಿದೆ.
  • ಸಚಿವರ ನೇತೃತ್ವದ ನಿಯೋಗವು, ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿತು.
  • ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡಿದೆ. ಟೋಕಿಯೊ ಎಲೆಕ್ಟ್ರಾನ್‌, ಮಿತ್ಸುಬಿಸಿ ಎಲೆಕ್ಟ್ರಿಕ್‌, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್‌ ಮತ್ತು ರೆಸ್ಟರ್‌ ಹೋಲ್ಡಿಂಗ್ಸ್‌ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.
  • ಮಿತ್ಸುಬಿಸಿ ಎಲೆಕ್ಟ್ರಿಕ್‌ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
  • ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿ ರುವುದಾಗಿ ಯೋಕೊಗವಾ ಎಲೆಕ್ಟ್ರಿಕ್‌ ತಿಳಿಸಿದೆ.
  • ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಆಯುಕ್ತೆ ಗುಂಜನ್ ಕೃಷ್ಣ ಇದ್ದಾರೆ.

ಇಎಂಎಸ್ಸೇವೆಗೆ ಮನವಿ

  • ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್‌ ತಯಾರಿಕಾ ಸೇವೆಗಳನ್ನು (ಇಎಂಎಸ್‌) ಆರಂಭಿಸಲು ಮುಂದಾಗಬೇಕು ಎಂದು ಜಪಾನಿನ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್‌ ಹೋಲ್ಡಿಂಗ್ಸ್‌ಗೆ ಸಚಿವರು ಮನವಿ ಮಾಡಿದ್ದಾರೆ.
  • ಇಸ್ರೇಲ್ ಜೊತೆ ಹೂಡಿಕೆ ಒಪ್ಪಂದಕ್ಕೆ ಸಹಿ

ಸಂದರ್ಭ: ಭಾರತ ಮತ್ತು ಇಸ್ರೇಲ್‌ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವೆ ಹೂಡಿಕೆಗಳಿಗೆ ಉತ್ತೇಜನ ನೀಡಲು ನೆರವಾಗಲಿದೆ ಎಂದು ಅದು ತಿಳಿಸಿದೆ.

  • ‘ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಮಾಡಲಾಗಿದೆ’ ಎಂದು ಹಣಕಾಸು ಸಚಿವಾಲಯವು ಎಕ್ಸ್‌ ಮೂಲಕ ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೊಟ್ರಿಕ್ ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
  • ದಕ್ಷಿಣ ಪಿನಾಕಿನಿ: ನ್ಯಾಯಮಂಡಳಿಗೆ ತಮಿಳುನಾಡು ಪಟ್ಟು

ಸಂದರ್ಭ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸಬೇಕು ಎಂದು ತಮಿಳುನಾಡು ಸರ್ಕಾರ ಮತ್ತೆ ಪಟ್ಟು ಹಿಡಿದಿದೆ.

  • ವಿವಾದ ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಕರೆದಿದ್ದ ಎರಡು ಸಭೆಗಳನ್ನು ತಮಿಳುನಾಡು ಬಹಿಷ್ಕರಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲೂ ತಮಿಳುನಾಡು ಇದೇ ನಿಲುವು ತಳೆಯಿತು.
  • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪಿನಾಕಿನಿ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018 ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019 ನವೆಂಬರ್ತಿಂಗಳಲ್ಲಿ ಮನವಿ ಮಾಡಿತ್ತು.
  • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು. ಈ ನಡುವೆ, ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು ಹಾಗೂ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
  • ಆರ್ಥಿಕ ನೀತಿಗಳು ಪಾರದರ್ಶಕವಾಗಿರಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್

ಸಂದರ್ಭ: ಜಾಗತಿಕ ಆರ್ಥಿಕ ನೀತಿಗಳು ನ್ಯಾಯಯುತ, ಪಾರದರ್ಶಕ ಮತ್ತು ಎಲ್ಲರಿಗೂ ಪ್ರಯೋಜನವಾಗುವಂತೆ ಇರಬೇಕು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಪಾದಿಸಿದರು.

  • ‘ಬ್ರಿಕ್ಸ್‌’ ರಾಷ್ಟ್ರಗಳ ನಾಯಕರ ವರ್ಚುವಲ್‌ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ವ್ಯಾಪಾರ ಮತ್ತು ಹೂಡಿಕೆಗಾಗಿ ಜಗತ್ತು ಇಂದು ಸ್ಥಿರ ವಾತಾವರಣವನ್ನು ಬಯಸುತ್ತಿದೆ’ ಎಂದರು.
  • ‘ಅಂತರರಾಷ್ಟ್ರೀಯ ವ್ಯಾಪಾರ ನೀತಿಯು ಮುಕ್ತ, ನಿಷ್ಪಕ್ಷಪಾತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶೇಷ ಒತ್ತು ನೀಡುವ ತತ್ವಗಳನ್ನು ಆಧರಿಸಿರಬೇಕು’ ಎಂದು ಹೇಳಿದರು.
  • ಜೈಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಶೃಂಗಸಭೆಯಲ್ಲಿ ಪಾಲ್ಗೊಂಡರು. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೂ ಶೃಂಗದಲ್ಲಿ ಭಾಗವಹಿಸಿದ್ದಾರೆ.
  • ಅರ್ಜಿ ವರ್ಗಾವಣೆಗೆಸುಪ್ರೀಂಒಪ್ಪಿಗೆಆನ್ಲೈನ್ಗೇಮಿಂಗ್ನಿಷೇಧ: ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರ

ಸಂದರ್ಭ: ‘ಆನ್‌ಲೈನ್‌ ಗೇಮಿಂಗ್‌ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ’ ಪ್ರಶ್ನಿಸಿ ಮೂರು ಹೈಕೋರ್ಟ್‌ಗಳಿಗೆ ಸಲ್ಲಿಕೆ ಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿದೆ.

  • ದೆಹಲಿ, ಕರ್ನಾಟಕ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳ ಮುಂದೆ ಬಾಕಿ ಇರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿತು.
  • ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾ ಗಿರುವ ಅರ್ಜಿಗಳು ಮತ್ತು ಇದುವರೆಗೆ ನಡೆದಿರುವ ವಿಚಾರಣೆಯ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ವರ್ಗಾಯಿಸುವಂತೆ ಪೀಠವು ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ನಿರ್ದೇಶಿಸಿತು.
  • ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಸಿ.ಎ.ಸುಂದರಂ ಹಾಗೂ ಅರವಿಂದ ದಾತಾರ್‌ ಅವರ ವಾದ ಅಲಿಸಿದ ಪೀಠ, ‘ಸಮಯವನ್ನು ಉಳಿಸಲಿಕ್ಕಾಗಿ ಈ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್‌ ರೂಪದಲ್ಲಿ ನಡೆಯಲಿ’ ಎಂದು ಹೇಳಿತು.
  • ಹೈಕೋರ್ಟ್‌ಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮನವಿ ಮಾಡಿತ್ತು.
  • ಕಾನೂನಿನಲ್ಲಿರುವ ಅಂಶಗಳ ಕುರಿತು ಒಂದೇ ರೀತಿಯ ಪ್ರಶ್ನೆಗಳನ್ನು ಎತ್ತಿರುವ ಹಲವು ಅರ್ಜಿಗಳು ವಿವಿಧ ಹೈಕೋರ್ಟ್‌ಗಳ ಮುಂದೆ ಬಾಕಿಯಿರು ವುದರಿಂದ, ಅಭಿಪ್ರಾಯಗಳ ಭಿನ್ನತೆ ಅಥವಾ ಬಹುವಿಧದ ವಿಚಾರಣೆಗಳನ್ನು ತಪ್ಪಿಸಲು ಅದನ್ನು ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ಅಥವಾ ಯಾವುದಾದರೂ ಹೈಕೋರ್ಟ್‌ಗೆ ವರ್ಗಾಯಿಸುವುದು ಒಳ್ಳೆಯದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
  • ಆನ್‌ಲೈನ್ ಜೂಜು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಹೆಡ್‌ ಡಿಜಿಟಲ್‌ ವರ್ಕ್ಸ್‌ ಪ್ರೈವೆಟ್‌ ಲಿಮಿಟೆಡ್‌, ಬಘೀರಾ ಕೇರಮ್ ಪ್ರೈವೆಟ್‌ ಲಿಮಿಟೆಡ್‌ ಮತ್ತು ಕ್ಲಬ್‌ಬೂಮ್‌ ಇಲೆವೆನ್ ಸ್ಪೋರ್ಟ್ಸ್‌ ಆ್ಯಂಡ್‌ ಎಂಟರ್‌ಟೇನ್‌ಮೆಂಟ್ ಪ್ರೈವೆಟ್‌ ಲಿಮಿಟೆಡ್‌ ಕಂಪನಿಗಳು ಕ್ರಮವಾಗಿ ಕರ್ನಾಟಕ ಹೈಕೋರ್ಟ್‌, ದೆಹಲಿ ಹೈಕೋರ್ಟ್‌ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿವೆ.
  • ಅಲ್ಕರಾಜ್ಗೆ ಅಮೆರಿಕ ಓಪನ್ ಕಿರೀಟ

ಸಂದರ್ಭ: ಕಾರ್ಲೋಸ್‌ ಅಲ್ಕರಾಜ್ ಅವರು ನಾಲ್ಕು ಸೆಟ್‌ಗಳ ಫೈನಲ್‌ ಸೆಣಸಾಟದಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಬದ್ಧ ಎದುರಾಳಿಗಳ ಸೆಣಸಾಟದಲ್ಲಿ ಸ್ಪೇನ್‌ನ ಆಟಗಾರ ತಮ್ಮ ಪ್ರಭುತ್ವವನ್ನು ಮತ್ತೊಮ್ಮೆ ಸ್ಥಾಪಿಸಿದರು.

  • 22 ವರ್ಷ ವಯಸ್ಸಿನ ಅಲ್ಕರಾಜ್ ಫೈನಲ್ನಲ್ಲಿ 6–2, 3–6, 6–1, 6–4 ರಿಂದ ಗೆಲುವು ಸಾಧಿಸಿ ಎರಡನೇ ಸಲ ಅಮೆರಿಕ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಒಟ್ಟಾರೆ ಅವರಿಗೆ ಇದು ಆರನೇ ಗ್ರ್ಯಾನ್ಸ್ಲಾಮ್ಪ್ರಶಸ್ತಿಯಾಗಿದೆ.
  • ಜುಲೈ ತಿಂಗಳಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಕೈಲಿ ಅನುಭವಿಸಿದ ಸೋಲಿಗೆ ಅಲ್ಕರಾಜ್‌ ಇಲ್ಲಿ ಸೇಡು ತೀರಿಸಿಕೊಂಡರು. ಅದು ಪ್ರಮುಖ ಟೂರ್ನಿಗಳ ಫೈನಲ್‌ನಲ್ಲಿ ಅವರಿಗೆ ಮೊದಲ ಸೋಲಾಗಿತ್ತು.
  • ಅಗ್ರಪಟ್ಟ: ಇಲ್ಲಿ ಪಡೆದ ಪ್ರಶಸ್ತಿಯೊಂದಿಗೆ ಅಲ್ಕರಾಜ್ ಅವರು ಸೆಪ್ಟೆಂಬರ್‌ 2023ರ ನಂತರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಸಿನ್ನರ್ ಅವರನ್ನು ಹಿಂದೆಹಾಕಿ ಮರಳಿ ಅಗ್ರಸ್ಥಾನಕ್ಕೇರಿದರು. ಮಾತ್ರವಲ್ಲ, ಹಾರ್ಡ್ಕೋರ್ಟ್ನಲ್ಲಿ 25 ವರ್ಷದ ಸಿನ್ನರ್ ಅವರ ಸತತ 27 ಗೆಲುವುಗಳ ಸರಪಣಿಯನ್ನು ತುಂಡರಿಸಿದರು.
  • ಅಲ್ಕರಾಜ್ ಅವರು ಸಿನ್ನರ್ ಎದುರಿನ ಈ ಹಿಂದಿನ ಎಂಟು ಮುಖಾಮುಖಿಗಳಲ್ಲಿ ಏಳನ್ನು ಗೆದ್ದಂತಾಗಿದೆ. ಒಟ್ಟಾರೆ ಸಿನ್ನರ್ ವಿರುದ್ಧ ಅವರು 10–5 ಗೆಲುವಿನ ದಾಖಲೆ ಹೊಂದಿದ್ದಾರೆ.
  • ಕಳೆದ ಎಂಟು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಇವರಿಬ್ಬರು ತಲಾ ನಾಲ್ಕನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ವಿಶ್ವ ಟೆನಿಸ್‌ನಲ್ಲಿ ಹಳೆಯ ಹುಲಿ ನೊವಾಕ್ ಜೊಕೊವಿಚ್‌ ಅವರನ್ನೂ ಸೇರಿದಂತೆ ಎಲ್ಲರ ಮೇಲೂ ಪ್ರಾಬಲ್ಯ ಮೆರೆದಿದ್ದಾರೆ.
  • ಫ್ಲಷಿಂಗ್ ಮಿಡೋಸ್‌ನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಯಾರೂ ಪ್ರಶಸ್ತಿ ಉಳಿಸಿಕೊಂಡಿಲ್ಲ. ಕಳೆದ ಸಲದ ವಿಜೇತ ಸಿನ್ನರ್ ಸಹ ಆ ಸಾಲಿಗೆ ಸೇರಿದರು. ರೋಜರ್ ಫೆಡರರ್‌ ಅವರು 2004 ರಿಂದ 08ರವರೆಗೆ ಸತತ ಐದು ಸಲ ಪ್ರಶಸ್ತಿ ಗೆದ್ದಿದ್ದರು. ನಂತರ ಯಾರೂ ಇಲ್ಲಿ ಸತತವಾಗಿ ಚಾಂಪಿಯನ್ ಆಗಿಲ್ಲ.
  • ಜಾವೆಲಿನ್ಥ್ರೋ: ನೀರಜ್ದಾಖಲೆ ಮುರಿದ ಶಿವಂ

ಸಂದರ್ಭ: ಜಾವೆಲಿನ್ ಥ್ರೋಪಟು ಶಿವಂ ಲೋಹಕರೆ ಅವರು ಜಾಲಹಳ್ಳಿಯಲ್ಲಿ ನಡೆದ ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್‌ ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

  • ಆರ್ಮಿ ರೆಡ್‌ ತಂಡವನ್ನು ಪ್ರತಿನಿಧಿಸಿದ 20 ವರ್ಷದ ಶಿವಂ (ಮಹಾರಾಷ್ಟ್ರ) ಅವರು 84.31 ಮೀಟರ್‌ ದೂರ ಈಟಿಯನ್ನು ಎಸೆದರು. ಮೂಲಕ ನೀರಜ್ಚೋಪ್ರಾ (83.80 ಮೀ) ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಅವರು ಮುರಿದರು. ಈ ಕೂಟವು ವಿಶ್ವ ಅಥ್ಲೆಟಿಕ್ಸ್‌ನಿಂದ ಮಾನ್ಯತೆ ಪಡೆಯದ ಕಾರಣ ವೈಯಕ್ತಿಕ ಶ್ರೇಷ್ಠ ದಾಖಲೆಗೆ ಪರಿಗಣಿಸುವುದಿಲ್ಲ.
  • ಕರ್ನಾಟಕದ ಮಣಿಕಂಠ ಹೋಬಳಿದಾರ್ ಅವರು ಆರ್ಮಿ ರೆಡ್ ತಂಡವನ್ನು ಪ್ರತಿನಿಧಿಸಿ 100 ಮೀ, 200 ಮೀ ಮತ್ತು 4×100 ಮೀ ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದರು.
  • ಫುಟ್ಬಾಲ್‌: ಭಾರತಕ್ಕೆ 3ನೇ ಸ್ಥಾನ    

ಸಂದರ್ಭ: ಹಿಸೋರ್ (ತಾಜಿಕಿಸ್ತಾನ), (ಪಿಟಿಐ): ಭಾರತ, ಸಿಎಎಫ್‌ಎ ನೇಷನ್ಸ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತನಗಿಂತ ಮೇಲಿನ ಕ್ರಮಾಂಕದ ಒಮಾನ್ ತಂಡವನ್ನು ಪೆನಾಲ್ಟಿಯಲ್ಲಿ 3–2 ಗೋಲುಗಳಿಂದ ಸೋಲಿಸಿ ಪದಾರ್ಪಣೆ ಯಲ್ಲಿ ಮೂರನೇ ಸ್ಥಾನ ಗಳಿಸಿತು.

  • ಭಾರತಕ್ಕೆ, ಪಶ್ಚಿಮ ಏಷ್ಯಾದ ರಾಷ್ಟ್ರ ಒಮಾನ್ ವಿರುದ್ಧ ಇದು ಮೊದಲ ಗೆಲುವು.  ಹಿಸೋರ್ ಸೆಂಟ್ರಲ್ ಸ್ಟೇಡಿಯಂನಲ್ಲಿ ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು. ಒಮಾನ್ ಪರ ಜಮೀಲ್‌ ಅಲ್‌ ಯಹ್ಮದಿ 55ನೇ ನಿಮಿಷ ಗೋಲು ಗಳಿಸಿದರು. ಆದರೆ ಉದಾಂತ ಸಿಂಗ್ ಕುಮಮ್80ನೇ ನಿಮಿಷ ಗೋಲು ಗಳಿಸಿದ್ದರಿಂದ ಸ್ಕೋರ್ ಸಮನಾಯಿತು.
  • ಪೆನಾಲ್ಟಿಯಲ್ಲಿ ಲಾಲಿಯನ್‌ ಝುವಾಲ ಚಾಂಗ್ಟೆ, ರಾಹುಲ್‌ ಭೆಕೆ ಮತ್ತು ಜಿತಿನ್ ಎಂ.ಎಸ್‌. ತಮ್ಮ ಯತ್ನಗಳಲ್ಲಿ ಯಶಸ್ಸು ಕಂಡರು.