ಆಧಾರ್ ಪರಿಗಣನೆಗೆ ಸೂಚನೆ
ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮತದಾರರ ಗುರುತಿನ ದಾಖಲೆಯಾಗಿ ಆಧಾರ್ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
- ಪ್ರಸ್ತುತ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ 11 ದಾಖಲೆಗಳನ್ನು ಗೊತ್ತುಪಡಿಸಲಾಗಿದೆ. ಮತದಾರರು ಈ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಅರ್ಜಿ ನಮೂನೆ ಜೊತೆ ಸಲ್ಲಿಸಬೇಕಿದೆ.
- ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 12ನೇ ದಾಖಲೆಯಾಗಿ ‘ಆಧಾರ್’ ಅನ್ನು ಪರಿಗಣಿಸುವಂತೆ ಹೇಳಿದೆ.
- ಆದಾಗ್ಯೂ, ಆಧಾರ್ ಸಂಖ್ಯೆಯು ಪೌರತ್ವಕ್ಕೆ ಪುರಾವೆ ಅಲ್ಲ. ಅದನ್ನು ಗುರುತಿನ ದಾಖಲೆಯಾಗಿ ಪರಿಗಣಿಸಬಹುದಷ್ಟೆ ಎಂದು ನ್ಯಾಯಪೀಠ ಹೇಳಿದೆ.
- ಮತದಾರ ಸಲ್ಲಿಸಿದ ಆಧಾರ್ ಕಾರ್ಡ್ ಅಸಲಿ ಹೌದೇ ಅಲ್ಲವೇ ಎನ್ನುವುದನ್ನು ಆಯೋಗವು ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
- ‘ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕೆಂದು ಯಾರೂ ಬಯಸುತ್ತಿಲ್ಲ. ಆಯೋಗವು ನೈಜ ಮತದಾರರಿಗೆ ಮಾತ್ರ ಮತ ಚಲಾವಣೆಗೆ ಅವಕಾಶ ನೀಡಬೇಕು. ನಕಲಿ ದಾಖಲೆಗಳ ಆಧಾರದಲ್ಲಿ ನೈಜ ಪ್ರಜೆಗಳು ಎಂದು ಹೇಳಿಕೊಳ್ಳುತ್ತಿರುವವರನ್ನು ಮತದಾರರ ಪಟ್ಟಿಯಿಂದ ಹೊರಹಾಕಬೇಕು’ ಎಂದು ಕೋರ್ಟ್ ಸ್ಪಷ್ಟಪಡಿಸಿತು.
- ಆಧಾರ್ ಅನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಗತ್ಯವಿರುವ ನಿರ್ದೇಶನಗಳನ್ನು ನೀಡುವಂತೆ ಆಯೋಗಕ್ಕೆ ನ್ಯಾಯಪೀಠ ಹೇಳಿತು.
- ಇದೇ ವೇಳೆ, ಆಧಾರ್ ಕಾರ್ಡನ್ನು ಗುರುತಿನ ದಾಖಲೆಯಾಗಿ ಸ್ವೀಕರಿಸದ್ದಕ್ಕೆ ಸಂಬಂಧಿಸಿದಂತೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ವಿವರಣೆ ನೀಡುವಂತೆ ಕೇಳಿತು. ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, 99.6ರಷ್ಟು ಮತದಾರರ ಹೆಸರನ್ನು ಒಳಗೊಂಡ ಕರಡು ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
- ‘ಗ್ಯಾರಂಟಿಗಳಿಗೆ ₹97,813 ಕೋಟಿ ವೆಚ್ಚ’
ಸಂದರ್ಭ: ಗ್ಯಾರಂಟಿ ಯೋಜನೆಯಡಿ ಈವರೆಗೆ ₹97,813 ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
- ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
- ಈ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ₹50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನು ಭವಿಗಳಿಗೆ ₹18,139 ಕೋಟಿ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ ₹623 ಕೋಟಿ, ಶಕ್ತಿ ಯೋಜನೆಯಡಿ 544 ಕೋಟಿ ಬಾರಿ ಪ್ರಯಾಣಿಸಿದ್ದಕ್ಕೆ ₹13,903 ಕೋಟಿ ಮತ್ತು ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿ ಗಳಿಗೆ ₹11,821.17 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
- ಮರಣ ಹೊಂದುವ ಫಲಾನುಭವಿ ಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದರು.
- ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಬೇಕು. ಈ ಕುರಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು. ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
‘ವಿಶ್ವದಾಖಲೆ’ ಸೃಷ್ಟಿಸಿದ ಶಕ್ತಿ ಯೋಜನೆ
- ‘ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ 500 ಕೋಟಿಗೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲಾಗಿದೆ. ಇದಕ್ಕೆ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಸಭೆಯಲ್ಲಿ ಹೇಳಿದ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿ ಪ್ರಮಾಣ ಪತ್ರ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
- ‘ಮತಪತ್ರ’ ಕಡ್ಡಾಯ: 4 ಮಸೂದೆ ಸಿದ್ಧ
ಸಂದರ್ಭ: ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು, ರಹಸ್ಯ ಮತದಾನ ವ್ಯವಸ್ಥೆಗೆ ‘ಮತಪತ್ರ’ (ಬ್ಯಾಲಟ್ ಪೇಪರ್) ಬಳಕೆ ಕಡ್ಡಾಯಗೊಳಿಸಲು ಸಂಬಂಧಪಟ್ಟ ಕಾಯ್ದೆಗಳ ತಿದ್ದುಪಡಿಗೆ ನಾಲ್ಕು ಮಸೂದೆ ಗಳನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ.
- ಇದೇ 11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗಳ ಕರಡನ್ನು ಮಂಡನೆ ಮಾಡಲಾಗುತ್ತಿದೆ. ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
- ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವ ದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿ ಸುವ ಮಹತ್ವದ ನಿರ್ಣಯವನ್ನು ಸೆ. 4ರಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿತ್ತು.
ಸರ್ಕಾರದ ಸಮರ್ಥನೆಗಳೇನು?:
- ಮತಪತ್ರದ ಗೌಪ್ಯತೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೂಲ ಆಧಾರವಾಗಿದ್ದು, ಪ್ರಜಾಸತ್ತಾತ್ಮಕ ಪ್ರಕ್ರಿ ಯೆಯ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಮತದಾರರನ್ನು ಬಲವಂತ, ಬೆದರಿಕೆ ಮತ್ತು ಅನುಚಿತ ಪ್ರಭಾವದಿಂದ ರಕ್ಷಿಸುತ್ತದೆ ಎಂದು ಹಲವು ತೀರ್ಪುಗ ಳಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಕುಲದೀಪ್ ನಾಯರ್ ವಿರುದ್ಧದ ಕೇಂದ್ರ ಸರ್ಕಾರ (2006) ಪ್ರಕರಣದಲ್ಲಿ ‘ಮತದಾರರ ಸ್ವಾಯತ್ತತೆಯನ್ನು ಖಚಿತಪಡಿಸಿ ಕೊಳ್ಳಲು ಮತ್ತು ಬಾಹ್ಯ ಒತ್ತಡಗಳನ್ನು ತಡೆಯಲು ಸಾರ್ವತ್ರಿಕ ಚುನಾವಣೆಗಳಿಗೆ ರಹಸ್ಯ ಮತದಾನ ಅತ್ಯಗತ್ಯವಾಗಿದೆ’ ಎಂದೂ ಸ್ಪಷ್ಟಪಡಿ ಸಿದೆ. ಆ ಮೂಲಕ, ಮುಕ್ತ ಚುನಾವಣೆಗಳ ಸಾಂವಿಧಾನಿಕ ಆದೇಶ ಎತ್ತಿ ಹಿಡಿದಿದೆ.
- ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ವಿಶ್ವಾಸದ ಮಹತ್ವವನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದ್ದು, ಮತ ಪತ್ರದ ಗೌಪ್ಯತೆ ಕಾಪಾಡುವಾಗ ಪಾರ ದರ್ಶಕತೆ ಹೆಚ್ಚಿಸಲು ಇವಿಎಂಗಳಲ್ಲಿ ದಾಖಲಾಗುವ ಮತಗಳ ಪರಿಶೀಲನೆಗೆ ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್ ) ಪರಿಚಯಿಸಿತ್ತು. ಅಲ್ಲದೆ, ಇವಿಎಂ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಪರಿಹರಿಸಲು ನಿರಂತರ ಸುಧಾರಣೆಗಳ ಅಗತ್ಯವನ್ನೂ ಎತ್ತಿ ತೋರಿಸಿದೆ. ಆದರೆ, ಇವಿಎಂಗಳಲ್ಲಿನ ದೌರ್ಬಲ್ಯಗಳು ಮತ್ತು ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳ ಮೂಲಕ ಚುನಾವಣಾ ಕುತಂತ್ರಗಳ ಸಾಧ್ಯತೆಯ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವುದರಿಂದ, ಸಾರ್ವಜನಿಕ ನಂಬಿಕೆಯನ್ನು ಮರು ಸ್ಥಾಪಿ ಸಲು ಸದೃಢವಾದ ರಹಸ್ಯ ಮತಪತ್ರ ವ್ಯವಸ್ಥೆಗೆ ಮರಳುವ ಅಗತ್ಯ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ನೀಡಿದೆ.
- ಈ ಕಳವಳಗಳ ಕಾರಣಕ್ಕೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಗದ ಮತಪತ್ರ ವ್ಯವಸ್ಥೆಗೆ ಮರಳಲು ನಿರ್ಧರಿಸಲಾಗಿದೆ. ಕಾಗದ ಮತಪತ್ರಗಳು ಅಥವಾ ಇತರ ಗೌಪ್ಯ ಕಾರ್ಯವಿಧಾನ ಗಳ ಬಳಕೆಯ ಮೂಲಕ ರಹಸ್ಯ ಮತ ದಾನ ವ್ಯವಸ್ಥೆಯು, ಮತದಾರರು ಪ್ರತೀ ಕಾರದ ಭಯ ಇಲ್ಲದೆ ತಮ್ಮ ಮತ ಚಲಾ ಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ ಎಂದೂ ವಿವರಿಸಿದೆ.
ತಿದ್ದುಪಡಿ ಮಸೂದೆಗಳು ಯಾವುವು?
- l ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ)
- l ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ)
- l ಕರ್ನಾಟಕ ನಗರ ಪಾಲಿಕೆಗಳು (ಎರಡನೇ ತಿದ್ದುಪಡಿ)
- l ಕರ್ನಾಟಕ ಪುರಸಭೆಗಳು (ತಿದ್ದುಪಡಿ)
‘ವಿಧಾನ ಮಂಡಲಕ್ಕೆ ಅಧಿಕಾರವಿದೆ’
- ‘ಸ್ಥಳೀಯ ಪ್ರಾಧಿಕಾರಗಳಿಗೆ ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಕಾಗದ ಮತಪತ್ರಗಳನ್ನು ಬಳಸಿಕೊಂಡು ರಹಸ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಆ ಮೂಲಕ, ರಾಜ್ಯ ಚುನಾವಣಾ ಆಯೋಗವು ಮತದಾರರ ಗೌಪ್ಯತೆ ಮತ್ತು ಚುನಾವಣಾ ಸಮಗ್ರತೆಯೊಂದಿಗೆ ಚುನಾವಣೆಗಳನ್ನು ನಡೆಸಲು ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ.
- ಮಸೂದೆ ರೂಪಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಮಸೂದೆಯಲ್ಲಿರುವ ಉಪಬಂಧಗಳು ಕೇಂದ್ರದ ಜಾರಿಯಲ್ಲಿರುವ ಯಾವುದೇ ಕಾಯ್ದೆಯ ಉಪಬಂಧಗಳಿಗೆ ವ್ಯತಿರಿಕ್ತ ಆಗುವುದಿಲ್ಲ. ಹೀಗಾಗಿ, ಮಸೂದೆಗಳನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಾಯ್ದಿರಿಸುವ ಅಗತ್ಯವೂ ಇಲ್ಲ’ ಎಂದು ಕಾನೂನು ಮತ್ತು ಸಂಸದೀಯ ಇಲಾಖೆ ಪ್ರತಿಪಾದಿಸಿದೆ.
- ಹಿಮಾಲಯದಲ್ಲಿ ‘ಪಲ್ಲಾಸ್ ಕ್ಯಾಟ್’
ಸಂದರ್ಭ: ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ‘ಪಲ್ಲಾಸ್ ಕ್ಯಾಟ್’ ಎಂಬ ವಿರಳ ಜಾತಿಯ ಕಾಡುಬೆಕ್ಕಿನ ಚಿತ್ರಗಳು ಇದೇ ಮೊದಲ ಬಾರಿ ಸೆರೆಯಾಗಿವೆ.
- ಇದರೊಂದಿಗೆ ಹಿಮಾಲಯದಲ್ಲಿ 4,200 ಮೀಟರ್ಗಿಂತ ಹೆಚ್ಚಿನ ಎತ್ತರದಲ್ಲಿ 6 ವಿವಿಧ ಜಾತಿಯ ಕಾಡಿನ ಬೆಕ್ಕುಗಳ ಇರುವಿಕೆಯು ಪತ್ತೆಯಾದಂತಾಗಿದೆ ಎಂದು ವಿಶ್ವ ವನ್ಯಜೀವಿ ಸಂಸ್ಥೆಯ ಭಾರತ ಘಟಕವು ತಿಳಿಸಿದೆ.
- ಈವರೆಗೆ 5 ವಿಧದ ಕಾಡು ಬೆಕ್ಕಿನ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಅವುಗಳೆಂದರೆ: ಸ್ನೋ ಲೆಪರ್ಡ್, ಕ್ಲೌಡೆಡ್ ಲೆಪರ್ಡ್, ಲೆಪರ್ಡ್ ಕ್ಯಾಟ್, ಕಾಮನ್ ಲೆಪರ್ಡ್ ಮತ್ತು ಮಾರ್ಬಲ್ಡ್ ಕ್ಯಾಟ್ಗಳು.
- ಭಾರತದ ವಿಶ್ವ ವನ್ಯಜೀವಿ ಸಂಸ್ಥೆಯು ಹಿಮಾಲಯದಲ್ಲಿನ ವನ್ಯಜೀವಿ ಪರಿಸರದ ಕುರಿತು ತವಾಂಗ್ ಹಾಗೂ ಪಶ್ಚಿಮ ಕಮೆಂಗ್ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸುತ್ತಿದೆ.
- ಸಮುದ್ರ ಮಟ್ಟದಿಂದ 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ವನ್ಯಜೀವಿಗಳ ಇರುವಿಕೆಯು ದೇಶದ ಮಹತ್ವದ ದಾಖಲೆಯಾಗಿದ್ದು, ನೂತನ ಅಧ್ಯಯನಕ್ಕೆ ದಾರಿಯಾಗಿದೆ.
- ರಾಜ್ಯ ಅರಣ್ಯ ಇಲಾಖೆಯ ಬೆಂಬಲ ಹಾಗೂ ಸ್ಥಳೀಯರ ಬೆಂಬಲದೊಂದಿಗೆ ಸಂಸ್ಥೆಯು‘ರಿವೈವಿಂಗ್ ಟ್ರಾನ್ಸ್–ಹಿಮಾಲಯನ್ ರೇಂಜ್‌ಲ್ಯಾಂಡ್ಸ್– ಎ ಕಮ್ಯುನಿಟಿ– ಲೆಡ್ ವಿಶನ್ ಫಾರ್ ಪೀಪಲ್ ಆ್ಯಂಡ್ ನೇಚರ್’ ಯೋಜನೆಯಡಿ ಸಮೀಕ್ಷೆ ನಡೆಸುತ್ತಿವೆ.
- 2024ರ ಸೆಪ್ಟೆಂಬರ್‌ನಲ್ಲಿ ಹಿಮಾಲಯದ 2,000 ಚದರ ಅಡಿ ಕಿ.ಮೀ ಎತ್ತರದಲ್ಲಿ 83 ಕಡೆ 136 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
- ‘ಲಿಪುಲೇಖ್ ವ್ಯಾಪಾರ ಒಪ್ಪಂದ ರದ್ದುಪಡಿಸಿ’
- ಲಿಪುಲೇಖ್ ಪಾಸ್ ಗಡಿಭಾಗದ ಮೂಲಕ ವ್ಯಾಪಾರವನ್ನು ಪುನರಾರಂಭಿಸಲು ಭಾರತ ಹಾಗೂ ಚೀನಾ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸಬೇಕು ಎಂದು ನೇಪಾಳದ ಆಡಳಿತಾರೂಢ ಪಕ್ಷವಾದ ಸಿಪಿಎನ್–ಯುಎಂಎಲ್ ಒತ್ತಾಯಿಸಿದೆ.
ಸಂದರ್ಭ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಪಾನಿನ ಹೋಂಡಾ ಕಂಪನಿಯು ಸುಮಾರು ₹600 ಕೋಟಿ ವೆಚ್ಚದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ.
- ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಜಪಾನ್ ಪ್ರವಾಸದಲ್ಲಿದ್ದು, ಅಲ್ಲಿ ಹೋಂಡಾ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರನ್ನು ಭೇಟಿ ಮಾಡಿ ಚರ್ಚಿಸಿತು.
- ಈ ವೇಳೆ, ನೋರಿಯಾ ಅವರು ಈ ವಿಷಯ ತಿಳಿಸಿದರು. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
- ಭಾರತದಲ್ಲಿನ ತನ್ನ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ನರಸಾಪುರದಲ್ಲಿ ಕಾರ್ಯಾರಂಭ ಮಾಡಲಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಈ ಒಪ್ಪಂದಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಕಂಪನಿಯು ನಿಯೋಗಕ್ಕೆ ಮಾಹಿತಿ ನೀಡಿದೆ.
- ಸಚಿವರ ನೇತೃತ್ವದ ನಿಯೋಗವು, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿತು.
- ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡಿದೆ. ಟೋಕಿಯೊ ಎಲೆಕ್ಟ್ರಾನ್, ಮಿತ್ಸುಬಿಸಿ ಎಲೆಕ್ಟ್ರಿಕ್, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್ ಮತ್ತು ರೆಸ್ಟರ್ ಹೋಲ್ಡಿಂಗ್ಸ್ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.
- ಮಿತ್ಸುಬಿಸಿ ಎಲೆಕ್ಟ್ರಿಕ್ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
- ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿ ರುವುದಾಗಿ ಯೋಕೊಗವಾ ಎಲೆಕ್ಟ್ರಿಕ್ ತಿಳಿಸಿದೆ.
- ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಆಯುಕ್ತೆ ಗುಂಜನ್ ಕೃಷ್ಣ ಇದ್ದಾರೆ.
ಇಎಂಎಸ್ ಸೇವೆಗೆ ಮನವಿ
- ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಸೇವೆಗಳನ್ನು (ಇಎಂಎಸ್) ಆರಂಭಿಸಲು ಮುಂದಾಗಬೇಕು ಎಂದು ಜಪಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್ ಹೋಲ್ಡಿಂಗ್ಸ್‌ಗೆ ಸಚಿವರು ಮನವಿ ಮಾಡಿದ್ದಾರೆ.
- ಇಸ್ರೇಲ್ ಜೊತೆ ಹೂಡಿಕೆ ಒಪ್ಪಂದಕ್ಕೆ ಸಹಿ
ಸಂದರ್ಭ: ಭಾರತ ಮತ್ತು ಇಸ್ರೇಲ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (ಬಿಐಟಿ) ಸಹಿ ಹಾಕಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿದೆ. ಈ ಒಪ್ಪಂದವು ಎರಡೂ ದೇಶಗಳ ನಡುವೆ ಹೂಡಿಕೆಗಳಿಗೆ ಉತ್ತೇಜನ ನೀಡಲು ನೆರವಾಗಲಿದೆ ಎಂದು ಅದು ತಿಳಿಸಿದೆ.
- ‘ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಮಾಡಲಾಗಿದೆ’ ಎಂದು ಹಣಕಾಸು ಸಚಿವಾಲಯವು ಎಕ್ಸ್ ಮೂಲಕ ತಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೊಟ್ರಿಕ್ ಅವರು ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
- ದಕ್ಷಿಣ ಪಿನಾಕಿನಿ: ನ್ಯಾಯಮಂಡಳಿಗೆ ತಮಿಳುನಾಡು ಪಟ್ಟು
ಸಂದರ್ಭ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸಬೇಕು ಎಂದು ತಮಿಳುನಾಡು ಸರ್ಕಾರ ಮತ್ತೆ ಪಟ್ಟು ಹಿಡಿದಿದೆ.
- ವಿವಾದ ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಕರೆದಿದ್ದ ಎರಡು ಸಭೆಗಳನ್ನು ತಮಿಳುನಾಡು ಬಹಿಷ್ಕರಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲೂ ತಮಿಳುನಾಡು ಇದೇ ನಿಲುವು ತಳೆಯಿತು.
- ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪಿನಾಕಿನಿ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
- ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು. ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು ಹಾಗೂ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
- ಆರ್ಥಿಕ ನೀತಿಗಳು ಪಾರದರ್ಶಕವಾಗಿರಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್
ಸಂದರ್ಭ: ಜಾಗತಿಕ ಆರ್ಥಿಕ ನೀತಿಗಳು ನ್ಯಾಯಯುತ, ಪಾರದರ್ಶಕ ಮತ್ತು ಎಲ್ಲರಿಗೂ ಪ್ರಯೋಜನವಾಗುವಂತೆ ಇರಬೇಕು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದರು.
- ‘ಬ್ರಿಕ್ಸ್’ ರಾಷ್ಟ್ರಗಳ ನಾಯಕರ ವರ್ಚುವಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘ವ್ಯಾಪಾರ ಮತ್ತು ಹೂಡಿಕೆಗಾಗಿ ಜಗತ್ತು ಇಂದು ಸ್ಥಿರ ವಾತಾವರಣವನ್ನು ಬಯಸುತ್ತಿದೆ’ ಎಂದರು.
- ‘ಅಂತರರಾಷ್ಟ್ರೀಯ ವ್ಯಾಪಾರ ನೀತಿಯು ಮುಕ್ತ, ನಿಷ್ಪಕ್ಷಪಾತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶೇಷ ಒತ್ತು ನೀಡುವ ತತ್ವಗಳನ್ನು ಆಧರಿಸಿರಬೇಕು’ ಎಂದು ಹೇಳಿದರು.
- ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿನಿಧಿಯಾಗಿ ಶೃಂಗಸಭೆಯಲ್ಲಿ ಪಾಲ್ಗೊಂಡರು. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೂ ಶೃಂಗದಲ್ಲಿ ಭಾಗವಹಿಸಿದ್ದಾರೆ.
- ಅರ್ಜಿ ವರ್ಗಾವಣೆಗೆ ‘ಸುಪ್ರೀಂ’ ಒಪ್ಪಿಗೆಆನ್ಲೈನ್ ಗೇಮಿಂಗ್ ನಿಷೇಧ: ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರ
ಸಂದರ್ಭ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ’ ಪ್ರಶ್ನಿಸಿ ಮೂರು ಹೈಕೋರ್ಟ್‌ಗಳಿಗೆ ಸಲ್ಲಿಕೆ ಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
- ದೆಹಲಿ, ಕರ್ನಾಟಕ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳ ಮುಂದೆ ಬಾಕಿ ಇರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿತು.
- ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾ ಗಿರುವ ಅರ್ಜಿಗಳು ಮತ್ತು ಇದುವರೆಗೆ ನಡೆದಿರುವ ವಿಚಾರಣೆಯ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ವರ್ಗಾಯಿಸುವಂತೆ ಪೀಠವು ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ನಿರ್ದೇಶಿಸಿತು.
- ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲರಾದ ಸಿ.ಎ.ಸುಂದರಂ ಹಾಗೂ ಅರವಿಂದ ದಾತಾರ್ ಅವರ ವಾದ ಅಲಿಸಿದ ಪೀಠ, ‘ಸಮಯವನ್ನು ಉಳಿಸಲಿಕ್ಕಾಗಿ ಈ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್ ರೂಪದಲ್ಲಿ ನಡೆಯಲಿ’ ಎಂದು ಹೇಳಿತು.
- ಹೈಕೋರ್ಟ್‌ಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮನವಿ ಮಾಡಿತ್ತು.
- ಕಾನೂನಿನಲ್ಲಿರುವ ಅಂಶಗಳ ಕುರಿತು ಒಂದೇ ರೀತಿಯ ಪ್ರಶ್ನೆಗಳನ್ನು ಎತ್ತಿರುವ ಹಲವು ಅರ್ಜಿಗಳು ವಿವಿಧ ಹೈಕೋರ್ಟ್‌ಗಳ ಮುಂದೆ ಬಾಕಿಯಿರು ವುದರಿಂದ, ಅಭಿಪ್ರಾಯಗಳ ಭಿನ್ನತೆ ಅಥವಾ ಬಹುವಿಧದ ವಿಚಾರಣೆಗಳನ್ನು ತಪ್ಪಿಸಲು ಅದನ್ನು ಈ ನ್ಯಾಯಾಲಯ (ಸುಪ್ರೀಂ ಕೋರ್ಟ್) ಅಥವಾ ಯಾವುದಾದರೂ ಹೈಕೋರ್ಟ್‌ಗೆ ವರ್ಗಾಯಿಸುವುದು ಒಳ್ಳೆಯದು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
- ಆನ್‌ಲೈನ್ ಜೂಜು ನಿಷೇಧಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಪ್ರಶ್ನಿಸಿ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೆಟ್ ಲಿಮಿಟೆಡ್, ಬಘೀರಾ ಕೇರಮ್ ಪ್ರೈವೆಟ್ ಲಿಮಿಟೆಡ್ ಮತ್ತು ಕ್ಲಬ್‌ಬೂಮ್ ಇಲೆವೆನ್ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೇನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಕ್ರಮವಾಗಿ ಕರ್ನಾಟಕ ಹೈಕೋರ್ಟ್, ದೆಹಲಿ ಹೈಕೋರ್ಟ್ ಹಾಗೂ ಮಧ್ಯ ಪ್ರದೇಶ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿವೆ.
- ಅಲ್ಕರಾಜ್ಗೆ ಅಮೆರಿಕ ಓಪನ್ ಕಿರೀಟ
ಸಂದರ್ಭ: ಕಾರ್ಲೋಸ್ ಅಲ್ಕರಾಜ್ ಅವರು ನಾಲ್ಕು ಸೆಟ್‌ಗಳ ಫೈನಲ್ ಸೆಣಸಾಟದಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಅಮೆರಿಕ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಬದ್ಧ ಎದುರಾಳಿಗಳ ಸೆಣಸಾಟದಲ್ಲಿ ಸ್ಪೇನ್‌ನ ಆಟಗಾರ ತಮ್ಮ ಪ್ರಭುತ್ವವನ್ನು ಮತ್ತೊಮ್ಮೆ ಸ್ಥಾಪಿಸಿದರು.
- 22 ವರ್ಷ ವಯಸ್ಸಿನ ಅಲ್ಕರಾಜ್ ಫೈನಲ್ನಲ್ಲಿ 6–2, 3–6, 6–1, 6–4 ರಿಂದ ಗೆಲುವು ಸಾಧಿಸಿ ಎರಡನೇ ಸಲ ಅಮೆರಿಕ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಒಟ್ಟಾರೆ ಅವರಿಗೆ ಇದು ಆರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದೆ.
- ಜುಲೈ ತಿಂಗಳಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಕೈಲಿ ಅನುಭವಿಸಿದ ಸೋಲಿಗೆ ಅಲ್ಕರಾಜ್ ಇಲ್ಲಿ ಸೇಡು ತೀರಿಸಿಕೊಂಡರು. ಅದು ಪ್ರಮುಖ ಟೂರ್ನಿಗಳ ಫೈನಲ್‌ನಲ್ಲಿ ಅವರಿಗೆ ಮೊದಲ ಸೋಲಾಗಿತ್ತು.
- ಅಗ್ರಪಟ್ಟ: ಇಲ್ಲಿ ಪಡೆದ ಪ್ರಶಸ್ತಿಯೊಂದಿಗೆ ಅಲ್ಕರಾಜ್ ಅವರು ಸೆಪ್ಟೆಂಬರ್ 2023ರ ನಂತರ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಸಿನ್ನರ್ ಅವರನ್ನು ಹಿಂದೆಹಾಕಿ ಮರಳಿ ಅಗ್ರಸ್ಥಾನಕ್ಕೇರಿದರು. ಮಾತ್ರವಲ್ಲ, ಹಾರ್ಡ್ಕೋರ್ಟ್ನಲ್ಲಿ 25 ವರ್ಷದ ಸಿನ್ನರ್ ಅವರ ಸತತ 27 ಗೆಲುವುಗಳ ಸರಪಣಿಯನ್ನು ತುಂಡರಿಸಿದರು.
- ಅಲ್ಕರಾಜ್ ಅವರು ಸಿನ್ನರ್ ಎದುರಿನ ಈ ಹಿಂದಿನ ಎಂಟು ಮುಖಾಮುಖಿಗಳಲ್ಲಿ ಏಳನ್ನು ಗೆದ್ದಂತಾಗಿದೆ. ಒಟ್ಟಾರೆ ಸಿನ್ನರ್ ವಿರುದ್ಧ ಅವರು 10–5 ಗೆಲುವಿನ ದಾಖಲೆ ಹೊಂದಿದ್ದಾರೆ.
- ಕಳೆದ ಎಂಟು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಇವರಿಬ್ಬರು ತಲಾ ನಾಲ್ಕನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ವಿಶ್ವ ಟೆನಿಸ್‌ನಲ್ಲಿ ಹಳೆಯ ಹುಲಿ ನೊವಾಕ್ ಜೊಕೊವಿಚ್ ಅವರನ್ನೂ ಸೇರಿದಂತೆ ಎಲ್ಲರ ಮೇಲೂ ಪ್ರಾಬಲ್ಯ ಮೆರೆದಿದ್ದಾರೆ.
- ಫ್ಲಷಿಂಗ್ ಮಿಡೋಸ್‌ನಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಯಾರೂ ಪ್ರಶಸ್ತಿ ಉಳಿಸಿಕೊಂಡಿಲ್ಲ. ಕಳೆದ ಸಲದ ವಿಜೇತ ಸಿನ್ನರ್ ಸಹ ಆ ಸಾಲಿಗೆ ಸೇರಿದರು. ರೋಜರ್ ಫೆಡರರ್ ಅವರು 2004 ರಿಂದ 08ರವರೆಗೆ ಸತತ ಐದು ಸಲ ಪ್ರಶಸ್ತಿ ಗೆದ್ದಿದ್ದರು. ನಂತರ ಯಾರೂ ಇಲ್ಲಿ ಸತತವಾಗಿ ಚಾಂಪಿಯನ್ ಆಗಿಲ್ಲ.
- ಜಾವೆಲಿನ್ ಥ್ರೋ: ನೀರಜ್ ದಾಖಲೆ ಮುರಿದ ಶಿವಂ
ಸಂದರ್ಭ: ಜಾವೆಲಿನ್ ಥ್ರೋಪಟು ಶಿವಂ ಲೋಹಕರೆ ಅವರು ಜಾಲಹಳ್ಳಿಯಲ್ಲಿ ನಡೆದ ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
- ಆರ್ಮಿ ರೆಡ್ ತಂಡವನ್ನು ಪ್ರತಿನಿಧಿಸಿದ 20 ವರ್ಷದ ಶಿವಂ (ಮಹಾರಾಷ್ಟ್ರ) ಅವರು 84.31 ಮೀಟರ್ ದೂರ ಈಟಿಯನ್ನು ಎಸೆದರು. ಈ ಮೂಲಕ ನೀರಜ್ ಚೋಪ್ರಾ (83.80 ಮೀ) ಹೆಸರಿನಲ್ಲಿದ್ದ ಕೂಟ ದಾಖಲೆಯನ್ನು ಅವರು ಮುರಿದರು. ಈ ಕೂಟವು ವಿಶ್ವ ಅಥ್ಲೆಟಿಕ್ಸ್‌ನಿಂದ ಮಾನ್ಯತೆ ಪಡೆಯದ ಕಾರಣ ವೈಯಕ್ತಿಕ ಶ್ರೇಷ್ಠ ದಾಖಲೆಗೆ ಪರಿಗಣಿಸುವುದಿಲ್ಲ.
- ಕರ್ನಾಟಕದ ಮಣಿಕಂಠ ಹೋಬಳಿದಾರ್ ಅವರು ಆರ್ಮಿ ರೆಡ್ ತಂಡವನ್ನು ಪ್ರತಿನಿಧಿಸಿ 100 ಮೀ, 200 ಮೀ ಮತ್ತು 4×100 ಮೀ ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗೆದ್ದರು.
- ಫುಟ್ಬಾಲ್: ಭಾರತಕ್ಕೆ 3ನೇ ಸ್ಥಾನ
ಸಂದರ್ಭ: ಹಿಸೋರ್ (ತಾಜಿಕಿಸ್ತಾನ), (ಪಿಟಿಐ): ಭಾರತ, ಸಿಎಎಫ್‌ಎ ನೇಷನ್ಸ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ತನಗಿಂತ ಮೇಲಿನ ಕ್ರಮಾಂಕದ ಒಮಾನ್ ತಂಡವನ್ನು ಪೆನಾಲ್ಟಿಯಲ್ಲಿ 3–2 ಗೋಲುಗಳಿಂದ ಸೋಲಿಸಿ ಪದಾರ್ಪಣೆ ಯಲ್ಲಿ ಮೂರನೇ ಸ್ಥಾನ ಗಳಿಸಿತು.
ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮತದಾರರ
ಗುರುತಿನ ದಾಖಲೆಯಾಗಿ ಆಧಾರ್ ಸಂಖ್ಯೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

- ಭಾರತಕ್ಕೆ, ಪಶ್ಚಿಮ ಏಷ್ಯಾದ ರಾಷ್ಟ್ರ ಒಮಾನ್ ವಿರುದ್ಧ ಇದು ಮೊದಲ ಗೆಲುವು. ಹಿಸೋರ್ ಸೆಂಟ್ರಲ್ ಸ್ಟೇಡಿಯಂನಲ್ಲಿ ನಿಗದಿ ಅವಧಿಯ ಆಟ 1–1 ಸಮಬಲಗೊಂಡಿತ್ತು. ಒಮಾನ್ ಪರ ಜಮೀಲ್ ಅಲ್ ಯಹ್ಮದಿ 55ನೇ ನಿಮಿಷ ಗೋಲು ಗಳಿಸಿದರು. ಆದರೆ ಉದಾಂತ ಸಿಂಗ್ ಕುಮಮ್80ನೇ ನಿಮಿಷ ಗೋಲು ಗಳಿಸಿದ್ದರಿಂದ ಸ್ಕೋರ್ ಸಮನಾಯಿತು.
- ಪೆನಾಲ್ಟಿಯಲ್ಲಿ ಲಾಲಿಯನ್ ಝುವಾಲ ಚಾಂಗ್ಟೆ, ರಾಹುಲ್ ಭೆಕೆ ಮತ್ತು ಜಿತಿನ್ ಎಂ.ಎಸ್. ತಮ್ಮ ಯತ್ನಗಳಲ್ಲಿ ಯಶಸ್ಸು ಕಂಡರು.